Author: editor.udayarashmi@gmail.com

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ: ಭೌತಜಗತ್ತಿಗೆ ಆಲ್ಬರ್ಟ ಐನ್‍ಸ್ಟೈನ್ ಕೊಟ್ಟ ವಿಶಿಷ್ಟ ಸಾಪೇಕ್ಷ ಸಿದ್ದಾಂತದ ಸೂತ್ರ.E=mc ಒಂದು ಕ್ಲಿಷ್ಟಕರ ಭೌತ ಸೂತ್ರ. ಆದರೆ ಅದನ್ನು ಅವರು ಉದಾಹರಿಸುವ ರೀತಿ ಶ್ಲಾಘನೀಯವಾದದ್ದು ಎಂದು ಪ್ರಾಚಾರ್ಯ ಡಾ.ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಐಐಸಿ ಮತ್ತು ಭೌತಶಾಸ್ತ್ರ ವಿಭಾಗದ ಎಪ್ಸಿಲಾನ್ ಕ್ಲಬ್ ಹಾಗೂ ‘ಜನರಂಗ ಕಲಬುರಗಿ ಮತ್ತು ಕಲಾ ಕುಟೀರ ತಂಡ ಸಹಯೋಗದಲ್ಲಿ ಜರುಗಿದ “ನಾನು ಅಲ್ಬರ್ಟ ಐನ್‍ಸ್ಟೈನ್” ಎಂಬ ಏಕಪಾತ್ರಾಭಿನಯದ ಕಿರುನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦ ನೇ ಶತಮಾನದ ಮಹಾನ್ ಮೇಧಾವಿ ಹಾಗೂ ಭೌತ ಜಗತ್ತಿಗೆ ವಿಶಿಷ್ಟ ಸಾಪೇಕ್ಷ ಸಿದ್ದಾಂತ ಸೂತ್ರವನ್ನು E=mc ನೀಡಿದ ವಿಜ್ಞಾನಿ ಅವರ ಜೀನದ ಸಾಹಸ ಗಾಥೆಯನ್ನು ಬಿಚ್ಚಿಡುವ ಈ ಕಿರುನಾಟಕದ ಪ್ರದರ್ಶನ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಡಾ.ಪ್ರಕಾಶ ಗರುಡ ರಚನೆಯ ಮತ್ತು ಉಮೇಶ ಪಾಟೀಲ ನಿರ್ದೇಶನದ, ಶಂಕರಯ್ಯ ಘಂಟಿ…

Read More

ವಿಜಯಪುರ: ಅಂತಾರಾಷ್ಟ್ರೀಯ ಖ್ಯಾತಿ ಓಟಗಾರ ಮತ್ತು ಖ್ಯಾತ ವೈದ್ಯ ಡಾ. ಸಿ. ಆರ್. ಬಿದರಿ ಅವರ ಪುಣ್ಯಸ್ಮರಣೆ ಅಂಗವಾಗಿ ಫೆಬ್ರುವರಿ 2 ರಂದು ಶುಕ್ರವಾರ ನಗರದಲ್ಲಿ ಕ್ಯಾನ್ಸರ್ ಕುರಿತು ರಾಜ್ಯ ಮಟ್ಟದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿದೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸ್ಕಿಲ್ಸ್ ಲ್ಯಾಬೊರೇಟರಿ ಕಟ್ಟಡದಲ್ಲಿರುವ ಸೆಂಟ್ ಫಾರ್ ಅಡ್ವಾನ್ಸಡ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ ವಿಭಾಗದಲ್ಲಿ ಬೆಳಿಗ್ಗೆ 9.30ಕ್ಕೆ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ವಿವಿಯ ಸಮುಕುಲಾಧಿಪತಿ ಡಾ. ವೈ. ಜಯರಾಜ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಪ್ರಾಚಾರ್ಯ ಡಾ. ಆನಂದ ಪಾಟೀಲ, ಡಾ. ಆರ್. ಸಿ. ಬಿದರಿ, ಡಾ. ಆರ್. ವಿ. ಕುಲಕರ್ಣಿ ಮುಂತಾದವರು ಉಪಸ್ಥಿತರಿರಲಿದ್ದಾರೆ.ಈ ಸಂದರ್ಭದಲ್ಲಿ ಕ್ಯಾನ್ಸರ್ ಕುರಿತು ತಿಳುವಳಿಕೆ ಮೂಡಿಸುವುದು, ಕ್ನಾನ್ಸರ್ ತಪಾಣೆಯಲ್ಲಿ ಅತ್ಯಾಧುನಿಕ ವಿಧಾನಗಳು, ಚಿಕಿತ್ಸೆ ಮತ್ತು ಕ್ಯಾನ್ಸರ್ ರೋಗಿಗಳಿಗೆ ಮನೋಬಲ ತುಂಬಿ ಆರೈಕೆ ಮಾಡುವ ಕುರಿತು ನಾನಾ ವಿಚಾರಗೋಷ್ಠಿಗಳು ನಡೆಯಲಿವೆ. ಬೆಂಗಳೂರು ಎಚ್.ಸಿ.ಜಿ ಆಸ್ಪತ್ರೆಯ…

