ಮಂಗಳೂರು: ಮಂಗಳೂರಿನ ಕಥಾಬಿಂದು ಪ್ರಕಾಶನ ಮತ್ತು ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರ ಮತ್ತು ಶ್ರೀ ಸಾಹಿತ್ಯ ಕಲಾ ವೇದಿಕೆ ಈ ಸಂಸ್ಥೆಗಳ ಜಂಟಿ ಆಶಯದಲ್ಲಿ ಮೇ 5 ರಂದು ಹೈದರಾಬಾದಿನಲ್ಲಿ ಕಥಾ ಬಿಂದು ಕನ್ನಡ ಕಂಪು ಸರಣಿ -6 ಕಾರ್ಯಕ್ರಮ ಆಯೋಜಿಸಲಾಗಿದೆ.
ಇದರಲ್ಲಿ ಪುಸ್ತಕ ಬಿಡುಗಡೆ, ಕವಿ ಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಧನ ಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ತುಮಕೂರಿನ ಶ್ರೀಮತಿ ಲೀಲ ಗುರುರಾಜ್ ರವರು ಆಯ್ಕೆಯಾಗಿದ್ದಾರೆ. ಮೇ ಐದರಂದು ಹೈದರಾಬಾದಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಯಲಿದೆ.
ಶ್ರೀಮತಿ ಲೀಲಾ ಗುರುರಾಜ್ ವೃತ್ತಿಯಲ್ಲಿ ಹಣಕಾಸು ಸಂಸ್ಥೆಯ ವ್ಯವಸ್ಥಾಪಕರು. ಅವರು ಮೂಲತ: ತುಮಕೂರಿನವರು. ಪ್ರವೃತ್ತಿಯಲ್ಲಿ ಲೇಖಕಿ, ಗಾಯಕಿ ಮತ್ತು ಯೋಗ ಶಿಕ್ಷಕಿ. ಅವರ ಓದು ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ಯೋಗ ವಿಷಯದಲ್ಲಿ ಪಿಜಿ ಕೋರ್ಸ್ ಮಾಡಿದ್ದಾರೆ. ಸನಾತನ ಹಿಂದೂ ಧರ್ಮದ ಪ್ರಚಾರಕರು. ಲೇಖನ ಮತ್ತು ಕವನಗಳನ್ನು ಬರೆಯುತ್ತಾ ಬಂದಿದ್ದಾರೆ. ಇವರಿಗೆ ಸೇವಾ ಸಾಹಿತ್ಯ ರತ್ನ, ಕರುನಾಡ ರತ್ನಪ್ರಶಸ್ತಿ, ಕರುನಾಡ ಕಾಯಕಯೋಗಿ ಪ್ರಶಸ್ತಿ ಪಡೆದಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

