Author: editor.udayarashmi@gmail.com

ಸಿಂದಗಿ: ನಗರದ ಹಿರಿಯ ಸಾಹಿತಿ, ವೈದ್ಯವೃತ್ತಿಯಲ್ಲಿ ಇದ್ದುಕೊಂಡೇ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಅಂಬಿಕಾತನೆಯದತ್ತ ವೇದಿಕೆ ಸ್ಥಾಪಿಸಿ, ತನ್ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ವೇದಿಕೆಯ ಮೂಲಕ ನಾಡಿನ ಹೆಸರಾಂತ ಸಾಹಿತಿಗಳನ್ನು ಹಾಗೂ ಯುವ ಬರಹಗಾರರನ್ನು ಪ್ರೋತ್ಸಾಹಿಸಿ ನಗದು ಬಹುಮಾನಗಳ ಮೂಲಕ ಗೌರವಿಸುತ್ತಿದ್ದ ಹಾಗೂ ಅಂಬಿಕಾತನಯದತ್ತರ ಆಶಯಗಳನ್ನು ನಾಡಿನಾದ್ಯಂತ ಹರಡಿದ ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನಾದ್ಯಂತ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ಹಿರಿಯ ಸಾಹಿತಿ ಡಾ.ಬಿ.ಆರ್.ನಾಡಗೌಡ್ರ ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ಒಂದು ತುಂಬಲಾರದ ನಷ್ಟ. ಸಾರಸ್ವತ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಶಾಸಕ ಅಶೋಕ್ ಮನಗೂಳಿ ಸಂತಾಪ ಸೂಚಿಸಿದರು.ಸಂತಾಪ: ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಪ ಸದಸ್ಯ ಅರುಣ ಶಹಾಪುರ, ಮಾಜಿ ಶಾಸಕ ಶರಣಪ್ಪ ಸುಣಗಾರ, ಅಶೋಕ ವಾರದ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ರಾಜಶೇಖರ ಕೂಚಬಾಳ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಬ್ಲಾಕ್…

Read More

ವಿಜಯಪುರ: ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಾಳೆ ಆದರೆ ಅವಳಿಗೆ ಮಾನಸಿಕ ಅಭಧ್ರತೆ ಕಾಡುತ್ತಿದೆ. ತನ್ನ ಮತ್ತು ಮನೆತನದ ಗೌರವ ಕಾಪಾಡಲು ತನಗಾದ ಕಿರುಕುಳ ಹೊರ ಹಾಕಿದರೆ ಎಲ್ಲಿ ತನ್ನ ಗೌರವಕ್ಕೆ ಧಕ್ಕೆ ಆಗಬಹುದು ಎಂಬ ಹೆದರಿಕೆ ಇದೆ ಎಂದು ಡಾ.ರೇಖಾ ಪಾಟೀಲ ಹೇಳಿದರು.ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಗೆ ಎಲ್ಲ ಹಂತದಲ್ಲಿಯೂ ಶೋಷಣೆ ಕಾಡುತ್ತಿದೆ. ಅದಕ್ಕೆ ಮಹಿಳೆ ಮಾನಸಿಕವಾಗಿ ಸದೃಢವಾಗಬೇಕು ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದಬಿ ಕೆ ಸರೋಜಾ ಅಕ್ಕನವರು ಮಾತನಾಡಿ, ಬದುಕಿಗೆ ಸಂಸ್ಕಾರ ಮುಖ್ಯ. ಅದು ಕುಟುಂಬ ಮೂಲವಾಗಿದೆ. ಅಲ್ಲಿ ಮಹಿಳೆ ಸಂಸ್ಕಾರ ಕಲಿಸುವದರ ಮುಖಾಂತರ ಸಮಾಜದಲ್ಲಿ ಸಮಾನತೆ ತರುತ್ತಾಳೆ, ಮಕ್ಕಳಿಗೆ ಸಂಪ್ರದಾಯ ಹಾಗೂ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಕಲಿಸುವ ಕೆಲಸ ಆಗಬೇಕು ಎಂದರು.ಅತಿಥಿಯಾಗಿ ಮಾತನಾಡಿದ ಕಮಲಾ ಮುರಾಳ ಅವರು, ಗಂಡು ಮತ್ತು ಹೆಣ್ಣು ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ, ಪುರುಷರು ಮಹಿಳೆಯರನ್ನು…

