Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನಿಡಗುಂದಿ: ಪಟ್ಟಣದ ಗ್ರಾಮೀಣ ವಿದ್ಯಾವರ್ಧಕ ಸಂಘದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 2001-02 ನೇ ಸಾಲಿನಲ್ಲಿ ಪಿಯುಸಿ ಕಲಿತ ವಿದ್ಯಾರ್ಥಿಗಳ ಗುರುನಮನ ಕಾರ್ಯಕ್ರಮ ಜರುಗಿತು.ಕಪ್ಪು ಪ್ಯಾಂಟ್ ಶ್ವೇತವರ್ಣದ ಶರ್ಟ್, ಹೆಗಲ ಮೇಲೆ ಶೆಲ್ಲೆ ತಲೆಯ ಮೇಲೆ ಖಾದಿ ಟೋಪಿ ವಿದ್ಯಾರ್ಥಿಗಳು ಧರಿಸಿದರೆ, ಒಂದೇ ಬಣ್ಣದ ಕಾಟನ್ ಸಾರಿ ಗಳನ್ನು ಧರಿಸಿ ಕಲರ್ ಫುಲ್ ಕನ್ನಡಕಗಳನ್ನು ಮಹಿಳೆಯರು ಧರಿಸಿದ್ದರು. ಕಾಲೇಜಿನ ಮಹಾ ದ್ವಾರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು ಮಹದ್ವಾರದಿಂದ ಹಿಡಿದು ಸಭಾಂಗಣದವರಿಗೆ ಹೂಗಳಿಂದ ಪಥವನ್ನು ಸಿದ್ಧಪಡಿಸಲಾಗಿತ್ತು. ಅದೇ ಪಥದಲ್ಲಿ ತಮಗೆ ಕಲಿಸಿದ ಶಿಕ್ಷಕರ ಆಗಮನದ ವೇಳೆ ಎಲ್ಲಾ ಹಳೆ ವಿದ್ಯಾರ್ಥಿಗಳು ಪುಷ್ಪಾರ್ಚನೆಗೈದು ಸ್ವಾಗತ ಕೋರಿದರು. ಪರಿಸರ ಸ್ನೇಹಿ ಸಿಡಿ ಮದ್ದುಗಳನ್ನು ಬಳಸಲಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ನಾಗಠಾಣ, ನಮ್ಮ ತಂದೆ ಎಸ್.ಜಿ. ನಾಗಠಾಣ ಅವರ ದೂರದೃಷ್ಠಿತ್ವ ಹಾಗೂ ಕಾರ್ಯತತ್ಪರತೆಯ ಕಾರಣ ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯುವಂತಾಯಿತು ಎಂದರು.ಶಾಲೆಯ ಹಲವು ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಘಟಿಸಿದ ಬಗ್ಗೆ, ಕಾಲೇಜಿನ ಉಪನ್ಯಾಸಕರ ಕೊಡುಗೆ, ಪಾಠದ…
ವಿಜಯಪುರ: ಸಂವಿಧಾನದ ಪಾವಿತ್ರ‍್ಯತೆ ರಕ್ಷಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರಿಕಾಂತ ಗಣಿ ಹೇಳಿದರು.ಕೊಲ್ಹಾರ ತಾಲೂಕಿನ ಹಣಮಾಪುರ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನದ ಮುಖ್ಯ ಉದ್ದೇಶವೆಂದರೆ ಪ್ರತಿಯೊಬ್ಬ ನಾಗರಿಕರಿಗೆ ಸಮಾನ ಅವಕಾಶ ದೊರೆಯಬೇಕು. ಅದಕ್ಕೆ ಮೊದಲು ನಾವು ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವುದು ಹಾಗೂ ಸಂವಿಧಾನದ ಆಶಯ ಕುರಿತು ಜಾಗೃತಿ ಮೂಡಿಸುವುದಾಗಿದೆ ಎಂದರು.ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಯುವಕರು, ಸೇರಿದಂತೆ ಸಾವಿರಾರು ಜನರು ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಮುಖ್ಯ ರಸ್ತೆಯಿಂದ ಮೆರವಣಿಗೆದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳೆಯರಿಂದ ಕುಂಭಮೇಳ, ಡೊಳ್ಳು ಕುಣಿತ ಮೆರವಣಿಗೆ ಕಳೆ ತಂದುಕೊಟ್ಟಿತು.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಂವಿಧಾನ ಪೀಠಿಕೆ ಓದುವುದರ ಮೂಲಕ ಪ್ರಮಾಣ ಮಾಡಲಾಯಿತು.ಕೊಲ್ಹಾರ್ ತಾಲೂಕಿನ ಹಣಮಾಪುರ, ಸಿದ್ದನಾಥ ಆರ್.ಸಿ, ಅರಷಣಗಿ, ತೆಲಗಿ, ಕೂಡಗಿ,…
