Author: editor.udayarashmi@gmail.com

ವಿಜಯಪುರ: ನಾರಾಯಣಪೂರ ಜಲಾಶಯದಿಂದ ಭೀಮಾನದಿಗೆ ಜನ ಜಾನುವಾರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ೧ ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಇಂಡಿ ತಾಲೂಕಿನ ಹಿಂಗಣಿ ಬ್ಯಾರೆಜ್‌ಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರುಕುಡಿಯುವ ಉದ್ದೇಶಕ್ಕಾಗಿ ನೀರನ್ನು ಹರಿಸಲಾಗುತ್ತಿರುವುದರಿಂದ ಭೀಮಾನದಿ ನದಿ ನೀರನ್ನು ಅವಲಂಬಿಸಿದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಸಮರ್ಪಕ ಸಾಕಾರಕ್ಕೆ ಅಧಿಕಾರಿಗಳು ತಕ್ಷಣದಿಂದಲೇ ಜಾಗೃತೆ ವಹಿಸಿಕೊಂಡು, ಕಡ್ಡಾಯವಾಗಿ ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ಹಾಗೂ ಅಂತಿಮ ಸೂಚಿತ ಪ್ರದೇಶಗಳಿಗೆ ಕುಡಿಯುವ ನೀರು ತಲುಪುವಂತೆ ಆದ್ಯತೆ ನೀಡಿ ಕಾರ್ಯನ್ಮೋಮುಖರಾಗಬೇಕು ಎಂದು ಸೂಚಿಸಿದರು.ಅನ್ಯ ಚಟುವಟಿಕೆಗಳಿಗೆ ನೀರನ್ನು ಬಳಸುವುದನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಡಿಸೇಲ್, ಮೋಟಾರು ಯಂತ್ರಗಳ ಮೂಲಕ ನೀರನ್ನು ಎತ್ತುವುದನ್ನು ತಡೆಯಬೇಕು. ಹಗಲು-ರಾತ್ರಿ ಪಾಳಿಯಲ್ಲಿ ವಾಚ್-ವಾರ್ಡ ಮಾಡಬೇಕು. ನದಿ ಪಾತ್ರಗಳಲ್ಲಿ ಬರುವ ಬ್ಯಾರೇಜ್‌ಗಳು ತುಂಬಿಸುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ಈ ವೇಳೆ ಇಂಡಿ ಉಪವಿಭಾಗಾಧಿಕಾರಿ ಅಭೀದ್ ಗದ್ಯಾಳ, ತಹಶೀಲ್ದಾರ ಮಂಜುಳಾ ನಾಯಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು…

Read More

ದೇವರಹಿಪ್ಪರಗಿ: ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೇವರಹಿಪ್ಪರಗಿ ವಿಧಾನಸಭೆ ಪ್ರಚಾರ ಉಸ್ತುವಾರಿಗಳಾಗಿ ವಿಧಾನ ಪರಿಷತ್ ಸದಸ್ಯ ಸುನೀಲಕುಮಾರ ಪಾಟೀಲ, ಮಾಜಿ ಶಾಸಕ ಶರಣಪ್ಪ ಸುಣಗಾರ, ಸುಭಾಸ್ ಛಾಯಾಗೋಳ (ಕೋರವಾರ), ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ), ಆನಂದ ದೊಡ್ಡಮನಿ (ಬ.ಸಾಲೋಡಗಿ), ಗೌರಮ್ಮ ಮುತ್ತತ್ತಿ (ಹಾಲ್ಯಾಳ), ಬಶೀರ್‌ಅಹ್ಮದ್ ಕಸಾಬ್ (ಬೇಪಾರಿ), ಬಾಳಾಸಾಹೇಬಗೌಡ ಪಾಟೀಲ (ಸಾತಿಹಾಳ), ಜಿ.ಪಂ ಮಾಜಿಸದಸ್ಯ ಎಸ್.ಎಮ್. ದೇಸಾಯಿ, ಸಾಯಿಕುಮಾರ ಬಿಸನಾಳ (ಕಡ್ಲೇವಾಡ ಪಿಸಿಎಚ್), ಸಂಚಾಲಕರಾಗಿ ಬಿ.ಎಸ್.ಪಾಟೀಲ (ಯಾಳಗಿ) ನಿಯೋಜನೆಗೊಂಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಕಟಣೆ ತಿಳಿಸಿದೆ.

