ವಿಜಯಪುರ: ಬಿಜಾಪುರ(ಪ ಜಾ) ಲೋಕಸಭೆ ಮತಕ್ಷೇತ್ರದಲ್ಲಿ ಆರನೆ ಮತ್ತು ದಿನವಾದ ಶುಕ್ರವಾರದಂದು ೯ ಅಭ್ಯರ್ಥಿಗಳಿಂದ ೧೦ ನಾಮಪತ್ರಗಳು ಸಲ್ಲಿಕೆಯಾಗಿವೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ರಮೇಶ ಜಿಗಜಿಣಗಿ ಎರಡು ನಾಮಪತ್ರ, ಎಸ್ ಯು ಸಿ ಐ ಪಕ್ಷದ ಅಭ್ಯರ್ಥಿಯಾಗಿ ನಾಗಜ್ಯೋತಿ ಬಿ.ಎನ್ ಅವರು ಒಂದು, ಭಾರತೀಯ ಜವಾನ್ ಕಿಸಾನ್ ಪಕ್ಷದ ಅಭ್ಯರ್ಥಿಯಾಗಿ ಕುಲಪ್ಪಾ ಚವ್ಹಾಣ ಒಂದು, ಭಾರತೀಯ ಜನ ಸಾಮ್ರಾಟ್ ಪಕ್ಷದ ಆಭ್ಯರ್ಥಿಯಾಗಿ ತಾರಾಬಾಯಿ ಭೋವಿ ಒಂದು, ಪಕ್ಷೇತರ ಅಭ್ಯರ್ಥಿಯಾಗಿ ಸೋಮಶೇಖರ ಭಾವಿಕಟ್ಟಿ ಒಂದು, ನ್ಯಾಷನಲ್ ಲೋಕತಂತ್ರ ಪಕ್ಷದ ಅಭ್ಯರ್ಥಿಯಾಗಿ ರಾಜು ಪವಾರ್ ಅವರು ಒಂದು, ನಕ್ಕಿ ಭಾರತೀಯ ಏಕತಾ ಪಕ್ಷದ ಅಭ್ಯರ್ಥಿಯಾಗಿ ರಾಮಾಜಿ ಯಮನಪ್ಪ ಹರಿಜನ ಉರ್ಫ ಬುಧ್ಧಪ್ರಿಯ ಒಂದು, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಕಲ್ಲಪ್ಪ ತೊರವಿ ಒಂದು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸಂಗಪ್ಪ ಚಂದು ಲಮಾಣಿ ಒಂದು ನಾಮಪತ್ರ ಸಲ್ಲಿಸುವ ಮೂಲಕ ಕೊನೆಯ ದಿನದಂದು ಹತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ.
ಏಪ್ರಿಲ್ ೧೨ ರಿಂದ ೧೯ ವರೆಗೆ ನಾಮಪತ್ರ ಸ್ವೀಕಾರ ದಿನದಿಂದ ಕೊನೆಯ ದಿನವರೆಗೆ ೨೧ ಅಭ್ಯರ್ಥಿಗಳಿಂದ ೩೫ ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.
Subscribe to Updates
Get the latest creative news from FooBar about art, design and business.
Related Posts
Add A Comment

