ಮುದ್ದೇಬಿಹಾಳ: ಹನುಮಾನ ದೇವರ ಜಯಂತಿ ಅಂಗವಾಗಿ ಪಟ್ಟಣದ ಹುಡ್ಕೋ ಬಡಾವಣೆಯ ಶಿರವಾಳ ಲೇಔಟ್‌ನಲ್ಲಿರುವ ಪಶ್ಚಿಮ ದಿಕ್ಕಿಗೆ ಇರುವ ಪ್ರಸನ್ನಾಂಜನೇಯ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಹುಡ್ಕೋ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಭಾಜಾ ಭಜಂತ್ರಿಗಳೊಂದಿಗೆ ಕಳಶದ ಮೆರವಣಿಗೆಯನ್ನು ನಡೆಸಲಾಯಿತು. ಪಂಚಾಮೃತ ಅಭಿಷೇಕ, ಅಲಂಕಾರ, ಪೂಜೆ, ತೊಟ್ಟಿಲೋಸ್ತವ, ಕುಂಕುಮಾರ್ಷನೆ, ಎಲೆ ಪೂಜೆ, ಧ್ವಜಾರೋಹಣ ಮತ್ತು ಕಳಸಾರೋಹಣ, ಮಹಾಪ್ರಸಾದ ಮತ್ತು ಸತ್ಯನಾರಾಯಣ ಪೂಜೆ ಕಾರ್ಯಕ್ರಮಗಳು ಅದ್ದೂರಿಯಾಗಿ ನೂರಾರು ಭಕ್ತರ ಮಧ್ಯೆ ಜರುಗಿದವು.
ಪ್ರಮುಖರಾದ ಎನ್.ಎಸ್.ಮಠ, ವಿ.ಎಚ್.ಶಿರವಾಳ. ಮಾರುತಿ ನಲವಡೆ, ಎಂ.ಎಚ್.ಬುಡ್ಡೋಡಿ, ಎ.ಎಸ್.ಹುಬ್ಬಳ್ಳಿ, ಎ.ಎಸ್.ಹಿರೇಮಠ, ದೆವೇಂದ್ರ ಪೂಜಾರಿ, ಬಿ.ಎಚ್.ಪೂಜಾರಿ, ಸಿ.ಪಿ.ಸಜ್ಜನ, ಟಿ.ಡಿ.ಲಮಾಣಿ ಸೇರಿದಂತೆ ಹಲವರು ಶ್ರಮಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

