Author: editor.udayarashmi@gmail.com

ಸಿಎಂ ಸಿದ್ದರಾಮಯ್ಯ ಜತೆ ಸಚಿವ ಎಂ.ಬಿ.ಪಾಟೀಲ ನೇತೃತ್ವದ ನಿಯೋಗದ ಸಭೆ ಬೆಂಗಳೂರು: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ೧೦೦ ಕೋಟಿ ರೂ. ಬಡ್ಡಿರಹಿತ ಸಾಲ ನೀಡುವಂತೆ ಮತ್ತು ೫೦ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸುವಂತೆ ಕೋರಿ, ಕಾರ್ಖಾನೆಯ ಆಡಳಿತ ಮಂಡಳಿಯು ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ತಿಳಿಸಿದ್ದಾರೆ.ಕಾರ್ಖಾನೆಯ ಉನ್ನತ ಮಟ್ಟದ ನಿಯೋಗವು ತಮ್ಮ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಅವರು ಈ ಮಾಹಿತಿ ನೀಡಿದ್ದಾರೆ.ಬಬಲೇಶ್ವರ ತಾಲ್ಲೂಕಿನ ಕೃಷ್ಣಾ ನಗರದಲ್ಲಿರುವ ಈ ಕಾರ್ಖಾನೆಯು ಸಹಕಾರಿ ವಲಯದಡಿ ಇದ್ದು, ಸದ್ಯಕ್ಕೆ ಪ್ರತೀದಿನ ೬,೦೦೦ ಟನ್ ಕಬ್ಬು ಅರೆಯಲಾಗುತ್ತಿದೆ. ಇದನ್ನು ೧೦ ಸಾವಿರ ಟನ್ ಮಟ್ಟಕ್ಕೆ ಏರಿಸಲು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ, ಸರಕಾರದ ನೆರವು…

Read More

ಸಿಂದಗಿ: ತಾಲೂಕಿನ ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಲ್ಲಿ ಕಾರ್ಯ ಹಮ್ಮಿಕೊಳ್ಳಲಾಗಿದೆ. ಕಾರಣ ಫೆ.೧ರಂದು ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಿಂದ ಸರಬರಾಜಾಗುವ ೧೧ಕೆವಿ ಯರಗಲ್ ನಿರಂತರ ಜ್ಯೋತಿ ಮಾರ್ಗದ ಎಲ್ಲ ಗ್ರಾಮಗಳಿಗೆ ಬೆಳಿಗ್ಗೆ ೧೦:೩೦-೨:೩೦ರ ವರೆಗೆ ಹಾಗೂ ೩೩ಕೆವಿ ವಿದ್ಯುತ್ ವಿತರಣಾ ಕೇಂದ್ರ ಗೋಲಗೇರಿ ಮತ್ತು ಕಲಕೇರಿಯಿಂದ ಸರಬರಾಜಾಗುವ ಎಲ್ಲ ೧೧ಕೆವಿ ಮಾರ್ಗಗಳಿಗೆ ಮದ್ಯಾಹ್ನ ೨:೩೦-೬:೩೦ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ ಭಾದಿತರಾಗುವ ಗ್ರಾಮಗಳ ಗ್ರಾಹಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಟಾನಗೊಂಡ ಗೋಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಗೋಕಟ್ಟೆ ನಿರ್ಮಾಣದ ಅನುದಾನ ಬಳಕೆ, ಪ್ರಗತಿ ಹಾಗೂ ಸಾರ್ವಜನಿಕ ಉಪಯೋಗ ಕುರಿತು ಮಾಹಿತಿ ಪಡೆದ ಅವರು, ಕೆರೆ ಅಂಗಳದಲ್ಲಿ ಸಂಗ್ರಹವಾಗುವ ಮಳೆ ನೀರಿನಿಂದ ಸುತ್ತಲಿನ ರೈತರಿಗೆ, ಜಾನುವಾರು ಹಾಗೂ ಪಶು-ಪಕ್ಷಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದರು.ಕಾಮಗಾರಿ ಅನುಷ್ಟಾನ ಮಾಡಲು ಆಯ್ಕೆ ಮಾಡಿದ ಸ್ಥಳ ಹಾಗೂ ಕಾಮಗಾರಿ ಗುಣಮಟ್ಟ ಮತ್ತು ಗೋಕಟ್ಟೆ ಸುತ್ತಲಿನ ಹಸೀಕರಣದ ಕುರಿತು ಸಿಇಒ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಗೋಕಟ್ಟೆಗಳ ನಿರ್ಮಾಣ ಕಾಮಗಾರಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳಬೇಕು. ಜಲಸಂರಕ್ಷಣೆಗೆ ಆದ್ಯತೆ ನೀಡಿ ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳನ್ನು ಅಳವಡಿಸಿ ಎಂದು ಕೆಲವು ತಾಂತ್ರಿಕ ಸಲಹೆಗಳನ್ನು ನೀಡಿದರು.ಈ ವೇಳೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ ಹನಗಂಡಿ, ತಾ.ಪಂ. ಸಹಾಯಕ ನಿರ್ದೆಶಕರು (ಪಂ.ರಾ.)…

