Author: editor.udayarashmi@gmail.com

ಮುದ್ದೇಬಿಹಾಳ: ನಿಗದಿತ ಅವಧಿಯಲ್ಲಿ ವಿದ್ಯಾರ್ಥಿಗಳ ಕೈ ಸೇರಬೇಕಾಗಿದ್ದ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಕೆಲ ಕಾಲ ವಿಳಂಬವಾಗಿ ಆತಂಕ ತಂದೊಡ್ಡಿದ ಘಟನೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ೧೯ ಪರೀಕ್ಷಾ ಕೇಂದ್ರದಲ್ಲಿ ನಡೆದಿತ್ತು.ಸೋಮವಾರ ಪ್ರಥಮ ಭಾಷೆಯ ಪರೀಕ್ಷೆ ಇದ್ದು ಖಜಾನೆಯಿಂದ ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ಬಂಡಲ್‌ಗಳು ಹೊರಬರದ ಕಾರಣ ಮಾರ್ಗಾಧಿಕಾರಿಗಳು ಸೇರಿದಂತೆ ಪರೀಕ್ಷಾ ಕರ್ತವ್ಯದಲ್ಲಿದ್ದ ಎಲ್ಲರೂ ಪೇಚಾಡುವಂತಾಗಿತ್ತು. ಖಜಾನೆ ಬೀಗ ತೆರೆಯುವಲ್ಲಿ ಈ ವಿಳಂಬವಾಗಿದ್ದರ ಪರಿಣಾಮ ತಡವಾದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಎಷ್ಟು ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ನೀಡಲಾಗಿತ್ತೋ ಆ ಸಮಯವನ್ನು ಹೆಚ್ಚಿಗೆ ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ತಿಳಿಸಿದರು.ಒಟ್ಟು ೧೯ ಪರೀಕ್ಷಾ ಕೇಂದ್ರಗಳ ಪೈಕಿ ೬೪೨೭ ವಿದ್ಯಾರ್ಥಿಗಳು ಪರೀಕ್ಷಾ ಫಾರಂ ಭರ್ತಿ ಮಾಡಿದ್ದರು. ಅದರಲ್ಲಿ ೧೩೨ ವಿದ್ಯಾರ್ಥಿಗಳು ಗೈರಾಗಿದ್ದು ೬೨೯೫ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಿದಂತಾಗಿದೆ. ಯಾವುದೇ ನಕಲು ಪ್ರಕರಣ, ಡಿಬಾರ್, ಎಂಪಿಸಿ ಆಗಿಲ್ಲ ಎಂದು ಪರೀಕ್ಷಾ…

Read More

ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಮರು ಸೇರ್ಪಡೆ | ಕೆಆರ್‌ಪಿಪಿ ಬಿಜೆಪಿಯಲ್ಲಿ ವಿಲೀನ ಬೆಂಗಳೂರು: ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಅವರು 2024 ರ ಲೋಕಸಭೆ ಚುನಾವಣೆಗೆ ಮುನ್ನ ಸೋಮವಾರ ಬಿಜೆಪಿಗೆ ಮರು ಸೇರ್ಪಡೆಗೊಂಡಿದ್ದಾರೆ.ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಗಂಗಾವತಿ ಶಾಸಕ, ಕಳೆದ ವರ್ಷ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ (ಕೆಆರ್‌ಪಿಪಿ) ಸ್ಥಾಪಿಸಿ ಬಿಜೆಪಿಯೊಂದಿಗಿನ ಎರಡು ದಶಕಗಳ ಹಿಂದಿನ ಒಡನಾಟವನ್ನು ಮುರಿದುಕೊಂಡಿದ್ದರು.ರೆಡ್ಡಿ ಅವರು ಸೋಮವಾರ ತಮ್ಮ ಕೆಆರ್‌ಪಿಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದು, ಪತ್ನಿ ಅರುಣಾ ಲಕ್ಷ್ಮಿ ಮತ್ತು ಕೆಲವು ಕುಟುಂಬ ಸದಸ್ಯರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಇತರರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.ರೆಡ್ಡಿ ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಆದರೆ, ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗೆ…

Read More

ತಿಕೋಟಾ: ಪಟ್ಟಣದ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಸೋಮವಾರ ಯುವಕ, ಯುವತಿಯರು ಹಾಗೂ ಚಿಣ್ಣರು ಬೆಳಗ್ಗೆಯಿಂದಲೇ ಹೋಳಿ ನಿಮಿತ್ಯ ಬಣ್ಣ ಎರಚಾಡುವ ಮೂಲಕ ಸಂಭ್ರಮಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ತಮ್ಮ ಪ್ರೀತಿ ಪಾತ್ರದವರ ಮನೆ ಮುಂದೆ ಗೆಳೆಯರೊಂದಿಗೆ ಸಾಗಿ ಹಲಗೆ ಬಡಿಯುತ್ತಾ ನೃತ್ಯ ಮಾಡುವ ಮೂಲಕ ಬಣ್ಣ ಹಚ್ಚಿದರು. ಯುವಕರು ತಂಡೋಪತಂಡವಾಗಿ ಗ್ರಾಮೀಣ ಪ್ರದೇಶದ ತೋಟದ ಮನೆಗಳಿಗೂ ತೆರಳಿ ದ್ರಾಕ್ಷಿ ಪಡ ಹಾಗೂ ಒಣದ್ರಾಕ್ಷಿ ಸೆಡ್ ನಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೂ ಸಹ ಬಣ್ಣ ಲೇಪಿಸಿ ಖುಷಿಪಟ್ಟರು.ತಾಂಡಾ ಮಹಿಳೆಯರ ಸಂಭ್ರಮ: ತಾಲ್ಲೂಕಿನ ಎಲ್ಲ ಲಂಬಾಣಿ ತಾಂಡಾ ಮಹಿಳೆಯರಿಗೆ ಈ ಹಬ್ಬ ಖುಷಿಯೋ ಖುಷಿ. ಏಕೆಂದರೆ ಬೆಳಗ್ಗೆಯಿಂದಲೇ ಮಹಿಳೆಯರು ಬಕೇಟ್ ಗಳಲ್ಲಿ ಬಣ್ಣ , ನೀರು ತುಂಬಿಕೊಂಡು ಬಣ್ಣ ಎರಚಾಡಿ ಲಂಬಾಣಿ ಹಾಡುಗಳನ್ನು ಹಾಡುತ್ತಾ ವಿಭಿನ್ನ ನೃತ್ಯ ಮಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ದಂಡು ಸಾಗಿತು.ನಾಮಕರಣ ಕಾರ್ಯ: ಸಂಜೆಯವರೆಗೂ ತಾಂಡಾದಲ್ಲಿ ಬಣ್ಣದ ಹಬ್ಬ ಆಚರಿಸಿದ ಮಹಿಳೆಯರ ಗುಂಪು…