ವಿಜಯಪುರ: ಸಂವಿಧಾನ ನಮಗೆಲ್ಲ ಮೂಲಭೂತ ಹಕ್ಕುಗಳನ್ನು ನೀಡಿದೆ. ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ನಡುವಿನಕೇರಿ ಹೇಳಿದರು.ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಅಭಿಯಾನವನ್ನು ಸ್ವಾಗತಿಸಿ ವೇಧಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತ ಸಂವಿಧಾನವು ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ ಎಂದು ಹೇಳಿದರು.ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಯುವಕರು, ಸೇರಿದಂತೆ ಸಾವಿರಾರು ಜನರು ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಮುಖ್ಯ ರಸ್ತೆಯಿಂದ ಮೆರವಣಿಗೆದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.ಸ್ತ್ಥಭ್ದಚಿತ್ರ ಜಾಥಾವು ಆಲಮೇಲ ತಾಲೂಕಿನ ಬಮ್ಮನಹಳ್ಳಿ, ಮಲಘಾಣ, ಕಕ್ಕಳಮೇಲಿ, ಬಗಲೂರು, ದೇವರನಾವದಗಿ, ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನ ಕುರಿತು ಜಾಗೃತಿ ಮೂಡಿಸಿತು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಂಗಮ್ಮ ದುದ್ದನಗಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಿದ್ಧರಾಮ ಅಂಕಲಗಿ, ಸಹಾಯಕ ನಿದೇಶಕರಾದ ಶಿವಲಿಂಗಪ್ಪ ಹಚಡದ, ಪಿಡಿಒ ಸಂಜುಕುಮಾರ ದೊಡ್ಡಮನಿ, ನೋಡಲ್…
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಸೂಚನೆ ವಿಜಯಪುರ: ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಕೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿ ಅನಿಷ್ಟ ಪದ್ದತಿಗಳಾದ ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹಗಳನ್ನು ತಡೆಯಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಎರಡನೇ ದಿವಸದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-೨೦೧೫ ಪೋಕ್ಸೋ ಕಾಯ್ದೆ-೨೦೧೨ ಬಾಲ್ಯವಿವಾಹ ನಿಷೇಧ ಕಾಯ್ದೆ-೨೦೦೬, ಆರ್.ಟಿ.ಇ ಕಾಯ್ದೆ-೨೦೦೯ರ ಕುರಿತು ಭಾಗೀದಾರ ಇಲಾಖೆಗಳ ಜಿಲ್ಲಾ,…
