Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೆಂಭಾವಿ: ಪಟ್ಟಣದ ಹಳೆ ಬಸ್ ಸ್ಟ್ಯಾಂಡ್ ಹತ್ತಿರ ಜ.೨೬ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನೂತನ ಪುತ್ಥಳಿ ಅನಾವರಣ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಬಂತೆ ದಮ್ಮಾನಂದ ಮಾಹಾತೇರ ಬೀದರ ಇವರು ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ದನಗೌಡ ಪೋಲೀಸ್ ಪಾಟೀಲ್ ಉದ್ಘಾಟಿಸಿ, ಮಾತನಾಡಿ, ಎಲ್ಲಾ ಶೋಷಿತ ವರ್ಗದವರಿಗೆ ನ್ಯಾಯತವಾದ ಹಕ್ಕುಗಳನ್ನು ಕೊಡಿಸುವುದರಲ್ಲಿ ಅಂಬೇಡ್ಕರ್ ಅವರೇ ಮುಂಚೂಣಿ ನಾಯಕರು. ಅವರು ಸಂವಿಧಾನ ರಚನೆಗೆ ಎರಡು ವರ್ಷ 11 ತಿಂಗಳನ್ನು 18 ದಿವಸ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟವರು. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ವಾಮನರಾವ ದೇಶಪಾಂಡೆ. ಅಶೋಕ್ ಸೊನ್ನದ. ಶಿವನಗೌಡ ಮಾಲಿ ಪಾಟೀಲ್. ಸುಧಾಕರ್ ಡಿಗ್ಗಾವಿ. ಕೃಷ್ಣಯ್ಯ ಗುತ್ತೇದಾರ್. ರೈಮನ್ ಪಟೇಲ್ ಯಲ್ಗೋಡ. ಲಕ್ಷ್ಮೀಬಾಯಿ ಕಂಬಾರ. ಮಲ್ಲಿಕಾರ್ಜುನ್ ಪಾಟೀಲ್, ಉಪ ತಹಶೀಲ್ದಾರ್ ಲಾಲಪ್ಪ ಹೊಸ್ಮನಿ. ಬಸವರಾಜ್ ಮಲ್ಲೆ, ಮಲ್ಲಿಕಾರ್ಜುನ ಕಡಕಲ, ಶಿವಶರಣಪ್ಪ ವಾಡಿ, ಶರಣು ಹೂನಹಳ್ಳಿ, ಧರ್ಮಣ್ಣ ಬಡಿಗೇರ್ ಸೇರಿದಂತೆ ಹಲವರಿದ್ದರು.ನಿರೂಪಣೆ ಶರಣಪ್ಪ ಗಾಯಕ್ವಾಡ ಮಾಡಿದರು. ಸ್ವಾಗತವನ್ನು…
ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ ೩೧ ನೇ ವರ್ಷದ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಜಣೆಯಿಂದ ಜರುಗಿತು.ಬೆಳಗ್ಗೆ ದೇವಿಗೆ ಆರತಿ, ಅಲಂಕಾರ, ಪೂಜೆ, ಅಭಿಷೇಕ ನಡೆಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಭವ್ಯ ಮೆರವಣೆಗೆ ನಡೆಯಿತು.