Author: editor.udayarashmi@gmail.com

ತಾಳಿಕೋಟಿ: ಪವಿತ್ರ ರಮಜಾನ್ ಹಬ್ಬದ ನಿಮಿತ್ಯ ಇಲ್ಲಿಯ ನೂತನ ಈದಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಈದ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಈ ಸಮಯದಲ್ಲಿ ಈದ ಪ್ರವಚನ ನೀಡಿದ ಡಾ. ಮಿನಹಾಜುದ್ದೀನ ಖಾಜಿ ಅವರು ರಮಜಾನ್ ತಿಂಗಳಿನಲ್ಲಿ ಮುಸ್ಲಿಂ ಬಾಂಧವರು ಉಪವಾಸ ವೃತಗಳ ಮೂಲಕ ಗಳಿಸಿಕೊಂಡ ಶಾಂತಿ ಮತ್ತು ಸಹನೆ ಗುಣವನ್ನು ಸಮಾಜದಲ್ಲಿ ಹರಡಲು ಪ್ರಯತ್ನಿಸಬೇಕು ಪ್ರವಾದಿ ಮೊಹಮ್ಮದರ ಆದರ್ಶ ಬದುಕು ಅವರಿಗೆ ಮಾದರಿಯಾಗಬೇಕು ಎಂದರು.ಇಂದು ಸಮಾಜದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ ಅಶಾಂತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಇಂಥವರು ಎಲ್ಲ ಸಮಾಜಗಳಲ್ಲೂ ಇದ್ದಾರೆ ಜಗತ್ತಿನ ಯಾವ ಧರ್ಮವು ಹಿಂಸೆಯನ್ನು ಬೋಧಿಸುವುದಿಲ್ಲ. ಶಾಂತಿಯಲ್ಲ ಧರ್ಮಗಳ ಮೂಲ ಮಂತ್ರವಾಗಿದೆ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸಲು ನಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ. ಭಾರತ ಒಂದು ವೈವಿಧ್ಯಮಯವಾದ ಬಹುಸಂಸ್ಕೃತಿಯ ದೇಶವಾಗಿದೆ. ಶತ ಶತ ಮಾನಗಳಿಂದ ಇಲ್ಲಿ ನಾವೆಲ್ಲರೂ ಕೂಡಿಕೊಂಡು ಬದಕುತ್ತಿದ್ದೇವೆ ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. ಪ್ರವಾದಿ…

Read More

ಬಸವನಬಾಗೇವಾಡಿ: ಪಟ್ಟಣದ ನಾಗೂರ ರಸ್ತೆಯಲ್ಲಿರುವ ಬಸವನಕಟ್ಟೆ ಸಮೀಪ ಮಾಳಿ ಸಮಾಜ ಬಾಂಧವರು ಗುರುವಾರ ಮಹಾತ್ಮ ಜ್ಯೋತಿಬಾ ಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾತ್ಮ ಜ್ಯೋತಿಬಾ ಪುಲೆ ಅವರ ೧೯೭ ನೇ ಜಯಂತಿಯನ್ನು ಆಚರಿಸಿದರು.ಈ ಸಂದರ್ಭದಲ್ಲಿ ಮಾಳಿ ಸಮಾಜ ಯುವ ಮುಖಂಡ ಜಟ್ಟಿಂಗರಾಯ ಮಾಲಗಾರ ಮಾತನಾಡಿ, ದೇಶದಲ್ಲಿ ಶಿಕ್ಷಣದ ಮಹತ್ವ ಗುರುತಿಸುವಲ್ಲಿ ಜ್ಯೋತಿಬಾ ಪುಲೆ ಅವರು ನೀಡಿದ ಕೊಡುಗೆ ಅನನ್ಯ ಮತ್ತು ಶ್ರೇಷ್ಠವಾಗಿದೆ. ಧರ್ಮ, ಪಂಥ, ಸಂಪ್ರದಾಯ ಮೊದಲಾದ ಸಂಕುಚಿತ ಭಾವನೆಗಳಿಗೆ ಮರುಳಾಗದೇ ಮಾನವ ಧರ್ಮವನ್ನು ಅಂಗೀಕರಿಸಬೇಕು ಎಂದು ಹೇಳಿದ್ದರು. ಇಂತಹ ಮಹನೀಯರ ಜೀವನವನ್ನು ಯುವಜನಾಂಗ ಅರಿತುಕೊಳ್ಳಬೇಕೆಂದರು.ಸಾಮಾಜಿಕ ಕ್ರಾಂತಿಕಾರಿ ಹೋರಾಟಗಾರರಾಗಿ ಜೋತಿಬಾ ಪುಲೆ ಅವರು ಸಮಾಜ ಸುಧಾರಕರಾಗಿ ಸಮಾನತೆಯ ಹರಿಕಾರರಾಗಿ ದೀನದಲಿತ ಹಿಂದುಳಿದ ಸೇರಿದಂತೆ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಧೀಮಂತ ಹೋರಾಟಗಾರರಾಗಿ ಇತಿಹಾಸ ಪುಟದಲ್ಲಿ ದಾಖಲಾಗಿದ್ದಾರೆ. ಇವರು ಸ್ಥಾಪಿಸಿದ ಸತ್ಯ ಶೋಧಕ ಸಮಾಜ ಸಂಘವು ಜಾತಿಗಳ ಮೇಲು-ಕೀಳು ಭಾವನೆ, ಶೂದ್ರ ಭಾವನೆ ಹೋಗಲಾಡಿಸುವ ನಿಟ್ಟಿನಲ್ಲಿ ಸಾಕಷ್ಟು…

