ಸಿಂದಗಿ: ಗ್ರಾಮೀಣ ಭಾಗದ ರೈತರ ಹಿತದೃಷ್ಟಿಯಿಂದ ಈ ಐಪಿ ಸೆಟ್ ಲೈನ್ ಪ್ರಾರಂಭ ಮಾಡಲಾಗಿದೆ ಎಂದು ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಚಂದ್ರಕಾಂತ ನಾಯಕ ಹೇಳಿದರು.
ಪಟ್ಟಣದ ಸಿಂದಗಿ ಉಪವಿಭಾಗ ೧೧೦ಕೆವಿ ಕೇಂದ್ರದಲ್ಲಿ ನೂತನ ಬೆನಕೊಟಗಿ ಐಪಿ ಲೈನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದೇ ಪಾಳಿಯಲ್ಲಿ ಎರಡು ಐಪಿ ಲೈನ್ ನೀಡುವ ಪರಿಸ್ಥಿತಿ ಇದ್ದುದ್ದರಿಂದ ನಮ್ಮ ಲೈನ್‌ಮ್ಯಾನ್‌ಗಳಿಗೆ ದಿನನಿತ್ಯ ಕಷ್ಟಪಡುತ್ತಿದ್ದರು. ಹಾಗಾಗಿ ಅತೀ ಹೆಚ್ಚು ಹೊರೆ ಇರುವ ಲೈನ್‌ಗಳನ್ನು ವಿಂಗಡಣೆ ಮಾಡಿ ಸಮರ್ಪಕ ವಿದ್ಯುತ್ ನೀಡುವ ನಿಟ್ಟಿನಲ್ಲಿ ಹೊಸದಾಗಿ ಲೈನ್ ಪ್ರಾರಂಭ ಮಾಡಿದ್ದೇವೆ.
ಈ ವೇಳೆ ನೋಡಲ್ ಅಧಿಕಾರಿ ಪಿ.ಎಮ್.ಬಡಿಗೇರ, ಸಹಾಯಕ ಇಂಜಿನಿಯರ್ ಡಿ.ಎಂ. ಮೋಲಿಮನಿ, ಎಸ್.ಎನ್.ಗೌಡರ್, ಆಲಮೇ¯೨ ಶಾಖಾಧಿಕಾರಿ ಹೆಚ್.ಎಮ್.ಮುಲ್ಲಾ, ಸಿಂದಗಿ ಗ್ರಾಮೀಣ ಶಾಖೆಯ ಮೇಲ್ವಿಚಾರಕ ಜಿ.ಬಿ.ಪಾಟೀಲ್, ಹೈದರ್, ಎಮ್.ಡಿ.ಪೂಜಾರಿ, ರಾಜು ಸೇರಿದಂತೆ, ಇತರ ವಿಭಾಗದ ಅಧಿಕಾರಿಗಳು, ಲೈನ್‌ಮ್ಯಾನ್‌ಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

