Author: editor.udayarashmi@gmail.com

ವಿಜಯಪುರ: ಜನಮಾನಸದಲ್ಲಿ ಬೆಳೆದು ಬಂದ ಸಂಗೀತ ವಿಶ್ವಬಾಷಿಕವಾಗಿದೆ. ಭಾವದ ಅಂತರ್ಮುಖಿಯಾದ ಗಾಯನಕ್ಕೆ ಜಾತಿ ಮತ, ಪಂಥಗಳ ಹಂಗಿಲ್ಲ. ಅದು ಶುದ್ಧ ವಿಶ್ವತತ್ವ ಇಂತಹ ಸಂಗೀತಕ್ಕೆ ಚೌಕಟ್ಟನ್ನು ಗುರು ಪಂಪರೆಯನ್ನು ಹಾಕಿಕೊಟ್ಟವರು. ಹಾನಗಲ್ಲ ಶಿವಯೋಗಿಗಳು ಹಾಗೂ ಪಂಚಾಕ್ಷರ ಕವಿ ಗವಾಯಿಗಳು ಎಂದು ಜಮಖಂಡಿ ಓಲೆಮಠದ ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು ಹೇಳಿದರು.ನಗರದ ಗಾನಬನದಲ್ಲಿ ಕುಮಾರ ಶಿವಯೋಗಿಗಳ ೯೪ನೇ ಪುಣ್ಯ ಸ್ಮರಣೋತ್ಸವ ಹಾಗೂ ಪಂಡಿತ ಪಂಚಾಕ್ಷರ ಗವಾಯಿಗಳ ೧೩೨ನೇ ಜಯಂತ್ಯೋತ್ಸವ ಕಾರ್ಯಕ್ರಮದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುರು ಕಾರುಣ್ಯ ಸತತ ಅಭ್ಯಾಸ ಹಾಗೂ ಶ್ರದ್ಧೆ ಇದ್ದರೆ ಸಂಗೀತ ಸಾಧನೆ ಆಗುತ್ತದೆ. ಲತಾ ಮಂಗೇಶ್ಕರ ಅವರಿಗೆ ಬಾಲ್ಯದಲ್ಲಿ ಪಂಚಾಕ್ಷರಿ ಗವಾಯಿಗಳು ಆಶೀರ್ವದಿಸಿದ್ದನ್ನು ಸ್ಮರಿಸಬಹುದು. ಅಂಧರ ಅನಾಥರ ಸೇವೆಗೈಯುತ್ತಿರುವ ಉಭಯ ಪ್ರತಿಷ್ಠಾನಗಳ ಕಾರ್ಯವನ್ನು ಸರ್ಕಾರ ಗುರುತಿಸಲಿ ಎಂದರು.ಶಿವಯೋಗ ಮಂದಿರದ ಧರ್ಮದರ್ಶಿ ಎಂ.ಬಿ.ಹಂಗರಗಿ ಮಾತನಾಡಿದರು.ಹುಬ್ಬಳ್ಳಿಯ ವಿರಕ್ತಮಠದ ಸಿದ್ಧಲಿಂಗೇಶ್ವರರು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುದ್ದಡಗಾದ ಸಂಗಮೇಶ್ವರ ಸಂಸ್ಥಾನ ಹಿರೇಮಠದ ಸದ್ಯೋಜಾತ ರೇಣುಕ ಶಿವಾಚಾರ್ಯರು, ಕವಿಗಳಾದ ಮುದಗೇರಿ ರಮೇಶ…

