ವಿಜಯಪುರ: ಪ್ರತಿಬಾರಿ ಸಾರ್ವತ್ರಿಕ ಚುನಾವಣೆಗಳು ಬಂದಾಗ ಮತದಾನದ ಪ್ರಮಾಣವನ್ನು ಹೆಚ್ಚಿಸಲು , ಮತದಾನದ ಮಹತ್ವ ಕುರಿತು ಜಿಲ್ಲಾಡಳಿತಗಳು ಜಾಗೃತಿಯನ್ನು ಮೂಡಿಸುತ್ತವೆ. ಜಿಲ್ಲೆಯ ಆಲಮೇಲದ ಆಯುಷ್ ವೈದ್ಯ ಡಾ ಸಮೀರ ಹಾದಿಮನಿ ತಮ್ಮ ಆಸ್ಪತ್ರೆಗೆ ಬರುವ ರೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಮತದಾನದ ಜಾಗ್ರತಿ ಮೂಡಿಸುತ್ತಿದ್ದಾರೆ.
ಪ್ರಿಸ್ಕ್ರಿಪ್ಶನ್ ಚೀಟಿ, ಪ್ರಯೋಗಾಲಯದ ವರದಿಗಳ ಮೇಲೆ “ನಿಮ್ಮ ಮತ ಅಮೂಲ್ಯ, ತಪ್ಪದೇ ಮತದಾನ ಮಾಡಿ” ಎಂಬ ವಾಕ್ಯವನ್ನು ವಿವಿಧ ಆಕಾರದ ಸೀಲ್ ಗಳ ಮೂಲಕ ಮುದ್ರಿಸಿ ರೋಗಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ವ್ಯಂಗ್ಯಚಿತ್ರಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮತದಾನದ ಮಹತ್ವ ಸಾರುತ್ತಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

