ಸಿಂದಗಿ: ಪಟ್ಟಣದ ಕಲಬುರಗಿ ರಸ್ತೆಯ ಹೊರವಲಯದಲ್ಲಿರುವ ಲೊಯೋಲ್ ಶಾಲೆಯ ಆವರಣದಲ್ಲಿ ಮಾ.೨೦ ಬೆಳಿಗ್ಗೆ ೧೧ಗಂಟೆಗೆ ನಬಿರೋಶನ್ ಪ್ರಕಾಶನ, ಬೋರಗಿ ಹಾಗೂ ಲೊಯೋಲ್ ಶಾಲೆಯ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಮೌಲಾಲಿ ಆಲಗೂರ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟಕರಾಗಿ ಸಿಂದಗಿ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಆಗಮಿಸಲಿದ್ದಾರೆ. ಗ್ರೇಡ್ ೨ ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ ಅಧ್ಯಕ್ಚತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ, ಪ್ರಾಚಾರ್ಯ ಫಾ.ಲ್ಯಾನ್ಸಿ ಫರ್ನಾಂಡಿಸ್, ಕಸಾಪ ನಿಕಟ ಪೂರ್ವ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ, ಚೇತನಗೌಡ ಬಿರಾದಾರ, ಸಭಿಯಾಬೇಗಂ ಮರ್ತೂರ, ಸುನಂದಾ ಯಂಪುರೆ ನಬಿಪಟೇಲ್ ಆಲಗೂರ ಇರಲಿದ್ದಾರೆ.
ಸರಿಗಮಪ ಗಾಯಕಿ ಸಾಕ್ಷಿ ಹಿರೇಮಠ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬೆಳಗಾವಿಯ ಅಂತರಾಷ್ಟ್ರೀಯ ಕ್ರೀಡಾಪಟು ರಿಜ್ವಾನ್ ಜಮಾದಾರ, ಬಿ.ಎಸ್.ಡಬ್ಲೂ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಸುರೇಖಾ ಬಿರಾದಾರ, ಮಹಿಳಾ ಸಾಂತ್ವಾನ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ಮಹಾಂತೇಶ ನೂಲಾನವರ, ನೀಲಮ್ಮ ಗೌರ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು. ಹಲವಾರು ಮಹಿಳಾ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