ಡೊಳ್ಳು, ಬಾಜಾ-ಭಜಂತ್ರಿ, ಚಿಟ್ಟಲಗಿ, ಸಂಬಳ ಸಮೇತ ಆಕರ್ಷಕ ಮೆರವಣೆಗೆ ಅಲಂಕೃತ ವಾಹನದಲ್ಲಿ ದೇವಿಯ ಮೂರ್ತಿ ಮತ್ತು ಪಾಲಕಿ ಮೆರವಣೆಗೆ ನಡೆಯಿತು.ಮೆರವಣೆಗೆಯಲ್ಲಿ ಆಯಿ ರಾಧೇ ಉದೋ ಉದೋ, ಅಂಬಾಭವಾನಿ ಉಧೋ ಉಧೋ ಘೋಷಣೆ ಮೊಳಗಿದವು.ನಂತರ ನಡೆದ ಸಮಾರಂಭದಲ್ಲಿ ದಾನಿಗಳಾದ ಬಾಲಾಜಿ ಇಫ್ ಕ್ವಾಯಿಲ್ ಮತ್ತಿತರನ್ನು ಸನ್ಮಾನಿಸಲಾಯಿತು.ದೇವಸ್ಥಾನ ಸಮಿತಿ ಅಧ್ಯಕ್ಷ ಅರುಣ ಕೋಳೆಕರ, ಗಣೇಶ ಮಹೀಂದ್ರಕರ, ಬಾಪು ಮಹೀಂದ್ರಕರ, ವಿಜಯ ಪತಂಗೆ, ಸುಭಾಸ ಬಳಮಕರ, ನಾಗನಾಥ ಹಂಚಾಟೆ, ರಮಾಕಾಂತ ಕೋಳೆಕರ, ಮನೋಜ ಕೋಳೆಕರ, ಬಾಬುರಾವ ಸುಲಾಖೆ, ರಮೇಶ ಸುಲಾಖೆ, ನಂದು ಸುಲಾಖೆ, ಡಾ|| ರಾಜೇಶ ಕೋಳೆಕರ, ಕಿರಣ ಬಳಮಕರ, ಶಿವಾಜಿ ಕೋಳೆಕರ, ರಮೇಶ ಹಂಚಾಟೆ, ಶಶಿಕಾಂತ ಮಹಿಂದ್ರಕರ, ಅಂಬಾದಾಸ ಮಿರಜಕರ, ಇಂಜಿಯರಿಂಗ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಧರ ಕೋಳೆಕರ…
ಸಿಂದಗಿ: ಆಧುನಿಕ ಭಗೀರಥ, ಶಿಕ್ಷಣ ಪ್ರೇಮಿ, ಮಾಜಿ ಸಚಿವ ದಿ.ಎಂ.ಸಿ ಮನಗೂಳಿ ಅವರ ೩ನೆಯ ಪುಣ್ಯಸ್ಮರಣೆಯನ್ನು ಪಟ್ಟಣದ ಎಚ್.ಜಿ.ಹೈಸ್ಕೂಲ್ ಆವರಣದಲ್ಲಿ ಜ.೨೮ ಭಾನುವಾರದಂದು ಬೆಳಿಗ್ಗೆ ೧೦ಗಂಟೆಗೆ ನಮ್ಮ ಕುಟುಂಬದವರು ಆಯೋಜನೆ ಮಾಡಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಜನತೆ ಹಾಗೂ ದಿ.ಎಂ.ಸಿ ಮನಗೂಳಿ ಅವರ ಅಭಿಮಾನಿ ಬಳಗ, ಪಕ್ಷದ ಕಾರ್ಯಕರ್ತರು, ಮುಖಂಡರು, ರೈತರು, ಮಹಿಳೆಯರು, ವಿವಿಧ ಸಂಘಡನೆಯ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಮುಖರು, ಯುವಕರು ದಿ.ಎಂ.ಸಿ ಮನಗೂಳಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮ ತಂದೆಯವರ ಆತ್ಮಕ್ಕೆ ಶಾಂತಿ ಕೊರಬೇಕೆಂದು ಶಾಸಕ ಅಶೋಕ ಮನಗೂಳಿ ಮತಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಆಲಮೇಲ ತೋಟಗಾರಿಕೆ ವಿವಿ ಮಂಜೂರಿಗೆ ಸಿಎಂ ಭರವಸೆ | ಶಾಸಕ ಅಶೋಕ ಮನಗೂಳಿ ಮಾಹಿತಿ ಸಿಂದಗಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ನೀಡಿದ ೫ ಗ್ಯಾರಂಟಿಗಳನ್ನು ಈಡೇರಿಸಿ, ಕೊಟ್ಟ ಮಾತನ್ನೂ ಸರಕಾರ ಉಳಿಸಿಕೊಂಡಿದೆ. ಇದರ ಮದ್ಯೆದಲ್ಲಿ ಮತಕ್ಷೇತ್ರಕ್ಕೆ ೧೨೫ ಕೋಟಿ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಸಚಿವ ಸಂಪುಟ ಸಹಕಾರ ನೀಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಜನತೆಯ ಪರವಾಗಿ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ೫೦ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಿಂದಗಿ ನಗರಕ್ಕೆ ಯೋಜನಾ ಪ್ರಾಧಿಕಾರವನ್ನು ಸರಕಾರದಿಂದ ಮಂಜೂರಾತಿ ಪಡೆಯಲಾಗಿದೆ. ತಾಲೂಕಿನ ಯರಗಲ್ ಬಿಕೆ, ಬಂದಾಳ, ಚಿಕ್ಕಸಿಂದಗಿ, ರಾಂಪೂರ ಮತ್ತು ಸೋಂಪೂರ ಗ್ರಾಮಗಳನ್ನು ಒಳಗೊಂಡು ಯೋಜನಾ ಪ್ರಾಧಿಕಾರ ರಚಿಸಲಾಗಿದೆ.ಪ್ರತಿ ಶಾಸಕರಿಗೆ ನೀಡುವ ೨೫ ಕೋಟಿ ರೂ. ಅನುದಾನದಲ್ಲಿ ಸಿಂದಗಿ ಮತಕ್ಷೇತ್ರದ ೪೯ ಹಳ್ಳಿಗಳಲ್ಲಿ ೧೪ಕೋಟಿ…
ಆಲಮೇಲ: ತಾಲೂಕಿನ ದೇವಣಗಾಂವ ಗ್ರಾಮದಮಾತೃಭೂಮಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಮಹಿಳಾ ಸಂಸ್ಥೆಯ ಕದಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಧ್ವಜಾರೋಹಣವನ್ನು ದೇವಣಗಾಂವ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸದಸ್ಯರಾದ ಶ್ರೀ ಚಿನ್ನವ್ವ ಗುಂಡಪ್ಪ ಗಂಗನಳ್ಳಿ ನೆರವೇರಿಸಿದರು.ಹಿರಿಯರಾದ ಸಿದ್ದಯ್ಯ ಮಠಪತಿ, ಪಂಪುಸಿಂಗ್ ರಜಪುತ, ಷಣ್ಮುಖಪ್ಪ ಸೋಮನಾಯಕ, ವಿಠ್ಠಲ ಯರಗಲ್, ರಮೇಶ ಸೊಡ್ಡಿ, ಚಂದ್ರಾಮ ಸಿಂದಗಿ, ಶಂಕರಲಿಂಗ ನಡುವಿನಕೇರಿ, ಸಿದ್ದಾರ್ಥ ಮೇಲಿನಕೇರಿ, ಮಾಣಿಕ ಕಲಬಾ, ಪ್ರಕಾಶ ಗಂಗನಳ್ಳಿ, ದತ್ತಾತ್ರೇಯ ಸೊನ್ನ, ಶಿವಾನಂದ ನಾಗಾವಿ, ಶಿವು ಕಾಟಕರ ಇದ್ದರು.
