ವಿಜಯಪುರ: ಕರ್ನಾಟಕ ಬಯಲಾಟ ಅಕಾಡೆಮಿಗೆ ಬಬಲೇಶ್ವರ ಪಟ್ಟಣದ ಅನಸೂಯಾ ವಡ್ಡರ್ ಇವರಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಬಲೇಶ್ವರ ಅವರ ಮನೆಯಲ್ಲಿ ಗೌರವ ಸನ್ಮಾನ ಮಾಡಲಾಯಿತು
ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕಸಾಪ ಎಲೆಮರೆಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ಹಾಗೂ ಗೌರವಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಬಬಲೇಶ್ವರ ಪಟ್ಟಣದ ನಿವಾಸಿಗಳಾದ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆಯಾಗಿ ನೇಮಕಗೊಂಡ ಅನುಸೂಯಾ ವಡ್ಡರ್ ಮನೆಯಲ್ಲಿ ಸನ್ಮಾನಿಸಿ ಮಾತನಾಡಿ, ಶ್ರೀ ಕೃಷ್ಣ ಪಾರಿಜಾತದಲ್ಲಿ ಅನೇಕ ಬಯಲಾಟ ಪಾತ್ರ ನಿರ್ವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡು ನಾಡಿಗೆ ಗೌರವ ತಂದಿದ್ದಾರೆ ಎಂದರು.
ಬಾಗಲಕೋಟ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ, ಜಾನಪದ ಕಲೆಗಳು ನಮ್ಮ ನಾಡಿನ ಸಾಂಸ್ಕೃತಿಯ ಪ್ರತೀಕ, ಕಲಾವಿದರನ್ನು ಸರ್ಕಾರ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಬೇಕು ಎಂದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ಅನುಸೂಯಾ ವಡ್ಡರ್ ಮಾತನಾಡಿ, ನಾನು ಬಾಲ್ಯದಿಂದ ಪ್ರತಿಭಾವಂತ ಕಲಾವಿದೆಯಾಗಿ ಸೇವೆ ಮಾಡಿದ್ದೇನೆ ಇದು ನನ್ನ ಹವ್ಯಾಸ ಎಂದರು.
ನಿಂಗಪ್ಪ ಬಿರಾದಾರ, ರಾಜು ಅಂಗಡಿ, ಹಸನ್ ಸೊನ್ನಾದ, ಮಹೆಬೂಬ್ ಮುಜಾವರ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

