Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಗಂಡು ಹಾಗೂ ಹೆಣ್ಣಿನ ನಡುವೆ ಸಮಾನ ಅನುಪಾತ ತರುವ ನಿಟ್ಟಿನಲ್ಲಿ ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾನೂನನ್ನು ಕಡ್ಡಾಯವಾಗಿ ಎಲ್ಲಾ ಸ್ವಾನಿಂಗ್ ಸೆಂಟರ್‌ಗಳು ಪಾಲಿಸತಕ್ಕದ್ದು, ಒಂದುವೇಳೆ ಕಾನೂನು ಬಾಹಿರವಾಗಿ ನಡೆದುಕೊಂಡಲ್ಲಿ ಅಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪಿಸಿ, ಪಿಎನ್‌ಡಿಟಿಯು ಜಿಲ್ಲಾ ಸಲಹಾ ಸಮಿತಿ ಸಭೆ ಹಾಗೂ ಜಿಲ್ಲಾ ತಪಾಸಣ ಮತ್ತು ಮೇಲ್ವಿಚಾರಣ ಸಮಿತಿಯ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ಕ್ಯಾನಿಂಗ್ ಸೆಂಟರ್‌ಗಳು ಪಿಸಿ, ಪಿಎನ್‌ಡಿಟಿಯು ಕಾಯ್ದೆಗಳ ಅನುಸಾರ ಕಾರ್ಯನಿರ್ವಹಿಸಬೇಕು. ಕಾಯ್ದೆಗಳನ್ನು ಉಲ್ಲಂಘಿಸುವ ಸ್ಕ್ಯಾನಿಂಗ್ ಕೇಂದ್ರಗಳ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು. ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ ಮತ್ತು ಶಿಕ್ಷಾರ್ಹವಾಗಿದೆ. ಮೊದಲ ಅಪರಾಧಕ್ಕೆ ೩ ವರ್ಷ ಜೈಲು ಶಿಕ್ಷೆ ಹಾಗೂ ೫೦ ಸಾವಿರ ದಂಡ ಹಾಗೂ ೨ನೇ ಬಾರಿ ಕಾಯ್ದೆ ಉಲ್ಲಂಘಿಸಿದವರಿಗೆ ೫ ವರ್ಷ ಜೈಲು ಶಿಕ್ಷೆ ಹಾಗೂ ೧ ಲಕ್ಷ ದಂಡ ವಿಧಿಸಲಾಗುತ್ತದೆ. ಮಹಿಳೆಯ ಗಂಡ, ಅತ್ತೆ, ಮಾವ…
ವಿಜಯಪುರ: ಮಾರ್ಚ್ ೨೫ ರಿಂದ ಏಪ್ರಿಲ್ ೬ ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ, ಜಿಲ್ಲೆಯಲ್ಲಿ ೧೨೭ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪರೀಕ್ಷೆಯ ಅವ್ಯವಹಾರ ತಡೆಗಟ್ಟುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ೨೦೦ ಮೀಟರ್ ವ್ಯಾಪ್ತಿಯಲ್ಲಿ ೧೪೪ ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಅಂಗಡಿ, ಇಂಟರ್ ನೆಟ್ ಕೇಂದ್ರ ಮುಚ್ಚುವಂತೆ ಹಾಗೂ ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಯಾವುದೇ ಅಧಿಕಾರಿ ಅಥವಾ. ಸಿಬ್ಬಂದಿ ಮೊಬೈಲ್ ಪೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ.