Read More

ವಿಜಯಪುರ: ನಗರದ ವಾರ್ಡ್ ನಂ.೨೪ರ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ ಹಾಗೂ ಧನ್ವಂತರಿ ಆಸ್ಪತ್ರೆಯ ಮುಂಭಾಗದಲ್ಲಿ ಉದ್ಯಾನವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೇಯರ್ ಮೆಹಜಬೀನ್ ಹೊರ್ತಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಮೆಹಜಬೀನ್ ಹೊರ್ತಿ, ವಿಜಯಪುರ ನಗರದ ಸರ್ವತೋಮುಖ ಪ್ರಗತಿಯೇ ನನ್ನ ಗುರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ನಗರದ ಅಭಿವೃದ್ಧಿಗೆ ಸದಾ ಮಾರ್ಗದರ್ಶನ ತೋರುತ್ತಿದ್ದು, ಅವರ ಹಾಗೂ ಎಲ್ಲ ಸದಸ್ಯರ ಸಲಹೆ-ಸೂಚನೆ ಅನ್ವಯ ಸುಂದರ ನಗರ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.ಪಾಲಿಕೆ ಸದಸ್ಯೆ ವಿಮಲಾ ರಫೀಕ್‌ಅಹ್ಮದ್ ಖಾಣೆ ಮಾತನಾಡಿ, ವಿಜಯಪುರ ವಾರ್ಡ್ ನಂ.೨೪ ಅನೇಕ ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿತ್ತು, ಈಗ ಈ ವಾರ್ಡ್ನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ, ಸಚಿವ ಡಾ.ಎಂ.ಬಿ. ಪಾಟೀಲರ ಅಭಿವೃದ್ಧಿಪರ ದೃಷ್ಟಿಕೋನದಿಂದಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದೇನೆ, ಮೊನ್ನೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಸಹ ಬಡಾವಣೆ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು, ಎಲ್ಲ ಸಮಸ್ಯೆಗಳಿಗೂ ಪರಿಹಾರ…