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪಮುತ್ಯಾನ ಜಾತ್ರೆಯಂಗವಾಗಿ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಗುರುವಾರ ಜಾತ್ರೆಯಲ್ಲಿ ಕಂಡುಬಂದವು. ಬರಗಾಲದಲ್ಲಿಯೂ ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದು ಕಂಡುಬಂದಿತ್ತು.ಈ ಸಲದ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳು ರೂ.೧.೫೦ ರಿಂದ ೨ ಲಕ್ಷ ಅಧಿಕದವರೆಗೂ ಮಾರಾಟವಾದವು. ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳು ಸಹ ಮಾರಾಟಕ್ಕೆ ಬಂದಿದ್ದವು. ರೈತ ಬಾಂಧವರು ತಮಗೆ ಬೇಕಾದ ಜಾನುವಾರುಗಳನ್ನು ಖರೀದಿ ಮಾಡುವ ಜೊತೆಗೆ ಜಾನುವಾರುಗಳಿಗೆ ಬೇಕಾದ ಹಗ್ಗ, ಗೆಜ್ಜೆ ಸರ, ಹಣೆಕಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.ಬುಧವಾರದಿಂದ ಆರಂಭವಾಗಿರುವ ಜಾನುವಾರುಗಳ ಜಾತ್ರೆಗೆ ಜಿಲ್ಲೆ ಸೇರಿದಂತೆ ಶಹಾಪೂರ, ಯಾದಗಿರಿ, ಬಾಗಲಕೋಟ, ರಾಯಚೂರ ವಿವಿಧ ಜಿಲ್ಲೆಯ ರೈತ ಬಾಂಧವರು ಮಾರಾಟ ಮಾಡುವ ಉದ್ದೇಶದಿಂದ ಅವುಗಳಿಗೆ ಅಗತ್ಯವಿರುವ ಮೇವಿನೊಂದಿಗೆ ಬಂದು ಬಿಡು ಬಿಟ್ಟಿದ್ದಾರೆ. ಬಿರು ಬಿಸಿಲಿನಿಂದಾಗಿ ಬಸವಳಿಯುತ್ತಿರುವ ಎತ್ತುಗಳಿಗೆ ಕೆಲ ರೈತರು ನೆರಳು ಮಾಡಿರುವುದು ಕಂಡುಬಂದಿತ್ತು.ರೂಡಗಿ ರೈತರೊಬ್ಬರು…

