ವಿಜಯಪುರ: ಸಾಹಿತ್ಯ ಸಮ್ಮೇಳನದ ಲಾಂಚನ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬವಾಗಿದೆ. ಸಮ್ಮೇಳನದ ಲಾಂಚನ ಜಿಲ್ಲೆಯ ಚರಿತ್ರೆಯನ್ನು ವಿವರಿಸುತ್ತದೆ. ಹಾಗಾಗಿ ಲಾಂಚನ ಸಮ್ಮೇಳನದ ಆತ್ಮವಿದ್ದಂತೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಕರಾದ ಡಾ ಚಂದ್ರಶೇಖರ್ ಹೊಸಮನಿ ಅಭಿಪ್ರಾಯ
ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ೧೯ ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಚನ ಬಿಡುಗಡೆಗೊಳಿಸಿ ಇಲ್ಲಿಯವರೆಗೆ ಸಮ್ಮೇಳನಗಳು ಅರ್ಥಪೂರ್ಣವಾಗಿ ಸಮಾಜಮುಖಿಯಾಗಿ ನಡೆದಿರುವುದು ಇತಿಹಾಸ, ಜಿಲ್ಲೆಯ ಎಲ್ಲ ಕ್ಷೇತ್ರದ ಪ್ರತಿಭೆಗಳಿಗೆ ಪರಿಷತ್ತು ವೇದಿಕೆಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಸರಕಾರಿ ಪಪೂಕಾಲೇಜಿನ ಪ್ರಾಚಾರ್ಯರಾದ ಚಿದಾನಂದ ನಾಟೀಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಕನ್ನಡ ಸಾಹಿತ್ಯ ಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ದೊಡ್ಡದು ಎಂದರು.
ಕಸಾಪ ಕೋಶಾಧ್ಯಕ್ಷ ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಸಾಪ ತಾಲೂಕ ಅಧ್ಯಕ್ಷ ಡಾ ಆನಂದ ಕುಲಕರ್ಣಿ ಮಾತನಾಡಿ, ವಿಜಯಪುರ ಜಿಲ್ಲೆ ಧಾರ್ಮಿಕ ಸಾಮರಸ್ಯ ಹಾಗೂ ಸಾಂಸ್ಕೃತಿಕ ದೊರೆ ಎರಡನೆಯ ಇಬ್ರಾಹಿಂ ಕಾಲದಿಂದಲೂ ಪ್ರತಿ ತಿಂಗಳ ಮೊದಲ ಗುರುವಾರ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳತ್ತ ಬಂದ ಚರಿತ್ರೆಯಿದೆ. ಆ ಪರಂಪರೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಮಾಡುತ್ತ ಬಂದಿದೆ ಎಂದರು.
ಜಿಲ್ಲಾ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ ಶುಭ ಕೋರಿದರು.
ವೇದಿಕೆ ಮೇಲೆ ವಿಜಯಕುಮಾರ ಘಾಟಗೆ, ನಗರ ಘಟಕದ ಅಧ್ಯಕ್ಷ ಕು. ಅನ್ನಪೂರ್ಣ ಬೆಳ್ಳೆಣ್ಣವರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೌರವ ಕಾರ್ಯದರ್ಶಿ ಸುಭಾಸ ಕನ್ನೂರ ವಂದಿಸಿದರು.
ಕಾರ್ಯಕ್ರಮದಲ್ಲಿ, ಕಮಲಾ ಮುರಾಳ, ಮಹ್ಮದ ಗೌಸ್ ಹವಾಲ್ದಾರ, ಅಲ್ಲಿಸಾಬ ಕಡಕೆ, ಎಂ ಬಿ ಕಟ್ಟಿಮನಿ ಡಾ ಮಾಧವ ಗುಡಿ, ಮಾಧವ ಗುಡಿ, ಮಹಾದೇವಿ ತೆಲಗಿ, ಐಹೊಳ್ಳಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