Read More

ಸಿಂದಗಿಯ ಕಲಬುರ್ಗಿ ಫೌಂಡೇಶನ್ನಿಂದ ‘ವಚನ ಹಾಗೂ ‘ಸಾಹಿತ್ಯಶ್ರೀ’ ಪ್ರಶಸ್ತಿ ಘೋಷಣೆ ಸಿಂದಗಿ: ಕಲಬುರ್ಗಿ ಫೌಂಡೇಶನ್ ಸಮಾಜೋಧ್ದಾರ್ಮಿಕ, ಶೈಕ್ಷಣಿಕ, ವೈಚಾರಿಕ ಚಟುವಟಿಕೆಗಳನ್ನು ಮಾಡುತ್ತಾ, ಶರಣರ ತತ್ವಸಿದ್ಧಾಂತಗಳನ್ನು ಜನಸಾಮಾನ್ಯರಲ್ಲಿ ಪ್ರಸಾರ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಗ್ರಾಮೀಣ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾದ ಗ್ರಂಥ, ನಿರ್ಗತಿಕರ ಕಷ್ಟಗಳಿಗೆ ಸ್ಪಂದಿಸುತ್ತ ತನ್ನ ಮಿತಿಯಲ್ಲಿ ಕೆಲಸ ಮಾಡುತ್ತಾ ಬಂದಿದೆ. ಇದರ ಜೊತೆಗೆ ಫೌಂಡೇಶನ್ ಕಳೆದ ವರ್ಷದಿಂದ ಮಹಿಳಾ ಸಾಧಕರಿಗೆ ‘ವಚನ ಹಾಗೂ ಪುರುಷ ಸಾಧಕರಿಗೆ ‘ಸಾಹಿತ್ಯಶ್ರೀ ಎನ್ನುವ ಪುರಸ್ಕಾರವನ್ನು ನೀಡಲು ಪ್ರಾರಂಭಿಸಿದೆ ಎಂದು ಕಲಬುರಗಿ ಫೌಂಡೇಶನ್ ಅಧ್ಯಕ್ಷ ಶಿವಾನಂದ ಕಲಬುರಗಿ ಹೇಳಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ಸಾಲಿಗೆ ವಿಜಯಪುರದ ಡಾ.ಎಂ.ಎಸ್.ಮದಭಾವಿ ‘ಸಾಹಿತ್ಯಶ್ರೀ ಹಾಗೂ ಕಲಬುರ್ಗಿಯ ಡಾ.ಮೀನಾಕ್ಷಿ ಬಾಳಿ ಮತ್ತು ಬಾಗಲಕೋಟೆಯ ಶರಣೆ ಗೌರಮ್ಮ ನಾಶಿ ಅವರಿಗೆ ‘ವಚನ ಪ್ರಶಸ್ತಿಗೆ ಭಾಜನಾಗಿದ್ದಾರೆ. ಪುರಸ್ಕೃತರಿಗೆ ತಲಾ ೧೦ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಫಲಪುಷ್ಪ ನೀಡಿ ಮಾ.೩ ರಂದು ವಿಜಯಪುರದಲ್ಲಿ ಹಮ್ಮಿಕೊಂಡು ಗೌರವಿಸಲಾಗುವುದು…

Read More

ಸಿಂದಗಿ: ವಿಶ್ವ ವಿಖ್ಯಾತ ಹಂಪಿ ಉತ್ಸವ ಕವಿಗೋಷ್ಠಿಗೆ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಕೆ. ಆಲಗೂರ ಆಯ್ಕೆಯಾಗಿದ್ದಾರೆ.ಫೆ.೨ರಂದು ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ನಡೆಯಲಿರುವ ಕವಿಗೋಷ್ಠಿ ಕಾರ್ಯಕ್ರಮವನ್ನು ಡಾ.ನಿಷ್ಠಿ ರುದ್ರಪ್ಪ ಉದ್ಘಾಟನೆ ಮಾಡಲಿದ್ದಾರೆ. ವೇದಿಕೆಯ ಮೇಲೆ ಡಾ.ಅಮರೇಶ ನುಗಡೋಣಿ, ಶರಣೆಗೌಡ ಪೊಲೀಸ್ ಪಾಟೀಲ್, ಡಾ.ದಯಾನಂದ ಕಿನ್ನಾಳ ಇವರ ಉಪಸ್ಥಿತಿ ಇರಲಿದೆ. ಮೌಲಾಲಿ ಆಯ್ಕೆಗೆ ಮಕ್ಕಳ ಸಾಹಿತಿ ಫ.ಗುಸಿದ್ಧಾಪುರ, ಹ.ಮಾ.ಪೂಜಾರ, ಡಿವೈಎಸ್ಪಿ ಡಾ.ವಿನೋದ್ ಮುಕ್ತೆದಾರ, ಇನ್ಸ್ಪೆಕ್ಟರ್, ಕೆ.ವಿಶ್ವನಾಥ, ಭೈರ್, ಜ್ಯೋತಿರ್ಲಿಂಗ ಹೊನ್ನಕಟ್ಟಿ, ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಸಿದ್ದಲಿಂಗ ಚೌಧರಿ, ಸಿದ್ಧಲಿಂಗ ಕಿಣಗಿ ಶುಭ ಕೋರಿದ್ದಾರೆ.