Read More

ಮುದ್ದೇಬಿಹಾಳ: ತಾಲೂಕಿನ ಗೋನಾಳ ಎಸ್.ಎಚ್.ಗ್ರಾಮದಲ್ಲಿ ನಿರ್ಮಿಸುತ್ತಿರುವ ರಸ್ತೆ ನಿರ್ಮಾಣಕ್ಕೆ ರೈತ ಪರೂತಯ್ಯ ಹಿರೇಮಠ ಜಿಲ್ಲಾಧಿಕಾರಿಗೆ ಮತ್ತು ವಿಜಯಪುರದ ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರ್ ಗೆ ತಕರಾರು ಸಲ್ಲಿಸಿದ್ದಾರೆ.ಈ ಕುರಿತು ದೂರಿನ ಸ್ವೀಕೃತಿ ಪ್ರತಿ ಮಾಧ್ಯಮಕ್ಕೆ ನೀಡಿ ಮಾತನಾಡಿದ ಅವರು, ಗೋನಾಳ ಗ್ರಾಮದ ಸರ್ವೇ ನಂಬರ್ ೧೦, ೧೧, ೧೨ ಈ ಜಮೀನುಗಳಲ್ಲಿ ಗೋನಾಳ ಗ್ರಾಮದ ಮಳೆಯ, ಕೊಳಚೆ, ಕಾಲುವೆಯ, ಹಡಲಗೇರಿ ರಸ್ತೆಯಿಂದ ಬರುವ ಹೀಗೆ ಎಲ್ಲ ನೀರು ರಸ್ತೆಗುಂಟ ಹರಿದು ಬಂದು ನಿಲ್ಲುತ್ತಿರುವದರಿಂದ ಯಾವುದೇ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೆ ತುಂಬಿಬಾರದ ಹಾನಿ ಉಂಟಾಗುತ್ತಿದ್ದು, ಸಧ್ಯ ನಿರ್ಮಿಸುತ್ತಿರುವ ರಸ್ತೆಯ ಬದಿ ನೀರು ಹರಿದು ಹೋಗಲು ಯಾವುದೇ ಚರಂಡಿ ನಿರ್ಮಿಸುವ ವ್ಯವಸ್ಥೆ ಕೂಡ ಮಾಡಿಲ್ಲ. ಈ ಸಮಸ್ಯೆ ಬಗ್ಗೆ ಹಿಂದೆ ಹಲವಾರು ಬಾರಿ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಹಿಂದೆ ತಕರಾರು ನೀಡಿದ ಕಾರಣ ಕಾಮಗಾರಿಯನ್ನ ತಡೆಹಿಡಿಯಲಾಗಿತ್ತು. ಸಧ್ಯ ಅದೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಈಗಾಗಲೇ ನ್ಯಾಯ ಕೋರಿ ನಾವು…

Read More

ವಿಜಯಪುರದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳ ಸಭೆಯಲ್ಲಿ ಸಚಿವ ಎಂ.ಬಿ. ಪಾಟೀಲ ಭವಿಷ್ಯ ವಿಜಯಪುರ: ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯ ಮತ್ತು ದೇಶದೆಲ್ಲೆಡೆ ಭರ್ಜರಿ ಯಶಸ್ಸು ಕಾಣಲಿದೆ ಎಂದು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಿಶ್ವಾಸದಿಂದ ಹೇಳಿದರು.ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಪರ ಗುರುವಾರ ನಗರದ ಕಿತ್ತೂರು ಚೆನ್ನಮ್ಮ ಭವನದಲ್ಲಿ ನಡೆದ ಜಿಲ್ಲೆಯ ಪಕ್ಷದ ಮುಖಂಡರು, ಪದಾಧಿಕಾರಿಗಳ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಬಹುತೇಕ ಭರವಸೆಯನ್ನು ಈಡೇರಿಸಿದ್ದಾರೆ. ಕಳೆದ ಬಿಜೆಪಿಯ ಯಡಿಯೂರಪ್ಪರ ಸರಕಾರ ನೀಡಿದ್ದ ಆರು ನೂರು ಭರವಸೆಯಲ್ಲಿ ಐದು ನೂರಕ್ಕೂ ಹೆಚ್ಚು ಭರವಸೆಗಳು ಹಾಗೇ ಉಳಿದಿವೆ. ಇದಲ್ಲದೇ ದೇಶದಲ್ಲಿ ಸಾಮಾನ್ಯರ ಜೀವನ ಸ್ಥಿತಿ ಚಿಂತಾಜನಕವಾಗಿದ್ದು, ಇದೆಲ್ಲ ಮರೆಮಾಚಲು ಬರೀ ಭಾವನಾತ್ಮಕ ವಿಚಾರಗಳನ್ನು ಅವರು ಎತ್ತುತ್ತಿದ್ದಾರೆ. ಜನರಿಗೆ ಇವರ ಆಟ ಆರ್ಥವಾಗಿದೆ ಎಂದು ಟೀಕಿಸಿದರು.ರಾಜು ಆಲಗೂರ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಇದರಲ್ಲಿ ಯಾವ ಸಂಶಯವೂ…