Read More

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ ವಾಗ್ದಾಳಿ ಬೆಂಗಳೂರು: ‘ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ಬಹುತೇಕ ವಿಲೀನ ಮಾಡಿದ್ದಾರೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರ ಜತೆ ಪ್ರತಿಭಟನೆ ಮಾಡಿದ ಬಗ್ಗೆ ಮಾಧ್ಯಮದವರು ಕೇಳಿದಾಗ, ‘ಇದು ಅವರ ಪಕ್ಷದ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ಅವರು ಯಾವ ಬಣ್ಣದ ಶಾಲನ್ನಾದರೂ ಧರಿಸಲಿ. ಬಿಜೆಪಿಗೆ ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲ. ಅಲ್ಲಿ ನೆಲೆ ಕಂಡುಕೊಳ್ಳಲು ಇವರಿಬ್ಬರಲ್ಲಿ ಯಾರು ಯಾರನ್ನು ನುಂಗುತ್ತಾರೋ ಗೊತ್ತಿಲ್ಲ’ ಎಂದರು.ಶಾಂತಿ ಕದಡಬೇಕು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬೇಕು ಎಂದು ಮುಗ್ಧ ಹಳ್ಳಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ನಮ್ಮ ಭಾಗದ ಎಲ್ಲಾ ಜಾತಿ ಹಾಗೂ ಧರ್ಮದ ಜನರು ಬಹಳ ಸೌಹಾರ್ದತೆಯಿಂದ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದರು. ನಮ್ಮ ಕಡೆ ಊರ ಹಬ್ಬ ಮಾಡುವಾಗ ಯಾವರೀತಿ ಮಾಡುತ್ತಾರೆ ಎಂದು ನೀವು ನೋಡಿದ್ದೀರಲ್ಲಾ? ಈಗ ಅವರು ಹೊಸ ಪ್ರಯೋಗ ಮಾಡುತ್ತಿದ್ದಾರೆ’…

Read More

ಬ್ರಹ್ಮದೇವನಮಡು: ಕಲಬುರಗಿ ಜಿಲ್ಲೆ ಕೋಟನೂರ (ಡಿ) ಗ್ರಾಮದಲ್ಲಿ ಇತ್ತಿಚೇಗೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಕನಾ೯ಟಕ ರಾಜ್ಶ ದಲಿತ ಸಂಘಷ೯ ಸಮಿತಿ ಭೀಮ ಗಜ೯ನೆ ತಾಲೂಕು ಘಟಕ ಹಾಗೂ ವಿವಿಧ ಕನ್ನಡಪರ ಸಂಘಟನೆ ಮುಖಂಡರು,ಕಾಯ೯ಕತ೯ರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ ಅಧಿಕಾರಿ ಬಸಯ್ಶ ಮಠ ಅವರ ಮೂಲಕ ಮುಖ್ಶಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಗ್ರಾಮದ ಅಂಬಿಗರ ಚೌಡಯ್ಶ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತ ತಲುಪಿತ್ತು. ನಂತರ ಸಿಂದಗಿ – ಶಹಾಪೂರ ರಾಜ್ಶ ಹೆದ್ದಾರಿ ಸಂಚಾರ ತಡೆದು ಎರಡು ಗಂಟೆಗಳ ಕಾಲ ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಶಕ್ತಪಡಿಸಿದರು. ವಾಹನಗಳ ಸಂಚಾರ ಸಂಪೂಣ೯ ಸ್ಥಗಿತಗೊಂಡಿದ್ದರಿಂದ ರಸ್ತೆಯುದ್ದಕ್ಕೂ ಬಸ್, ಖಾಸಗಿ ವಾಹನಗಳು ನಿಂತುಕೊಂಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಗ್ರಾಮದ ಅಂಗಡಿ ಮುಂಗಟ್ಟುಗಳು ಎರಡು ಗಂಟೆ ಸ್ವಯಂ ಪ್ರೇರಣೆಯಿಂದ ಮುಚ್ಚಲಾಗಿತ್ತು.ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ಭೀಮ ಘಜ೯ನೆ ತಾಲೂಕು ಸಂಚಾಲಕ ಶ್ರೀಶೈಲ ಜಾಲವಾದಿ, ದಯಾನಂದ ಮಠ,…

