ವಿಜಯಪುರ: ಸಮುದಾಯ ಆರೋಗ್ಯ ನರ್ಸಿಂಗ್ನಲ್ಲಿ ಕ್ರಾಂತಿ ಮತ್ತು ಹೊಸ ದೃಷ್ಟಿಕೋನ: ಶಿಕ್ಷಣ, ಕೌಶಲ್ಯ ಮತ್ತು ಸಂಶೋಧನೆ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಏಪ್ರಿಲ್ 26 ಮತ್ತು 27 ರಂದು ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನಲ್ಲಿ ನಡೆಯಲಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಎಂದು ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮನ್ ಚೋಪಡೆ, ಸಮ್ಮೇಳನ ಸಂಘಟನೆ ಅಧ್ಯಕ್ಷೆ ಡಾ. ಸುಚಿತ್ರಾ ರಾತಿ, ಏ. 26 ರಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೇ ಕೇಂದ್ರದ ಗ್ರಂಥಾಲಯ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಈ ಸಮ್ಮೇಳನವನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ರಾಜ್ಯ ಡಿಪ್ಲೊಮಾ ಇನ್ ನರ್ಸಿಂಗ್ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಆರ್ಜಿಯುಎಚ್ಎಸ್ ಸೆನೆಟ್ ಸದಸ್ಯ ಸೋಮಶೇಖರಯ್ಯ ಕಲ್ಮಠ, ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಡಾ. ರಾಜೇಶ ಎಂ. ಹೊನ್ನುಟಗಿ, ಸೋಚನಿ ಅಧ್ಯಕ್ಷೆ ಡಾ. ಚೆಲ್ಲಾರಾಣಿ ವಿಜಯಕುಮಾರ, ಕಾರ್ಯದರ್ಶಿ ಡಾ. ಶಾಂಡ್ರಿಲಾ ಇಮ್ಯಾನುಯೆಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಬಿ. ಎಲ್. ಡಿ. ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಉಪಸ್ಥಿತರಿರಲಿದ್ದಾರೆ.
ಬಿ.ಎಲ್.ಡಿ.ಇ ನರ್ಸಿಂಗ್ ಕಾಲೇಜು, ಸೊಸೈಟಿ ಆಫ್ ಕಮ್ಯುನಿಟಿ ಹೆಲ್ತ್ ನರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಈ ಸಮ್ಮೇಳನ ನಡೆಯಲಿದೆ. ಸಮುದಾಯ ಆರೋಗ್ಯ ಶುಶ್ರೂಷೆಯಲ್ಲಿ ಕ್ರಾಂತಿ ಮತ್ತು ಹೊಸ ದೃಷ್ಟಿಕೋನ: ಶಿಕ್ಷಣ, ಕೌಶಲ್ಯ ಮತ್ತು ಸಂಶೋಧನೆ’ ಕುರಿತು ಅಂತರರಾಷ್ಟ್ರೀಯ ಸಮ್ಮೇಳನದ ಗುರಿಯು ಸಮುದಾಯ ಆರೋಗ್ಯ ವೃತ್ತಿಪರರಲ್ಲಿ ಸಂಶೋಧನಾ ಚಟುವಟಿಕೆ ಮತ್ತು ಆವಿಷ್ಕಾರವನ್ನು