Read More

ಮುದ್ದೇಬಿಹಾಳ: ಶಾಲೆಗಳು ಕೇವಲ ವಿದ್ಯಾ ಕೇಂದ್ರಗಳಲ್ಲ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಮತ್ತು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಶ್ರಮಿಸುವ ದೇವಾಲಯಗಳು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಹಿರಿಯ ನ್ಯಾಯವಾದಿ ವ್ಹಿ.ಎಂ.ನಾಗಠಾಣ ಹೇಳಿದರು.ಪಟ್ಟಣದ ವ್ಹಿಬಿಸಿ ಹೈಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಹಾಗೂ ನ್ಯಾಯಾಧೀಶೆ ಐಶ್ವರ್ಯ ಗುಡದಿನ್ನಿ ಅವರಿಗೆ ಗೌರವ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭವ್ಯ ಭಾರತದ ಭವಿಷ್ಯ ಶಾಲಾ ಕೊಠಡಿಗಳಲ್ಲಿ ಅಡಗಿದೆ ಅನ್ನೋ ಮಾತು ಯಾರೂ ಮರೆಯುವಂತಿಲ್ಲ. ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಗುರುವಿನ ಪಾತ್ರದ ಜೊತೆಗೆ ಪಾಲಕರ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಕೂಡ ಅತೀ ಅವಶ್ಯ. ವಿದ್ಯಾರ್ಥಿಯೂ ಸಹ ತನ್ನ ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಗೆ ಬಲಿಯಾಗದೇ, ನಿರಂತರ ಅಭ್ಯಾಸವನ್ನು ಮೈಗೂಡಿಸಿಕೊಂಡಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಹೊರಬರಲು ಸಾಧ್ಯ ಎಂದರು.ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ, ಸಾಧಿಸಬೇಕೆಂಬ ಛಲ ಮತ್ತು ಸತತ ಪ್ರಯತ್ನವಿದ್ದರೆ ಸಾಧನೆ ಸುಲಭ ಎಂದರು.ಉಪನ್ಯಾಸಕ ಪರಶುರಾಮ ಚೌಡಕೇರ, ಹಿರಿಯ ನ್ಯಾಯವಾದಿಗಳಾದ ಎಸ್.ಎಂ.ಗುಡದಿನ್ನಿ ಮತ್ತು ಎಂ.ಎಸ್.ನಾವದಗಿ…