Read More

ತಿಕೋಟಾ: ತಾಲ್ಲೂಕಿನ ಟಕ್ಕಳಕಿ ಗ್ರಾಮದ ಕರ್ಪೆವಸ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯ ಶಿಕ್ಷಕರು ತಮ್ಮ ಸ್ವಂತ ಹಣದಿಂದ 43 ಇಂಚಿನ ಒಳ್ಳೆಯ ಗುಣಮಟ್ಟದ ಟಿವಿಯನ್ನು ತಮ್ಮ ಶಾಲೆಗೆ ಕೊಡುಗೆಯಾಗಿ ನೀಡಿ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾದರು.ಎಸ್.ಡಿ.ಎಮ್.ಸಿ ಅಧ್ಯಕ್ಷ ಬೀರಪ್ಪ ಕೃಷ್ಣ ಕರ್ಪೆ ಮಾತನಾಡಿ ನಮ್ಮ ಶಾಲೆಯ ಶಿಕ್ಷಕರು 14 ವರ್ಷಗಳಿಂದ ಸತತವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿದ್ದು ಇಂದು ಶಾಲೆಗೆ ಟಿವಿ ನೀಡಿದ್ದು ಎಲ್ಲ ಪಾಲಕರು ಮೆಚ್ಚುಗೆ ವ್ಯಕ್ತಪಡಿದ್ದಾರೆ ಎಂದರು.ಮುಖ್ಯ ಶಿಕ್ಷಕರ ಸಿದ್ಧರಾಮ ಝಲ್ಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಮಾರುತಿ ಲಮಾಣಿ, ಎ.ಡಿ.ಎಮ್. ಉಪಾಧ್ಯಕ್ಷ ಮಾನಂದಾ ಪಾಟೀಲ, ಸದಸ್ಯರಾದ ಗೋಪಾಲ ಮಾನೆ, ವಿಠೋಬಾ ಕರ್ಪೆ,ಬೀರು ಕರ್ಪೆ, ಮಲಕನಗೌಡ ಪಾಟೀಲ , ರಮೇಶ ಹೊನಖಂಡೆ, ಚಂದ್ರು ಪಾಂಡ್ರೆ, ಜಕ್ಕವ್ವ ಪಾಟೀಲ, ಸಿದ್ದಮ್ಮ ಬಿರಾದಾರ,ಬಪ್ಪಣ್ಣ ಕರ್ಪೆ, ಪರಶುರಾಮ ಕಲಾಲ, ದೊಂಡಿಬಾ ಪಾಂಡ್ರೆ, ರತ್ನಾಬಾಯಿ ಬಿರಾದಾರ, ನಿಲಾಂಬಿಕಾ ಪಾಟೀಲ ಮತ್ತು ಹಳೆಯ ವಿದ್ಯಾರ್ಥಿಗಳು, ಇತರು ಇದ್ದರು.