ವಿಜಯಪುರ: ವಿಜಯಪುರದ ೧೧೦/೧೧ಕೆವ್ಹಿ ವಿದ್ಯುತ್ ವಿತರಣ ಕೇಂದ್ರದಲ್ಲಿ ೧೧ಕೆವಿ ಮಾರ್ಗದ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪುಲಕೇಶಿ ಮತ್ತು ಇಂದಿರಾ ನಗರ ೧೧ಕೆವಿ ವಿದ್ಯುತ್ ಮಾರ್ಗಗಳಲ್ಲಿ ಬರುವ ಜಿಲ್ಲಾ ಪಂಚಾಯತ್ ಕಚೇರಿ, ಹೊಸ ತಹಶಿಲ್ದಾರ್ ಕಚೇರಿ, ಜುಮ್ಮಾ ಮಸೀದಿ ಹಿಂದುಗಡೆ, ಕೆ.ಎಚ್.ಬಿ. ಕಾಲೋನಿ, ಶೆಡಜಿ ಮೊಹಲ್ಲ, ಹಕೀಮ್ ಚೌಕ, ಜಾಡರಗಲ್ಲಿ, ಮುಧೋಳ ಆಸ್ಪತ್ರೆ, ಶಾಂತಿ ನಗರ, ಕಸ್ತೂರಿ ಕಾಲೋನಿ, ರೈಲ್ವೇ ಸ್ಟೇಶನ್, ಪರ್ಲ ಹೋಟೆಲ, ಬೆಂಡಿಗೇರಿ ಓಣಿ, ದಿವಟಗೇರಿ ಗಲ್ಲಿ, ಹಾಷಿಮ್ ಪೀರ್ ದರ್ಗಾ ಹತ್ತಿರದ ಪ್ರದೇಶಗಳಲ್ಲಿ ಫೆ.೧೧ರ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ದೇವರ ಹಿಪ್ಪರಗಿ ತಾಲೂಕಿನ ರೈತರಿಗೆ ಫೆ.೧೨ ಮತ್ತು ೧೩ರಂದು ಎರಡು ದಿನಗಳ ಕಾಲ ಸೂಕ್ಷ್ಮ ನೀರಾವರಿ ಘಟಕಗಳ ಉಪಯೋಗಗಳು ಮತ್ತು ನಿರ್ವಹಣೆ ವಿಷಯದ ಕುರಿತು ತರಬೇತಿ ಕಾರ್ಯಕ್ರಮ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದೆ.ಆಸಕ್ತ ರೈತರು ಭಾಗವಹಿಸಿ ತರಬೇತಿಯ ಸಂಪೂರ್ಣ ಮಾಹಿತಿ ಪಡೆಯುವಂತೆಯೂ, ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಫಾತೀಮಾ ಬಾನು ಸುತಾರ್ (೯೮೮೬೧೩೪೩೧೦) ಅವರನ್ನು ಸಂಪರ್ಕಿಸಬಹುದು ಎಂದು ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
’ವೀಣಾಂತರಂಗ’- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಅದೊಂದು ಮ್ಲಾನವಾದ ಸಾಯಂಕಾಲ.. ಸೂರ್ಯ ಮರಳಿ ಗೂಡು ಸೇರುವ ಸಮಯ ಬಾನೆಲ್ಲ ಕೆಂಪು ಓಕಳಿಯಿಂದ ತುಂಬಿತ್ತು. ತಮ್ಮ ಕೋಣೆಯ ತೆರೆದ ಕಿಟಕಿಯಿಂದ ಬಾನನ್ನು ನೋಡುತ್ತಿದ್ದ ವಿಜ್ಞಾನದ ಋಷಿ ಐನ್ ಸ್ಟೀನ ಅವರಿಗೆ ಮಾನವೀಯತೆಯೆಂಬ ರಕ್ತವು ಭೂಮಿಯಿಂದ ಚಿಮ್ಮಿ ಆಗಸದಲ್ಲಿಮಿಳಿತವಾಗಿ ಗಾಢಾಂಧಕಾರ ಮುಳುಗಿದಂತೆ ಭಾಸವಾಯಿತು. ಎಲ್ಲವನ್ನು ಕಳೆದುಕೊಂಡ ಉದಾಸ, ದುಃಖ ತಪ್ತ ಮುಖಭಾವ, ಕಣ್ಣು ತುಂಬಾ ನೀರು ತುಂಬಿಕೊಂಡ ಆ ವಿಜ್ಞಾನದ ರಾಜರ್ಷಿ ಐನ್ ಸ್ಟೀನ್ ತನ್ನ ಕೋಣೆಯಲ್ಲಿಯೇ ಕಳೆದ ನಾಲ್ಕು ದಿನಗಳಿಂದ ಕುಳಿತು ನಿಟ್ಟುಸಿರುಗರೆಯುತ್ತಿದ್ದರು. ಒಂದೊಮ್ಮೆ ತಮ್ಮ ವಯೊಲಿನ್ ಬಾರಿಸಲು ಪ್ರಯತ್ನಿಸಿ, ಸೋತರು. ಮೆಲ್ಲನೆ ಕೋಣೆಯ ಕದ ತೆರೆದು ಒಳಗೆ ಬಂದ ಐನ್ಸ್ಟೀನ ಅವರ ಮಗಳು ‘ಅಪ್ಪ ಈಗಲಾದರೂ ಕೊಂಚ ಊಟ ಮಾಡುವಿರ’ ಎಂದು ಕೇಳಿದಳು. ದೀರ್ಘವಾಗಿ ಉಸಿರನ್ನು ಹೊರ ಹಾಕಿಐನ್ ಸ್ಟೀನ್ ನನಗೆ ಹಸಿವಿಲ್ಲ ಎಂದುತ್ತರಿಸಿದಾಗನಿರಾಶೆಯಿಂದ ಆಕೆ ಕೋಣೆಯ ಬಾಗಿಲನ್ನು ಸದ್ದಿಲ್ಲದೆ ಮುಚ್ಚಿ ಹೊರ ನಡೆದಳು. ಕಳೆದ ನಾಲ್ಕು ದಿನಗಳ ಹಿಂದೆ…
