ಕಲಕೇರಿ: ಹಲವು ವರ್ಷಗಳ ಹೋರಾಟದ ಫಲವಾಗಿ ಕಳೆದ ೬ ವರ್ಷಗಳ ಹಿಂದೆ ಪ್ರಾರಂಭವಾದ ಸ್ಥಳೀಯ ಬಸ್ಸನಿಲ್ದಾಣ ಕಾಮಗಾರಿ ಇನ್ನು ಮುಗಿಯದೇ ಆಮೆಗತಿಗಿಂತಲೂ ಸಾವಕಾಶವಾಗಿ ನಡೆಯುತ್ತಿರುವುದು ಸಾರ್ವಜನಿಕರ ಹಿಡಿ ಶಾಪಕ್ಕೆ ಗುರಿಯಾಗಿದೆ, ಅಧಿಕಾರಿಗಳು ಯಾಕೆ ಇಷ್ಟು ನಿರ್ಲಕ್ಷ ತೋರಿಸುತ್ತಿದ್ದಾರೆ ಗೊತ್ತಿಲ್ಲ, ಬೇಗನೇ ಸಂಪೂರ್ಣ ಕಾಮಗಾರಿ ಮುಗಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಅನೇಕ ಹೋರಾಟ ಹಾಗೂ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಅವರ ಕಾಳಜಿಯಿಂದ ಪ್ರಾರಂಭವಾದ ಬಸ್ಸ ನಿಲ್ದಾಣ ೬ ವರ್ಷಗಳೆ ಕಳೆದರೂ ಇನ್ನು
ಮುಗಿಯದಿರುವುದು ವಿಪರ್ಯಾಸ, ಕೇವಲ ಒಂದು ಕಟ್ಟಡ ಕಟ್ಟಿ ಅದರಲ್ಲಿ ಕಂಟ್ರೋಲರ್ ರೂಮ್ ಮಾಡಿದರೆ ಮುಗಿಯಿತೇ, ಹೇಗೆ ಇನ್ನು ನಿಲ್ದಾಣದ ಒಳಾಂಗಣದಲ್ಲಿ ಸಿಮೆಂಟ್ ಹಾಸಿಗೆಯಾಗಬೇಕು, ಜೊತೆಗೆ ಬಸ್ಸು ನಿಲ್ಲುಗಡೆಯಲ್ಲಿ ಮೇಲ್ಚಾವಣಿ ಮಾಡಿ ಸಾರ್ವಜನಿಕರಿಗೆ ಸುಸಜ್ಜಿತವಾದ ನೀರು, ಕುಳಿತುಕೊಳ್ಳಲು ಆಸನ, ವಿಶ್ರಾಂತಿ ಕೋಣೆ, ವ್ಯವಸ್ಥಿತವಾದ ಮಹಿಳಾ ಹಾಗೂ ಪುರುಷರ ಶೌಚಾಲಯ ನಿರ್ಮಾಣ ಮಾಡಿ ಅವಶ್ಯಕತೆಗೆ ತಕ್ಕಂತೆ ಇನ್ನು ಪ್ರಮುಖ ಮಾರ್ಗದಲ್ಲಿ ಹೆಚ್ಚಿನ ಬಸ್ಸ ಸೌಕರ್ಯ ಮಾಡಿದಾಗ ಇದು ಸಾರ್ತಕವಾಗುವುದು ಎನ್ನುತ್ತಾರೆ ಹಿರಿಯರಾದ ಡಾ|| ಈರಣ್ಣ ಗುಮಶೆಟ್ಟಿ
ಇನ್ನು ನೆಪಮಾತ್ರಕ್ಕೆ ಶೌಚಾಲಯವಿದ್ದರೂ ಗುತ್ತಿಗೆದಾರ ಅದರ ಬಾಗಿಲು ಬೀಗ ಹಾಕಿಕೊಂಡು ಮಂಗಮಾಯವಾಗಿದ್ದಾನೆ ಶೌಚಾಲಯವಿದ್ದರೂ ಬಯಲು ಬರ್ಹಿದೇಸೆಯೇ ಗತಿ ಎನ್ನುತ್ತಾರೆ ಮಹಿಳೆಯರು. ದೊಡ್ಡ ಗ್ರಾಮವಾಗಿರುವ ಇಲ್ಲಿ ಪ್ರತಿನಿತ್ಯ ನೂರಾರು ಪ್ರಯಾಣಿಕರು ಆಗಮಿಸುವರು, ಆದರೆ ಶೌಚಾಲಯವಿಲ್ಲದೇ ಎಲ್ಲಿಯೂ ಮೂತ್ರ ವಿಸರ್ಜನೆ ಮಾಡಲು ಅವಕಾಶ ಇರದೇ ಹೈರಾಣಾಗುತ್ತಿದ್ದೇವೆ ಎನ್ನುತ್ತಾರೆ ಶಾಲಾ ವಿದ್ಯಾರ್ಥಿನಿಯರು
ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಬೇರೆ ಗುತ್ತಿಗೆದಾರರನ್ನು ನೇಮಿಸಿ ಸರಿಯಾಗಿ ನೀರಿನ ವ್ಯವಸ್ಥೆ ಮಾಡಿ ಶೌಚಾಲಯವನ್ನು ಸ್ವಚ್ಛವಾಗಿ ನೋಡಿಕೋಳ್ಳಬೇಕು ಎಂದು ಮಹಿಳಾ ಪ್ರಯಾಣಿಕರ ಬೇಡಿಕೆಯಾಗಿದೆ. ಇಲ್ಲವಾದಲ್ಲಿ ಹೋರಾಟ ಮಾಡಬೇಕುವುದು ಎನ್ನುತ್ತಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

