ಬಸವನಬಾಗೇವಾಡಿ: ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕಾರ್ಯ ಮತ್ತು ಪಾಲನೆ ಉಪವಿಭಾಗದ ಕಚೇರಿ ಮುಂಭಾಗ ರೈತ ಬಾಂಧವರಿಗೆ ಕಳಪೆ ಗುಣಮಟ್ಟದ ವಿದ್ಯುತ್ ಪರಿವರ್ತಕ(ಟಿಸಿ) ನೀಡಿದ ವಿದ್ಯುತ್ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ರೈತರು ತಂದಿದ್ದ ಕಳಪೆ ವಿದ್ಯುತ್ ಪರಿವರ್ತಕವನ್ನು ಬದಲಾಯಿಸಿ ಹೊಸ ವಿದ್ಯುತ್ ಪರಿವರ್ತಕ ರೈತರಿಗೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರೈತ ಬಾಂಧವರೊಂದಿಗೆ ಸೇರಿ ಹೆಸ್ಕಾಂ ಎಇಇ ಜಿ.ವ್ಹಿ.ಸಂಪಣ್ಣನವರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ ಮಾತನಾಡಿ, ರೈತ ಬಾಂಧವರು ಕೊಳವೆ ಬಾವಿ ಇಲ್ಲವೇ ತೆರೆದ ಬಾವಿಯಿಂದ ಬೆಳೆಗಳಿಗೆ ನೀರುಣಿಸಲು ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ವಿದ್ಯುತ್ ಪರಿವರ್ತಕ ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಬಳಿ ತೆರಳಿ ಇದಕ್ಕೆ ಸಂಬಂಧಿಸಿದಂತೆ ಅವರು ಹೇಳಿದಷ್ಟು ಹಣ ನೀಡಿ ವಿದ್ಯುತ್ ಸಂಪರ್ಕ ಪಡೆದಕೊಳ್ಳುತ್ತಾರೆ. ಗುತ್ತಿಗೆದಾರರು ರೈತರಿಂದ ಹಣ ವಿದ್ಯುತ್ ಸಂಪರ್ಕಕ್ಕೆ ಬೇಕಾದ ವಿದ್ಯುತ್ ಪರಿವರ್ತಕವನ್ನು ಜೋಡಿ ಕಂಬಗಳ ಮೇಲೆ ಎಂಗಲ್ ಹಾಕಿ ಕೂಡಿಸದೇ ಸಿಮೆಂಟ್ ಬ್ಲಾಕ್ ಹಾಕಿ ಕೂಡಿಸಿದ್ದಾರೆ. ಇದರಿಂದಾಗಿ ಜನ-ಜಾನುವಾರುಗಳಿಗೆ ತುಂಬಾ ಅಪಾಯವಾಗುವ ಸಂಭವ ಸಾಧ್ಯತೆ ಹೆಚ್ಚು. ವಿದ್ಯುತ್ ಪರಿವರ್ತಕವನ್ನು ಕೂಡಿಸುವ ಪದ್ಧತಿಯಲ್ಲಿಯೇ ಗುತ್ತಿಗೆದಾರರು ಕ್ರಮತೆಗೆದುಕೊಳ್ಳಲು ಹೆಸ್ಕಾಂ ಅಧಿಕಾರಿಗಳು ಗಮನ ಹರಿಸಬೇಕಾದ ಅಗತ್ಯವಿದೆ. ಬರಗಾಲದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಹೋಗುವುದರಿಂದಾಗಿ ರೈತ ಬಾಂಧವರ ಬೆಳೆಗಳು ವಿದ್ಯುತ್ ಇಲ್ಲದೇ ಒಣಗಿ ಹೋಗುತ್ತವೆ. ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದರು.