Read More

ಸಿಂದಗಿ: ಪುಸ್ತಕದ ವಿದ್ಯೆ ಮಸ್ತಕಕ್ಕೆ ಬಂದರೆ ಅವನು ವಿದ್ಯಾವಂತ. ಆದರೆ ಮಸ್ತಕಕ್ಕೆ ಬಂದ ವಿದ್ಯೆ ಸಿದ್ಧಿ ಮಾಡಿಕೊಂಡರೆ ಮಾತ್ರ ಅವನು ಜ್ಞಾನಿ ಎಂದು ರಾಮನರಸಿಂಹ ಸಂಸ್ಕೃತ ವಿದ್ಯಾಲಯದ ಕುಲಪತಿ ನರಹರಿ ಆಚಾರ್ಯ ಮುತ್ತಗಿ ಹೇಳಿದರು.ಪಟ್ಟಣದ ಆರ್.ಡಿ. ಪಾಟೀಲ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿ ಅವರು, ವಾರ್ಷಿಕ ಸ್ನೇಹ ಸಮ್ಮೇಳನ ಎಂಬುದು ಕೇವಲ ಕುಣಿತಕ್ಕೆ ಚೀರಾಟಕ್ಕೆ ವೇದಿಕೆಯಾಗದೆ ಸಮ್ಮಿಲನಕ್ಕೆ ವೇದಿಕೆಯಾಗಬೇಕು. ನಮ್ಮಲ್ಲಿ ಕೆಲವು ವಿಷಯಗಳು ಮೀಲನವಾಗಿ ಬದಲಾವಣೆಯಾದಾಗ ಮಾತ್ರ ವಾರ್ಷಿಕ ಸ್ನೇಹ ಸಮ್ಮೇಳನವು ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅನೇಕ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು. ಇಂತಹ ಅನೇಕ ವಿಷಯಗಳು ವಿಲೀನವಾಗಬೇಕು. ಆದರೆ ಇಂದಿನ ಸಮಾಜದಲ್ಲಿ ನಾವು ಕೇವಲ ವಿದ್ಯಾವಂತರಾಗೋದಕ್ಕೆ ಮಾತ್ರ ಬದುಕುತ್ತಿದ್ದೇವೆ ವಿನಃ ಜ್ಞಾನದ ಕಡೆಗೆ ಹೋಗುತ್ತಿಲ್ಲ. ಆದಕಾರಣ ನಾವು ಜ್ಞಾನಿಗಳಾಗಬೇಕೇ ಹೊರತು ಕೇವಲ ವಿದ್ಯಾವಂತರಾಗಬಾರದು. ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಸಾಗಬೇಕು ಎಂದರುಈ ವೇಳೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ…

Read More

ದ.ರಾ.ಬೇಂದ್ರೆ ಹಾಗೂ ಡಾ.ಚಂದ್ರಶೇಖರ ಕಂಬಾರ ಜನ್ಮದಿನಾಚರಣೆ | ಬೇಂದ್ರೆ ಹಾಗೂ ಕಂಬಾರರ ಕಾವ್ಯಗಳ ಅನುಸಂಧಾನ ಸಿಂದಗಿ: ಕಂಬಾರರ ಸಾಹಿತ್ಯ ಜನಪದದ ಮೂಲದಿಂದ ಹುಟ್ಟಿದ್ದು ಅವರ ಇಡಿ ಸಾಹಿತ್ಯ ಜನಪದೀಯ ತಳಹದಿಯ ಮೇಲೆ ನಿಂತಿದೆ ಎಂದು ಶ್ರೀ ಪದ್ಮರಾಜ ಮಹಿಳಾ ಪಪೂ ಕಾಲೇಜಿನ ಉಪನ್ಯಾಸಕಿ ಹೇಮಾ ಹಿರೇಮಠ ಹೇಳಿದರು.ಪಟ್ಟಣದ ಸಿಎಂ ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವರಕವಿ ದ.ರಾ.ಬೇಂದ್ರೆ ಹಾಗೂ ಡಾ.ಚಂದ್ರಶೇಖರ ಕಂಬಾರ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಬೇಂದ್ರೆ ಹಾಗೂ ಕಂಬಾರರ ಕಾವ್ಯಗಳ ಅನುಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದೆ. ಕಂಬಾರರ ಕಾವ್ಯಗಳ ಮೂಲಕ ಕನ್ನಡವನ್ನು ಕಟ್ಟುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.ಈ ವೇಳೆ ಡಾ.ನಾಗರಾಜ ಮುರುಗೋಡ ಮಾತನಾಡಿ, ದ.ರಾ.ಬೇಂದ್ರೆಯವರ ಬದುಕಿನ ಪಯಣ ಸಾಕಷ್ಟು ನೋವಿನಿಂದ ಕೂಡಿದ್ದು, ಅವರ ನೋವು ನಲಿವಿನ ಜೀವನವನ್ನು ತಾವೆಲ್ಲರೂ ಅವರ ಸಾಹಿತ್ಯದ ಮುಖಾಂತರ ತಿಳಿದುಕೊಳ್ಳಬಹುದು. ಬೇಂದ್ರೆ ಅವರ ಸರಳ ಬದುಕು…