Read More

’ಜಯ್ ನುಡಿ’ಜಯಶ್ರೀ.ಜೆ. ಅಬ್ಬಿಗೇರಿ ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨ ಇನ್ನೇನು ಕೆಲ ದಿನಗಳಲ್ಲಿ ಸಾಲು ಸಾಲು ಪರೀಕ್ಷೆಗಳು ಬರಲಿವೆ. ಅಂದರೆ ಒಂದು ತರಹ ಪರೀಕ್ಷೆಯ ಸುಗ್ಗಿ, ಪರೀಕ್ಷೆ ಹಬ್ಬ ಅನ್ನಿ. ಇದೇನ್ರಿ ನೀವು ಪರೀಕ್ಷೆಯನ್ನು ಹಬ್ಬಕ್ಕೆ ಹೋಲಿಸುತ್ತಿದ್ದೀರಿ ಅನ್ನುವ ಪ್ರಶ್ನೆ ನಿಮ್ಮದು ಅಂತ ನನಗೆ ಖಂಡಿತ ಗೊತ್ತು. ಕಿರಿಕಿರಿ ಎನಿಸುವ ಪರೀಕ್ಷೆಯನ್ನು ಅದ್ಹೇಗೆ ಸಂಭ್ರಮಿಸುವುದು ಅಂತೀರೇನು? ಪರೀಕ್ಷೆಯೆಂಬುದು ನೀವು ಊಹಿಸಿರದ ಯಾವುದೋ ಮೂಲೆಯಿಂದ ಬಂದಿರುವಂತಹದು ಅಲ್ಲ. ಒಮ್ಮೆಲೇ ಬಂದು ಬೀಳುವಂತಹದಲ್ಲ. ಆಕಸ್ಮಿಕವಾದುದು ಅಲ್ಲ. ಮಳೆಯ ಹಾಗೆ ಯಾವಾಗ ಬರುತ್ತದೆಯೋ ಏನೋ ಅನ್ನುವಂತಹದು ಅಲ್ಲ. ಬಂದರೆ ಬಂತು ಹೋದರೆ ಹೋಯ್ತು ಎನ್ನುವ ಅನಿಶ್ಚತೆಯನ್ನೂ ಹೊಂದಿಲ್ಲ.ಯಾವಾಗ ಗೊತ್ತಾಗುತ್ತದೆ?ತರಗತಿಗಳಿಗೆ ಪ್ರವೇಶಾತಿ ಪಡೆಯುವಾಗಲೇ ಗೊತ್ತಿರುತ್ತದೆ ಮುಂದೊಂದು ದಿನ ವಾರ್ಷಿಕ ಪರೀಕ್ಷೆಯನ್ನು ಎದುರಿಸಲಿದ್ದೇನೆ ಎಂದು ಹೀಗಿದ್ದಾಗಲೂ ಪರೀಕ್ಷಾ ಭಯ ಏಕೆ? ಎನ್ನುವ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಅಂದು ಕಲಿಸಿದ್ದನ್ನು ಅಂದಂದೇ ಓದಿ ಅರ್ಥೈಸಿಕೊಳ್ಳುವುದಿಲ್ಲ. ಮೇಲಾಗಿ ಪರೀಕ್ಷೆಯನ್ನು ಎದುರಿಸಲು ಸರಿಯಾದ ಸಿದ್ಧತೆ ಮೊದಲಿನಿಂದಲೂ ಮುಂದೂಡುತ್ತಲೇ ಬರಲಾಗುತ್ತದೆ.ಭಯ ಬಿಟ್ಟವರಿಗೆ ಜಯಮೊದಲಿನಿಂದ…

Read More

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಇಂದು ಇಡೀ ಉತ್ತರ ಕರ್ನಾಟಕವು ಶೈಕ್ಷಣಿಕವಾಗಿ ಮುಂದುವರೆಯಲು ಕಾರಣವಾಗಿರುವ ಎರಡು ಶಕ್ತಿ ಕೇಂದ್ರಗಳಲ್ಲಿ ಲಿಂಗಾಯತ ಮಠಗಳು ಮುಂಚೂಣಿಯಲ್ಲಿದ್ದರೆ ಎರಡನೇ ಶಕ್ತಿ ಕೇಂದ್ರವಾಗಿ ಶಿರಸಂಗಿಯ ಲಿಂಗರಾಜ ಅರಸರು ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿ ಏನಲ್ಲ. ಉತ್ತರ ಕರ್ನಾಟಕದ ಕೆಎಲ್ಇ ಸೊಸೈಟಿ ಎಂದು ಕರೆಯಲ್ಪಡುವ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ ಮತ್ತು ಬಿ ಎಲ್ ಡಿ ಇ ಸಂಸ್ಥೆಗಳ ಹುಟ್ಟು ಮತ್ತು ಬೆಳವಣಿಗೆಗೆ ಲಿಂಗರಾಜ ಅರಸರ ಕೊಡುಗೆಯೇ ಕಾರಣ. ಆದ್ದರಿಂದಲೇ ಅವರನ್ನು ತ್ಯಾಗವೀರ ಎಂದು ಕೊಂಡಾಡುವುದು. ತಮ್ಮ ಮಾವಿನ ತೋಪಿನಲ್ಲಿನ ಮಾವಿನ ಗಿಡಕ್ಕೆ ಕಲ್ಲೆಸೆದು ಮಾವಿನಕಾಯಿ ಪಡೆಯಲು ಯತ್ನಿಸಿದ ರಾಜೇಸಾಬ್ ಒಂಟಿ ಎಂಬ ತಮ್ಮ ತೋಟದ ಕಾವಲುಗಾರನ ಮಗನಿಗೆ ಎರಡು ಎಕರೆ ಜಮೀನು ಕೊಟ್ಟು ಆ ದುಡ್ಡಿನಲ್ಲಿ ಆತನನ್ನು ಓದಿಸಲು ಹೇಳಿದ ಮಹಾದಾನಿ ಲಿಂಗರಾಜ ಅರಸರು. ಕಲ್ಲೆಸದ ಬಾಲಕನಿಗೆ ಹಣ್ಣನ್ನು ಕೊಡುವ ಮರಕ್ಕಿಂತ, ಬುದ್ಧಿಶಕ್ತಿ ಇರುವ ಮಾನವನಾದ ತಾನು ಆತನ ಬದುಕಿಗೆ ದಾರಿ ಮಾಡಿಕೊಡಬೇಕು ಎಂಬ ನಿಲುವನ್ನು…