ರಥಕ್ಕೆ ಪೂಜೆ ಸಲ್ಲಿಸಿ,ಆರತಿ ಬೆಳಗಿ, ಸ್ವಾಗತಿಸಿದ ದೇವಣಗಾಂವ ಗ್ರಾಮಸ್ಥರು ಆಲಮೇಲ: ತಾಲೂಕಿನ ಗಡಿಗ್ರಾಮ ದೇವಣಗಾಂವ ಭೀಮಾ ನದಿ ತೀರದ ಸೇತುವೆಯ ಮೇಲೆ ಕರ್ನಾಟಕ ಸುವರ್ಣ ಸಂಭ್ರಮ ರಥಯಾತ್ರೆಗೆ ಅದ್ದೂರಿ ಸ್ವಾಗತ ಮಾಡಿಕೊಳ್ಳಲಾಯಿತು.ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಿಂದ ವಿಜಯಪುರ ಜಿಲ್ಲೆಗೆ ರಥಯಾತ್ರೆ ಆಗಮಿಸಿತು. ಆಲಮೇಲ ತಹಶಿಲ್ದಾರ ಸುರೇಶ ಚಾವಲರ ಅವರ ನೇತೃತ್ವದಲ್ಲಿ ದೇವಣಗಾಂವ ಗ್ರಾಪಂ ಅಧ್ಯಕ್ಷೆ ಶ್ರೀಮತಿ ರೇಣುಕಾ ನಡುವಿನಕೇರಿ ರಥಕ್ಕೆ ಪೂಜೆ ಸಲ್ಲಿಸಿ, ಹೂಮಾಲೆ ಹಾಕಿ, ಆರತಿ ಬೆಳಗಿ ಸ್ವಾಗತ ಮಾಡಿಕೊಂಡರು.ಶಾಲಾ ಮಕ್ಕಳ ಕೋಲಾಟ, ಜಯಘೋಷ, ಕನ್ನಡದ ಕವಿಗಳ ಭಾವಚಿತ್ರಗಳು, ಕನ್ನಡ ದ್ವಜ ಎಲ್ಲೆಡೆ ರಾರಾಜಿಸಿದವು, ಡೊಳ್ಳು ಕುಣಿತ, ಹಲಗೆಮೇಳ, ಚಿಟ್ಟಹಲಗೆ, ಮುತೈದೆಯರು ಕುಂಭ, ಆರತಿಯೊಂದಿಗೆ ರಥದ ಮುಂದೆ ಸಾಗಿದರು. ಕನ್ನಡ ಗೀತೆಗಳ ಗಾಯನಕ್ಕೆ ನೆರೆದಿದ್ದ ಯುವಕರು, ಮಕ್ಕಳು, ಹಿರಿಯರು, ಮಹಿಳೆಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ತಹಶಿಲ್ದಾರ ಸುರೇಶ ಚಾವಲರ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ವಿವಿಧ ಸಂಘಗಳ ಮಹಿಳೆಯರು ಕೂಡಾ ಹೆಜ್ಜೆ…
ಆಲಮೇಲ: ಪಟ್ಟಣದ ಸಂಗನಬಸವೇಶ್ವರ ಶಾಲೆಯಲ್ಲಿ ರಾಜಕಿಯ ಮುಖಂಡರಾದ ಸೋಮನಾಥ ಮೇಲಿಮನಿ ದ್ವಜಾರೋಹಣ ನೇರವೇರಿಸಿದರು. ನಿತ್ಯಾನಂದ ಆರೋಢ ಮಠದ ಬಸವಲಿಂಗ ಶರಣರು, ಪ.ಪಂ ಸದಸ್ಯ ಅಶೋಕ ಕೊಳಾರಿ, ಬಸವರಾಜ ತೆಲ್ಲೂರ, ಯಲ್ಲಪ್ಪ ಬುರಡ, ಶ್ರೀಶೈಲ ಕುಂಬಾರ, ಬಾಬು ಕೊತಂಬರಿ, ಆನಂದ ಬುರಡ,ದಯಾನಂದ ಪುರಾಣಿಕ, ಶ್ರೀಮಂತ ಹಿರೇಗೌಡ, ಮುಖ್ಯ ಶಿಕ್ಷಕ ಸಂಜುಕುಮಾರ ಇಟಗಾರ, ಶಿಕ್ಷಕ ಉಮೇಶ ಕುಂಬಾರ ಉಪಸ್ತಿತರಿದ್ದರು.ಐ.ಕೆ. ರಾಯಲ್ ಶಾಲೆ: ಪಟ್ಟಣದ ಐ.ಕೆ. ರಾಯಲ ಶಾಲೆಯಲ್ಲಿ ಶಾಲಾ ಆಡಳಿಮಂಡಳಿ ನಿರ್ದೇಶಕ ಶೌಕತಲಿ ಸುಂಬಡ ದ್ವಜಾರೋಹಣ ಮಾಡಿದರು.ಮುಖ್ಯ ಶಿಕ್ಷಕ ಸಂತೋಷ ಚಂಗಟ್ಟಿ, ಶಿಕ್ಷಕರಾದ ಸಂಜನಾ ಬೇನುರ, ರಕ್ಷಿತಾ ಅಂಬುರೆ, ಸಂಗೀತಾ, ರೋಜಿ, ಶ್ರೀಕಾಮತರ ಸಿಬರಾಮ ಮುಂತಾದವರು ಉಪಸ್ಥಿತರಿದ್ದರು.ಹೂವಿನಹಳ್ಳಿ ತಾಲೂಕಿನ ಹೂವಿನಹಳ್ಳಿ ಗ್ರಾಮದ ಅಂಬೇಡ್ಕರ ನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶರಣು ಸಿಂಧೆ ದ್ವಜಾರೋಹಣ ಮಾಡಿದರು.ಮುಖ್ಯ ಶಿಕ್ಷಕ ಪಂಡಿತ ಅವಜಿ ಶಾಲಾ ಸಿಬ್ಬಂದಿ ಹಾಗೂ ಪಾಲಕರು ಇದ್ದರು.
