ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ವೈರಾಗ್ಯನಿಧಿ ಅಕ್ಕಮಹಾದೇವಿಯ ಜಯಂತಿಯಂಗವಾಗಿ ಮಂಗಳವಾರ ವಿವಿಧ ಅಕ್ಕನ ಬಳಗದ ಸದಸ್ಯರು ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ತೊಟ್ಟಿಲೋತ್ಸವ ನೆರವೇರಿಸಿ ಅಕ್ಕಮಹಾದೇವಿಗೆ ನಮನ ಸಲ್ಲಿಸಿದರು.
ಶ್ರೀಮಠದ ಅಕ್ಕಮಹಾದೇವಿ ಅಕ್ಕನಬಳಗ, ಮುಕ್ತಾಯಕ್ಕ ಅಕ್ಕನಬಳಗ, ದಾನಮ್ಮದೇವಿ ಅಕ್ಕನಬಳಗ, ಕ್ವಾಟಿಲಕ್ಷ್ಮೀ ನಗರದ ಅಕ್ಕನಬಳಗ, ಗಂಗಾಂಬಿಕಾ ಅಕ್ಕನಬಳಗ ಸದಸ್ಯರು ಬಾಲ ಅಕ್ಕಮಹಾದೇವಿ ಮೂರ್ತಿಯನ್ನು ಸಂಪ್ರದಾಯದಂತೆ ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡುವ ತೊಟ್ಟಿಲೋತ್ಸವ ನೆರವೇರಿಸಿದರು. ತೊಟ್ಟಿಲ ಕೆಳಗೆ ಶಕುಂತಲಾ ಝಳಕಿ, ಸರಸ್ವತಿ ನಾಯ್ಕೋಡಿ ಕುಳಿತುಕೊಂಡಿದ್ದರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ೧೨ ನೇ ಶತಮಾನದಲ್ಲಿ ಶರಣ ಸಂಕುಲೆಯಲ್ಲಿದ್ದ ಅಕ್ಕಮಹಾದೇವಿ ಕನ್ನಡ ಸಾಹಿತ್ಯದ ಮೊದಲ ಕವಯತ್ರಿ. ಅಕ್ಕಮಹಾದೇವಿಯು ಉಡುತಡಿಯಲ್ಲಿ ಜನಿಸಿ ಸುಖ, ಸಂಪತ್ತು ತ್ಯಜಿಸಿ ಬಸವ ಕಲ್ಯಾಣದಲ್ಲಿದ್ದ ಅನುಭವ ಮಂಟಪಕ್ಕೆ ಬಂದು ತನ್ನ ವ್ಯಕ್ತಿತ್ವ ಸಾಬೀತು ಪಡಿಸುವ ಮೂಲಕ ವೈರಾಗ್ಯ ನಿಧಿ ಎನಿಸಿಕೊಂಡಳು. ಕದಳಿವನದಲ್ಲಿ ಬಯಲಾದಳು. ಇಂತಹ ವೈರಾಗ್ಯ ನಿಧಿ ಇಡೀ ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದಾಳೆ. ಅಕ್ಕ ರಚಿಸಿರುವ ವಚನಗಳು ವೈರಾಗ್ಯ ಮತ್ತು ಆತ್ಮಪ್ರಜ್ಞೆಗೆ ಸಾಕ್ಷಿಯಾಗಿವೆ. ಅಕ್ಕನ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದರು.
ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಮಹಾದೇವಿ ಬಿರಾದಾರ, ಪುಷ್ಪಾ ಹೂಗಾರ, ಪುಷ್ಪಾ ಬಿರಾದಾರ, ನೀಲಮ್ಮ ಝಳಕಿ, ಅನ್ನಕ್ಕ ಚಿಂಚೋಳಿ, ಲಿಲಿತಾ ಪಡಶೆಟ್ಟಿ, ಬಾಲಕ್ಕ ಬೆಣ್ಣೂರ, ದ್ರಾಕ್ಷಾಯಿಣಿ ಮಟ್ಟಿಹಾಳ, ಶೈಲಾ ಮಠ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