Read More

ಶ್ರೀ ಎಸ್.ಎಂ.ಮಣೂರ, ಎಸ್.ಬಿ.ಮಾಡೆಲ್ ಪಬ್ಲಿಕ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಿಂದಗಿ: ಪಾಲಕರು ಮಕ್ಕಳನ್ನು ಮೋಬೈಲನಿಂದ ದೂರವಿಟ್ಟು, ಅವರಲ್ಲಿ ಉನ್ನತ ಜೀವನ ಮೌಲ್ಯಗಳನ್ನು ತುಂಬಿ ಭವಿಷ್ಯದ ಸತ್ಪ್ರಜೆಯಾಗಿಸಬೇಕು ಎಂದು ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಪಾಲಕರಿಗೆ ಕರೆ ನೀಡಿದರು.ಪಟ್ಟಣದ ಶ್ರೀ ಎಸ್.ಎಂ.ಮಣೂರ, ಎಸ್.ಬಿ.ಮಾಡೆಲ್ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎನ್.ಆರ್.ಮಣೂರ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯೇ ನಮ್ಮ ಶಿಕ್ಷಣ ಸಂಸ್ಥೆಯ ಪ್ರಮುಖ ದ್ಯೇಯವಾಗಿದ್ದು, ಈ ದಿಸೆಯಲ್ಲಿ ಶಾಲಾ ಶಿಕ್ಷಕರ ಬಳಗ ನಿರಂತರ ಮಾರ್ಗದರ್ಶನ ಮಾಡುತ್ತಿದೆ. ಪಾಲಕರೂ ಸಹ ಮಕ್ಕಳ ಚಟುವಟಿಕೆಗಳನ್ನು ಸದಾ ಗಮನಿಸುತ್ತಿರಬೇಕು ಎಂದು ಸಲಹೆ ನೀಡಿದರು.ಶಾಲಾ ಆಡಳಿತಾಧಿಕಾರಿ ಪ್ರೊ. ಎಸ್.ಎನ್.ಹೊಳಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಶಾಲಾ ಮುಖ್ಯ ಗುರುಮಾತೆ ಶ್ರೀಮತಿ ಪಿ.ಎಸ್.ಹೊಳಿ ವರದಿ ವಾಚಿಸಿದರು.ಅಶೋಕ ಕಮರಡ್ಡಿ ಸ್ವಾಗತಿಸಿದರು. ಶ್ರೀದೇವಿ ಚೌಕಿಮಠ ವಂದಿಸಿದರು.ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು, ಶಿಕ್ಷಕಿಯರು…

Read More

ಚಡಚಣ: ನಗರದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ‌ ಗುರು ಮಲ್ಲಿಕಾರ್ಜುನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಪ್ರಾಚಾರ್ಯ ಪ್ರೊ. ಎಸ್. ಎಸ್ ಚವ್ಹಾಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವಿ ಶಿಕ್ಷಕರಾದ ನೀವು ನಿರಂತರ ಕಲಿಕೆ, ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಂಡು ಮುಂದಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮ ಸಮಾಜದ, ಉತ್ತಮ ಭವಿಷ್ಯ ನಿರ್ಮಾಣ ಮಾಡುವಂತಹ ಶಿಕ್ಷಕರಾಗಿ ಹೊರಹೊಮ್ಮಿ ಎಂದು ಶುಭ ಹಾರೈಸಿದರು.ಈ ವೇಳೆಯಲ್ಲಿ ಮಹಾವಿದ್ಯಾಲಯ ಬೋಧಕ,ಬೋಧಕೇತರ ಹಾಗೂ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಈ ವೇಳೆ ಸೃಷ್ಟಿ ಛಟ್ಟಿ ಕಾರ್ಯಕ್ರಮ ನಿರೂಪಿಸಿದರು, ದಾನಮ್ಮ ಚಕೋತೆ ಸ್ವಾಗತಿಸಿದರು, ರೂಪಾ ಅಗಸರ ಕಾಲೇಜಿನ ನಿಯಮಗಳನ್ನು ತಿಳಿಸಿದರು, ಅರುಣ್ ತೇಲಿ ವಂದಿಸಿದರು.