ಆಲಮೇಲ: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಂತಹ ಆಲಮೇಲದ ಶ್ರೀ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರಿಗೆ ವಿಶ್ವ ಹಿಂದೂ ಪರಿಷತ್, ಗ್ರಾಮಸ್ಥರು, ಶ್ರೀ ಮಠದ ಭಕ್ತರು ಶನಿವಾರ ಅದ್ದೂರಿ ಸ್ವಾಗತ ಕೋರಿದರು.ಇದೇ ಜ. ೨೨ ರಂದು ಅಯೋಧ್ಯೆ ಶ್ರೀ ರಾಮಮಂದಿರದ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಲಮೇಲದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರಿಗೆ ಅಯೋದ್ಯೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಆಹ್ವಾನದ ಮೇರೆಗೆ ಅಯೋಧ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಆಲಮೇಲ ಪಟ್ಟಣಕ್ಕೆ ಆಗಮಿಸಿದ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.ಯಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ತಡವಾಳದ ರಾಚೋಟೇಶ್ವರ ಶಿವಾಚಾರ್ಯರು, ಗುರಲಿಂಗ ಶಿವಾಚಾರ್ಯರು, ಕುಮಸಗಿ ಶಿವಾನಂದ ಶಿವಾಚಾರ್ಯರು ಮುಂತಾದ ಪೂಜ್ಯರ ನೇತೃತ್ವದಲ್ಲಿ ಸ್ವಾಗತಿಸಿ ಪಟ್ಟಣದ ಆಂಜನೆಯ ದೇವಸ್ಥಾನದಿಂದ ಮೆರವಣಿಗೆ ಮೂಲಕ ಹಿರೇಮಠಕ್ಕೆ ಕರೆತರಲಾಯಿತು.
