ಮುದ್ದೇಬಿಹಾಳ: ನಿಗದಿತ ಅವಧಿಯಲ್ಲಿ ವಿದ್ಯಾರ್ಥಿಗಳ ಕೈ ಸೇರಬೇಕಾಗಿದ್ದ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಕೆಲ ಕಾಲ ವಿಳಂಬವಾಗಿ ಆತಂಕ ತಂದೊಡ್ಡಿದ ಘಟನೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ೧೯ ಪರೀಕ್ಷಾ ಕೇಂದ್ರದಲ್ಲಿ ನಡೆದಿತ್ತು.
ಸೋಮವಾರ ಪ್ರಥಮ ಭಾಷೆಯ ಪರೀಕ್ಷೆ ಇದ್ದು ಖಜಾನೆಯಿಂದ ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ಬಂಡಲ್‌ಗಳು ಹೊರಬರದ ಕಾರಣ ಮಾರ್ಗಾಧಿಕಾರಿಗಳು ಸೇರಿದಂತೆ ಪರೀಕ್ಷಾ ಕರ್ತವ್ಯದಲ್ಲಿದ್ದ ಎಲ್ಲರೂ ಪೇಚಾಡುವಂತಾಗಿತ್ತು. ಖಜಾನೆ ಬೀಗ ತೆರೆಯುವಲ್ಲಿ ಈ ವಿಳಂಬವಾಗಿದ್ದರ ಪರಿಣಾಮ ತಡವಾದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಎಷ್ಟು ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ನೀಡಲಾಗಿತ್ತೋ ಆ ಸಮಯವನ್ನು ಹೆಚ್ಚಿಗೆ ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ತಿಳಿಸಿದರು.
ಒಟ್ಟು ೧೯ ಪರೀಕ್ಷಾ ಕೇಂದ್ರಗಳ ಪೈಕಿ ೬೪೨೭ ವಿದ್ಯಾರ್ಥಿಗಳು ಪರೀಕ್ಷಾ ಫಾರಂ ಭರ್ತಿ ಮಾಡಿದ್ದರು. ಅದರಲ್ಲಿ ೧೩೨ ವಿದ್ಯಾರ್ಥಿಗಳು ಗೈರಾಗಿದ್ದು ೬೨೯೫ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಿದಂತಾಗಿದೆ. ಯಾವುದೇ ನಕಲು ಪ್ರಕರಣ, ಡಿಬಾರ್, ಎಂಪಿಸಿ ಆಗಿಲ್ಲ ಎಂದು ಪರೀಕ್ಷಾ ತಾಲೂಕು ನೂಡಲ್ ಮಾಹಿತಿ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
ಖಜಾನೆ ಬೀಗ ತೆರೆಯಲು ವಿಳಂಬ ; ತಡವಾಗಿ ಕೈಸೇರಿದ ಪ್ರಶ್ನೆಪತ್ರಿಕೆ
Related Posts
Add A Comment