ಎಂಎಲ್ಸಿ ಸುನೀಲಗೌಡ ಪಾಟೀಲ ಅವರಿಂದ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಪತ್ರ ವಿಜಯಪುರ: ಭಾರತದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಾರಂಭಿಸಲಾಗಿರುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಮತ್ತು ಮುಂಬೈ- ಸೋಲಾಪುರ ರೈಲನ್ನು ವಿಜಯಪುರದ ವರೆಗೆ ವಿಸ್ತರಿಸುವಂತೆ ಆಗ್ರಹಿಸಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಪತ್ರ ಬರೆದಿದ್ದಾರೆ.ಭಾರತದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಜನತೆ ಒಂದು ಸ್ಥಳದಿಂದ ಮತ್ತೊಂದು ಸ್ಳಳಕ್ಕೆ ಸಂಚರಿಸಲು ಹೆಚ್ಚುವರಿಯಾಗಿ ರೈಲುಗಳನ್ನು ಓಡಿಸುವುದರ ಜೊತೆಗೆ ರೈಲಿನಲ್ಲಿ ಸ್ವಚ್ಚತೆ ಸೇರಿದಂತೆ ನಾನಾ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಿರುವುದು ಸಂತಸದ ಸಂಗತಿಯಾಗಿದೆ.ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳ ಸಂಚಾರದ ಸಮಯ ಅನುಕೂಲವಾಗಿಲ್ಲ. ಅಲ್ಲದೇ, ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪುತ್ತಿಲ್ಲ. ಇದರಿಂದ ಕೆಲಸ ಕಾರ್ಯಗಳಿಗಾಗಿ ಮತ್ತು ದಿನನಿತ್ಯದ…
ವಿಜಯಪುರ: ನಗರದ ಎಸ್. ಎಸ್. ಹೈಸ್ಕೂಲ್ ಕ್ಯಾಂಪಸ್ ದೇಶ ನಾಡಿಗೆ ಗಣ್ಯಾತಿಗಣ್ಯರನ್ನು ಕೊಡುಗೆಯಾಗಿ ನೀಡಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ. ಪಾಟೀಲ ತಿಳಿಸಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಮನ್ವಯ ಇಂಗ್ಲಿಷ್ ಮೀಡಿಯಮ್ ಮತ್ತು ಎಸ್. ಎಸ್. ಪ್ರೈಮರಿ ಕನ್ನಡ ಮೀಡಿಯಂ ಶಾಲೆಯಲ್ಲಿ ಗುರುವಾರ ರಾತ್ರಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆ ಈಗ 114ನೇ ವರ್ಷ ಪೂರೈಸುತ್ತಿದೆ. ಈ ಸಂಸ್ಥೆಯ ಅಡಿಯಲ್ಲಿರುವ ಎಸ್. ಎಸ್. ಹೈಸ್ಕೂಲು ದೇಶಕ್ಕೆ ಉಪರಾಷ್ಟ್ರಪತಿಗಳಿಂದ ಹಿಡಿದು ಅನೇಕ ಜನ ಐಎಎಸ್ ಅಧಿಕಾರಿಗಳನ್ನು ಕೊಡುಗೆಯಾಗಿ ನೀಡಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ನಾಡಿನಾದ್ಯಂತ ಮತ್ತು ದೇಶಾದ್ಯಂತ ಸರಕಾರಿ ಉನ್ನತ ಹುದ್ದೆಗಳಲ್ಲಿದ್ದಾರೆ. ಅಲ್ಲದೇ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿಯೂ ಉನ್ನತ ಸ್ಥಾನ ಗಳಿಸಿದ್ದಾರೆ ಎಂದು ಹೇಳಿದರು.ಸಮನ್ವಯ ಶಾಲೆಯಲ್ಲಿ ಕಡಿಮೆ ಶುಲ್ಕ ಪಡೆದು ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದೆ. 2017ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಈಗ 1100…
Udayarashmi kannada daily newspaper