ಆಲಮೇಲ: ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ ಜ್ಯೋತಿ ರಥಯಾತ್ರೆಯು ಶನಿವಾರ ಬೆಳಗ್ಗೆ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಮೂಲಕ ಆಗಮಿಸಿತು.ತಹಶೀಲ್ದಾರ ಸುರೇಶ ಚಾವಲರ ನೇತೃತ್ವದಲ್ಲಿ ತಾಲೂಕು ಆಡಳಿತ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ವಾದ್ಯ ವೈಭವ ಮತ್ತು ವಿವಿದ ಕಲಾ ತಂಡಗಳೊಂದಿಗೆ ಅದ್ದೂರಿ ಸ್ವಾಗತಿಸಿ ಬಿಳ್ಗೊಟ್ಟರು.ಶನಿವಾರ ಬೆಳಗ್ಗೆ ೯ ಗಂಟೆಗೆ ತಾಲೂಕಿನ ದೇವಣಗಾಂವ ಗ್ರಾಮಕ್ಕೆ ಆಗಮಿಸಿತು. ತಹಶೀಲ್ದಾರ ಸುರೇಶ ಚಾವಲಾರ ನೇತೃತ್ವದ ತಾಲೂಕ ಆಡಳಿತ ಮತ್ತು ದೇವಣಗಾಂವ ಗ್ರಾಮಸ್ಥರು ಶಾಲಾ ಕಾಲೇಜ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸ್ವಾಗತಿಸಿ ಬಿಳಕೊಟ್ಟರು. ನಂತರ ೧೧-೩೦ ಗಂಟೆಗೆ ಆಲಮೇಲ ಪಟ್ಟಣಕ್ಕೆ ಆಗಮಿಸಿತು. ಬಡದಾಳ ಪೆಟ್ರೋಲ ಬಂಕ್ ಹತ್ತಿರ ತಾಲೂಕು ಆಡಳಿತದೊಂದಿಗೆ ಎಲ್ಲ ಶಾಲಾ ಕಾಲೇಜ ವಿದ್ಯಾರ್ಥಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಸಕಲ ವಾದ್ಯ ವೈಭವ, ಡೊಳ್ಳು ಕುಣಿತ, ಮಕ್ಕಳ ಕೋಲಾಟ ನೃತ್ಯ, ಮಕ್ಕಳ ಚದ್ಮ ವೇಶದಾರಿಗಳಿಂದ ಕಲಾ ನೃತ್ಯ ರೂಪಕದ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.ಸುಮಾರು ಎರಡು ಗಂಟೆವರೆಗೂ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರ್ನಾಟಕ ಜ್ಯೋತಿ ಯಾತ್ರೆ…
ವಿಜಯಪುರ: ಭಾರತ ಇತಿಹಾಸದಲ್ಲಿ ಗಣರಾಜ್ಯೋತ್ಸವ ದಿನವು ನಮಗೆ ಪ್ರಮುಖವಾದ ದಿನವಾಗಿದೆ. ಅಗಸ್ಟ್ 15 1947 ರಂದು ಬ್ರಿಟಿಷರಿಂದ ನಮಗೆ ತಾತ್ವಿಕವಾದ ಸ್ವತಂತ್ರ ಪಡೆದುಕೊಂಡ ದಿನವಾದರೆ ಈ ದಿನ ಜನೆವರಿ 26 1950 ರಂದು ಭಾರತ ತನ್ನ ಸಂವಿಧಾನವನ್ನು ಜಾರಿಗೆ ದಿನವಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಬಗುರ್ ಹುಕುಂ ಮಾಜಿ ನಾಮ ನಿರ್ದೇಶನ ಸದಸ್ಯ ಯಾಸ್ಮಿನ್ ಭಾನು ನಾಯ್ಕೋಡಿ ಹೇಳಿದರು.ರಾಜೀವ್ ಗಾಂಧಿ ಪ್ರೌಢಶಾಲೆ ಹೊನ್ನಳ್ಳಿಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ರಾಜ್ಯ ಪ್ರಭುತ್ವವನ್ನ ತ್ಯಜಿಸಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ದಿನವಾಗಿದೆ. ಭಾರತ ತನ್ನದೇ ಆದ ಸಂವಿಧಾನ ಜಾರಿಗೆ ತರುತ್ತಿದ್ದಂತೆ ಗಣರಾಜ್ಯವಾಗಿ ಬದಲಾಯಿತು ಭಾರತವು ಉತ್ತಮ ಬಲಿಷ್ಠ ರಾಷ್ಟ್ರವಾಗಿ ನಿರ್ಮಾಣವಾಗಲು ನಮ್ಮ ದೇಶದ ಸಂವಿಧಾನವೇ ಪ್ರಮುಖ ಕಾರಣ ಅದಕ್ಕಾಗಿ ಹಗಲಿರುಳು ಶ್ರಮಿಸಿದ ಸವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಕೊಡುಗೆಯನ್ನು ನಾವು ಸ್ಮರಿಸಬೇಕು ಎಂದರು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.ವೇದಿಕೆ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂಗನಗೌಡ…