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಮುಸ್ಲಿಂ ಬಾಂಧವರು ಈದ್ಉಲ್ ಫಿತ್ರ ಹಬ್ಬವನ್ನು (ರಂಜಾನ್) ಸಡಗರ-ಸಂಭ್ರಮದಿಂದ ಆಚರಿಸಿದರು.ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ತೊಟ್ಟು ಬೆಳಗ್ಗೆ ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಈದ್ಗಾ ಮೈದಾನದಲ್ಲಿ ಜಾಮೀಯಾ ಮಸೀದಿಯ ಹಾಫೀಜ್ ಮಹ್ಮದಅಲಿ ಮಿಲಿ ಅವರು ಸಾಮೂಹಿಕ ಪ್ರಾರ್ಥನೆ ಮಾಡಿಸಿದರು.ಈ ಸಂದರ್ಭದಲ್ಲಿ ಎಂ.ಡಿ.ಬಳಗಾನೂರ ಮಾತನಾಡಿದರು.ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಶಬ್ಬಿರಅಹ್ಮದ ನದಾಫ್, ಕಮಲಸಾಬ ಕೊರಬು,ಅಲ್ತಾಫ್ ಮುದ್ದೇಬಿಹಾಳ, ಎಚ್.ಆರ್.ಬಾಗವಾನ, ಅಬ್ದುಲರಜಾಕ ಬಾಗವಾನ, ಮತಾಬ ಬಮ್ಮನಹಳ್ಳಿ, ಜಾಫರ ಮಕಾನದಾರ, ಚಾಂದಬಾಷಾ ಕೊರಬು, ರಫೀಕ್ ಹೊಕ್ರಾಣಿ, ಅಲ್ಲಾಭಕ್ಷ ಕೊರಬು, ಜಮ್ಮೀಲ್ ಇಬ್ರಾಹಿಂಪೂರ, ಮಹಿಬೂಬ ನಾಯ್ಕೋಡಿ, ಮನ್ನಾನ ಶಾಬಾದಿ, ಎಚ್.ಎಂ.ನದಾಫ,ಬಸೀರ ಮನಗೂಳಿ, ಬಂದೇನವಾಜ ನಂದವಾಡಗಿ, ನಜೀರ ಗಣಿ, ದಸ್ತಗೀರ ವಜ್ಜಲ, ರಮಜಾನ ಹೆಬ್ಬಾಳ, ಸಲೀಂ ಸಯ್ಯದ, ಅಬ್ದುಲರಜಾಕ ಕೊರಬು, ರಫೀಕ ಸಾಠಿ, ಅಬ್ದುಲರಶೀದ ಅವಟಿ, ಮೀರಾಸಾಬ ಕೊರಬು, ನಿಸಾರ…

Read More

ಆಲಮಟ್ಟಿ: ಸ್ಥಳಿಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೊಷಿಯೇಶನ್ ನ ಮಂಜಪ್ಪ ಹರ್ಡೇಕರ ಪಿ.ಯು.ಕಾಲೇಜು ೨೦೨೩-೨೪ ನೇ ಸಾಲಿನ ದ್ವಿತೀಯ ಪಿ.ಯು.ಪರೀಕ್ಷೆಯಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು ೧೩೩ ವಿದ್ಯಾರ್ಥಿಗಳಲ್ಲಿ ೧೩೦ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.೯೮ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಕಲಾ ವಿಭಾಗದಲ್ಲಿ ೮೧ ವಿದ್ಯಾರ್ಥಿಗಳಲ್ಲಿ ೮೦ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಶೇ.೯೮.೭೮% ಪ್ರತಿಶತ ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ೫೧ವಿದ್ಯಾರ್ಥಿಗಳಲ್ಲಿ ೪೯ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಶೇ.೯೬.೦೭% ಫಲಿತಾಂಶ ಬಂದಿದೆ.ಕಲಾ ವಿಭಾಗದಲ್ಲಿ ಯಲ್ಲಮ್ಮ ಗೂಗಿಹಾಳ ೫೭೨(ಶೇ.೯೫.೩೩) ಪ್ರಥಮ ತಸ್ಮಿಯಾ ನಿಂಬಿಹಾಳ ೫೫೮(ಶೇ.೯೩%) ಕಾಲೇಜಿಗೆ ದ್ವಿತೀಯ ಸ್ಥಾನ ಪ್ರೀತಿ ವಡಗೇರಿ.೫೪೬(೯೧%)ತೃತೀಯ ಸ್ಥಾನ ಪಡೆದು ಕೊಂಡಿದ್ದಾಳೆ.ವಾಣಿಜ್ಯ ವಿಭಾಗದಲ್ಲಿ ಅಕ್ಷತಾ ಪಾಟೀಲ.೫೫೫(೯೨.೫%) ಪ್ರಥಮ ಸ್ಥಾನವನ್ನು ವಿಜಯಲಕ್ಷ್ಮಿ ರಾಠೋಡ.೫೫೨ (೯೨%) ದ್ವಿತೀಯ ಸ್ಥಾನ ತೈಸಿನ ಕಡಲಗಿ ೫೧೫(೮೫.೮%) ತೃತೀಯ ಸ್ಥಾನ ಪರೀಕ್ಷೆಯಲ್ಲಿ ಉತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿ ಶಾಲೆಗೆ,ಸಂಸ್ಥೆಗೆ, ಊರಿಗೆ ಕೀರ್ತಿ ತಂದಂಥ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ಗದುಗಿನ ತೋಂಟದ ಡಾ|| ಸಿದ್ದರಾಮ ಮಹಾಸ್ವಾಮಿಗಳವರು ಹಾಗೂ…

