ಮುದ್ದೇಬಿಹಾಳ: ಕ್ಯಾಂಟರ್ ವಾಹನವೊಂದು ಪ್ಯಾಜೋ ಅಟೋಗೆ ಹಿಂಬದಿಯಿಂದ ಗುದ್ದಿದ ಪರಿಣಾಮ ಅಟೋದಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ನೇಬಗೇರಿ ಬಳಿ ನಡೆದಿದೆ.
ಮೃತ ದುರ್ದೈವಿಯನ್ನು ಆವಜಿ ನಾಯಕ(೪೫) ಎಂದು ಗುರುತಿಸಲಾಗಿದೆ. ಮುದ್ದೇಬಿಹಾಳ ಪಟ್ಟಣದಿಂದ ಟಂಟಂ ಮೂಲಕ ಸವಾರಿ ಮಾಡುವಾಗ ಹಿಂಬದಿಯಿಂದ ಕ್ಯಾಂಟರ್ ಗುದ್ದಿದೆ ಎನ್ನಲಾಗಿದೆ.
ಘಟನೆ ಸಂಭವಿಸುತ್ತಿದ್ದಂತೆ ಕಾಲು ಮುರಿದು ಗಂಭೀರ ಗಾಯವಾಗಿದ್ದ ಅಟೋ ಸವಾರನಿಗೆ ಬಾಗಲಕೋಟೆ ಆಸ್ಪತ್ರೆಗೆ ರವಾನಿಸುವ ವೇಳೆ ಹುಲ್ಲೂರ ಬಳಿ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತ ದುರ್ದೈವಿ ಪತ್ನಿ, ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