Read More

ದೇವರಹಿಪ್ಪರಗಿ: ದುರ್ಬಲ ವರ್ಗದ ಜನತೆಗೆ ವೃದ್ಧಾಪ್ಯದ ಅವಧಿಯಲ್ಲಿ ನೆಮ್ಮದಿಯ ಜೀವನ ಕಳೆಯಲು ವಾತ್ಸಲ್ಯ ಕಾರ್ಯಕ್ರಮ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ಹೇಳಿದರು.ಮತಕ್ಷೇತ್ರದ ಬೆಕಿನಾಳ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ಮಂಜೂರಾದ ಮನೆಯನ್ನು ಫಲಾನುಭವಿ ಕಾಶೀಬಾಯಿ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.ಇದು ಧರ್ಮಸ್ಥಳದ ಹೇಮಾವತಿ ಅಮ್ಮನವರ ನೆಚ್ಚಿನ ಕಾರ್ಯಕ್ರಮ. ಸಮಾಜದಲ್ಲಿರುವ ಅಶಕ್ತರು ಸಂತೋಷದಿಂದ ಎಲ್ಲರಂತೆ ಬದುಕಲು ಸಹಕಾರಿಯಾಗುವಂತೆ ಸೂರು ನಿರ್ಮಿಸಿ ಅವರಿಗೆ ಮಾಶಾಸನ ವಿತರಿಸುವುದರ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಖಚಿತ ಭರವಸೆ ನೀಡುವದಾಗಿದೆ ಎಂದರು.ಜ್ಞಾನವಿಕಾಸ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಶಕುಂತಲಾ ಹಾಗೂ ತಾಲ್ಲೂಕು ಯೋಜನಾಧಿಕಾರಿ ಗಿರೀಶಕುಮಾರ ಮಾತನಾಡಿ, ಫಲಾನುಭವಿಗೆ ಶುಭಹಾರೈಸಿದರು.ಗ್ರಾಮ ಪಂಚಾಯಿತಿ ಸದಸ್ಯ ಸಿದ್ಧನಗೌಡ ಬಿರಾದಾರ, ರವಿ ಸುಧಾಕರ, ಹುಸೇನಸಾಬ್, ಮಲ್ಲಿಕಾರ್ಜುನ ಹಿರೇಮಠ, ಸಿದ್ಧರಾಮಪ್ಪಗೌಡ , ಪ್ರಕಾಶ ವಣಿಕ್ಯಾಳ, ಶೇಖಪ್ಪ ಅಗಸರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯ, ಸೇವಾಪ್ರತಿನಿಧಿಗಳಾದ ನೀಲಮ್ಮ, ಸವಿತಾ, ಶಾಂತಾ, ಸ್ವಪ್ನ, ಮತ್ತು ಸಂಘದ ಸದಸ್ಯರು ಇದ್ದರು.

Read More

ವಿಜಯಪುರ: ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪತ್ರಿಕೆಗೆ ಜಿಲ್ಲೆಯ ೧೨೭ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿದ್ದು, ಪರೀಕ್ಷೆಗೆ ನೋಂದಣಿಯಾದ ಒಟ್ಟು ೪೦,೮೩೩ ಜನ ವಿದ್ಯಾರ್ಥಿಗಳಲ್ಲಿ ೩೯,೯೯೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ೮೪೧ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆ ಪತ್ರಿಕಾ ಪರೀಕ್ಷೆ ನಿಮಿತ್ಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ವಿಜಯಪುರ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಮರಾಠಿ ವಿದ್ಯಾಲಯ ಹಾಗೂ ಪಿ.ಡಿ.ಜೆ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲನೆ ನಡೆಸಿದರು.ಈ ವೇಳೆ ಮೂರು ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿಗಳ ಸಂಖ್ಯೆ, ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ಪರೀಕ್ಷಾ ಕೊಠಡಿ ಮೇಲ್ವಿಚಾರಕರ ನೇಮಕ ಮಾಡಿರುವುದು, ಪರೀಕ್ಷಾ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವ ಕುರಿತು, ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ಕೊಠಡಿಗಳಿಗೆ ಸಿಸಿ ಟಿವಿ ಮತ್ತು ವೆಬ್ ಕಾಸ್ಟಿಂಗ್ ಅಳವಡಿಸಿರುವ ಬಗ್ಗೆ, ಪರೀಕ್ಷಾ ಕೇಂದ್ರಗಳಿಗೆ ಪೋಲಿಸ್ ಭದ್ರತಾ ವ್ಯವಸ್ಥೆ ಹಾಗೂ ಆರೋಗ್ಯ ಕಾರ್ಯಕರ್ತರ ನಿಯೋಜನೆ ಮಾಡಿರುವ ಕುರಿತು ಪರಿಶೀಲಿಸಿದರು.ಎಲ್ಲ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳದವರು ಹಾಗೂ ಮೊಬೈಲ್…

