Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೇಂದ್ರ ಜಲ ಶಕ್ತಿ ತಂಡದಿಂದ ಮಹಾತ್ಮಗಾಂಧಿ ನರೇಗಾ-ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ವಿಜಯಪುರ: ಅಂತರ್ಜಲ ಮಟ್ಟ ಹೆಚ್ಚಿಸುವ ಕಾಮಗಾರಿಗಳಾದ ಮಳೆನೀರು ಕೊಯ್ಲು ಘಟಕ, ಬೋರ್ ವೆಲ್ ಮರುಪೂರಣ ಘಟಕ ಹಾಗೂ ವಿವಿಧ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಹಾಗೂ ನಿಯಮಾನುಸಾರ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಕೇಂದ್ರ ಜಲ ಶಕ್ತಿ ತಂಡದ ಅಧಿಕಾರಿಗಳು ಸೂಚಿಸಿದರು.ಗಣಿ ಸಚಿವಾಲಯದ ನಿರ್ದೇಶಕರು ಹಾಗೂ ಕೇಂದ್ರ ಜಲ ಶಕ್ತಿ ತಂಡದ ಕೇಂದ್ರ ನೋಡಲ್ ಅಧಿಕಾರಿಗಳಾದ ವಿವೇಕ ಕುಮಾರ ಶರ್ಮಾ ಮತ್ತು ವಿಜ್ಞಾನಿಗಳು, ಜಲವಿಜ್ಞಾನ, ಕೇಂದ್ರ ಅಂತರ್ಜಲ ಮಂಡಳಿ ಆಯುಷ್ ಕೇಶರ್ವಾಣಿಯನ್ನೊಳಗೊಂಡ ತಂಡದಿಂದ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲಾಯಿತು.ಜಲಾನಯನ ಕಾಮಗಾರಿಗಳನ್ನು ಜಿಯೋ ಟ್ಯಾಗ್ ಮಾಡಬೇಕು. ಜಲ ಶಕ್ತಿ ಅಭಿಯಾನದ ಅಡಿಯಲ್ಲಿ(JSA) ಅಡಿ ಅನುಷ್ಠಾನಗೊಳಿಸುವ ಕಾಮಗಾರಿಗಳನ್ನು ಹಾಗೂ ಮುಕ್ತಾಯಗೊಂಡ ಅಮೃತ ಸರೋವರ ಕಾಮಗಾರಿಗಳನ್ನು ಕಡ್ಡಾಯವಾಗಿ ಜಲ ಶಕ್ತಿ ಅಭಿಯಾನ(JSA)ದ ಆಪ್ ನಲ್ಲಿ ಜಿಯೋಟ್ಯಾಗ್ ಮಾಡಬೇಕು. ಗ್ರಾಮ…
ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿದ ನೋಡಲ್ ಅಧಿಕಾರಿ ವಿವೇಕ ಕುಮಾರ ಶರ್ಮಾ ಸೂಚನೆ ವಿಜಯಪುರ: ಗಣಿ ಸಚಿವಾಲಯದ ನಿರ್ದೇಶಕರು ಹಾಗೂ ಕೇಂದ್ರ ಜಲ ಶಕ್ತಿ ತಂಡದ ಕೇಂದ್ರ ನೋಡಲ್ ಅಧಿಕಾರಿ ವಿವೇಕ ಕುಮಾರ ಶರ್ಮಾ ಮತ್ತು ವಿಜ್ಞಾನಿಗಳು, ಜಲವಿಜ್ಞಾನ, ಕೇಂದ್ರ ಅಂತರ್ಜಲ ಮಂಡಳಿ ಆಯುಷ್ ಕೇಶರ್ವಾಣಿಯನ್ನೊಳಗೊಂಡ ತಂಡ ಫೆ.೬ರಂದು ಜಿಲ್ಲೆಯ ವಿಜಯಪುರ ತಾಲೂಕಿನ ಹೆಗಡಿಹಾಳ, ಐನಾಪುರ ಹಾಗೂ ಹಡಗಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ಪರಿಶೀಲನೆ ನಡೆಸಿತು.