ಸಿಂದಗಿ: ಅನಾಫೆಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಹರಡುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದರು.
ಪಟ್ಟಣದ ಶ್ರೀದೇವಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಸಿಂದಗಿ ತಾಲೂಕಾ ಆರೊಗ್ಯ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ಆಚರಣೆ ಮಾಡಲಾಗುತ್ತಿದೆ. ಈ ರೋಗದ ಮುಖ್ಯ ಲಕ್ಷಣ ಸಾಮಾನ್ಯವಾಗಿ ಈ ರೋಗದಿಂದ ತೀವ್ರ ಪರಿಣಾಮಗಳು ಆಗದಿದ್ದರೂ, ಫಾಲ್ಸಿಪಾರಂ ಎನ್ನುವ ಜಾತಿಯ ರೋಗಾಣುವಿನಿಂದ ಕೆಲವೊಮ್ಮೆ ವಿಶೇಷ ತೊಂದರಗಳು ಉಂಟಾಗಬಹುದು. ರೋಗ ಮೆದುಳುಗೂ ಮತ್ತು ಇತರ ಒಳ ಅಂಗಾಂಗಗಳಿಗೆ ಹರಡಿ ವ್ಯಕ್ತಿ ಸಾವು ಸಂಭವಿಸಬಹುದು ಎಂದರು.
ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ ಮಾತನಾಡಿ, ಈ ರೋಗವನ್ನು ತಡೆಗಟ್ಟಲು ಸರಕಾರ ವ್ಯಾಪಕವಾಗಿ ಎಲ್ಲೆಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯವೇ ಭಾಗ್ಯ ಎಂಬಂತೆ ಜನರ ಆರೋಗ್ಯ ಕಾಪಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮಲೇರಿಯಾ ಬಾರದಂತೆ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛಂದವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವಾಯ್.ಚೌಡಕಿ, ಎಸ್.ಎಸ್. ಹೂಗಾರ, ಭೀಮಾಶಂಕರ ಬಿರಾದಾರ, ರಾಹುಲ್ ಚವ್ಹಾಣ, ಬಸವರಾಜ ಪಾಟೀಲ್, ಡಾ.ಆರ್.ಎಸ್.ಇಂಗಳೆ, ಪ್ರಭು ಜಂಗಿನಮಠ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರೇಂದ್ರ ಪವಾಡೆ ಸೇರಿದಂತೆ ಇಲಾಖೆಯ ಅಧಿಕಾರಗಳು ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

