Author: editor.udayarashmi@gmail.com

ವಿಜಯಪುರ: ಬಂಜಾರ ಸಮಾಜದ ಬಗ್ಗೆ ನನಗೆ ಮೊದಲಿನಿಂದಲೂ ಗೌರವ ಇದೆ. ಬಂಜಾರ ಸಮಾಜದವರು ಯಾರು? ಅವರ ವೋಟ್ ನನಗೆ ಬೇಡ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಕೆಲವರು ದುರುದ್ದೇಶದಿಂದ ತಪ್ಪು ಸಂದೇಶವನ್ನು ಬಿತ್ತುತ್ತಿದ್ದಾರೆ’ ಎಂದು ಸಂಸದ ರಮೇಶ ಜಿಗಜಿಣಗಿ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿದ್ದಾರೆ.‘ಬಂಜಾರ ಸಮಾಜದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿ ಅನಗತ್ಯ ಆರೋಪ ಮಾಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುವಾಗ ನಾನು ಬಂಜಾರ ಸಮಾಜಕ್ಕೆ ಅವಮಾನ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ನಮ್ಮ ಜಿಲ್ಲೆಯವರಲ್ಲ ನೆರೆಯ ಬಾಗಲಕೋಟೆ ಜಿಲ್ಲೆಯಿಂದ ಕರೆತಂದಿದ್ದರು. ಅಭ್ಯರ್ಥಿ ಬದಲಿಸಿ ಎಂದು ಈಗ ಹೇಳುವ ಬದಲು ಪಕ್ಷಕ್ಕಾಗಿ ಶ್ರಮಿಸಿದರೆ ಭವಿಷ್ಯದಲ್ಲಿ ಅವರಿಗೆ ಅವಕಾಶಗಳು ಲಭಿಸುತ್ತವೆ ಎಂದು ಹೇಳಿಕೆ ನೀಡಿದ್ದೇನೆ’ ಎಂದು ತಿಳಿಸಿದರು.‘ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ ಯಾವುದೇ ಸಮಾಜದವರಿಗೂ ಅನ್ಯಾಯ ಮಾಡಿಲ್ಲ, ಅವಮಾನ ಮಾಡಿಲ್ಲ ಎಲ್ಲ ಸಮಾಜದವರನ್ನು ಹೆಗಲ ಮೇಲೆ ಹೊತ್ತುಕೊಂಡು…

Read More

ವಿಜಯಪುರ: ನಗರದ ಪ್ರಗತಿ ಸಾಹಿತ್ಯ ವೇದಿಕೆಯ ವತಿಯಿಂದ ನಿಡಗುಂದಿ ಪಟ್ಟಣದ ಬಸವರಾಜ ಹಾವೇರಿಯವರಿಗೆ ಅವರ ಸ್ವಗೃಹದಲ್ಲಿ ಸನ್ಮಾನ ಮಾಡಲಾಯಿತು.ಆರೋಗ್ಯ ಇಲಾಖೆಯ ನೌಕರರಾದ ಬಸವರಾಜರವರು ಕನ್ನಡ ಡಿ.ಟಿ.ಪಿ.ಬಲ್ಲವರಾಗಿದ್ದು, ಹಲವಾರು ಕವಿಗಳ ಕವನಸಂಕಲನದ ಹಸ್ತಪ್ರತಿಗಳನ್ನು ಕವಿಗಳಿಂದ ಯಾವುದೆ ರೀತಿಯ ಹಣ ಪಡೆಯದೆ ಉಚಿತವಾಗಿ ಡಿ.ಟಿ.ಪಿ.ಕೆಲಸ ಮಾಡುತ್ತಿರುವ ಇವರ ನಿಸ್ವಾರ್ಥಕಾರ್ಯ ಮತ್ತು ಕನ್ನಡಸೇವೆಯನ್ನು ಕಂಡು ಈ ಸನ್ಮಾನ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಪ್ರಕಾಶ ಜಹಾಗೀರದಾರ ಹೇಳಿದರು.ಈ ಕಾರ್ಯಕ್ರಮದಲ್ಲಿ ರಾಚಪ್ಪ ಹಾವೇರಿ, ಶ್ರೀಮತಿ ನೀಲಮ್ಮ, ಗಿರೀಶ್ ಹೂಗಾರ, ರಾಜು ಪಟ್ಟಣಶೆಟ್ಟಿ, ಉಮೇಶ್ ಮತ್ತು ಅಶೋಕರವರು ಭಾಗವಹಿಸಿ ಬಸವರಾಜರವರ ಕನ್ನಡ ಸೇವೆಯ ಬಗ್ಗೆ ಮಾತನಾಡಿದರು.