Read More

ಕಲಕೇರಿ: ಹಲವು ವರ್ಷಗಳ ಹೋರಾಟದ ಫಲವಾಗಿ ಕಳೆದ ೬ ವರ್ಷಗಳ ಹಿಂದೆ ಪ್ರಾರಂಭವಾದ ಸ್ಥಳೀಯ ಬಸ್ಸನಿಲ್ದಾಣ ಕಾಮಗಾರಿ ಇನ್ನು ಮುಗಿಯದೇ ಆಮೆಗತಿಗಿಂತಲೂ ಸಾವಕಾಶವಾಗಿ ನಡೆಯುತ್ತಿರುವುದು ಸಾರ್ವಜನಿಕರ ಹಿಡಿ ಶಾಪಕ್ಕೆ ಗುರಿಯಾಗಿದೆ, ಅಧಿಕಾರಿಗಳು ಯಾಕೆ ಇಷ್ಟು ನಿರ್ಲಕ್ಷ ತೋರಿಸುತ್ತಿದ್ದಾರೆ ಗೊತ್ತಿಲ್ಲ, ಬೇಗನೇ ಸಂಪೂರ್ಣ ಕಾಮಗಾರಿ ಮುಗಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.ಅನೇಕ ಹೋರಾಟ ಹಾಗೂ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಅವರ ಕಾಳಜಿಯಿಂದ ಪ್ರಾರಂಭವಾದ ಬಸ್ಸ ನಿಲ್ದಾಣ ೬ ವರ್ಷಗಳೆ ಕಳೆದರೂ ಇನ್ನುಮುಗಿಯದಿರುವುದು ವಿಪರ್ಯಾಸ, ಕೇವಲ ಒಂದು ಕಟ್ಟಡ ಕಟ್ಟಿ ಅದರಲ್ಲಿ ಕಂಟ್ರೋಲರ್ ರೂಮ್ ಮಾಡಿದರೆ ಮುಗಿಯಿತೇ, ಹೇಗೆ ಇನ್ನು ನಿಲ್ದಾಣದ ಒಳಾಂಗಣದಲ್ಲಿ ಸಿಮೆಂಟ್ ಹಾಸಿಗೆಯಾಗಬೇಕು, ಜೊತೆಗೆ ಬಸ್ಸು ನಿಲ್ಲುಗಡೆಯಲ್ಲಿ ಮೇಲ್ಚಾವಣಿ ಮಾಡಿ ಸಾರ್ವಜನಿಕರಿಗೆ ಸುಸಜ್ಜಿತವಾದ ನೀರು, ಕುಳಿತುಕೊಳ್ಳಲು ಆಸನ, ವಿಶ್ರಾಂತಿ ಕೋಣೆ, ವ್ಯವಸ್ಥಿತವಾದ ಮಹಿಳಾ ಹಾಗೂ ಪುರುಷರ ಶೌಚಾಲಯ ನಿರ್ಮಾಣ ಮಾಡಿ ಅವಶ್ಯಕತೆಗೆ ತಕ್ಕಂತೆ ಇನ್ನು ಪ್ರಮುಖ ಮಾರ್ಗದಲ್ಲಿ ಹೆಚ್ಚಿನ ಬಸ್ಸ ಸೌಕರ್ಯ ಮಾಡಿದಾಗ ಇದು ಸಾರ್ತಕವಾಗುವುದು ಎನ್ನುತ್ತಾರೆ ಹಿರಿಯರಾದ ಡಾ|| ಈರಣ್ಣ ಗುಮಶೆಟ್ಟಿಇನ್ನು…

Read More

ಮುದ್ದೇಬಿಹಾಳ: ತಮ್ಮ ಎಲ್ಲ ಸುಖಗಳನ್ನು ತ್ಯಾಗ ಮಾಡಿ, ಕಷ್ಟಪಟ್ಟು ಲಾಲನೆ ಪಾಲನೆ ಮಾಡಿ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಬೆಳೆಸುವ ಜೀವಗಳೆಂದರೆ ಅದು ತಂದೆ-ತಾಯಿ ಮಾತ್ರ. ಅವರ ಮುಪ್ಪಾವಸ್ಥೆಯಲ್ಲಿ ನಾವು ಅವರನ್ನ ಮಕ್ಕಳಂತೆ ನೋಡಿಕೊಂಡು ಅವರ ಋಣ ತೀರಿಸಬೇಕು ಎಂದು ಪ್ರಭಾರ ಮುಖ್ಯಗುರು ಸಂಗಮೇಶ ನವಲಿ ಹೇಳಿದರು.ತಾಲೂಕಿನ ಗುಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸಭೆ-೨ ಹಾಗೂ ಏಳನೇ ತರಗತಿ ಮಕ್ಕಳ ಬೀಳ್ಕೊಡುವ ಸಮಾರಂಭದ ಜೊತೆಗೆ ಹಮ್ಮಿಕೊಳ್ಳಲಾಗಿದ್ದ ಏಳನೇ ತರಗತಿ ಮಕ್ಕಳಿಂದ ತಂದೆ ತಾಯಂದಿರ ಪಾದಪೂಜೆ ವಿಶೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬೆಳೆದು ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ಕಡೆಗಣಿಸುತ್ತಿರುವದನ್ನು, ತಾವು ದೊಡ್ಡ ಸ್ಥಾನಕ್ಕೆ ಬರಲು ದುಡಿದ ಜೀವಿಗಳನ್ನು ಇಂದಿಗೆ ಅನಾಥಾಶ್ರಮಗಳಿಗೆ ಅಟ್ಟುತ್ತಿರುವದನ್ನು ನೋಡುತ್ತಿದ್ದೇವೆ. ಯಾವ ಮಕ್ಕಳು ತಮ್ಮ ತಂದೆ ತಾಯಿರನ್ನು ಅನಾಶ್ರಮಕ್ಕೆ ಅಟ್ಟುತ್ತಾರೋ ಮುಂದೊಂದು ದಿನ ಅದೇ ಅನಾಥಾಶ್ರಮದಲ್ಲಿ ತಾವು ಕಾಲ ಕಲೆಯುವ ಪರೀಸ್ಥಿತಿ ಬಂದೊಗುತ್ತದೆ ಅನ್ನೋದನ್ನ ಮರೆಯಬಾರದು ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ಷೇತ್ರ ಸಮನಯಾಧಿಕಾರಿ…