Read More

ಬಸವನಬಾಗೇವಾಡಿ: ಪಟ್ಟಣದ ನೂತನ ಪುರಸಭೆಯ ಕಾರ್ಯಾಲಯದ ಸಭಾಂಗಣದಲ್ಲಿ ಫೆ. ೧ ರಂದು ಬೆಳಗ್ಗೆ ೧೧ ಗಂಟೆಗೆ ಫೆ.೧೦ ರಿಂದ ೧೪ ರವರೆಗೆ ಬಸವನಬಾಗೇವಾಡಿ ತಾಲೂಕಿನಲ್ಲಿ ಜರುಗಲಿರುವ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧ ಚಿತ್ರ ಮೆರವಣಿಗೆಗೆ ಸಂಬಂಧಿಸಿದಂತೆ ತಯಾರಿ ಕುರಿತು ಚರ್ಚೆ ಮಾಡಲು ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಪ್ರಮುಖರು ಹಾಜರಾಗಿ ಸಲಹೆ-ಸೂಚನೆ ನೀಡಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಈ ಬಾರಿ ಒಣ ಮೆಣಸಿನಕಾಯಿ ಬೆಳೆದ ರೈತರ ಪಾಲಿಗೆ ಒಣ ಮೆಣಸಿನಕಾಯಿ ಅತಿ ಖಾರವಾಗಿ ಪರಿಣಮಿಸಿದೆ. ಮಳೆ ಮತ್ತು ನೀರಿನ ಕೊರತೆ ರೋಗ ಭಾದೆಯಿಂದ ಇಳುವರಿಯು ಈ ವರ್ಷ ಅತಿ ಕಡಿಮೆ ಬಂದಿದೆ. ಈ ವರ್ಷ ಏಕಾ ಏಕಿ ಮೆಣಸಿನಕಾಯಿ ಬೆಲೆ ಪಾತಾಳಕ್ಕೆ ಹೋಗಿದ್ದರಿಂದ ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಿ ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಮಧ್ಯಸ್ತಿಕೆ ವಹಿಸಿ ಬೆಂಬಲ ಬೆಲೆ ಘೋಷಿಸಿ ರೈತರ ಹಿತ ಕಾಯಬೇಕು ಎಂದು ತಾಲೂಕಿನ ಉಕ್ಕಲಿ ಗ್ರಾಮದ ರೈತ ರಾಹುಲ ಕಲಗೊಂಡ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಈ ಬಾರಿ ರೈತರು ಹೆಚ್ಚಾಗಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ದಾಖಲೆ ಮಟ್ಟದ ಬೆಲೆ ಕುಸಿತ ಕಂಡಿದ್ದರಿಂದ ಹಲವಾರು ರೈತರು ಮೆಣಸಿನಕಾಯಿಯನ್ನು ಹೊಲದಲ್ಲಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಒಂದಡೇ ಬರಗಾಲ ಮತ್ತೊಂದು ಕಡೆ ಬೆಳೆಗಳ ಬೆಲೆ ಕುಸಿತವಾಗಿದೆ. ಸರ್ಕಾರ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಿ ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ನಿಗದಿ…

Read More