Read More

ಚುನಾವಣಾ ಬಾಂಡ್ ಗಳ ವಿವರ ನೀಡಲು SBI ನಕಾರS***ಮಾಹಿತಿ ಹಕ್ಕು ಕಾಯಿದೆ ಅಡಿ ನೀಡಲಾದ ಎರಡು ವಿನಾಯಿತಿ ಷರತ್ತುಗಳನ್ನು ಉಲ್ಲೇಖಿಸಿ ಮಾಹಿತಿ ನಿರಾಕರಿಸಿದ ಬ್ಯಾಂಕ್ ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಆರ್ ಟಿಐ ಅಡಿಯಲ್ಲಿ ಚುನಾವಣಾ ಬಾಂಡ್ ಗಳ ವಿವರಗಳನ್ನು ನೀಡುವುದಕ್ಕೆ ನಿರಾಕರಿಸಿದೆ. ದಾಖಲೆಗಳು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿದ್ದು, ಸಾರ್ವಜನಿಕವಾಗಿ ಲಭ್ಯವಿದ್ದರೂ ವಿಶ್ವಾಸಾರ್ಹ ಆಧಾರದಲ್ಲಿ ವೈಯಕ್ತಿಕ ಮಾಹಿತಿ ಇರುವ ಕಾರಣ ಅದನ್ನು ಆರ್ ಟಿಐ ನಲ್ಲಿ ನೀಡಲಾಗುವುದಿಲ್ಲ ಎಂದು ಹೇಳಿದೆ.ಚುನಾವಣಾ ಬಾಂಡ್‌ಗಳ ಯೋಜನೆ “ಅಸಂವಿಧಾನಿಕ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ” ಎಂಬುದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಏಪ್ರಿಲ್ 12, 2019 ರಿಂದ ಖರೀದಿಸಿದ ಬಾಂಡ್‌ಗಳ ಸಂಪೂರ್ಣ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಫೆಬ್ರವರಿ 15 ರಂದು ಎಸ್‌ಬಿಐಗೆ ನಿರ್ದೇಶನ ನೀಡಿತ್ತು ಅಷ್ಟೇ ಅಲ್ಲದೇ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಾರ್ಚ್ 13 ರಂದು ಪ್ರಕಟಿಸಬೇಕೆಂದು ಹೇಳಿತ್ತು.ಮಾರ್ಚ್ 11 ರಂದು,…

Read More

ಚಡಚಣ: ಪಟ್ಟಣದ ಹೊರವಲಯದಲ್ಲಿರುವ ಸಂಗಪ್ಪ ಪಾವಲೆ ಅವರ ತೋಟದಲ್ಲಿ ಬಿದ್ದ ಸಿಡಿಲಿಗೆ ಎಮ್ಮೆ ಸಾವನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.ಘಟನೆಯಲ್ಲಿ ಯಾವುದೇ ಜನರಿಗೆ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

Read More

ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಚಿವ ಪಾಟೀಲ ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ರಂಜಾನ್ ಅಂಗವಾಗಿ ಇಂದು ಗುರುವಾರ ನಗರದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.ವಿಜಯಪುರ ನಗರದ ದಖನಿ ಶಾಹಿ ಈದ್ಗಾದಲ್ಲಿ ಬೆಳಿಗ್ಗೆ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಚಿವರು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ಶಾಂತಿ, ಸೌಹಾರ್ದತೆಗಾಗಿ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಜನರೊಂದಿಗೆ ಅವರು ಪರಸ್ಪರ ಶುಭಾಷಯ ವಿನಿಮಯ ಮಾಡಿದರು. ಅಲ್ಲದೇ, ಸಹೋದರತೆ, ಸಮಾನತೆ ಹಾಗೂ ಹಾಗೂ ಸರ್ವರ ಹಿತ ಬಯಸುವ ಈ ಹಬ್ಬ ಎಲ್ಲರಿಗೂ ಒಳಿತನ್ನುಂಟು ಮಾಡಲಿ ಎಂದು ಅವರು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನಾನಾ ಮುಖಂಡರು ಉಪಸ್ಥಿತರಿದ್ದರು.