Read More

ವಿಜಯಪುರ: ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿದ ರಾಜಾಜಿನಗರದ ಮಹಾದೇವ ದಿಂಡವಾರ ಅವರ ಮನೆಗೆ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿ, ವೈಯಕ್ತಿಕವಾಗಿ ರೂ.50 ಸಾವಿರ ಸಹಾಯಧನ ನೀಡಿದರು.ಮಾ.19 ರಂದು ನಡೆದ ದುರ್ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದು, ಮೂರು ಜನರು ಗಾಯಗೊಂಡಿದ್ದರು. ಈ ಹಿನ್ನೆಲೆ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸಹಾಯಧನ ನೀಡಿದರು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಂಕರ ಹೂಗಾರ ಮತ್ತಿತರರು ಇದ್ದರು.

Read More

ರಾಜೇಂದ್ರಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ವಿಜಯಪುರ: ಪುಸ್ತಕಗಳ ಓದು ಮನುಷ್ಯನೊಳಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ ಎಂದು ಸಮಾಜ ಸೇವಕಿ ಉಮಾ ಪಾಟೀಲ ಹೇಳಿದರು.ನಗರದ ಸಾಯಿ ರೆಸಿಡೆನ್ಸಿ ಬಡಾವಣೆಯ ಮನು ಪತ್ತಾರ ಕಲಕೇರಿ ಅವರ ಮನೆಯಲ್ಲಿ ಆಯೋಜಿಸಿದ ಓದುಗರ ಚಾವಡಿಯ ರಾಜೇಂದ್ರಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವಸರದ ಈ ದಿನಮಾನಗಳಲ್ಲಿ ಓದುವ ಪ್ರಕ್ರಿಯೆ ನಿಧಾನವೆಂದು ಭಾವಿಸಬಾರದು ನಿಧಾನವಾದ ಓದು ಬದುಕನ್ನು ಸುಭದ್ರವಾಗಿ ಕಟ್ಟಿಕೊಡುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಓದುಗರ ಚಾವಡಿಯ ಮನೆ ಮನೆಯ ಈ ಪುಸ್ತಕ ಪರಿಚಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.ಇಂಡಿ ತಾಲ್ಲೂಕಿನ ಹಿರೆಮಸಳಿ ಗ್ರಾಮದ ಯುವ ಕಥೆಗಾರ ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನವನ್ನು ನಾಗಠಾಣ ಪಬ್ಲಿಕ್ ಶಾಲೆಯ ಶಿಕ್ಷಕ ಶಿವಶರಣಪ್ಪ ಶಿರೂರು ಪರಿಚಯಿಸಿ, ಆಧುನಿಕತೆಯ ಮೋಹದ ಸೆಳೆತಕ್ಕೆ ಸಿಕ್ಕು…

Read More

ಬೆಳಗಾವಿ: ಮಂಡ್ಯದಿಂದ ಕುಮಾರಸ್ವಾಮಿಗೆ ಟಿಕೆಟ್‌ ಸಿಕ್ಕ ಹಿನ್ನೆಲೆ ಸಹಜವಾಗಿ ಸಂಸದೆ ಸುಮಲತಾಗೆ ಬೇಸರ ಆಗಿರುತ್ತೆ, ಆದರೆ, ಸುಮಲತಾ ಅವರು ಸಮಾಧಾನದಿಂದ ಇದ್ದರೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆಯನ್ನು ಹೈಕಮಾಂಡ್‌ ಕೊಟ್ಟಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲಿಸುವ ಸಂಬಂಧ ಸಭೆ ಮಾಡಿದ್ದೇವೆ. ಎಲ್ಲರೂ ಸೇರಿ ಶೆಟ್ಟರ್ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ರಾಜ್ಯದ 28ಕ್ಷೇತ್ರಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೆಲ್ಲುತ್ತದೆ. ಎಲ್ಲಿಯೂ ಅಸಮಾಧಾನ ಆತಂಕ ಏನೂ ಇಲ್ಲ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಪ್ರಚಾರಕ್ಕಾಗಿ ಎಲ್ಲಾ ಸ್ಥಳಗಳಿಗೆ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.ಜಗದೀಶ್ ಶೆಟ್ಟರ್ ಅವರು ತುಂಬಾ ಒಳ್ಳೆಯ ನಾಯಕರಾಗಿದ್ದರಿಂದ ಅವರನ್ನು ನಾವು ಒತ್ತಾಯಿಸಿ ವಾಪಸ್ ಬಿಜೆಪಿಗೆ ಕರೆಸಿಕೊಂಡಿದ್ದೇವೆ. ಇದೀಗ ಅವರು ತುಂಬಾ ಉತ್ಸಕತೆಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ…