Read More

ಆಲಮಟ್ಟಿ: ಅನುದಾನದ ಕೊರತೆಯ ಹಿನ್ನಲೆಯಲ್ಲಿ ಕೆಬಿಜೆಎನ್ ಎಲ್ ಅರಣ್ಯ ಇಲಾಖೆ ಪ್ರತಿ ವರ್ಷ ರೈತರಿಗೆ ಕಡಿಮೆ ದರದಲ್ಲಿ ವಿತರಿಸುತ್ತಿದ್ದ ಸಸಿ ಈ ವರ್ಷ ವಿತರಿಸುತ್ತಿಲ್ಲ.ಪ್ರತಿ ವರ್ಷ ಉತ್ಕೃಷ್ಟ ಗುಣಮಟ್ಟದ 176 ಕ್ಕೂ ವಿವಿಧ ಜಾತಿಯ 10 ಲಕ್ಷ ಸಸಿಗಳನ್ನು ಬೆಳೆಸಿ ಅವುಗಳನ್ನು ಅತ್ಯಂತ ಕಡಿಮೆ ಬೆಲೆ ರೈತರಿಗೆ ಮಾರುತ್ತಿದ್ದ ಆಲಮಟ್ಟಿಯ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಸಸಿಗಳನ್ನು ಮಾರುತ್ತಿತ್ತು.ಪ್ರತಿ ವರ್ಷ ಜೂನ್ ನಲ್ಲಿ ಸಸಿಗಳ ವಿತರಣೆ ನಡೆಯುತ್ತಿತ್ತು. ರಾತ್ರಿಯಿಡಿ ಸರದಿಯಲ್ಲಿ ಕಾಯ್ದು ಇಲ್ಲಿಯ ಸಸಿಗಳನ್ನು ರೈತರು ಒಯ್ಯುತ್ತಿದ್ದರು. ಇಲ್ಲಿಯ ಸಸಿಗಳಿಗೆ ಬೇಡಿಕೆಯೂ ಹೆಚ್ಚಿತ್ತು. ಅರಣ್ಯ ಇಲಾಖೆಯ ಸಸಿಗಳಿಗಷ್ಟೇ ಸೀಮಿತಗೊಳ್ಳದೇ, ಅರಣ್ಯ ಸಸಿಗಳ ಜತೆ ಹಣ್ಣು, ತೋಟಗಾರಿಕೆ, ಅಲಂಕಾರಿಕ, ಔಷಧೀಯ , ಕೃಷಿ, ಧಾರ್ಮಿಕ ಮಹತ್ವದ ಸಸಿಗಳು ಸೇರಿ ನಾನಾ 150 ಕ್ಕೂ ಅಧಿಕ ಜಾತಿಯ ಗುಣಮಟ್ಟದ, ರೋಗಾಣುರಹಿತ ಸಸಿಗಳು ಕಡಿಮೆ ಬೆಲೆಗೆ ದೊರೆಯುವುದರಿಂದ ಬೇಡಿಕೆ ಹೆಚ್ಚಿತ್ತು.ಸಸಿಗಳನ್ನು ದೇಶದ ನಾನಾ ನರ್ಸರಿಗಳಿಂದ ತರಿಸಿ ಇಲ್ಲಿ ಮಣ್ಣು, ಗೊಬ್ಬರ, ಗೋಮೂತ್ರ ಸೇರಿ ವಿಶೇಷ ಆರೈಕೆಯೊಂದಿಗೆ…