Read More

ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯಿಂದ ೩೦ ಪುಸ್ತಕಗಳ ಲೋಕಾರ್ಪಣೆ | ಬೆರಗು ಪ್ರಶಸ್ತಿ ಪ್ರದಾನ | ಆಲಮೇಲ: ಬಸವಣ್ಣನವರ ನಾಡು ವಿಜಯಪುರ ಜಿಲ್ಲೆ ನಿರಂತರವಾಗಿ ಬರಗಾಲದಿಂದ ಬಳಲಿದರೂ ಅನ್ನ ದಾಸೋಹ, ಅಕ್ಷರ ಜ್ಞಾನದ ದಾಸೋಹಕ್ಕೆ ಯಾವುದೆ ಬರವಿಲ್ಲ ಎಂದು ಹಿರಿಯ ಸಾಹಿತಿ ಡಾ| ಸಂಗಮನಾಥ ಲೋಕಾಪೂರ ಹೇಳಿದರು.ಮಂಗಳವಾರ ಕಡಣಿಯ ಪಿ.ಬಿ. ಕಾಲೇಜು ಆವರಣದಲ್ಲಿ ಕಡಣಿಯ ಬೆರಗು ಪ್ರಕಾಶನ ಸಂಸ್ಥೆ ಹಮ್ಮಿಕೊಂಡ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಸ್ಮರಣಾರ್ಥ ಹಮ್ಮಿಕೊಂಡಿದ್ದ ೩೦ ಪುಸ್ತಕಗಳ ಲೋಕಾರ್ಪಣೆ ಹಾಗೂ ಬೆರಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿಜಯಪುರ ಜಿಲ್ಲೆಯ ಶರಣರು, ಸಂತರು, ಸಾಹಿತಿಗಳು ವಿವಿದ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿ ನಾಡಿನಾದ್ಯಂತ ಹೆಸರು ಮಾಡಿದ್ದಾರೆ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಬರಗಾಲದಿಂದ ಬಳಲಿದರೂ ಇಂದಿರಾಗಾಂಧಿ ಅವರನ್ನು ಬಂಗಾರದಲ್ಲಿ ತೂಗಿದಂತಹ ವಿಶಾಲ ಮನೋಭಾವ ಹೊಂದಿದ ಜನರು ಇಲ್ಲಿದ್ದಾರೆ ಎಂದರು.ಶಾಸಕ ಅಶೋಕ ಮನಗೂಳಿ ೩೦ ಪುಸ್ತಕಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಗ್ರಾಮೀಣ ಭಾಗದ ಯುವ ಸಾಹಿತಿಗಳ ಮತ್ತು…

