ಮುದ್ದೇಬಿಹಾಳ: ತಮ್ಮ ಎಲ್ಲ ಸುಖಗಳನ್ನು ತ್ಯಾಗ ಮಾಡಿ, ಕಷ್ಟಪಟ್ಟು ಲಾಲನೆ ಪಾಲನೆ ಮಾಡಿ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಬೆಳೆಸುವ ಜೀವಗಳೆಂದರೆ ಅದು ತಂದೆ-ತಾಯಿ ಮಾತ್ರ. ಅವರ ಮುಪ್ಪಾವಸ್ಥೆಯಲ್ಲಿ ನಾವು ಅವರನ್ನ ಮಕ್ಕಳಂತೆ ನೋಡಿಕೊಂಡು ಅವರ ಋಣ ತೀರಿಸಬೇಕು ಎಂದು ಪ್ರಭಾರ ಮುಖ್ಯಗುರು ಸಂಗಮೇಶ ನವಲಿ ಹೇಳಿದರು.
ತಾಲೂಕಿನ ಗುಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸಭೆ-೨ ಹಾಗೂ ಏಳನೇ ತರಗತಿ ಮಕ್ಕಳ ಬೀಳ್ಕೊಡುವ ಸಮಾರಂಭದ ಜೊತೆಗೆ ಹಮ್ಮಿಕೊಳ್ಳಲಾಗಿದ್ದ ಏಳನೇ ತರಗತಿ ಮಕ್ಕಳಿಂದ ತಂದೆ ತಾಯಂದಿರ ಪಾದಪೂಜೆ ವಿಶೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳೆದು ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ಕಡೆಗಣಿಸುತ್ತಿರುವದನ್ನು, ತಾವು ದೊಡ್ಡ ಸ್ಥಾನಕ್ಕೆ ಬರಲು ದುಡಿದ ಜೀವಿಗಳನ್ನು ಇಂದಿಗೆ ಅನಾಥಾಶ್ರಮಗಳಿಗೆ ಅಟ್ಟುತ್ತಿರುವದನ್ನು ನೋಡುತ್ತಿದ್ದೇವೆ. ಯಾವ ಮಕ್ಕಳು ತಮ್ಮ ತಂದೆ ತಾಯಿರನ್ನು ಅನಾಶ್ರಮಕ್ಕೆ ಅಟ್ಟುತ್ತಾರೋ ಮುಂದೊಂದು ದಿನ ಅದೇ ಅನಾಥಾಶ್ರಮದಲ್ಲಿ ತಾವು ಕಾಲ ಕಲೆಯುವ ಪರೀಸ್ಥಿತಿ ಬಂದೊಗುತ್ತದೆ ಅನ್ನೋದನ್ನ ಮರೆಯಬಾರದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ಷೇತ್ರ ಸಮನಯಾಧಿಕಾರಿ ಯು.ಬಿ.ಧರಿಕಾರ ಮಾತನಾಡಿ, ತಂದೆ ತಾಯಿಯರ ಪಾದಪೂಜೆಯ ಮೂಲಕ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದರು.
ಬಿಆಯ್‌ಇಆರ್‌ಟಿ ಎಸ್.ಎಸ್.ರಾಮತಾಳ, ಎಸ್‌ಡಿಎಂಸಿ ಸದಸ್ಯ ರಾಮನಗೌಡ ಹೂಲಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಬಾಬಣ್ಣವರ, ಬಸಲಿಂಗಪ್ಪಗೌಡ ನರಸಣಗಿ, ರಾಮನಗೌಡ ಬಿರಾದಾರ, ಗುರಣ್ಣ ಜಂಗಾಣಿ, ಸುನೀಲ ಗುರಡ್ಡಿ, ರೇಣುಕಾ ಮೂರ್ತಿ, ಭಾಗ್ಯಶ್ರೀ ಲಿಂಗದಳ್ಳಿ, ಸುವರ್ಣ ಬಿರಾದಾರ, ಬಸಮ್ಮ ಮಾಡಗಿ, ಶಾರಮ್ಮ ಹಿರೇಮಠ, ಗುರಮ್ಮ ಚಲವಾದಿ, ಶಾಂತಾ ಚಲವಾದಿ, ಪ್ರಮೀಳಾ ದಾಸರ, ಶಿಕ್ಷಕಿ ಲಕ್ಷ್ಮೀ ಮನಿಕಟ್ಟಿ ಅತಿಥಿ ಶಿಕ್ಷಕ ಕುಮಾರ ಪ್ರಭುಗೌಡ ಬಿರಾದಾರ, ಯಲ್ಲಮ್ಮ ಉತಾಳೆ, ಕಾಶಿಬಾಯಿ ಹಾದಿಮನಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