ತಾಲೂಕಿನ ಮಸಬಿನಾಳ ಗ್ರಾಮದ ಶಿವಾನಂದ ಗುದ್ದಿ ಎಂಬ ರೈತ ಗುತ್ತಿಗೆದಾರರಿಂದ ಕೆಲ ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಈಗ ವಿದ್ಯುತ್ ಪರಿವರ್ತಕ ಸುಟ್ಟಿದೆ. ಇದನ್ನು ಬದಲಾಯಿಸಿ ಕೊಡಿ ಎಂದು ಹೆಸ್ಕಾಂ ಇಲಾಖೆಗೆ ಬಂದರೆ ಈ ವಿದ್ಯುತ್ ಪರಿವರ್ತಕ ಕಳಪೆಯಾಗಿದೆ. ಇದು ನಮ್ಮ ಕಂಪನಿ ತೆಗೆದುಕೊಳ್ಳಲು ಬರುವುದಿಲ್ಲ. ವಿದ್ಯುತ್ ಪರಿವರ್ತಕ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ವಿದ್ಯುತ್ ಇಲ್ಲದೇ ಇರುವದರಿಂದಾಗಿ ಬೆಳೆ ಒಣಗಿ ಹೋಗುತ್ತಿವೆ. ಜನ-ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ಇವರಿಗೆ ವಂಚಿಸಿದ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಉತ್ತಮ ಗುಣಮಟ್ಟದ ವಿದ್ಯುತ್ ಪರಿವರ್ತಕವನ್ನು ಅಧಿಕಾರಿಗಳು ನೀಡಬೇಕೆಂದು ಆಗ್ರಹಿಸಿದ ಅವರು ಇದೇ ರೀತಿಯಲ್ಲಿ ತಾಲೂಕಿನಲ್ಲಿ ವಿದ್ಯುತ್ ಗುತ್ತಿಗೆದಾರರು ಸು.3 ಸಾವಿರ ಕಳಪೆ ವಿದ್ಯುತ್ ಪರಿವರ್ತಕ ಅಳವಡಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಅಧಕಾರಿಗಳು ತನಿಖೆ ಮಾಡಿ ಸೂಕ್ತ ಕ್ರಮವಹಿಸಬೇಕು. ಈ ವಿದ್ಯುತ್ ಪರಿವರ್ತಕಗಳಿಗೆ ಆರ್ಆರ್ ಸಂಖ್ಯೆ ನೀಡಿದ ಹೆಸ್ಕಾಂ ಅಧಿಕಾರಿಗಳ ಮೇಲೆಯೂ ಸೂಕ್ತ ಕ್ರಮ ತೆಗೆದುಕೊಂಡು ಅವರನ್ನು ಸೇವೆಯಿಂದ ವಜಾ ಮಾಡಬೇಕು. ರೈತರಿಗೆ ವಂಚಿಸಿದ ಗುತ್ತಿಗೆದಾರರ ಅನುಮತಿ ರದ್ದಾಗಬೇಕು. ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ರೈತ ಸಂಘದಿಂದ ಹೆಸ್ಕಾಂ ಇಲಾಖೆಯ ಮುಂಭಾಗ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಎಇಇ ಅವರು ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಪಿ.ಎಂ. ಉಕ್ಕಲಿ, ರೈತರಾದ ಸುರೇಶ ಬಾಗೇವಾಡಿ, ರಾಜಶೇಖರ ಗುದ್ದಿ, ಶಿವಾನಂದ ಗುದ್ದಿ, ಸಂತಪ್ಪ ಮಣ್ಣೂರ, ಮಲ್ಲಪ್ಪ ಮಟ್ಯಾಳ, ಶಿವಾನಂದ ಹರನಾಳ, ತಿಪ್ಪಣ್ಣ ಪ್ಯಾಟಿ, ನಾಗಪ್ಪ ಬಾಗೇವಾಡಿ, ಚಿದಾನಂದ ಬೈರವಾಡಗಿ, ಬಂಡೆಪ್ಪ ಬೈರವಾಡಗಿ, ಪ್ರಕಾಶ ಬಾಗೇವಾಡಿ, ಶಂಕ್ರು ಗುದ್ದಿ, ಶ್ರೀಶೈಲ ಮಲ್ಲಾಳ, ಉಮೇಶ ಗುದ್ದಿ, ಶಾಂತಪ್ಪ ಹಡಗಲಿ ಇದ್ದರು.
Subscribe to Updates
Get the latest creative news from FooBar about art, design and business.
ಕಳಪೆ ಟಿಸಿ ಪೂರೈಸಿದ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ರೈತಸಂಘ ಆಗ್ರಹ
Related Posts
Add A Comment