ಬ್ರಹ್ಮದೇವನಮಡು: ಸಿಂದಗಿ ತಾಲೂಕು ಬಿಜೆಪಿ ಪಕ್ಷದ ಮಂಡಲದ ಮಹಿಳಾ ಮೋಚಾ೯ ಉಪಾಧ್ಶಕ್ಷರಾಗಿ ಹೊನ್ನಳ್ಳಿ ಗ್ರಾಮದ ಯಾಸ್ಮೀನ್ ಬಾನು ಎನ್.ನಾಯ್ಕೋಡಿ ಅವರನ್ನು ನೇಮಕ ಮಾಡಿ ಪಕ್ಷದ ಮಂಡಲದ ತಾಲೂಕು ಅಧ್ಶಕ್ಷ ಸಂತೋಷ ಪಾಟೀಲ (ಡಂಬಳ) ಆದೇಶ ಹೊರಡಿಸಿದ್ದಾರೆ.ತಾವು ಆಯ್ಕೆಯಾಗಲು ಕಾರಣಿಕತ೯ರಾದ ಪಕ್ಷದ ಜಿಲ್ಲಾ ಅಧ್ಶಕ್ಷ ಆರ್.ಎಸ್.ಪಾಟೀಲ, ಮಾಜಿ ಶಾಸಕ ರಮೇಶ ಭೂಸನೂರ ಅವರಿಗೆ ನಾಯ್ಕೋಡಿ ಕೃತಜ್ಞತೆ ಸಲ್ಲಿಸಿದ್ದಾರೆ.
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಕೆಲವು ವರ್ಷಗಳ ಹಿಂದೆ ನೀರಿಗಾಗಿ ಕಾದು ನಲ್ಲಿಯ ಮುಂದೆ ಕುಳಿತು ಅಳುತ್ತಿರುವ ಮಹಿಳೆಯ ಕಣ್ಣೀರಿನಿಂದ ಬಕೆಟ್ ತುಂಬಿದ್ದ ವ್ಯಂಗ್ಯಚಿತ್ರವೊಂದು ವೃತ್ತಪತ್ರಿಕೆಗಳಲ್ಲಿ ಪ್ರಕಟವಾದಾಗ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿತ್ತು. ಆದರೆ ಇಂದು ಲಕ್ಷಾಂತರ ಜನ ಹೆಣ್ಣು ಮಕ್ಕಳು ಅಕ್ಷರಶಃ ನೀರಿಗಾಗಿ ಕಣ್ಣೀರಿಡುತ್ತಿದ್ದಾರೆ. ಕೊಳಾಯಿಗಳ ಬಳಿ ನೀರಿಗಾಗಿ ಹೆಣ್ಣು ಮಕ್ಕಳು ಜಗಳ ಸರ್ವೆಸಾಮಾನ್ಯವಾಗಿದೆ. ಈ ಹಿಂದೆ “ಅಕಸ್ಮಾತ್ ಮೂರನೇ ಮಹಾಯುದ್ಧವಾದರೆ ಅದು ನೀರಿಗಾಗಿಯೇ” ಎಂಬ ಮಾತು ನಿಜ ಎಂಬಂತಹ ಕಾಲ ಬಂದೊದಗಿದೆ. ಸಣ್ಣಪುಟ್ಟ ಹಕ್ಕಿಗಳು ಬಿಸಿಲಿನ ಆಘಾತವನ್ನು ತಡೆಯಲಾಗದೆ, ಕುಡಿಯಲು ನೀರಿಲ್ಲದೆ ಅಸು ನೀಗುತ್ತಿವೆ. ದನ ಕರುಗಳು ಕೆರೆ ಕಟ್ಟೆಗಳಲ್ಲಿ ನೀರನ್ನು ಹುಡುಕುತ್ತಾ ಅಂಬಾ ಎಂದು ಒರಲುವುದನ್ನು ಕೇಳಿದರೂ ಏನು ಮಾಡಲಾಗದ ಅಸಹಾಯಕತೆ ಅವುಗಳನ್ನು ಸಾಕಿದವರಿಗೆ. ಬೆಳೆಗಳು ಒಣಗಿ ಆಕಾಶಕ್ಕೆ ಮುಖ ಮಾಡಿ ನಿಂತಿವೆ. ಉಳ್ಳವರು ಟ್ಯಾಂಕರ್ಗಳಲ್ಲಿ ನೀರನ್ನು ಹಾಕಿಸಿಕೊಳ್ಳುತ್ತಿರಬಹುದು, ಆದರೆ ನೀರೇ ಇಲ್ಲದೆಡೆ ಬದುಕು ದುಸ್ತರವಾಗುತ್ತದೆ.ಇದು ಪ್ರತಿ ವರ್ಷ ಬೇಸಿಗೆ ಶುರುವಾಗುವ ಹೊತ್ತಿಗೆ ನಾವು…
ಮುದ್ದೇಬಿಹಾಳ: ಕ್ಯಾಂಟರ್ ವಾಹನವೊಂದು ಪ್ಯಾಜೋ ಅಟೋಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಅಟೋದಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ನೇಬಗೇರಿ ಬಳಿ ನಡೆದಿದೆ.