ಉತ್ತೇಜಿಸುವುದು, ಸಹಾಯ ಮಾಡುವುದು ಮತ್ತು ಅಭಿವೃದ್ಧಿಪಡಿಸುವುದು, ಸಾರ್ವಜನಿಕ ಆರೋಗ್ಯದಲ್ಲಿ ವೃತ್ತಿಪರ ಮಾರ್ಗಗಳನ್ನು ಅಂಗೀಕರಿಸಿ. ಸಾರ್ವಜನಿಕ ಆರೋಗ್ಯದಲ್ಲಿ ಕೃತಕ ಬುದ್ಧಿಮತ್ತೆಯ ಮಹತ್ವವನ್ನು ಗುರುತಿಸಿ, ಜಾಗತಿಕ ದೃಷ್ಟಿಕೋನಗಳು, ದಾದಿಯರ ಮೇಲೆ ಡಿಜಿಟಲ್ ನರ್ಸಿಂಗ್ನ ಜಾಗತಿಕ ದೃಷ್ಟಿಕೋನ ಮತ್ತು ಪ್ರಭಾವ, ಸಾರ್ವಜನಿಕ ಆರೋಗ್ಯಕ್ಕಾಗಿ ಜಾಗತಿಕ ಕ್ರಿಯಾ ಯೋಜನೆಯನ್ನು ಗುರುತಿಸಿ ಯುನಿವರ್ಸಲ್ ಹೆಲ್ತ್ ಕವರೇಜ್ನಲ್ಲಿ ಸಿಎಚ್ಓ ಗಳ ಪಾತ್ರವನ್ನು ಅರ್ಥಮಾಡಿಕೊಳ್ಳುವುದು. ಸಾರ್ವಜನಿಕ ಆರೋಗ್ಯದಲ್ಲಿ ಪುರಾವೆಗಳನ್ನು ಅನ್ವೇಷಿಸಿ ಮತ್ತು ಬಹುಶಿಸ್ತಿನ ವಿಧಾನವನ್ನು ಸಂಯೋಜಿಸಿ, ಡಿಜಿಟಲ್ ನರ್ಸಿಂಗ್ ಅನ್ವೇಷಿಸಲು, ಹವಾಮಾನ ಬದಲಾವಣೆ ಮತ್ತು ಆರೋಗ್ಯಕ್ಕೆ ದಾದಿಯರ ಕೊಡುಗೆ ಕುರಿತು ವಿಚಾರ ಗೋಷ್ಠಿಗಳು ನಡೆಯಲಿವೆ.
ಸಾಕ್ಷ್ಯಾಧಾರಿತ ಸಂಶೋಧನೆ ಪ್ರಸ್ತುತಿಗಳ ವಿನಿಮಯದಿಂದ ಕಲಿಯಲು ಸುಮಾರು 600 ಜಾಗತಿಕ ಮತ್ತು ರಾಷ್ಟ್ರೀಯ ನರ್ಸ್ ಸಂಶೋಧಕರು, ವಿದ್ಯಾರ್ಥಿಗಳು, ವೈದ್ಯರು ಮತ್ತು ನಾಯಕರು ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆರಿಬಿಯನ್ ದೇಶವಾದ ಟ್ರಿನಿಡಾಡ್ ಮತ್ತು ಟೊಬಾಗೋ ಮತ್ತು ಮಧ್ಯಪ್ರಾಚ್ಯ ದೇಶ, ಓಮನ್ನಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ರಾಷ್ಟ್ರೀಯ ನರ್ಸ್ ನಾಯಕರು ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ(ಭೋಪಾಲ. ಇಂದೋರ), ಗುಜರಾತ, ರಾಜಸ್ಥಾನ ಮತ್ರು ಕರ್ನಾಟಕದ ಹೆಚ್ಚಿನ ಜಿಲ್ಲೆಗಳಿಂದ ಪ್ರತಿನಿಧಿಸುತ್ತಿದ್ದಾರೆ.
ಸೊಸೈಟಿ ಆಫ್ ಕಮ್ಯುನಿಟಿ ಹೆಲ್ತ್ ನರ್ಸ್ ಆಫ್ ಇಂಡಿಯಾ ಮತ್ತು ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಸಹಯೋಗದೊಂದಿಗೆ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲು ಬಿ.ಎಲ್.ಡಿ.ಇ ಡೀಮ್ಡ್ ಯೂನಿವರ್ಸಿಟಿಯೂ ಸಹಯೋಗ ನೀಡುತ್ತಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