Read More

ಚುನಾವಣಾ ಆಯೋಗ ಘೋಷಣೆ |ಶರದ್ ಪವಾರ್ ಗೆ ತೀವ್ರ ಹಿನ್ನಡೆ | ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ನವದೆಹಲಿ: ಮಹಾರಾಷ್ಟ್ರದ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದ್ದು, ಚುನಾವಣಾ ಆಯೋಗವು ಅಜಿತ್ ಅವರ ಬಣ ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ.ಚುನಾವಣಾ ಆಯೋಗದೊಂದಿಗೆ ಈ ಹೋರಾಟ ಬಹಳ ದಿನಗಳಿಂದ ನಡೆಯುತ್ತಿದ್ದು, ಶರದ್ ಪವಾರ್ ಅವರ ಕಡೆಯವರು ಕೂಡ ವಾದ ಮಂಡಿಸಿದ್ದರು. ಆದರೆ ಇದೀಗ ಅಲ್ಲಿಂದ ಅಜಿತ್ ಬಣಕ್ಕೆ ಜಯ ಸಿಕ್ಕಿದ್ದು ನಿಜವಾದ ಎನ್‌ಸಿಪಿ ಎಂದರೆ ಅಜಿತ್ ಬಣ ಎಂದು ಒತ್ತಿ ಹೇಳಿದೆ.ಕಳೆದ ವರ್ಷವೇ, ಅಜಿತ್ ಬಣ ಬಂಡಾಯವೆದ್ದು ಎನ್‌ಸಿಪಿಯನ್ನು ಎರಡು ತುಂಡು ಮಾಡಿತ್ತು. ಅನೇಕ ಶಾಸಕರ ಜೊತೆಗೂಡಿ ಶಿಂಧೆ ಸರ್ಕಾರವನ್ನು ಬೆಂಬಲಿಸಿದರು. ಈ ಕಾರಣಕ್ಕೆ ಅಜಿತ್ ಉಪ ಮುಖ್ಯಮಂತ್ರಿಯೂ ಆದರು. ಆಗ ಅಜಿತ್ ಅವರು ನಿಜವಾದ ಎನ್‌ಸಿಪಿ ಎಂದು ಹೇಳಿಕೊಂಡಿದ್ದರು. ಇದರ ಹಿಂದಿನ ತರ್ಕವೆಂದರೆ ತಮಗೆ ಸಾಕಷ್ಟು ಶಾಸಕರ ಬೆಂಬಲವಿದೆ ಎಂದು ವಾದಿಸಿದ್ದರು. ಅದೇ ಸಮಯದಲ್ಲಿ, ಶರದ್ ಪವಾರ್ ಕೂಡ ತಮ್ಮ ಹಕ್ಕು ಮಂಡಿಸಿದ್ದರು. ಶರದ್…

Read More

ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡಲು ಒಪ್ಪದ ಪ್ರತಿಭಟನಾಕಾರರು ಕಲಕೇರಿ: ವಿಜಯಪುರ ಜಿಲ್ಲಾ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ, ಅಂಬುಲನ್ಸ್ ಸೇರಿಂದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ.ಸದರಿ ಈ ಆರೋಗ್ಯ ಕೇಂದ್ರದಕ್ಕೆ ಸುತ್ತಮುತ್ತಲಿನ ಸುಮಾರು ೩೫ ಹಳ್ಳಿಗಳ ಬಡ ಜನರು ತಮ್ಮ ಆರೋಗ್ಯ ತಪಾಸಣೆಗೆ ಬರುತ್ತಾರೆ. ಆದರೆ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವಶ್ಯಕತೆಗೆ ತಕ್ಕಂತೆ ಸಿಬ್ಬಂದಿಗಳು ಇರದೇ ಇರುವುದರಿಂದ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಮತ್ತು ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಉಪಚರಿಸಲು ಅವಶ್ಯಕ ಸಲಕರಣೆಗಳು ಕೂಡಾ ಇರುವುದಿಲ್ಲ. ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕೂಡಾ ಇದೆ. ಹೆಸರಿಗೆ ಮಾತ್ರ ೩೦ ಹಾಸಿಗೆಯ ಆಸ್ಪತ್ರೆ ಒಳಗಡೆ ಯಾವ ಸೌಲಭ್ಯವು ಇರುವುದಿಲ್ಲ. ಇನ್ನು ಆಸ್ಪತ್ರೆಯಲ್ಲಿ ಕೇವಲ…