Read More

ಮೋರಟಗಿ: ಗ್ರಾಮದ ಕಲ್ಪವೃಕ್ಷ ಹಾಗೂ ಶ್ರೀ ಸಿದ್ದರಾಮೇಶ್ವರ ಶಾಲೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರೀಕ್ಕೆ ತಹಸೀಲ್ದಾರ್ ಮಹಾದೇವ ಸಣಮುರಿ ಸೋಮುವಾರ ಭೇಟಿ ನೀಡಿ ಪರಿಶೀಲಿಸಿದರು.ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಎರಡು ಪರೀಕ್ಷೆ ಕೇಂದ್ರದಲ್ಲಿ ೬೨೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಇದರಲ್ಲಿ ಶ್ರೀ ಸಿದ್ದರಾಮೇಶ್ವರ ಪರೀಕ್ಷೆ ಕೇಂದ್ರದಲ್ಲಿ ೫ ವಿದ್ಯಾರ್ಥಿಗಳು ಗೈರಾಗಿದ್ದು ೬೧೭ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಪ್ರತಿಯೊಂದು ಪರೀಕ್ಷೆ ಕೊಠಡಿಗಳು ಪರಿಶೀಲಸಲಾಗಿದೆ ಪ್ರತಿ ಕೊಣೆಯಲ್ಲಿ ಸಿಸಿ ಕ್ಯಾಮೀರಾ ಅಳವಡಿಸಿದ್ದಾರೆ, ಮಕ್ಕಳು ದೈರ್ಯದಿಂದ ಪರೀಕ್ಷೆ ಎದುರಿಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ವ್ಯವಸ್ಥೆ ಕೂಡಾ ಕಲ್ಪಿಸಿದ್ದಾರೆ ನಕಲು ಮುಕ್ತ ಪರೀಕ್ಷೆ ನಡಿಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸೋದ್ದೇವೆ ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕ ಜೀವನದ ಮೊದಲ ಮೆಟ್ಟಿಲು ನಕಲು ಆಶೆ ಹಚ್ಚಿಸಿ ವಿದ್ಯಾರ್ಥಿಗಳ ಜೀವನ ಹಾಳು ಮಾಡಬಾರದು ಎಂದು ಪಾಲಕರಲ್ಲಿ ತಿಳಿಸುತ್ತೇನೆ ಎಂದುರು.

Read More

ಇಂಡಿ: ವಿಜಯಪುರದಿಂದ ಇಂಡಿ ಪಟ್ಟಣದ ಆದರ್ಶ ಮಹಾವಿದ್ಯಾಲಯದ ಭದ್ರತಾ ಕೋಣೆಗೆ ಲೋಕ ಸಭಾ ಚುನಾವಣೆ ನಿಮಿತ್ಯ ವಿದ್ಯುನ್ಮಾನ ಯಂತ್ರಗಳನ್ನು ಇಂಡಿಗೆ ತರಲಾಯಿತು ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.೩೩೭ ಕಂಟ್ರೋಲ ಯುನಿಟ್ ಮತಯಂತ್ರಗಳು, ೩೩೭ ಬ್ಯಾಲೆಟ್ ಯುನಿಟ್ ಮತಯಂತ್ರಗಳು ಮತ್ತು ೩೫೯ ವಿವಿ ಪ್ಯಾಡಗಳು ಇಂಡಿಗೆ ಬಿಗಿ ಭದ್ರತೆ ಮಧ್ಯೆ ತರಲಾಗಿದೆ.ನಾಮ ಪತ್ರ ಪ್ರಕ್ರಿಯೆ ಮುಗಿದ ನಂತರ ಇಂಡಿಯಲ್ಲಿಯೇ ಮತಯಂತ್ರಗಳಲ್ಲಿ ಬ್ಯಾಲೇಟ್ ಪೇಪರ ವ್ಯವಸ್ಥೆ ಮಾಡಲಾಗಿದೆ ಎಂದು ಗದ್ಯಾಳ ತಿಳಿಸಿದರು.ತಹಸೀಲ್ದಾರ ಮಂಜುಳಾ ನಾಯಕ, ಚುನಾವಣೆ ಶಿರಸ್ತೆದಾರ ಆರ್.ಬಿ.ಮೂಗಿ ಮತ್ತು ಚುನಾವಣೆ ಸಿಬ್ಬಂದಿ ಮತ್ತು ಪೋಲಿಸ ಸಿಬ್ಬಂದಿ ಇದ್ದರು.