Read More

ಕೋರ್ಟ್‌ ಮುಂದೆ 10 ಅಂಶಗಳ ವಾದ ಮಂಡಿಸಿದ ದೆಹಲಿ ಸಿಎಂ ಕೇಜ್ರಿವಾಲ್! ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ದೆಹಲಿಯ ಅಬಕಾರಿ ನೀತಿ ಪ್ರಕರಣದ ವಿಚಾರಣೆ ನಡೆಸಿದ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ವೈಯಕ್ತಿಕವಾಗಿ ತಮ್ಮ ವಾದವನ್ನು ಮಂಡಿಸಿದರು. ಈ ಪ್ರಕರಣದಲ್ಲಿ ಅವರು ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸುವರೆಂದು ನಿರೀಕ್ಷಿಸಲಾಗಿತ್ತು. ಬುಧವಾರ ಸಂಜೆ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಗುರುವಾರ ನ್ಯಾಯಾಲಯದಲ್ಲಿ ಅಬಕಾರಿ ನೀತಿ ಹಗರಣದ ಬಗ್ಗೆ ಕೇಜ್ರಿವಾಲ್ “ದೊಡ್ಡ ಬಹಿರಂಗ” ಮಾಡುವುದಾಗಿ ಹೇಳಿದ್ದರು.ನ್ಯಾಯಾಲಯದ ಮುಂದೆ ಕೇಜ್ರಿವಾಲ್ ಮಂಡಿಸಿದ 10 ಅಂಶಗಳು ಇಲ್ಲಿವೆ:ದೇಶದ ಮುಂದೆ ಎಎಪಿ ಭ್ರಷ್ಟ ಎಂಬ ಅಪಪ್ರಚಾರವನ್ನು ಸೃಷ್ಟಿಸಲಾಗಿದೆ ಎಂದು ವಿಚಾರಣೆ ಸಂದರ್ಭದಲ್ಲಿ ಕೇಜ್ರಿವಾಲ್ ಆರೋಪಿಸಿದರು.” ಅಬಕಾರಿ ನೀತಿ ಪ್ರಕರಣದಲ್ಲಿ ನಾಲ್ವರು ಸಾಕ್ಷಿಗಳಿಂದ ನನ್ನ ಹೆಸರಿದೆ. ಹಾಲಿ ಸಿಎಂ ಒಬ್ಬರನ್ನು ಬಂಧಿಸಲು ನಾಲ್ಕು ಹೇಳಿಕೆಗಳು ಸಾಕೇ?” ಎಂದು ಎಎಪಿ ನಾಯಕ ನ್ಯಾಯಾಲಯದ ಮುಂದೆ ಪ್ರಶ್ನಿಸಿದರು.”ಇದು ₹ 100 ಕೋಟಿ ಹಗರಣವಾಗಿದೆ ಎಂದು ಆರೋಪಿಸಲಾಗುತ್ತಿದೆ. ಹಣದ ಜಾಡು ಇನ್ನೂ…