Read More

ಮುದ್ದೇಬಿಹಾಳ: ಗುಜರಿ ವ್ಯಾಪಾರಿಯೋರ್ವನಿಗೆ ಸಂಬಂಧಿಸಿದ ಗುಜರಿ ಸರಕಿಗೆ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿಯ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಪಟ್ಟಣದ ಲಕ್ಷ್ಮೀ ಚಿತ್ರಮಂದಿರ ಬಳಿ ನಡೆದಿದೆ.ಬಯಲು ಜಾಗೆಯಲ್ಲಿ ಶೇಖರಿಸಿಟ್ಟ ಸರಕಿಗೆ ಇದ್ದಕ್ಕಿಂತೆ ಬೆಂಕಿ ತಗುಲಿ ಸುತ್ತಲೆಲ್ಲ ವ್ಯಾಪಿಸತೊಡಗಿದ್ದು, ಸ್ಥಳೀಯ ಅಗ್ನಿಶಾಮಕದಳವರಿಗೆ ಕರೆ ಮಾಡಲಾಗಿ ಮತ್ತೊಂದು ಕಾರ್ಯಾಚರಣೆಯಲ್ಲಿ ತೊಡಗಿದ್ದು ತಾಳಿಕೋಟೆಯ ವಾಹನ ಹಾಜರಾಗಿ ಬೆಂಕಿಯನ್ನು ನಂದಿಸುವಲ್ಲಿ ಸಫಲವಾಗಿದೆ.ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ

Read More

ಸಿಂದಗಿ: ತಾಲೂಕಿನಲ್ಲಿ ಮನಗೂಳಿ ಮನೆತನ ಯಾವಾಗಲೂ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಳ್ಳುತ್ತಾ ಸಮಾಜ ಸೇವೆಯಲ್ಲಿ ನಿರತವಾಗಿದ್ದು ಶ್ಲಾಘನೀಯ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಕ್ಕರೆ, ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಬುದವಾರ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ಅನ್ನಪೂರ್ಣಾ ಪ್ಲಾಜಾದಲ್ಲಿ ಡಾ.ಶಾಂತವೀರ ಮನಗೂಳಿ ಮತ್ತು ಡಾ. ಸಂಧ್ಯಾ ಮನಗೂಳಿ ಅವರ ನೇತೃತ್ವದ ಮನಗೂಳಿ ಆಸ್ಪತ್ರೆಯ ಸಹಯೋಗದಲ್ಲಿ ನೂತನವಾಗಿ ಪ್ರಾರಂಭಗೊಂಡ ಎಮ್‌ಆರ್‌ಆಯ್ ಸ್ಕ್ಯಾನಿಂಗ್ ಸೆಂಟರ್ ಕೇಂದ್ರವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಸಾರ್ವಜನಿಕರು ನೂತನವಾಗಿ ಪ್ರಾರಂಭಗೊಂಡ ಎಮ್‌ಆರ್‌ಆಯ್ ಸ್ಕ್ಯಾನಿಂಗ್ ಸದುಪಯೋಗ ಪಡೆದುಕೊಳ್ಳಿ ಎಂದರು.ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ನಮ್ಮ ತಂದೆಯವರಾದ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ನಾವೆಲ್ಲ ಸಹೋದರರು ನಡೆಯುತ್ತಿದ್ದು, ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವುದೇ ನಮ್ಮ ಧ್ಯೇಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಾರಂಗಮಠದ ಪೂಜ್ಯಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಮತ್ತು ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರರು ಸಾನಿಧ್ಯ ವಹಿಸಿದ್ದರು.ಬೀದರ ನಗರಾಭಿವೃದ್ದಿ ಪ್ರಾಧೀಕಾರದ…

Read More

ರಾಜ್ಯದಲ್ಲಿ ಕುಡಿವ ನೀರಿಗೆ ಹಾಹಾಕಾರ | ಖಾಲಿ ಕೊಡ ಹಿಡಿದು ಪ್ರತಿಭಟನೆ | ಚುನಾವಣೆ ಮುಂದೂಡಲು ಆಗ್ರಹ ಬೆಂಗಳೂರು: ಕುಡಿಯಲು ನೀರಿಲ್ಲ. ಜನ ನೀರಿಗಾಗಿ ಪರದಾಡುವಂತಾಗಿದೆ. ರಾಜ್ಯದಲ್ಲಿ ಕುಡಿಯೋ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಿರುವಾಗ ಚುನಾವಣೆ ಮಾಡೋದು ಎಷ್ಟು ಸರಿ. ಚುನಾವಣೆ ಮುಂದೂಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇಂಥಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಬೇಡ. ಅದನ್ನು ಮುಂದೂಡಿ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಾನು ಆಗ್ರಹಿಸುತ್ತೇನೆ’ ಎಂದರು.ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಮೂರು ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಆದರೆ ಯಾವೊಂದು ಪಕ್ಷದ ನಾಯಕರೂ ಕಾವೇರಿ ನೀರಿನ ಬಗ್ಗೆ ಆಗಲಿ, ರಾಜ್ಯದಲ್ಲಿ ಉಂಟಾಗಿರುವ ಜಲಕ್ಷಾಮದ ಬಗ್ಗೆ ಆಗಲಿ ಮಾತನಾಡುತ್ತಿಲ್ಲ. ಹೀಗಾಗಿ ಚುನಾವಣೆ ಮುಂದೂಡುವಂತೆ ನಾನು ಮನವಿ ಮಾಡುತ್ತೇನೆ ಎಂದರು. ಹೀಗೇ…