ಮೃತ ದುರ್ದೈವಿಯನ್ನು ಆವಜಿ ನಾಯಕ(೪೫) ಎಂದು ಗುರುತಿಸಲಾಗಿದೆ. ಮುದ್ದೇಬಿಹಾಳ ಪಟ್ಟಣದಿಂದ ಟಂಟಂ ಮೂಲಕ ಸವಾರಿ ಮಾಡುವಾಗ ಹಿಂಬದಿಯಿಂದ ಕ್ಯಾಂಟರ್ ಗುದ್ದಿದೆ ಎನ್ನಲಾಗಿದೆ.ಘಟನೆ ಸಂಭವಿಸುತ್ತಿದ್ದಂತೆ ಕಾಲು ಮುರಿದು ಗಂಭೀರ ಗಾಯವಾಗಿದ್ದ ಅಟೋ ಸವಾರನಿಗೆ ಬಾಗಲಕೋಟೆ ಆಸ್ಪತ್ರೆಗೆ ರವಾನಿಸುವ ವೇಳೆ ಹುಲ್ಲೂರ ಬಳಿ ಸಾವನ್ನಪ್ಪಿದ್ದಾನೆ.ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಮೃತ ದುರ್ದೈವಿ ಪತ್ನಿ, ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಯಡಿಯೂರಪ್ಪ ಬಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಡಿ.ವಿ ಸದಾನಂದಗೌಡ ಬೆಂಗಳೂರು: ಲೋಕಸಭೆ ಚುನಾವಣೆಯ ಟಿಕೆಟ್ ಕೈ ತಪ್ಪಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿರುವ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರು, ಯಡಿಯೂರಪ್ಪ ಬಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸರ್ವಾಧಿಕಾರಿ ಧೋರಣೆ ಯಾವತ್ತೂ ಸಾರ್ವಜನಿಕ ವ್ಯವಸ್ಥೆಗೆ ಶೋಭೆ ತರಲ್ಲ. ಬಿಜೆಪಿಯಲ್ಲಿ ಪ್ರಸ್ತುತ ಲೋಕಸಭೆ ಚುನಾವಣೆಯ ಟಿಕೆಟ್ ತನ್ನ ಮಕ್ಕಳಿಗೆ, ಕುಟುಂಬಕ್ಕೆ, ಸಂಬಂಧಿಕರಿಗೆ ಚೇಲಾಗಳಿಗೆ ಎನ್ನುವ ವ್ಯವಸ್ಥೆಯಿದೆ. ಇದರಿಂದ ಪಕ್ಷವನ್ನು ಮುಕ್ತಗೊಳಿಸಬೇಕು. ಮೋದಿಯವರು ಹೇಳಿದಂತೆ ‘ಮೇರಾ ದೇಶ್ ಮೇರಾ ಪರಿವಾರ್’ (ನನ್ನ ದೇಶ, ನನ್ನ ಕುಟುಂಬ) ಆಗಬೇಕು ಎಂದರು.“ನನ್ನನ್ನು ಆರತಿ ಎತ್ತಿ ಪಕ್ಷಕ್ಕೆ ಕರೆತಂದು, ಈಗ ಮಂಗಳಾರತಿ ಎತ್ತಿ ಹೊರ ಕಳಿಸಿದ್ದಾರೆ. ಇದರಿಂದ ನನಗೆ ನೋವಾಗಿದೆ. ನಾನು ಸಮಾನ ಮನಸ್ಕರನ್ನು ಆಹ್ವಾನಿಸುತ್ತೇನೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಆ ಬಳಿಕ ಪಕ್ಷದೊಳಗೆ ಶುದ್ದೀಕರಣ ಪ್ರಾರಂಭಿಸೋಣ. ಕರ್ನಾಟಕದಲ್ಲಿ ಭಾರತೀಯ ಜನತಾ…
ಹೊನವಾಡ: ಶಕ್ತಿ ಗೃಹಜ್ಯೋತಿ ಅನ್ನಭಾಗ್ಯ ಗೃಹ ಲಕ್ಷ್ಮೀ ಯುವನಿಧಿ ಯೋಜನೆಗಳ ಜಾರಿಯಾಗಿದ್ದು ಸದರಿ ಗ್ಯಾರಂಟಿ ಯೋಜನೆಯ ಲಾಭಗಳನ್ನು ಅರ್ಹ ಪಲಾನುಭವಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗಾಗಿ ಸಾಂಸ್ಥಿಕ ಕಾರ್ಯ ವಿಧಾನಗಳನ್ನು ಜಾರಿಗೆ ತರಲು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಹೊನವಾಡದ ಗೌರಿಶಂಕರ(ಮುತ್ತು) ಹಿರೇಮಠ್ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಜಯಪುರ: ಸಾಹಿತ್ಯ ಸಮ್ಮೇಳನದ ಲಾಂಚನ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬವಾಗಿದೆ. ಸಮ್ಮೇಳನದ ಲಾಂಚನ ಜಿಲ್ಲೆಯ ಚರಿತ್ರೆಯನ್ನು ವಿವರಿಸುತ್ತದೆ. ಹಾಗಾಗಿ ಲಾಂಚನ ಸಮ್ಮೇಳನದ ಆತ್ಮವಿದ್ದಂತೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಕರಾದ ಡಾ ಚಂದ್ರಶೇಖರ್ ಹೊಸಮನಿ ಅಭಿಪ್ರಾಯವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ೧೯ ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಚನ ಬಿಡುಗಡೆಗೊಳಿಸಿ ಇಲ್ಲಿಯವರೆಗೆ ಸಮ್ಮೇಳನಗಳು ಅರ್ಥಪೂರ್ಣವಾಗಿ ಸಮಾಜಮುಖಿಯಾಗಿ ನಡೆದಿರುವುದು ಇತಿಹಾಸ, ಜಿಲ್ಲೆಯ ಎಲ್ಲ ಕ್ಷೇತ್ರದ ಪ್ರತಿಭೆಗಳಿಗೆ ಪರಿಷತ್ತು ವೇದಿಕೆಯಾಗಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ ಸರಕಾರಿ ಪಪೂಕಾಲೇಜಿನ ಪ್ರಾಚಾರ್ಯರಾದ ಚಿದಾನಂದ ನಾಟೀಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಕನ್ನಡ ಸಾಹಿತ್ಯ ಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ದೊಡ್ಡದು ಎಂದರು.ಕಸಾಪ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕ ಮಾತನಾಡಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಕಸಾಪ ತಾಲೂಕ ಅಧ್ಯಕ್ಷ ಡಾ ಆನಂದ ಕುಲಕರ್ಣಿ ಮಾತನಾಡಿ, ವಿಜಯಪುರ ಜಿಲ್ಲೆ ಧಾರ್ಮಿಕ ಸಾಮರಸ್ಯ ಹಾಗೂ ಸಾಂಸ್ಕೃತಿಕ ದೊರೆ ಎರಡನೆಯ ಇಬ್ರಾಹಿಂ…
ಬಸವನಬಾಗೇವಾಡಿ: ವಿಜಯಪುರ ಲೋಕಸಭೆ ಮತಕ್ಷೇತ್ರದಲ್ಲಿ ಬಿಜೆಪಿ ಬಂಜಾರಾ ಸಮಾಜಕ್ಕೆ ಟಿಕೆಟ್ ನೀಡದೇ ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಬಂಜಾರಾ ಯುವ ಸೇನಾ ಸಂಘದ ಉಪಾಧ್ಯಕ್ಷ ಅಧ್ಯಕ್ಷ ಪುಂಡಲೀಕ ವಾಲು ಜಾಧವ ಹೇಳಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ಡಾ.