Read More

ಕೋಲಾರ ಟಿಕೆಟ್ ವಿಚಾರದಲ್ಲಿ ಬಂಡಾಯ | ಬಣ ಬಡಿದಾಟ | ರಾಜೀನಾಮೆ ಪ್ರಹಸನ ಬೆಂಗಳೂರು: ಕೋಲಾರ ಲೋಕಸಭೆ ಕ್ಷೇತ್ರದ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ಬಣ ರಾಜಕೀಯದಿಂದಾಗಿ ಬುಧವಾರ ರಾಜೀನಾಮೆ ಪ್ರಹಸನದಂತಹ ಹೈಡ್ರಾಮವೇ ನಡೆದಿತ್ತು. ಆಹಾರ ಸಚಿವ ಮುನಿಯಪ್ಪ ಅವರ ಆಳಿಯ ಚಿಕ್ಕಪೆದ್ದಣ್ಣನಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆಯೇ, ಉನ್ನತ ಶಿಕ್ಷಣ ಸಚಿವ ಡಾ.ಎಂ. ಸಿ. ಸುಧಾಕರ್ ಸೇರಿದಂತೆ ರಮೇಶ್ ಕುಮಾರ್ ಬಣದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಐವರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕೋಲಾರ ನಾಯಕರ ಜೊತೆ ಸಂಧಾನ ಸಭೆ ನಡೆಸಿದ್ದಾರೆ.ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಂಜೆ ನಡೆದ ಸಂಧಾನ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಚಿವ ಡಾ.ಎಂ. ಸಿ. ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಕೊತ್ತನೂರು ಮಂಜುನಾಥ್ ಮತ್ತಿತರ ನಾಯಕರು ಪಾಲ್ಗೊಂಡರು.ಸಭೆ ಬಳಿಕ ಸುದ್ದಿಗಾರರೊಂದಿಗೆ…

Read More

ಬೆಂಗಳೂರು: ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ. ಬುಧವಾರ ರಾಜಧಾನಿ ಬೆಂಗಳೂರಿನಲ್ಲಿ ಕೋಲಾರ ಕಾಂಗ್ರೆಸ್ ನಾಯಕರು ಬಂದು ವಿಧಾನಸೌಧದಲ್ಲಿ ರಾಜಕೀಯ ಹೈಡ್ರಾಮವೇ ನಡೆದಿತ್ತು.ಸಚಿವ ಕೆಹೆಚ್​ ಮುನಿಯಪ್ಪ ಸಂಬಂಧಿಕರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಐವರು ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಗುರುವಾರ ಮಾಧ್ಯಮ ಪ್ರತಿನಿಧಿಗಳ ಮುಂದೆ ಡಿಸಿಎಂ ಡಿ ಕೆ ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದಾರೆ.ಸದಾಶಿವನಗರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿ, ಕೋಲಾರದಲ್ಲಿ ಎಲ್ಲಾ ನಾಯಕರು ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಲಿದ್ದಾರೆ. ಯಾರ ವೈಯಕ್ತಿಕ ಪ್ರತಿಷ್ಠೆಗೂ ಪಕ್ಷದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಯಾರೂ ರಾಜೀನಾಮೆ ನೀಡಲ್ಲ. ಟಿಕೆಟ್ ವಿಚಾರವಾಗಿ ಒತ್ತಡ ಇದೆ. ಪಕ್ಷ ಇದುವರೆಗೂ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಇಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು

Read More

ದೇವರಹಿಪ್ಪರಗಿ: ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್.ಪಿ ಋಷಿಕೇಶ ಸೋನಾವಣೆ ಭೇಟಿ ನೀಡಿ ಸಿದ್ಧತಾಕಾರ್ಯ ಪರಿಶೀಲಿಸಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕೆ ಕಾಲೇಜು ಆವರಣಕ್ಕೆ ಗುರುವಾರ ಭೇಟಿ ನೀಡಿದ ಅಧಿಕಾರಿಗಳು, ಚುನಾವಣಾ ಆಯೋಗದ ಮಾರ್ಗಸೂಚಿ ಅನುಗುಣವಾಗಿ ಇರುವ ಸ್ಟಾçಂಗ್ ರೂಮ್ ವ್ಯವಸ್ಥೆ, ಸೌಲಭ್ಯಗಳು, ಪೂರ್ವತಯಾರಿಗಳ ಕುರಿತು ಪರಿಶೀಲಿಸಿದರು. ನಂತರ ಆಗಬೇಕಾದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.ತಹಶೀಲ್ದಾರ ಪ್ರಕಾಶ ಸಿಂದಗಿ, ಸಹಾಯಕ ಚುನಾವಣಾಧಿಕಾರಿ ಪ್ರವೀಣ ಜೈನ್, ಶಿರಸ್ತೇದಾರ ಸುರೇಶ ಮ್ಯಾಗೇರಿ, ಪಿಎಸೈ, ಬಸವರಾಜ ತಿಪ್ಪಾರೆಡ್ಡಿ ಸರ್ವೆ ತಪಾಸಕ ವಿ.ವೈ.ಹಳ್ಳಿ, ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ, ಅನೀಲಕುಮಾರ ರಾಠೋಡ, ಸಂಗಮೇಶ ಗ್ವಾಳೇದ, ಕುಮಾರ ಅವರಾದಿ, ರವಿ ಮೆಟಗಾರ ಸೇರಿದಂತೆ ತಾಲ್ಲೂಕು ಆಡಳಿತದ ಸಿಬ್ಬಂದಿ ಇದ್ದರು.