ಹೆಗಡಿಹಾಳ ಗ್ರಾಮ ಅಮೃತ ಸರೋವರ, ಬೋರ್ ವೆಲ್ ಮರು ಪೂರಣ ಘಟಕ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ನಂತರ ಅಮೃತ ಸರೋವರ ಒಳಹರಿವು ಹಾಗೂ ಹೊರಹರಿವುಗಳ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಐನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿ ಇರುವ ಬೋರ್ ವೆಲ್ ಮರು ಪೂರಣ ಘಟಕ ಮತ್ತು ಸರ್ಕಾರಿ ಶಾಲಾ ಕಟ್ಟಡದ ಮಳೆ ನೀರು ಕೊಯ್ಲು ಘಟಕ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಹಡಗಲಿ…
ವಿಜಯಪುರ: ಇಂಡಿ ತಾಲೂಕಿನ ಆಳೂರು, ಇಂಗಳಗಿ, ಖೇಡಗಿ, ಗೊಳಸಾರ, ಮಿರಗಿ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರವನ್ನು ಫೆ.೬ ರಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು,ಸಾರ್ವಜನಿಕರು ಬಹು ವಿಜೃಂಭಣೆಯಿಂದ ಅದ್ಧೂರಿಯಾಗಿ ಬರಮಾಡಿಕೊಂಡರು.ಗೊಂಬೆ ಕುಣಿತ, ಡೊಳ್ಳು ಕುಣಿತ ಕಲಾ ತಂಡ ಮೆರುಗು ಕಳೆ ಕಟ್ಟಿತ್ತು.ಈ ಸಂದರ್ಭದಲ್ಲಿ ಸಂವಿಧಾನದ ಆಶೋತ್ತರಗಳ ಕುರಿತಾಗಿ ಉಪನ್ಯಾಸ ಏರ್ಪಡಿಸಲಾಗಿತ್ತು. ಗ್ರಾಮಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಬಿ.ಜೆ.ಇಂಡಿ, ಪಿಡಿಒ ಹಾಗೂ ನೋಡಲ್ ಅಧಿಕಾರಿಗಳು, ಶಿಕ್ಷಕರು, ಸಮಸ್ತ ಗ್ರಾಮಸ್ಥರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ತಾಂಬಾ: ಕನ್ನಡ ಜಾನಪದ ಸಾಹಿತ್ಯ ಕುರಿತು ಉಪನ್ಯಾಸವನ್ನು ಮಾಡುವ ಅದೃಷ್ಟ ನನಗೆ ದೊರೆತಿರುವದು ಅತ್ಯಂತ ಸಂತಸ ಉಂಟಾಗಿದೆ. ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡುವ ಅದೃಷ್ಟ ನನಗೆ ಒದಗಿಬಂದಿದೆ, ಉತ್ತರ ಕರ್ನಾಟಕ ಜಾನಪದದ ತವರೂರು ನಮ್ಮೆಲ್ಲ ಹಿರಿಯರು ಪೋಷಿಸಿ ಬೆಳೆಸಿದ ಸಾಹಿತ್ಯವನ್ನು ನಾವೆಲ್ಲರೂ ಉಳಿಸಬೇಕಾಗಿದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನ ಮಾಡುವುದರ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಇಂಡಿ ತಾಲ್ಲೂಕಿನ ಹರಳಯ್ಯನ ಹಟ್ಟಿ ಗ್ರಾಮದ ಪೋಲಿಸ ಅಧಿಕಾರಿ ಜ್ಯೋರ್ತಿಲಿಂಗ ಹೊನಕಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡರು.ಒಮನ್ ದೇಶದ ಮಸ್ಕತ ಮಹಾನಗರದಲ್ಲಿ ಪತ್ನಿ ಹಾಗು ಎರಡು ಮಕ್ಕಳೊಂದಿಗೆ ಜಾನಪದ ಸಾಹಿತ್ಯದಲ್ಲಿ ಮಹಿಳೆ ಎಂಬ ವಿಷಯ ಕುರಿತು ಉಪನ್ಯಾಸ ಹಾಗು ಸಂಗೀತ ಸೇವೆ ಸಲ್ಲಿಸಿದ ಹೊನಕಟ್ಟಿ ಅವರಿಗೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸನ್ಮಾನ ಮಾಡಲಾಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಜ್ಯೋತಿ೯ಲಿಂಗ ಹೊನಕಟ್ಟಿ ಪೋಲಿಸ ಇಲಾಖೆಯಲ್ಲಿದ್ದು ಕನ್ನಡ ಸೇವೆ ರಾಜ್ಯ ಹಾಗು ವಿದೇಶದಲ್ಲೂ ಮಾಡುತ್ತೀರುವದು ಅತ್ಯಂತ…
ವಿಜಯಪುರ: ಜಿಲ್ಲೆಯ ಗ್ರಂಥಾಲಯ ಮೇಲ್ವಿಚಾರಕ ಸಂಘದ ಅಧ್ಯಕ್ಷರಾಗಿ ಶಿವಾನಂದ ದೇಸಾಯಿ, ಪ್ರಧಾನಕಾರ್ಯದರ್ಶಿಯಾಗಿ ಶಿವಶಂಕರ ಉಕುಮನಾಳ ಮರು ಆಯ್ಕೆ ಮಾಡಲಾಯಿತು.ವಿಜಯಪುರದ ಗಗನ ಮಹಲ್ ನಲ್ಲಿ ನಡೆದ ಜಿಲ್ಲೆಯ ಎಲ್ಲಾ ಮೇಲ್ವಿಚಾರಕರ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಮೇಲ್ವಿಚಾರಕರು ಭಾಗವಹಿಸಿ ಈಗಿರುವ ಅಧ್ಯಕ್ಷ, ಪ್ರಧಾನಕಾರ್ಯದರ್ಶಿ ಆಯ್ಕೆ ಮಾಡಿ ಠರಾವು ಕೈಗೊಳ್ಳಲಾಯಿತು.ನೂತನ ಅಧ್ಯಕ್ಷ ಶಿವಾನಂದ ದೇಸಾಯಿ ಮಾತನಾಡಿ ಎಲ್ಲ ಮರುಆಯ್ಕೆ ಮಾಡಿದ ಎಲ್ಲ ಮೇಲ್ವಿಚಾರಕರಿಗೆ ಧನ್ಯವಾದಗಳು, ನನ್ನ ಜವಾಬ್ದಾರಿ ಹೆಚ್ಚಾಗಿದೆ ನೀವು ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ನಾನು ಮತ್ತು ಕಾರ್ಯದರ್ಶಿ ಸೇರಿಕೊಂಡು ವಿಜಯಪುರ ಜಿಲ್ಲೆಯ ಸಂಘವನ್ನು ಮಾದರಿ ಸಂಘವನ್ನಾಗಿ ಮಾಡುವುದರ ಜೊತೆಗೆ ಸಂಘದ ಕಛೇರಿಗಾಗಿ ಸ್ಥಳಿಯ ಶಾಸಕರನ್ನು ಭೇಟಿಯಾಗಿ ಜಾಗವನ್ನು ಪಡೆಯುವದು, ಕೋ ಆಪರೇಟಿವ್ ಬ್ಯಾಂಕ್ ತೆರೆಯುವ ಉದ್ದೇಶ ಹೊಂದಲಾಗಿದೆ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.ಹಿರಿಯ ಮೇಲ್ವಿಚಾರಕ ಮಹಾಂತಗೌಡ ಕಾಶಿನಕುಂಟಿ ಮಾತನಾಡಿದರು.ಸಭೆಯಲ್ಲಿ ಪಿ.ಸಿ.ಬಿರಾದಾರ, ಮಹಾಂತಗೌಡ ಕಾಶಿನಕುಂಟಿ, ಶರಣಗೌಡ ಕೋಳೂರ, ಸಿ.ಎ.ಕುಲಕರ್ಣಿ, ಬಸವನ ಬಾಗೇವಾಡಿ ತಾಲೂಕು ಅಧ್ಯಕ್ಷ ಭೀಮಸಿಂಗ್ ರಾಠೋಡ, ಕಾರ್ಯದರ್ಶಿ ವಿಠ್ಠಲ ಗೂಗಿಹಾಳ,…
