Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ

ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ

ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುವ ಕೃತಕ ಬುದ್ದಿಮತ್ತೆ ವೇದಿಕೆಗಳು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಿಜೆಪಿ ಶುದ್ಧೀಕರಣ ಮಾಡುವವರೆಗೆ ವಿರಮಿಸೊಲ್ಲ!
(ರಾಜ್ಯ ) ಜಿಲ್ಲೆ

ಬಿಜೆಪಿ ಶುದ್ಧೀಕರಣ ಮಾಡುವವರೆಗೆ ವಿರಮಿಸೊಲ್ಲ!

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಯಡಿಯೂರಪ್ಪ ಬಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಡಿ.ವಿ ಸದಾನಂದಗೌಡ

ಬೆಂಗಳೂರು: ಲೋಕಸಭೆ ಚುನಾವಣೆಯ ಟಿಕೆಟ್ ಕೈ ತಪ್ಪಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿರುವ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರು, ಯಡಿಯೂರಪ್ಪ ಬಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸರ್ವಾಧಿಕಾರಿ ಧೋರಣೆ ಯಾವತ್ತೂ ಸಾರ್ವಜನಿಕ ವ್ಯವಸ್ಥೆಗೆ ಶೋಭೆ ತರಲ್ಲ. ಬಿಜೆಪಿಯಲ್ಲಿ ಪ್ರಸ್ತುತ ಲೋಕಸಭೆ ಚುನಾವಣೆಯ ಟಿಕೆಟ್ ತನ್ನ ಮಕ್ಕಳಿಗೆ, ಕುಟುಂಬಕ್ಕೆ, ಸಂಬಂಧಿಕರಿಗೆ ಚೇಲಾಗಳಿಗೆ ಎನ್ನುವ ವ್ಯವಸ್ಥೆಯಿದೆ. ಇದರಿಂದ ಪಕ್ಷವನ್ನು ಮುಕ್ತಗೊಳಿಸಬೇಕು. ಮೋದಿಯವರು ಹೇಳಿದಂತೆ ‘ಮೇರಾ ದೇಶ್ ಮೇರಾ ಪರಿವಾರ್’ (ನನ್ನ ದೇಶ, ನನ್ನ ಕುಟುಂಬ) ಆಗಬೇಕು ಎಂದರು.
“ನನ್ನನ್ನು ಆರತಿ ಎತ್ತಿ ಪಕ್ಷಕ್ಕೆ ಕರೆತಂದು, ಈಗ ಮಂಗಳಾರತಿ ಎತ್ತಿ ಹೊರ ಕಳಿಸಿದ್ದಾರೆ. ಇದರಿಂದ ನನಗೆ ನೋವಾಗಿದೆ. ನಾನು ಸಮಾನ ಮನಸ್ಕರನ್ನು ಆಹ್ವಾನಿಸುತ್ತೇನೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಆ ಬಳಿಕ ಪಕ್ಷದೊಳಗೆ ಶುದ್ದೀಕರಣ ಪ್ರಾರಂಭಿಸೋಣ. ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ಶುದ್ದೀಕರಣ ಆಗದೆ ನಾನು ವಿರಮಿಸುವುದಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿಯಾದರೂ ಇದರ ಪರವಾಗಿ ಹೋರಾಟ ಮಾಡುತ್ತೇನೆ” ಎಂದು ಸದಾನಂದಗೌಡ ಹೇಳಿದರು.
“ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಅವಗಣನೆ ಮಾಡಲಾಗಿದೆ. ರಾಜ್ಯದ ಜನತೆ ಈಗ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇದು ಮೋದಿಯವರ ಚುನಾವಣೆ. ಈ ಚುನಾವಣೆ ಬಳಿಕ ನಾವು ಪಕ್ಷದೊಳಗೆ ಶುದ್ದೀಕರಣ ಕೆಲಸ ಪ್ರಾರಂಭಿಸುತ್ತೇವೆ. ನನ್ನ ಮನೆಯವರಿಗೆ ನನ್ನ ಪಕ್ಷ ಆಗಬಾರದು” ಎಂದು ಅಸಮಾಧಾನ ಹೊರ ಹಾಕಿದರು.
ಕಾಂಗ್ರೆಸ್ ಸೇರಲ್ಲ:
“ಟಿಕೆಟ್ ಸಿಗದಕ್ಕೆ ನನಗೆ ನೋವಾಗಿದೆ. ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಬಂದಿರುವುದು ನಿಜ. ಆದರೆ, ನಾನು ಕಾಂಗ್ರೆಸ್‌ಗೆ ಹೋಗಲ್ಲ. ನಮಗೆ ಅಪಮಾನ ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಲಿದ್ದಾರೆ. ನನ್ನ ಮುಂದಿನ ನಡೆ ಕರ್ನಾಟಕ ಬಿಜೆಪಿಯ ಶುದ್ಧೀಕರಣ” ಎಂದು ಪುನರುಚ್ಚರಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ

ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ

ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುವ ಕೃತಕ ಬುದ್ದಿಮತ್ತೆ ವೇದಿಕೆಗಳು

ಆರೋಗ್ಯ ಸೇವೆಗಳ ವಿಸ್ತರಣೆಗೆ ಬಿ.ಎಲ್.ಡಿ.ಇ ಸಂಸ್ಥೆ ಸದಾ ಬದ್ಧ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ
    In (ರಾಜ್ಯ ) ಜಿಲ್ಲೆ
  • ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುವ ಕೃತಕ ಬುದ್ದಿಮತ್ತೆ ವೇದಿಕೆಗಳು
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಸೇವೆಗಳ ವಿಸ್ತರಣೆಗೆ ಬಿ.ಎಲ್.ಡಿ.ಇ ಸಂಸ್ಥೆ ಸದಾ ಬದ್ಧ
    In (ರಾಜ್ಯ ) ಜಿಲ್ಲೆ
  • ನೂತನ ಪದಾಧಿಕಾರಿಗಳ ಪದಗ್ರಹಣ ಯಶಸ್ವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ-ನಾರಾಯಣಪುರದಿಂದ ಕಾಲುವೆಗಳಿಗೆ ನೀರು
    In (ರಾಜ್ಯ ) ಜಿಲ್ಲೆ
  • ಜು.೨೯ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ನಗದು ಪ್ರಶಸ್ತಿ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಶಿಷ್ಯವೇತನ, ಪುಸ್ತಕ ಅನುದಾನಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಶಿಷ್ಯವೇತನಕ್ಕೆ ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.