ಏ.೨೭ ರಿಂದ ೨೯ರವರೆಗೆ ಅಂಚೆಮತಪತ್ರದ ಮೂಲಕ ಮತದಾನ
ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಸಂಬಂಧ ವಿಜಯಪುರ ಮೀಸಲು ಕ್ಷೇತ್ರ ವ್ಯಾಪ್ತಿಯಲ್ಲಿ ೮೫ ವರ್ಷ ಮೇಲ್ಪಟ್ಟ ಹಿರಿಯ ಮತದಾರರು, ವಿಶೇಷ ಚೇತನ ಮತದಾರರು ಹಾಗೂ ಅಂಚೆ ಮತಪತ್ರ ಸಲ್ಲಿಸಲು ನಮೂನೆ ೧೮ ಡಿ ಅರ್ಜಿ ಸಲ್ಲಿಸಿ ಅರ್ಹರಾದ ಮತದಾರರಿಗೆ ಏ.೨೭ ರಿಂದ ಏ.೨೯ ರವರೆಗೆ ಮೂರು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಮತದಾನ ತಂಡಗಳು ಮನೆಯ ಬಾಗಿಲಿಗೆ ಬರಲಿವೆ. ಅಂಚೆ ಮತ ಪತ್ರ ಚುನಾವಣೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ೬೯ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ತಿಳಿಸಿದ್ದಾರೆ.
ಮುದ್ದೇಬೀಹಾಳ ವಿಧಾನಸಭಾ ವ್ಯಾಪ್ತಿಯಲ್ಲಿ ೨೫೧ ಹಿರಿಯ ಮತದಾರರು, ೧೪೨ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೩೯೩ ಮತದಾರರಿಗೆ ೮ ಮತದಾನ ತಂಡಗಳನು ನೇಮಕ ಮಾಡಲಾಗಿದೆ. ದೇವರಹಿಪ್ಪರಗಿ ವಿಧಾನಸಭಾ ವ್ಯಾಪ್ತಿಯಲ್ಲಿ ೧೮೭ ಹಿರಿಯ ಮತದಾರರು, ೫೮ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೨೪೫ ಮತದಾರರಿಗೆ ೬ ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ಬಸವನ ಬಾಗೇವಾಡಿ ವಿಧಾನಸಭಾ ವ್ಯಾಪ್ತಿಯಲ್ಲಿ ೩೩೨ ಹಿರಿಯ ಮತದಾರರು, ೧೨೩ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೪೪೫ ಮತದಾರರಿಗೆ ೯ ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ಬಬಲೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ೩೭೪ ಹಿರಿಯ ಮತದಾರರು, ೧೦೨ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೪೭೬ ಮತದಾರರಿಗೆ ೧೦ ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ವಿಜಯಪುರ ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ೧೯೪ ಹಿರಿಯ ಮತದಾರರು, ೪೨ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೨೩೬ ಮತದಾರರಿಗೆ ೫ ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ನಾಗಠಾಣ ವಿಧಾನಸಭಾ ವ್ಯಾಪ್ತಿಯಲ್ಲಿ ೨೧೯ ಹಿರಿಯ ಮತದಾರರು, ೬೬ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೨೮೫ ಮತದಾರರಿಗೆ ೭ ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ಇಂಡಿ ವಿಧಾನಸಭಾ ವ್ಯಾಪ್ತಿಯಲ್ಲಿ ೪೫೦ ಹಿರಿಯ ಮತದಾರರು, ೨೨೬ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೬೭೬ ಮತದಾರರಿಗೆ ೧೪ ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ. ಸಿಂದಗಿ ವಿಧಾನಸಭಾ ವ್ಯಾಪ್ತಿಯಲ್ಲಿ ೩೫೦ ಹಿರಿಯ ಮತದಾರರು, ೧೨೭ ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು ೪೭೭ ಮತದಾರರಿಗೆ ೧೦ ಮತದಾನ ತಂಡಗಳನ್ನು ನೇಮಕ ಮಾಡಲಾಗಿದೆ.
ಸದರಿ ದಿನಾಂಕಗಳಂದು ಮತದಾನ ತಂಡಗಳು ಮನೆಗಳಿಗೆ ಭೇಟಿ ನೀಡಲಿದ್ದು, ಎಲ್ಲಾ ಅರ್ಹ ಅಭ್ಯರ್ಥಿಗಳು ಮನೆಯಲ್ಲಿ ಇದ್ದು ಅಂಚೆ ಮತಪತ್ರದ ಮೂಲಕ ಮತದಾನ ಮಾಡಬೇಕು. ಈ ಸೌಲಭ್ಯ ಹೊರತುಪಡಿಸಿ, ಗೈರು ಹಾಜರಾದ ಮತದಾರರಿಗೆ ಮತದಾನ ಮಾಡಲು ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
