ಸಿಂದಗಿ: ನಗರದ ಹಿರಿಯ ಸಾಹಿತಿ, ವೈದ್ಯವೃತ್ತಿಯಲ್ಲಿ ಇದ್ದುಕೊಂಡೇ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಅಂಬಿಕಾತನೆಯದತ್ತ ವೇದಿಕೆ ಸ್ಥಾಪಿಸಿ, ತನ್ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ವೇದಿಕೆಯ ಮೂಲಕ ನಾಡಿನ ಹೆಸರಾಂತ ಸಾಹಿತಿಗಳನ್ನು ಹಾಗೂ ಯುವ ಬರಹಗಾರರನ್ನು ಪ್ರೋತ್ಸಾಹಿಸಿ ನಗದು ಬಹುಮಾನಗಳ ಮೂಲಕ ಗೌರವಿಸುತ್ತಿದ್ದ ಹಾಗೂ ಅಂಬಿಕಾತನಯದತ್ತರ ಆಶಯಗಳನ್ನು ನಾಡಿನಾದ್ಯಂತ ಹರಡಿದ ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನಾದ್ಯಂತ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದ ಹಿರಿಯ ಸಾಹಿತಿ ಡಾ.ಬಿ.ಆರ್.ನಾಡಗೌಡ್ರ ಅವರ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ಒಂದು ತುಂಬಲಾರದ ನಷ್ಟ. ಸಾರಸ್ವತ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಶಾಸಕ ಅಶೋಕ್ ಮನಗೂಳಿ ಸಂತಾಪ ಸೂಚಿಸಿದರು.
ಸಂತಾಪ: ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ವಿಪ ಸದಸ್ಯ ಅರುಣ ಶಹಾಪುರ, ಮಾಜಿ ಶಾಸಕ ಶರಣಪ್ಪ ಸುಣಗಾರ, ಅಶೋಕ ವಾರದ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ರಾಜಶೇಖರ ಕೂಚಬಾಳ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ್ ಪೂಜಾರ, ಸಾಹಿತಿಗಳಾದ ಡಾ.ಚನ್ನಪ್ಪ ಕಟ್ಟಿ, ಡಾ. ಎಂ.ಎಂ.ಪಡಶೆಟ್ಟಿ, ಮಕ್ಕಳ ಹಿರಿಯ ಸಾಹಿತಿ ಹ.ಮ ಪೂಜಾರ, ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪತ್ರಕರ್ತರಾದ ಮಲ್ಲಿಕಾರ್ಜುನ ಅಲ್ಲಾಪುರ, ರವಿಚಂದ್ರ ಮಲ್ಲೇದ, ಮಹಾಂತೇಶ ನೂಲಾನವರ, ಸುದರ್ಶನ ಜಂಗಣ್ಣಿ, ಭೋಜರಾಜ ದೇಸಾಯಿ, ಗುಂಡು ಕುಲಕರ್ಣಿ, ಗುರುರಾಜ ಮಠ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಂ.ಹಂಗರಗಿ ಚಂದ್ರಶೇಖರ ನಾಗರಬೆಟ್ಟ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಶಿವು ಸಬರದ ಸಂಗನಗೌಡ ಪಾಟೀಲ, ಮುತ್ತು ಪಟ್ಟಣಶೆಟ್ಟಿ, ಭೀಮಾಶಂಕರ ತಾರಾಪುರ, ಆಲಮೇಲದ ವೈದ್ಯ ಸಾಹಿತಿ ಡಾ.ಸಮೀರ ಹಾದಿಮನಿ ಸೇರಿದಂತೆ ಶ್ರೀ ಸಂಗಮೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯರು ಮತ್ತು ಸಾಹಿತ್ಯಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

