ವಿಜಯಪುರ: ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಾಳೆ ಆದರೆ ಅವಳಿಗೆ ಮಾನಸಿಕ ಅಭಧ್ರತೆ ಕಾಡುತ್ತಿದೆ. ತನ್ನ ಮತ್ತು ಮನೆತನದ ಗೌರವ ಕಾಪಾಡಲು ತನಗಾದ ಕಿರುಕುಳ ಹೊರ ಹಾಕಿದರೆ ಎಲ್ಲಿ ತನ್ನ ಗೌರವಕ್ಕೆ ಧಕ್ಕೆ ಆಗಬಹುದು ಎಂಬ ಹೆದರಿಕೆ ಇದೆ ಎಂದು ಡಾ.ರೇಖಾ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಗೆ ಎಲ್ಲ ಹಂತದಲ್ಲಿಯೂ ಶೋಷಣೆ ಕಾಡುತ್ತಿದೆ. ಅದಕ್ಕೆ ಮಹಿಳೆ ಮಾನಸಿಕವಾಗಿ ಸದೃಢವಾಗಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ
ಬಿ ಕೆ ಸರೋಜಾ ಅಕ್ಕನವರು ಮಾತನಾಡಿ, ಬದುಕಿಗೆ ಸಂಸ್ಕಾರ ಮುಖ್ಯ. ಅದು ಕುಟುಂಬ ಮೂಲವಾಗಿದೆ. ಅಲ್ಲಿ ಮಹಿಳೆ ಸಂಸ್ಕಾರ ಕಲಿಸುವದರ ಮುಖಾಂತರ ಸಮಾಜದಲ್ಲಿ ಸಮಾನತೆ ತರುತ್ತಾಳೆ, ಮಕ್ಕಳಿಗೆ ಸಂಪ್ರದಾಯ ಹಾಗೂ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಕಲಿಸುವ ಕೆಲಸ ಆಗಬೇಕು ಎಂದರು.
ಅತಿಥಿಯಾಗಿ ಮಾತನಾಡಿದ ಕಮಲಾ ಮುರಾಳ ಅವರು, ಗಂಡು ಮತ್ತು ಹೆಣ್ಣು ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ, ಪುರುಷರು ಮಹಿಳೆಯರನ್ನು ನೋಡುವ ದೃಷ್ಟಿ ಬದಲಿಸಿಕೊಳ್ಳಬೇಕು ಎಂದರು.
ವೇದಿಕೆ ಮೇಲಿದ್ದ ಶಿಲ್ಪಾ ಹಂಜಿ ಅವರು ಮಾತನಾಡುತ್ತ, ಸಾಕಷ್ಟು ಮಹಿಳೆಯರು ದೇಶ ಸೇವೆಗೆ ತಮ್ಮ ಬಲಿದಾನ ಮಾಡಿದ್ದು ನೋಡುತ್ತೇವೆ. ತಾಳ್ಮೆ ಸಹನೆ ಸಹಕಾರಗಳಿಂದ ಸುಂದರ ಕುಟುಂಬ ನಿರ್ಮಾಣ ಮಾಡುತ್ತಾಳೆ ಎಂದರು.
ಜಯಶ್ರೀ ತೆಲಗಿ, ಗೀತಾ ಕುಲಕರ್ಣಿ, ಚೈತನ್ಯ ಮುದ್ದೇಬಿಹಾಳ, ಸುನಂದ ಯಂಪೂರೆ, ಶೋಭಾ ಹರಿಜನ, ರೂಪಾ ರಜಪೂತ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕ್ಕಮ್ಮ ನಾಯಕ ಮಾತನಾಡುತ್ತ, ಮಹಿಳೆ ತಮ್ಮ ಹಕ್ಕು ಪಡೆಯುವುದರ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ ಸಂಗಮೇಶ, ಅಭಿಷೇಕ ಚಕ್ರವರ್ತಿ, ಸುಭಾಷಚಂದ್ರ ಕನ್ನೂರ, ಎಸ್ ಐ ಬಿರಾದಾರ, ರಾಜೇಸಾಬ ಶಿವನಗುತ್ತಿ, ಸಾವಿತ್ರಿ ಮನೋಜ, ಅಹ್ಮದ ವಾಲೀಕಾರ, ಅಲ್ಲಿಸಾಬ ಖಡೆಕೆ, ಅಣ್ಣುಗೌಡ ಬಿರಾದಾರ, ಲತಾ ಗುಂಡಿ, ಡಾ ವಿಜಯಲಕ್ಷ್ಮಿ ಪವಾರ , ಪ್ರಭು ಮಲ್ಲಿಕಾರ್ಜುನಮಠ, ಪ್ರದೀಪ ಕುಲಕರ್ಣಿ, ಹುಸೇನಸಾಬ ಹದರಿ, ಲತಾ ವಾಲೀಕಾರ, ವಿಜಯಲಕ್ಷ್ಮಿ ಕೆಂಗನಾಳ, ಅಬ್ದಲ್ ರಜಾಕ ಮುಲ್ಲಾ, ತೇಜಶ್ವನಿ ವಾಂಗಿ ಶಾಂತಾ ವಿಭೂತಿ , ಶೋಭಾ ಬಡಿಗೇರ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ ಮಾಧವ ಗುಡಿ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

