ಸಿಂದಗಿ: ತಾಲೂಕಿನಲ್ಲಿ ಮನಗೂಳಿ ಮನೆತನ ಯಾವಾಗಲೂ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಳ್ಳುತ್ತಾ ಸಮಾಜ ಸೇವೆಯಲ್ಲಿ ನಿರತವಾಗಿದ್ದು ಶ್ಲಾಘನೀಯ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಕ್ಕರೆ, ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬುದವಾರ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ಅನ್ನಪೂರ್ಣಾ ಪ್ಲಾಜಾದಲ್ಲಿ ಡಾ.ಶಾಂತವೀರ ಮನಗೂಳಿ ಮತ್ತು ಡಾ. ಸಂಧ್ಯಾ ಮನಗೂಳಿ ಅವರ ನೇತೃತ್ವದ ಮನಗೂಳಿ ಆಸ್ಪತ್ರೆಯ ಸಹಯೋಗದಲ್ಲಿ ನೂತನವಾಗಿ ಪ್ರಾರಂಭಗೊಂಡ ಎಮ್‌ಆರ್‌ಆಯ್ ಸ್ಕ್ಯಾನಿಂಗ್ ಸೆಂಟರ್ ಕೇಂದ್ರವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಸಾರ್ವಜನಿಕರು ನೂತನವಾಗಿ ಪ್ರಾರಂಭಗೊಂಡ ಎಮ್‌ಆರ್‌ಆಯ್ ಸ್ಕ್ಯಾನಿಂಗ್ ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ನಮ್ಮ ತಂದೆಯವರಾದ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ನಾವೆಲ್ಲ ಸಹೋದರರು ನಡೆಯುತ್ತಿದ್ದು, ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವುದೇ ನಮ್ಮ ಧ್ಯೇಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾರಂಗಮಠದ ಪೂಜ್ಯಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಮತ್ತು ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರರು ಸಾನಿಧ್ಯ ವಹಿಸಿದ್ದರು.
ಬೀದರ ನಗರಾಭಿವೃದ್ದಿ ಪ್ರಾಧೀಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ದಿ.ಎಮ್.ಸಿ.ಮನಗೂಳಿ ಅವರ ಧರ್ಮಪತ್ನಿ ಸಿದ್ದಮಗೌಡತಿ, ಶಾಂತವೀರ ಬಿರಾದಾರ, ಡಾ.ಚನ್ನವೀರ ಮನಗೂಳಿ, ಡಾ.ಅರವಿಂದ ಮನಗೂಳಿ, ನಾಗರತ್ನ ಮನಗೂಳಿ, ಡಾ.ಸಂಧ್ಯಾ ಮನಗೂಳಿ, ಡಾ.ಶಾಂತವೀರ ಮನಗೂಳಿ, ಅಶೋಕ ತೆಲ್ಲೂರ, ಸುನಂದಾ ಯಂಪುರೆ ಸೇರಿದಂತೆ ತಾಲೂಕಿನ ಜನತೆ ಹಾಗೂ ಮನಗೂಳಿ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