Read More

ಇಂಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಪ್ರಮುಖವಾದದ್ದು. ಎಲ್ಲಾ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಮುಂದೆ ಅವರ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರಚಿಸಿಕೊಳ್ಳಬೇಕು ಎನ್ನುವುದು ನಮ್ಮ ಆಸೆ ಎಂದು ಇಂಡಿ ತಾಲೂಕ ತಹಶೀಲ್ದಾರ್ ಮಂಜುಳಾ ನಾಯಕ ಅಭಿಪ್ರಾಯಪಟ್ಟರು.ಸೋಮವಾರ ಪಟ್ಟಣದ ಆದರ್ಶ ಮಹಾವಿದ್ಯಾಲಯದಲ್ಲಿ ಇಂದು ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ, ಶುಭ ಹಾರೈಸಿ, ಪರೀಕ್ಷೆಗೆ ವಿನೂತನವಾಗಿ ಬರಮಾಡಿಕೊಂಡು ಅಭಿಪ್ರಾಯ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ ಮಾತನಾಡಿ, ಶೈಕ್ಷಣಿಕ ಜೀವನದಲ್ಲಿ ೧೦ನೇ ತರಗತಿ ಪರೀಕ್ಷೆ ಅತ್ಯಂತ ಪ್ರಮುಖ ಘಟ್ಟ. ಪ್ರತಿಯೊಬ್ಬರೂ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂದರು.ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಮಾತನಾಡಿ, ವಿದ್ಯಾರ್ಥಿಗಳೇ, ಇದೊಂದು ಕಲಿಕೆಯ ಪ್ರಮುಖ ಘಟ್ಟ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಯಾವುದೇ ಗೊಂದಲಗಳಿಗೆ ತಲೆಕೆಡಿಸಿಕೊಳ್ಳದೇ ಪರೀಕ್ಷೆ ಎದುರಿಸಿ, ಶುಭವಾಗಲಿ ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ, ಇಂಡಿ ತಾಲೂಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಬಿ. ಪಾಟೀಲ, ಬಿಆರ್‌ಪಿ ಆಯ್.ಜಿ. ಆಳೂರ,…

Read More

ಇಂಡಿ: ಪಟ್ಟಣದಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲೂಕಿನ್ಯಾದಂತ ಪ್ರಾರಂಭಗೊಂಡವು. ಒಟ್ಟು ೪೫೬೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೮೫ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿ ಉಳಿದರು.ಪರೀಕ್ಷೆ ನಡೆದ ಪಟ್ಟಣದ ಸಾಯಿ ಪಬ್ಲಿಕ್ ಶಾಲೆ ಕೇಂದ್ರಕ್ಕೆ ಭೇಟಿ ನೀಡಿದ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿನಿಯನ್ನು ಡಿಬಾರು ಮಾಡಿದ್ದಾರೆ.ಅದಲ್ಲದೆ ಪರೀಕ್ಷೆ ಕೆಲಸದಲ್ಲಿ ನಿಷ್ಕಾಳಜಿ ಮಾಡಿದಕ್ಕಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೋರಗಿಯ ರಾಜಶೇಖರ ಬಂಡೆ ಶಿಕ್ಷಕರನ್ನು ಪರೀಕ್ಷೆಯಿಂದ ಅಮಾನತುಗೊಳಿಸಿ ಈ ಕುರಿತು ಅವರ ಮೇಲೆ ಸೂಕ್ತ ಕ್ರಮಕ್ಕಾಗಿ ಡಿಡಿಪಿಐ ಇವರಿಗೆ ಪತ್ರ ಬರೆದಿರುವದಾಗಿ ಎಸಿ ಗದ್ಯಾಳ ತಿಳಿಸಿದ್ದಾರೆ.ಉಳಿದಂತೆ ಇಂಡಿ ಪಟ್ಟಣದ ಎಂಟು ಮತ್ತು ಗ್ರಾಮಾಂತರ ಪ್ರದೇಶದ ಎಂಟು ಕೇಂದ್ರಗಳಲ್ಲಿ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆದಿವೆ.

Read More