Read More

ಬಿಟ್ಟಿ ಗ್ಯಾರಂಟಿ ಎನ್ನುತ್ತಿದ್ದವರಿಗೆ ವೇದಾಂತ್ ಉತ್ತರ :ಆಲಗೂರ ವಿಜಯಪುರ: ಕಲಾ ಮಾಧ್ಯಮದಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಬಂದಿರುವ ಬಿಎಲ್‌ಡಿಇ ಸಂಸ್ಥೆಯ ಎಸ್.ಎಸ್. ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ಭಾಗ್ಯಗಳ ನೆರವಿನಿಂದ ಬಂದ ಧೀಮಂತ ಹುಡುಗ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದ್ದಾರೆ.ಸಾಧನೆ ಮಾಡಿರುವ ಈ ಹುಡಗನನ್ನು ಸತ್ಕರಿಸಿ, ಆತನ ಭವಿಷ್ಯಕ್ಕೆ ಶುಭ ಹರಸಿ ಮಾತನಾಡಿದ್ದಾರೆ.ಬಡ ಕುಟುಂಬದ ಈ ಪ್ರತಿಭಾವಂತನಿಗೆ ತಂದೆ ತೀರಿದ್ದಾನೆ. ತಾಯಿ ಮತ್ತು ಅಕ್ಕ ಇದ್ದಾರೆ. ಇವರ ಕುಟುಂಬ ನಿರ್ವಹಣೆಗೆ ಬಹಳ ಕಷ್ಟವಿತ್ತು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರ ಸರಕಾರ ನೀಡಿದ ಭಾಗ್ಯ ಲಕ್ಷ್ಮಿ, ಗೃಹ ಲಕ್ಷ್ಮಿ ಯೋಜನೆಗಳೇ ಇವರಿಗೆ ಆಧಾರವಾಗಿದ್ದವು ಎಂದು ಸ್ವತಃ ವೇದಾಂತ್ ಉಪಕಾರ ಸ್ಮರಣೆಯಿಂದ ಹೇಳಿದ್ದಾನೆ. ಇದು ಜನಾನುರಾಗಿ, ಜನಪರ ಸರಕಾರದ ಸಾರ್ಥಕ್ಯವಾಗಿದೆ. ಕಷ್ಟ ಗೊತ್ತಿಲ್ಲದ, ಬಡವರ ಬವಣೆ ಅರಿಯದ ಜನ ಬಿಟ್ಟಿ ಭಾಗ್ಯ, ಪುಕ್ಕಟೆ ಗ್ಯಾರಂಟಿ ಎಂದು ಕುಹಕವಾಡಿದ್ದರು. ಅವರಿಗೆಲ್ಲ ಇಂತಹ ಉದಾಹರಣೆಗಳ ಮೂಲಕ ಉತ್ತರ ಸಿಗುತ್ತಲೇ ಇದೆ ಎಂದು ಆಲಗೂರ ಹೇಳಿದ್ದಾರೆ.ವೇದಾಂತ್‌ನಂತಹ…

Read More

ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ :ಶಾಸಕ ಯತ್ನಾಳ ವಿಜಯಪುರ: ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಾದ ಬದಲಾವಣೆ, ಸಾಧನೆ, ಆರ್ಥಿಕ ಸುಧಾರಣೆ, ಜಾಗತಿಕ ಮನ್ನಣೆ, ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದು ಇಂದು ಮತ್ತೊಮ್ಮೆ ದೇಶಕ್ಕೆ‌ ಮೋದಿ ಆಡಳಿತ ಬರಬೇಕೆಂಬುದು ಇಡಿ ದೇಶದ ಕೂಗಾಗಿದೆ. ವಿಶ್ವಮೆಚ್ಚಿದ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಪಾಲಿಕೆಯ ಐದು ವಾರ್ಡ್ ಗಳ ವ್ಯಾಪ್ತಿಯ ಪಂಡಿತ ದೀನ್ ದಯಾಳ ಉಪಾಧ್ಯಾಯ ಮಹಾಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾಂಗ್ರೆಸ್ಸಿಗರಿಗೆ ಮೋದಿ‌ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ಸಿಗುತ್ತಿಲ್ಲ. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಭ್ರಷ್ಟಾಚಾರ ರಹಿತ‌ ಆಡಳಿತ, ಅಭಿವೃದ್ಧಿ ಪರ್ವ ಕಾಂಗ್ರೆಸ್ಸಿಗರ ಬಾಯಿ ಕಟ್ಟಿ ಹಾಕಿದೆ. ದೇಶದಲ್ಲಿ ಮೊದಲು‌…

Read More