Read More

ಸಿಂದಗಿ: ಪಟ್ಟಣದ ಕಲಬುರಗಿ ರಸ್ತೆಯ ಹೊರವಲಯದಲ್ಲಿರುವ ಲೊಯೋಲ್ ಶಾಲೆಯ ಆವರಣದಲ್ಲಿ ಮಾ.೨೦ ಬೆಳಿಗ್ಗೆ ೧೧ಗಂಟೆಗೆ ನಬಿರೋಶನ್ ಪ್ರಕಾಶನ, ಬೋರಗಿ ಹಾಗೂ ಲೊಯೋಲ್ ಶಾಲೆಯ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಮೌಲಾಲಿ ಆಲಗೂರ ತಿಳಿಸಿದ್ದಾರೆ.ಕಾರ್ಯಕ್ರಮದ ಉದ್ಘಾಟಕರಾಗಿ ಸಿಂದಗಿ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಆಗಮಿಸಲಿದ್ದಾರೆ. ಗ್ರೇಡ್ ೨ ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ ಅಧ್ಯಕ್ಚತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ, ಪ್ರಾಚಾರ್ಯ ಫಾ.ಲ್ಯಾನ್ಸಿ ಫರ್ನಾಂಡಿಸ್, ಕಸಾಪ ನಿಕಟ ಪೂರ್ವ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ, ಚೇತನಗೌಡ ಬಿರಾದಾರ, ಸಭಿಯಾಬೇಗಂ ಮರ್ತೂರ, ಸುನಂದಾ ಯಂಪುರೆ ನಬಿಪಟೇಲ್ ಆಲಗೂರ ಇರಲಿದ್ದಾರೆ.ಸರಿಗಮಪ ಗಾಯಕಿ ಸಾಕ್ಷಿ ಹಿರೇಮಠ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬೆಳಗಾವಿಯ ಅಂತರಾಷ್ಟ್ರೀಯ ಕ್ರೀಡಾಪಟು ರಿಜ್ವಾನ್ ಜಮಾದಾರ, ಬಿ.ಎಸ್.ಡಬ್ಲೂ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಸುರೇಖಾ ಬಿರಾದಾರ, ಮಹಿಳಾ ಸಾಂತ್ವಾನ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ಮಹಾಂತೇಶ ನೂಲಾನವರ, ನೀಲಮ್ಮ…

