ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ಹನುಮಾನ ದೇವಸ್ಥಾನಗಳಲ್ಲಿ ಹನುಮ ಜಯಂತಿಯಂಗವಾಗಿ ಮಂಗಳವಾರ ಬಾಲ ಹನುಮನನ್ನು ತೊಟ್ಟಿಲಲ್ಲಿ ಹಾಕಿ ತೊಟ್ಟಿಲೋತ್ಸವ ನೆರವೇರಿಸಿ ಹನುಮಾನ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಜನರು ಭಕ್ತಿ ಭಾವ, ಶ್ರದ್ಧೆಯಿಂದ ಹನುಮ ಜಯಂತಿ ಆಚರಿಸಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಹನುಮಾನ ದೇವಸ್ಥಾನದಲ್ಲಿ ನಸುಕಿನ ಜಾವ ವಿಪ್ರಸಮಾಜದ ಮಹಿಳೆಯರು ಬಾಲ ಹನುಮನನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡುವ ಸಂಪ್ರದಾಯ ನೆರವೇರಿಸಿ ಪೂಜೆ ಸಲ್ಲಿಸಿದರು. ಶ್ರೀರಾಮ, ಹನುಮಾನ ಕುರಿತಾದ ಭಜನೆಗಳನ್ನು ಹಾಡಿದರು. ಹನುಮಾನ ದೇವರಿಗೆ ವಿಶೇಷ ಪೂಜೆ ನೆರವೇರಿದ ನಂತರ ಭಕ್ತರಿಗೆ ಕೋಸಂಬರಿ, ಪಾನಕ ಪ್ರಸಾದ ವಿತರಿಸಲಾಯಿತು.
ಬೆಳಗ್ಗೆ ೧೧ ಗಂಟೆಗೆ ನಿರ್ಮಾಲ್ಯ ವಿಸರ್ಜನೆ ನಂತರ ಹನುಮಾನ ದೇವರಿಗೆ ಪಂಚಾಮೃತ ಅಭಿಷೇಕ, ವಾಯುಸ್ತುತಿ ಪಠಣ, ವಿಷ್ಣು ಸಹಸ್ರನಾಮ ಪಠಣ ನೆರವೇರಿದ ನಂತರ ದೇವರಿಗೆ ವಿಶೇಷ ಅಲಂಕಾರ ಪೂಜೆಯನ್ನು ವಾದಿರಾಜ ಯರ್ಜುವೇದಿ ಅವರು ನೆರವೇರಿಸಿದ ನಂತರ ನೈವೇದ್ಯ ಅರ್ಪಿಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಂಜೆ ಮಂಗಳಾರತಿ, ಭಜನೆ ನಡೆದವು.
ತೊಟ್ಟಿಲೋತ್ಸವದಲ್ಲಿ ರಾಮಾಚಾರಿ ಯುರ್ಜುವೇದಿ,ವಿಠ್ಠಲ ಕುಲಕರ್ಣಿ, ಅನಿಲ ದೇಶಪಾಂಡೆ, ವಿನಾಯಕ ದೇಶಪಾಂಡೆ, ವಾಸು ಕುಲಕರ್ಣಿ, ವಿನಾಯಕ ದೇಶಪಾಂಡೆ, ವಿಠ್ಠಲ ದೇಶಪಾಂಡೆ, ಶ್ರೀಧರ ಕುಲಕರ್ಣಿ, ಅನಿಲ ಕುಲಕರ್ಣಿ, ಪ್ರಲ್ಹಾದ ಕುಲಕರ್ಣಿ, ರಾಯಗುಂಡ ಕುಲಕರ್ಣಿ, ನಾಗವೇಣಿ ಕುಲಕರ್ಣಿ, ವಿದ್ಯಾ ಕುಲಕರ್ಣಿ, ಸುಜಾತಾ ಕುಲಕರ್ಣಿ, ಅನಿತಾ ದೇಶಪಾಂಡೆ, ಕಲ್ಪನಾ ಕುಲಕರ್ಣಿ, ನಂದಾ ಕುಲಕರ್ಣಿ, ಸಾಧನಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ವಿಠ್ಠಲ ಮಂದಿರದ ಮುಂಭಾಗ ಇರುವ ಹನುಮಾನ ದೇವಸ್ಥಾನದಲ್ಲಿಯೂ ಹನುಮ ಜಯಂತಿಯಂಗವಾಗಿ ತೊಟ್ಟಿಲೋತ್ಸವ, ಪೂಜೆ ನೆರವೇರಿಸಲಾಯಿತು. ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಮುಂಭಾಗ ಹನುಮಾನ, ಶಿವಾಜಿ ಪ್ರತಿಮೆ ಗಮನ ಸೆಳೆದವು. ತೆಲಗಿ ರಸ್ತೆಯಲ್ಲಿರುವ ಹನುಮಾನ ದೇವಸ್ಥಾನದಲ್ಲಿ ಹನುಮ ಜಯಂತಿಯಂಗವಾಗಿ ವಿಶೇಷ ಪೂಜೆ, ತೊಟ್ಟಿಲೋತ್ಸವ, ಧಾರ್ಮಿಕ ಕಾರ್ಯಕ್ರಮ ಜರುಗಿದವು.
Subscribe to Updates
Get the latest creative news from FooBar about art, design and business.
Related Posts
Add A Comment