Read More

ಆಲಮೇಲದಲ್ಲಿ ದಲಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ಆಲಮೇಲ: ಕರ್ಲ್ಬುಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿರುವ ಆರೋಪಿಗಳನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಆಲಮೇಲದಲ್ಲಿ ದಲಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಟಾಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿ ತಹಸೀಲ್ದಾರ ಅವರಿಗೆ ಎಲ್ಲ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ನಂತರ ಹಿರಿಯ ದಲಿತ ಮುಖಂಡ ಜಗದೀಶ ದಾಳಿ ಮಾತನಾಡಿ, ದೀನ ದಲಿತರು ಹಾಗೂ ಅಲ್ಪ ಸಂಖ್ಯಾತರ ಮೂರ್ತಿಗಳಿಗೆ ಅವಮಾನ ಮಾಡುವ ಮೂಲಕ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸಿ ರಾಜಕೀಯವಾಗಿ ಲಾಭ ಪಡೆಯಬೇಕು ಎಂಬ ಉದ್ದೇಶ ಹೊಂದಿರುವ ಮನುವಾದಿ ರಾಜಕೀಯ ವ್ಯಕ್ತಿಗಳಿಗೆ ಮುಂದಿನ ದಿನಮಾನದಲ್ಲಿ ಸರಿಯಾಗಿ ಪಾಠ ಕಲಿಸುವ ಮೂಲಕ ಸಂವಿಧಾನ ಹಾಗೂ ಬಾಬಾಸಾಹೇಬರ ವಿಚಾರಗಳನ್ನು ಉಳಿಸಿಕೊಳ್ಳಬೇಕು ಎಂದು ಹೆಳಿದರುದಲಿತ ಯುವ ಮುಖಂಡ ಹರೀಶ ಯಂಟಮನ ಮಾತನಾಡಿದರು.ಶಿವುಕುಮಾರ ಮೇಲಿನಮನಿ, ಬ್ಲಾಕ್ ಅಧ್ಯಕ್ಷ ಮೋಹ್ಮದ ಸಾಧೀಕ ಸುಂಬಡ, ಪರಶುರಾಮ ಕಾಂಬಳೆ ಮಾತನಾಡಿದರು.ಮುಖಂಡರಾದ ಗುಂಡು ಮೇಲಿನಮನಿ, ಸಂಜು…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಹಮ್ಮಿಕೊಂಡಿರುವ ಕಲಬುರಗಿ ಶರಣಬಸವೇಶ್ವರ ಪುರಾಣದಲ್ಲಿ ಸೋಮವಾರ ಸಂಜೆ ಹಂತಿ ಹೊಡೆಯವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇಂದಿನ ಯುವಜನಾಂಗಕ್ಕೆ ಹಂತಿ ಹೊಡೆಯುವದನ್ನು ಮಾದರಿಯಾಗಿ ತೋರಿಸಿದ್ದು ಗಮನ ಸೆಳೆಯಿತು.ಈ ಸಂದರ್ಭದಲ್ಲಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಭಾರತೀಯ ಪರಂಪರೆ ಜಗತ್ತಿಗೆ ಮಾದರಿಯಾಗಿದೆ. ಇಡೀ ಜಗತ್ತಿಗೆ ಅನ್ನ ನೀಡುವ, ದೇಶದ ಬೆನ್ನೆಲುಬಾಗಿರುವ ರೈತ ಬಾಂಧವರನ್ನು ಪ್ರತಿಯೊಬ್ಬರೂ ಮರೆಯದೇ ಸ್ಮರಿಸಬೇಕು. ಇಂದು ಗೋವುಗಳನ್ನು, ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಯಾವ ಮನೆಯಲ್ಲಿ ಗೋವುಗಳು, ಎತ್ತುಗಳು ಇರುತ್ತವೆ ಆ ಮನೆ ಸುಂದರವಾಗಿ ಕಾಣುತ್ತದೆ. ಇಂದಿನ ಯುವಜನಾಂಗಕ್ಕೆ ಹಂತಿ ಪದ, ಹಂತಿ ಹೊಡೆಯುವದು ಎಂಬುವದು ಗೊತ್ತಿಲ್ಲ. ಯುವಜನಾಂಗ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಅರಿತುಕೊಳ್ಳಬೇಕೆಂದರು.ಈ ಸಂದರ್ಭದಲ್ಲಿ ಚಂದ್ರಶೇಖರಗೌಡ ಪಾಟೀಲ, ಮಹಾಂತಪ್ಪಗೌಡ ಗುಜಗೊಂಡ, ನಿಂಗನಗೌಡ ಪಾಟೀಲ, ರೇವಣಸಿದ್ದಪ್ಪ ತಪಶೆಟ್ಟಿ, ಬಸು ಹಿಟ್ನಳ್ಲಿ, ರಮೇಶ ಔರಸಂಗ, ಮುದುಕಪ್ಪ ಮಣ್ಣೂರ, ಬಾಬು ಘೋರ್ಪಡೆ, ಬಾಬು ಹುಲಗಬಾಳ, ರಾಮು ಬಿರಾದಾರ, ಮಲ್ಲಿಕಾರ್ಜುನ…

Read More

ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರಗೆ ಮನವಿ | ಸಚಿವ ಶಿವಾನಂದ ಪಾಟೀಲ ಸ್ಪಷ್ಠನೆ ಬಸವನಬಾಗೇವಾಡಿ: ಬೇಸಿಗೆ ಕಾಲದಲ್ಲಿ ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯ ಜನರಿಗೆ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಬವಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಆಲಮಟ್ಟಿ ಜಲಾಶಯದಿಂದ ಅವಳಿ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ನೀರು ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಲಾಗಿದೆ. ನೀರಿನ ಬವಣೆ ನಿವಾರಿಸಲು ಫೆಬ್ರುವರಿ ಮೊದಲ ವಾರದಲ್ಲಿ ಅವಳಿ ಜಿಲ್ಲೆಯ ಅಂದಾಜು ೧೭೫ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ, ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕೊಲ್ಹಾರ, ಬಸವನಬಾಗೇವಾಡಿ, ನಿಡಗುಂದಿ ತಾಲೂಕುಗಳು ಬರಗಾಲಕ್ಕೆ ಒಳಗಾಗಿರುವದರಿಂದಾಗಿ ತೀವ್ರ ಕುಡಿಯುವ ನೀರಿನ ತೊಂದರೆ ಉಂಟಾಗಿರುತ್ತದೆ. ತಾಲೂಕುಗಳಲ್ಲಿ ಜನ-ಜಾನುವಾರುಗಳಿಗೆ ತುರ್ತಾಗಿ ಕುಡಿಯುವ ನೀರನ್ನು ಒದಗಿಸಬೇಕಾಗಿದೆ. ಮುಳವಾಡ ಏತ…

Read More