ವಿಜಯಪುರ: ತ್ಯಾಗಮೂರ್ತಿ ರಮಾಬಾಯಿ ಅಂಬೇಡ್ಕರ್ ಅವರ ೧೨೬ನೇ ಜನ್ಮದಿನಾಚರಣೆ ಸಮಾರಂಭವನ್ನು ನಗರದ ಜಲನಗರದಲ್ಲಿರುವ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಬುಧವಾರ ದಿ.೭ ರಂದು ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.ದಿವ್ಯಸಾನಿಧ್ಯವನ್ನು ಕಲಬುರಗಿ ಜೇತವನ ಬುದ್ಧವಿಹಾರದ ಪೂಜ್ಯ ಬಿಕ್ಖುಣಿ ಡಾ.ಸುಮನಾ ಅವರು ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ.ಕೆ. ತುಳಸಿಮಾಲಾ ನೆರವೇರಿಸಲಿದ್ದಾರೆ.ಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಯ ಕುರಿತು ತಾಳಿಕೋಟೆಯ ಎಸ್.ಕೆ. ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಜಾತಾ ಚಲವಾದಿ ಅವರು ವಿಶೇಷ ಉಪನ್ಯಾಸವನ್ನು ನೀಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಬೌದ್ಧ ಉಪಾಸಕಿ ಸುಲೋಚನಾ ಚಲವಾದಿ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಬೌದ್ಧ ಉಪಾಸಕಿ ಆಶಾ ಯಡಹಳ್ಳಿ ಹಾಗೂ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ತತ್ವ ಜ್ಞಾನ ದಲ್ಲಿ ಎಂ.ಎ. ಪದವಿ ಪಡೆದ ಅನ್ನಪೂರ್ಣ ಬೆಳ್ಳೆನವರ ಭಾಗವಹಿಸಲಿದ್ದಾರೆ.ಕಾರಣ ಜಿಲ್ಲೆಯ ಎಲ್ಲ ಬೌದ್ಧ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಅನುಯಾಯಿಗಳು, ಪ್ರಗತಿಪರ ಚಿಂತಕರು, ಭಾರತೀಯ ಬೌದ್ಧ ಮಹಾಸಭಾ ಪದಾಧಿಕಾರಿಗಳು, ಬೌದ್ಧವಿಹಾರ…
ಚಿಮ್ಮಡ: ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಬಕವಿ-ಬನಹಟ್ಟಿ ಮೂರನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿಮ್ಮಡ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.ಚಿಮ್ಮಡ ಗ್ರಾಮದ ವಿರಕ್ತಮಠದಲ್ಲಿ ಸೋಮವಾರ ಸಂಜೆ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಸಮ್ಮೇಳನ ದಿನಾಂಕ ಪ್ರಕಟಿಸುವ ಕುರಿತು ತಿಳಿಸಲಾಯಿತು.ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮ್ಮೇಳನ ಹಮ್ಮಿಕೊಳ್ಳುವ ಬಗ್ಗೆ, ಅದರಸಿದ್ಧತೆಗಳು, ರೂಪುರೇಷೆಗಳು, ಸಂಪನ್ಮೂಲ ಕ್ರೋಢೀಕರಣದಬಗ್ಗೆ ಗ್ರಾಮದ ಹಿರಿಯರು ಹಾಗೂ ಪ್ರಮುಖರ ಸಭೆ ನಡೆಸಲಾಗುವುದು ಎಂದರು.ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಹಿರಿಯರಾದ ಆರ್.ವೈ.ಮುಗಳಖೋಡ, ಪ್ರಭು ಪಾಲಭಾವಿ, ಹಿರಿಯ ಸಾಹಿತಿ ಎಂ.ಎಸ್.ಬದಾಮಿ, ಕಸಾಪ ತಾಲ್ಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ಮಾತನಾಡಿದರು.ಪುಂಡಲೀಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಬಿ.ಎಸ್.ಪಾಟೀಲ, ರಾಮಣ್ಣ ಬಗನಾಳ,ಪ್ರಕಾಶ ಪಾಟೀಲ,ಪ್ರಭು ಮುಧೋಳ, ಮನೋಜ ಹಟ್ಟಿ, ಅವ್ವನಪ್ಪ ಮುಗಳಖೋಡ, ಜಿ.ಎಸ್.ವಡಗಾಂವಿ, ಮೃತ್ಯುಂಜಯರಾಮದುರ್ಗ, ಈರಣ್ಣಗಣಮುಖಿ, ಬಿ.ಎಂ.ಮಟ್ಟಿಕಲ್ಲಿ, ಜಿ.ಎಸ್.ಗೊಂಬಿ, ಶರತ್‌ಜಂಬಗಿ, ಮಲ್ಲು ತುಂಗಳ, ಇಲಾಹಿ ಜಮಖಂಡಿ, ಬಸವರಾಜ ಮೇಟಿ, ಗಂಗಾಧರ ಮೋಪಗಾರ ಉಪಸ್ಥಿತರಿದ್ದರು.
ಇಂಡಿ: ಶಿಕ್ಷಣ ಕುರಿತು ಮಹರ್ಷಿ ಅರವಿಂದರು ಮಂಡಿಸಿದ ವಿಚಾರಗಳು ಮಾನವ ಕಲ್ಯಾಣ, ಮಾನವ ವಿಕಾಸ ಪಥಕ್ಕೆ ಮಾರ್ಗದರ್ಶಿ. ಶಿಕ್ಷಣ ಕುರಿತು ಮಂಡಿಸಿದ ವಿಚಾರಗಳು ವರ್ತಮಾನದ ಗ್ರಹಿಕೆಯಿಂದಲೂ ಪರಿಪುಷ್ಟವಾದುದು ಎಂದು ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ ಹೇಳಿದರು.ತಾಲೂಕಿನ ಸಾಲೋಟಗಿ ಗ್ರಾಮದ ರಾಮಲಿಂಗೇಶ್ವರ ಪ್ರಾಂಗಣದಲ್ಲಿ ಶ್ರೀ ಅರವಿಂದೋ ಸಮಿತಿಯಿಂದ ವಾರ್ಷಿಕೋತ್ಸವ ೨೦೨೩ ನಡೆದ ಸಮಾರಂಭದಲ್ಲಿ ಮಾತನಾಡಿದರು.ಮಹರ್ಷಿ ಅರವಿಂದರ ಚಿಂತನೆಗಳ ಬೆಳಕಿನಲ್ಲಿ ಭಾರತೀಯ ಶಿಕ್ಷಣವನ್ನು ಕಟ್ಟಬೇಕಾಗಿದೆ ಎಂದರು.ಮಹಾನಂದಾ ಬಿರಾದಾರ ಮೀರಾ ಮಾತೆಯ ಕುರಿತು ಮಾತನಾಡಿ, ನಾವು ಮಾತೆಯವರ ಮಕ್ಕಳು, ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿರುವ ನಮಗೆ ಯಾವತ್ತೂ ನಮ್ಮ ಮಾತೆ ಮಕ್ಕಳ ಕೈ ಬಿಡುವದಿಲ್ಲ ಎಂದರು.ಸಂಶೋಧಕ ಡಿ.ಎನ್.