Read More

ಸಿಂದಗಿ: ಪಟ್ಟಣದ ಬಂದಾಳ ರಸ್ತೆಯಲ್ಲಿರುವ ಸಂಗಮೇಶ್ವರ ವಿದ್ಯಾಲಯದಲ್ಲಿ ನೆಲೆ ಪ್ರಕಾಶನ ಬಳಗದ ವತಿಯಿಂದ ಕರ್ನಾಟಕ ಸರಕಾರದಿಂದ ನೂತನವಾಗಿ ನೇಮಕಗೊಂಡ ವಿವಿಧ ಪ್ರಾಧಿಕಾರಗಳ ಅಧ್ಯಕ್ಷರ ಹಾಗೂ ಸದಸ್ಯರ ಸನ್ಮಾನ ಸಮಾರಂಭ ನಡೆಯಿತು.ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎಂ.ಎಸ್.ಮದಬಾವಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಎಂ.ಎಂ. ಪಡಶೆಟ್ಟಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದ್ರಾಕ್ಷಾಯಿಣಿ ಹುಡೇದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ನ್ಯೂಜಿಲೆಂಡ್ ಬಸವ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗಣ್ಣ ಕಲಬುರ್ಗಿ, ಎಂ.ಎಸ್. ಹೈಯಾಳಕರ, ಸಾಹಿತಿ ಮನು ಪತ್ತಾರ, ಶಿವಾನಂದ ಕಲಬುರ್ಗಿ, ಶಿವಕುಮಾರ ಶಿವಸಿಂಪಿಗೇರ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.

Read More

ದೇವರಹಿಪ್ಪರಗಿ: ಪಟ್ಟಣದ ವಿಜಯಶ್ರೀ ತೆಲಗ ಇವರಿಗೆ ಉತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಪಂಚಾಯಿತಿ ಅಂಗನವಾಡಿ ನೌಕರರ ಸಂಘಟನೆಗಳು ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ಇವರ ಸಹಯೋಗದಲ್ಲಿ ಇತ್ತೀಚಿಗೆ ಜರುಗಿದ ೨೦೨೪ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿ ನೀಡಲಾಯಿತು.

Read More

ದೇವರಹಿಪ್ಪರಗಿ: ಪಟ್ಟಣದ ಬಿಜೆಪಿ ಸಕ್ರಿಯ ಕಾರ್ಯಕರ್ತ ಕಲ್ಮೇಶ ಬುದ್ನಿ ಇವರನ್ನು ದೇವರಹಿಪ್ಪರಗಿ ಮಂಡಲ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಪಕ್ಷ ಸಂಘಟನೆಯಲ್ಲಿ ನಿರತನಾಗಿರುವ ಯುವ ಕಾರ್ಯಕರ್ತನನ್ನು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಇವರ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ ಎಂದು ದೇವರಹಿಪ್ಪರಗಿ ಮಂಡಲ ಬಿಜೆಪಿ ಪ್ರಕಟಣೆ ತಿಳಿಸಿದೆ.

Read More

ದೇವರಹಿಪ್ಪರಗಿ: ಕಣ್ಣು ಅತ್ಯಂತ ಮಹತ್ವದ ಅಂಗ. ಅದರ ಕುರಿತು ನಿರ್ಲಕ್ಷ್ಯ ಸಲ್ಲದು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಇತ್ತೀಚಿಗೆ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು, ಗ್ರಾಮೀಣ ಭಾಗದಲ್ಲಿ ಕಣ್ಣಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ೪೦ ವರ್ಷ ಮೀರಿದ ಪ್ರತಿಯೊಬ್ಬರು ಕಣ್ಣು ಪರೀಕ್ಷೆ ಮಾಡಿಸಿಕೊಂಡು ತಮ್ಮ ಕಣ್ಣಿನ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸುವಂತೆ ಕರೆ ನೀಡಿದರು.ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಮೇಶ ಛಾಯಾಗೋಳ ಮಾತನಾಡಿ, ಇಂದಿನ ಶಿಬಿರದಲ್ಲಿ ಗ್ರಾಮೀಣ ಪ್ರದೇಶದ ಸುಮಾರು ೪೫೦ ಜನ ತಪಾಸಣೆಗೆ ಒಳಗಾಗಿದ್ದಾರೆ. ಇದರಲ್ಲಿ ಸುಮಾರು ೧೭೫ ಜನರಿಗೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದು, ಶಿಬಿರ ಯಶಸ್ವಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಂಗನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಭೋಜಪ್ಪಗೌಡ ಬಿರಾದಾರ,…

Read More