Read More

ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಕೇಳುತ್ತಿದ್ದೆ. ಅವರು ಬೆಳಗೆರೆಯಲ್ಲಿ ಬಡವರ ಮಕ್ಕಳಿಗಾಗಿ ಶಾಲೆ ಕಟ್ಟಿಸಿದ್ದಾರೆ. ಮೂಲತಃ ಕೃಷಿಕರು. ವೃತ್ತಿಯಿಂದ ಶಿಕ್ಷಕರಾಗಿ ರಾಜ್ಯ ಪ್ರಶಸ್ತಿಗೆ ಪುರಸ್ಕೃತರಾದವರು. ಜೊತೆಗೆ ಸಾಹಿತಿಗಳು. ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆ ನಾಡಿನ ಅನೇಕ ಹಿರಿಯ ಜನಪ್ರಿಯ ಸಾಹಿತಿಗಳ ಒಡನಾಟದಲ್ಲಿದ್ದಾರೆ. ಇಷ್ಟು ಗೊತ್ತಿತ್ತು. ಒಮ್ಮೆ ಚಳ್ಳಕೆರೆಯಲ್ಲಿ ಅನಿರೀಕ್ಷಿತವಾಗಿ ಅಷ್ಟೇನೂ ಎತ್ತರವಿಲ್ಲದ ಸಾತ್ವಿಕ ಮುಖ ಚಹರೆಯ ಶುಭ್ರ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿ ಕಂಡರು. ನನ್ನ ಗಮನ ಅವರೆಡೆಗೆ ಹರಿಯಲು ಅವರ ತಲೆಗೆ ವಿಶೇಷವಾಗಿ ಕಟ್ಟಿಕೊಂಡಿದ್ದ ಬಿಳಿ ಟವಲು ಕಾರಣವಾಗಿತ್ತು. ಪೋಟೋದಲ್ಲಿ ಕಂಡಿದ್ದ ಸಾಯಿಬಾಬರನ್ನು ನೆನಪಿಸಿತು ಇವರ ಶೈಲಿ. ಪಕ್ಕದಲ್ಲಿದವರು ಅವರೇ ನೋಡಪ ಬೆಳಗೆರೆ ಕೃಷ್ಣಶಾಸ್ತ್ರಿಗಳು ಎಂದರು! ಆಗ ನನಗೆ ನಿಜವಾಗಿಯೂ ಖುಷಿಯಾಯ್ತು. ಇವರ ಬಗ್ಗೆ ಕೇಳ್ತ ಇದ್ದೆ, ಈಗ ನೇರವಾಗಿ ನೋಡ್ತಿರುವೆ ಎನಿಸಿತು. ಆದರೆ ಅವರ ಹತ್ತಿರ ಹೋಗಿ ಮಾತನಾಡಿಸುವಷ್ಟು ಧೈರ್ಯ ನನಗಿರಲಿಲ್ಲ. ಇದಾದ ನಂತರ ಅವರ ‘ಯೇಗ್ದಾಗೆಲ್ಲ ಐತೆ’ ಪುಸ್ತಕ ಓದಿದೆ. ಮುಕುಂದೂರು ಸ್ವಾಮಿಗಳ‌ ಸಾನಿಧ್ಯದಲ್ಲಿ…

Read More