ಅಕ್ಕಿಯವರು ಮಾತನಾಡಿ, ರಾಮಲಿಂಗೇಶ್ವರ ದೇವಸ್ಥಾನದ ಪುರಾತನತೆ ಮತ್ತು ಸಾಲೋಟಗಿಯಲ್ಲಿ ರಾಷ್ಟ್ರಕೂಟರ ಮೂರನೆ ಕೃಷ್ಣನ ಕಾಲಕ್ಕೆ ಇದ್ದ ವಿಶ್ವವಿದ್ಯಾಲಯದ ಕುರಿತು ಸಂಶೋಧನಾತ್ಮಕವಾಗಿ ಮಾತನಾಡಿದರು.ಪ್ರಾಸ್ತಾವಿಕವಾಗಿ ಸಾಹಿತಿ ಗೀತಯೋಗಿ ಮಾತನಾಡಿದರು.ಸಮಿತಿಯ ಅಧ್ಯಕ್ಷ ದುಂಡಪ್ಪ ಹ್ಯಾಳದ, ಸತೀಶ ವಾಲಿ,ವಿನೋದ ಗಾಣಿಗೇರ ಮಾತನಾಡಿದರು.ಸುಭಾಸಚಂದ್ರ ಗದ್ಯಾಳ, ಅಶೋಕ ಚನಗೊಂಡ, ಸೋಮನಾಥ ಶಿವೂರ, ಮಲ್ಲಪ್ಪ ಮಂಗೋಡ, ಗುರುಶಾಂತ ಪ್ರಧಾನಿ, ಶಿವಶಂಕರ ಇಂಗಳೆ,…
ಇಂಡಿ: ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎಸ್. ಲಾಳಸೇರಿ ಹೇಳಿದರು.ಅವರು ಪಟ್ಟಣದ ಗುರುಭವನದಲ್ಲಿ ಭಾರತ ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ಸ್ಕೌಟ್ಸ್ ಮತ್ತು ಕಬ್ ಮಾಸ್ಟರ್, ಗೈಡ್ ಕ್ಯಾಪ್ಟನ್ ಹಾಗೂ ಪ್ಲ್ಯಾಕ್ ಲೀಡರ್ ರವರ ತಾಲೂಕಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹ ಕಲಿಯುವುದರ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಉತ್ತೇಜಿಸುವ ಸ್ಕೌಟ್ಸ್ ಚಟುವಟಿಕೆಗಳು ತಾಲೂಕಿನಲ್ಲಿ ಹೆಚ್ಚಾಗಿ ನಡೆಯಬೇಕಿದೆ ಎಂದು ಸಲಹೆ ನೀಡಿದರು.ಜಿಲ್ಲಾ ಕಾರ್ಯದರ್ಶಿ ಪಿ.ಎಸ್‌ಕುಂಬಾರ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಹಾಗಾಗಿ ಎಲ್ಲ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ಗೆ ಸೇರ್ಪಡೆಗೊಳ್ಳುವಂತೆ ಕ್ರಮವಹಿಸಬೇಕು…
ಇಂಡಿ: ತಡರಾತ್ರಿ ಕಿಡಿಗೇಡಿಗಳು ಗ್ರಾಮ ಪಂಚಾಯತಿ ಮುಂಬಾಗಿಲಿಗೆ ಟೈರ್ ಇಟ್ಟು ಟೈರ್‌ಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ನಡೆದಿದೆ.ಬೆಂಕಿ ಬಾಗಿಲಿಗೆ ಹತ್ತಿ ತದನಂತರ ಗ್ರಾ.ಪಂ ಒಳಗಿನ ಇಲೆಕ್ಟ್ರಿಕಲ್ ಸಾಮಾನಿಗೆ ತಗುಲಿದ್ದು ವಿವಿಧ ಇಲೆಕ್ಟ್ರಿಕಲ್ ಸಾಮಾನುಗಳು ಸುಟ್ಟು ಕರಕಲಾಗಿವೆ. ಗ್ರಾಮ ಪಂಚಾಯತಿ ಬಾಗಿಲು ಪೀಠೋಪಕರಣಗಳು,. ವೈರ್‌ಗಳು ಸುಟ್ಟು ಭಸ್ಮವಾಗಿವೆ.ಈ ಝಳಕಿ ಪೊಲೀಸ್ ಠಾಣೆಯಲ್ಲಿ ಪಿಡಿಓ ಬಸವರಜ ಬಬಲಾದ ಪ್ರಕರಣ ದಾಖಲಿಸಿದ್ದಾರೆ.
