ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಲೆಕ್ಕಪತ್ರವನ್ನು ಜನಪ್ರತಿನಿಧಿಗಳ ಕಾಯ್ದೆ ೧೯೫೧ ರ ಕಲಂ ೭೭ (೧)ರ ಪ್ರಕಾರ ವೆಚ್ಚ ವೀಕ್ಷಕರು ತಪಾಸಣೆ ನಡೆಸಲಿದ್ದಾರೆ.
ಮೊದಲನೇ ತಪಾಸಣೆ ಏಪ್ರೀಲ್ ೨೬, ಎರಡನೇ ತಪಾಸಣೆ ಮೇ ೧ ಹಾಗೂ ಮೂರನೇ ತಪಾಸಣೆ ಮೇ ೫ ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಾಡಲಾಗುತ್ತಿದೆ. ಈ ದಿನಗಳಂದು ಅಭ್ಯರ್ಥಿಗಳು ತಮ್ಮ ಚುನಾವಣಾ ಏಜೆಂಟರುಗಳ ಮೂಲಕ ಬಿಳಿ ಬಣ್ಣದ ದೈನಂದಿನ ಖರ್ಚು ವೆಚ್ಚಗಳ ಪುಸ್ತಕ ಭಾಗ-ಎ, ಗುಲಾಬಿ ಬಣ್ಣದ ನಗದು ಪುಸ್ತಕ ಭಾಗ-ಬಿ ಮತ್ತು ಹಳದಿ ಬಣ್ಣದ ಬ್ಯಾಂಕ್ ನಗದು ಪುಸ್ತಕ, ಭಾಗ-ಸಿ ಪುಸ್ತಕಗಳನ್ನು ಕಾಲೋಚಿತಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಅಭ್ಯರ್ಥಿಗಳ ಲೆಕ್ಕ ಪತ್ರಗಳ ತಪಾಸಣೆಗೆ ಅಭ್ಯರ್ಥಿಗಳು/ ಚುನಾವಣಾ ಎಜೆಂಟರುಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