Read More

ವಿಜಯಪುರ: ಭಾರತದ ಸಂವಿಧಾನ ಶ್ರೇಷ್ಠವಾದ ಸಂವಿಧಾನವಾಗಿದೆ. ಸಂವಿಧಾನ ಸರ್ವಜನರ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದು ಮಮದಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ ಅವರು ಹೇಳಿದರು.ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಮಮದಾಪುರ ಗ್ರಾಮದಲ್ಲಿ ಫೆ.೬ ರಂದು ಅದ್ದೂರಿಯಾಗಿ ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನ ಪ್ರತಿಯೊಬ್ಬರು ಸಮಾನವಾದ ಹಕ್ಕನ್ನು ಒದಗಿಸಿದೆ. ಅನೇಕತೆಯಲ್ಲಿ ಏಕತೆಯನ್ನು ಸಾರುವ ಶ್ರೇಷ್ಠವಾದ ಸಂವಿಧಾನವಾಗಿದೆ ಎಂದು ಹೇಳಿದರು.ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರವು ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ, ಜೈನಾಪುರ, ಮಮದಾಪುರ ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನ ಕುರಿತು ಜಾಗೃತಿ ಮೂಡಿಸಿತು.ಈ ಸಂದರ್ಭದಲ್ಲೊಇ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಂ.ಪಾಟೀಲ, ನೋಡಲ್ ಅಧಿಕಾರಿ ಎಸ್.ಬಿ.ಪಾಟೀಲ, ಸೇರಿದಂತೆ ಗ್ರಾಮದ ಮುಖಂಡರು, ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂತೋಷ ಕಾಂಬಳೆ ಸಂವಿಧಾನ ಕುರಿತು ವಿವರವಾದ ಮಾಹಿತಿ ಒದಗಿಸಿದರು.

Read More

ವಿಜಯಪುರ: ಜಿಲ್ಲಾಡಳಿತದಿಂದ ಫೆಬ್ರವರಿ ೧೯ರಂದು ಛತ್ರಪತಿ ಶಿವಾಜಿ ಜಯಂತಿ ಹಾಗೂ ಫೆ.೨೦ರಂದು ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ಫೆಬ್ರವರಿ ೧೯ರಂದು ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಶಿವಾಜಿ ಸರ್ಕಲ್ ದಿಂದ ಅಂದು ಬೆಳಿಗ್ಗೆ ೯:೩೦ಕ್ಕೆ ಛತ್ರಪತಿ ಶಿವಾಜಿ ಅವರ ಭಾವಚಿತ್ರದ ಮೆರವಣಿಗೆ ಹಾಗೂ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ೧೧ ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಉಪನ್ಯಾಸಕರಿಂದ ಉಪನ್ಯಾಸ ಕಾರ್ಯಕ್ರಮ ನೀಡುವುದು.ಸಂತ ಕವಿ ಸರ್ವಜ್ಞ ಜಯಂತಿಯನ್ನು ಫೆ.೨೦ರಂದು ಆಚರಿಸಲಾಗುವುದು ಅಂದು ಬೆಳಿಗ್ಗೆ ೯:೩೦ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಬೆಳಿಗ್ಗೆ ೧೧ ಗಂಟೆಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯುವುದು.ಆಮಂತ್ರಣ ಮುದ್ರಣ ಹಾಗೂ ವಿತರಣೆ, ಶಿಷ್ಠಾಚಾರದಂತೆ ಅತಿಥಿ ಗಣ್ಯರಿಗೆ ಅಹ್ವಾನ, ವೇದಿಕೆ ಅಲಂಕಾರ, ಕುಡಿಯುವ ನೀರಿನ ವ್ಯವಸ್ಥೆ, ಸಮರ್ಪಕ ವಿದ್ಯುತ್ ವ್ಯವಸ್ಥೆ,…

Read More