Read More

ವಿಜಯಪುರ: ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಅವರು ನಿರ್ಮಿಸುತ್ತಿರುವ, ಅಮೋಲ್ ಪಾಟೀಲ್ ನಿರ್ದೇಶನದಲ್ಲಿ ಪೃಥ್ವಿ ಶಾಮನೂರು ನಾಯಕನಾಗಿ ನಟಿಸುತ್ತಿರುವ “ಉಡಾಳ” ಚಿತ್ರಕ್ಕೆ ಬಿಜಾಪುರದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ.ಚಿತ್ರದ ನಾಯಕ ಪೃಥ್ವಿ ಈ ಚಿತ್ರದಲ್ಲಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ೨೫ ದಿನಗಳ ಮೊದಲ ಹಂತದ ಚಿತ್ರೀಕರಣದಲ್ಲಿ ಹಾಡು, ನೃತ್ಯ ಹಾಗೂ ಮಾತಿನ ಭಾಗದ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗಿದೆ. ಈ ಭಾಗದ ಚಿತ್ರೀಕರಣ ಸಂಪೂರ್ಣ ಬಿಜಾಪುರದಲ್ಲೇ ನಡೆದಿದೆ. ಈಗಾಗಲೇ ಚಿತ್ರದ ಮುಕ್ಕಾಲು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಅಮೋಲ್ ಪಾಟೀಲ್ ತಿಳಿಸಿದ್ದಾರೆ.”ಉಡಾಳ” ಪಕ್ಕಾ ಕಮರ್ಷಿಯಲ್ ಜಾನರ್ ಚಿತ್ರವಾಗಿದೆ. ಲವ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಬಿಜಾಪುರ ಹಾಗು ಉತ್ತರ ಕರ್ನಾಟಕದಲ್ಲಿ ನಡೆಯುವಂತಹ ಅಪ್ಪಟ ಜವಾರಿ ಕಥೆಯಾಗಿದೆ.ಯೋಗರಾಜ್ ಭಟ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೋಲ್ ಪಾಟೀಲ್ ಈ…

Read More

ಮುದ್ದೇಬಿಹಾಳ: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಆರೋಗ್ಯದಲ್ಲಿ ಏರು ಪೇರಾಗಿ ಅಸ್ಪತ್ರೆಗೆ ದಾಖಲಿಸಿದ ಘಟನೆ ಇಲ್ಲಿನ ಚಿನ್ಮಯ ಜೆಸಿ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆದಿದೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಪೈಕಿ ಬುಧವಾರ ಎರಡನೇ ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಗೆ ಎದೆ ನೋವು ಕಾಣಿಸಿಕೊಂಡಿದ್ದು ಕೊಠಡಿಯ ಮೇಲ್ವಿಚಾರಕರಿಗೆ ತಿಳಿಸಿದ್ದಾಳೆ. ಪರೀಕ್ಷಾ ಕೇಂದ್ರದಲ್ಲಿದ್ದ ಆರೋಗ್ಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ ೧೦೮ ಅಂಬುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ.ಎರಡನೇ ಪರೀಕ್ಷೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ೧೯ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೬೨೪೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೪೫ ವಿದ್ಯಾರ್ಥಿಗಳು ಗೈರಾಗಿರುವ ಬಗ್ಗೆ ಮತ್ತು ಯಾವುದೇ ಎಂಪಿಸಿ, ಡಿಬಾರ್ ಆಗಿಲ್ಲ, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪರೀಕ್ಷಾ ತಾಲೂಕು ನೂಡಲ್ ಎಚ್.ಎ.ಮೇಟಿ ತಿಳಿಸಿದ್ದಾರೆ.

Read More