ಬಾಬುರಾಜೇಂದ್ರ ನಾಯಕ ಅವರು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ವಿಜಯಪುರ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಕನಸು ಕಾಣುತ್ತಿರುವ ಇವರನ್ನು ಬಿಜೆಪಿ ಹೈಕಮಾಂಡ್ ಗುರುತಿಸಿ ಟಿಕೆಟ್ ಕೊಡಬೇಕಾಗ್ತಿತು. ಇವರ ಅಭಿವೃದ್ಧಿ ಪರ ಚಿಂತನೆಯನ್ನು ಗುರುತಿಸಿದೇ ನಮ್ಮ ಬಂಜಾರಾ ಸಮಾಜಕ್ಕೆ ಬಿಜೆಪಿ ಅನ್ಯಾಯ ಮಾಡಿದೆ. ಬಿಜೆಪಿಯಿಂದ ಡಾ.ಬಾಬುರಾಜೇಂದ್ರ ನಾಯಕ ಅವರಿಗೆ ಟಿಕೆಟ್ ಸಿಗಬೇಕಾಗಿತ್ತು. ಅವರಿಗೆ ಟಿಕೆಟ್ ಸಿಗದೇ ಇರುವದು ನಮಗೆ ನೋವು ತಂದಿದೆ. ಬಿಜೆಪಿ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದೆ. ಈ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಮ್ಮ ಸಮಾಜವು ಬಿಜೆಪಿಗೆ ತಕ್ಕಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಬಾಬುರಾಜೇಂದ್ರ ನಾಯಕ ಅವರು ಬಿಜೆಪಿ ತತ್ವ ಸಿದ್ಧಾಂತ ಮೆಚ್ಚಿ ಸಿಪಿಐ ವೃತ್ತಿಗೆ ರಾಜೀನಾಮೆ ಸಲ್ಲಿಸಿ…
ಬಸವನಬಾಗೇವಾಡಿ: ತಾಲೂಕಿನ ದಿಂಡವಾರ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಗುತ್ತಿಗೆದಾರ ಮಂಜುನಾಥ ಬೋರಗಿ ಅವರು ಬುಧವಾರ ಕಲರ್ ಪ್ರಿಂಟರ್, ಝರಾಕ್ಸ್ ಮಷಿನ್ ದೇಣಿಗೆ ನೀಡುವ ಮೂಲಕ ತಮ್ಮ ಶಿಕ್ಷಣ ಪ್ರೇಮ ಮೆರೆದಿದ್ದಾರೆ.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಮುತ್ತು ಅಗ್ನಿ ಮಾತನಾಡಿ, ನಮ್ಮ ಶಾಲೆಗೆ ಶಿಕ್ಷಣ ಪ್ರೇಮಿ ಮಂಜುನಾಥ ಬೋರಗಿ ಅವರು ಶಾಲೆಗೆ ಅಗತ್ಯವಿರುವ ಕಲರ್ ಪ್ರಿಂಟರ್, ಝರಾಕ್ಸ್ ಮಷಿನ್ ಕೊಡುಗೆಯಾಗಿ ನೀಡಿದ್ದು ಶಾಲೆಗೆ ತುಂಬಾ ಸದುಪಯೋಗವಾಗುತ್ತದೆ. ಅವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ಹೆಚ್ಚು ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಯುವಮುಖಂಡ ವಿಕಾಸ ಜೋಗಿ ಮಾತನಾಡಿ, ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಶಿಕ್ಷಕರು ಪ್ರಾಮಾಣಿಕವಾಗಿ ತಮ್ಮ ಸೇವೆ ಮಾಡುವ ಮೂಲಕ ನಮ್ಮ ಗ್ರಾಮದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು. ಗ್ರಾಮದ ಪ್ರತಿಭೆಗಳು ಹೊರಹೊಮ್ಮವಂತಾಗಬೇಕು. ಶಾಲೆಗೆ ಹಾಗೂ ಮಕ್ಕಳ ಅನುಕೂಲಕ್ಕೆ ಶಿಕ್ಷಣ ಪ್ರೇಮಿ ಮಂಜುನಾಥ ಬೋರಗಿ ಅವರು ಕಲರ್ ಪ್ರಿಂಟರ್, ಝರಾಕ್ಸ್ ಮಷಿನ್ ನೀಡಿದ್ದು ಶ್ಲಾಘನೀಯ…
