Author: editor.udayarashmi@gmail.com

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಗುರುವಾರ ತಾಲೂಕಾಡಳಿತದಿಂದ ಸಂತ ಸೇವಾಲಾಲ ಜಯಂತಿ ಆಚರಿಸಲಾಯಿತು.ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಸಂತ ಸೇವಾಲಾಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರದ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಸಮಾಜಕ್ಕೆ ಅವರ ಸಂದೇಶಗಳನ್ನು ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಮಹಾತ್ಮರು ಸಾರಿದ ಸಂದೇಶಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಜೀವನ ಮಾಡಿದರೆ ಸುಂದರವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಬಂಜಾರಾ ಸಮಾಜ ಧರ್ಮಗುರು ಸಂತ ಸೇವಾಲಾಲ ಅವರ ಬೋಧನೆಗಳು ಸಾರ್ವಕಾಲಿಕವಾಗಿವೆ. ನಮ್ಮ ಸಮಾಜದ ತಾಂಡಾಗಳು ಹಿಂದುಳಿದಿವೆ. ಅವುಗಳು ಅಭಿವೃದ್ಧಿಯಾಗುವ ಜೊತೆಗೆ ಅಲ್ಲಿ ಸರ್ಕಾರ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡುವಂತಾಗಬೇಕೆಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಅವರು ಸಂತ ಸೇವಾಲಾಲ ಅವರ ಜೀವನ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಡಿಎಸ್ಎಸ್ ಮುಖಂಡ ಅಶೋಕ ಚಲವಾದಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ರವಿ ನಾಯ್ಕೋಡಿ, ದೇವೇಂದ್ರ ಚವ್ಹಾಣ,…

Read More

ಬಸವನಬಾಗೇವಾಡಿ: ಸೇವಾಲಾಲ ಒಬ್ಬ ದನಗಾಹಿಯಾಗಿದ್ದರೂ ಜೀವನದ ಅನುಭವವನ್ನು ತತ್ವದ ಮೂಲಕ ಭೋದಿಸಿ ಜನರಲ್ಲಿ ಅಜ್ಞಾನವನ್ನು ದೂರ ಮಾಡಿದ ಮಹಾನ ದಾರ್ಶನಿಕ ಎಂದು ರಾಷ್ಟೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ ವೃತ್ತದಲ್ಲಿ ರಾಷ್ಟೀಯ ಬಸವಸೈನ್ಯವು ಗುರುವಾರ ಸೇವಾಲಾಲರ ಜಯಂತೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇವಾಲಾಲರ ಭಾವಚಿತ್ರಕ್ಕೆ ಪೂಜೆಯ ಸಲ್ಲಿಸಿ ಮಾತನಾಡಿದ ಅವರು, ಸತ್ಯ,ಅಹಿಂಸೆ,ದಯೆ,ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದವರು. ಇದಲ್ಲದೇ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ. ವ್ಯಸನಗಳಿಂದ ದೂರವಿರಿ ಪ್ರಾಮಾಣಿಕರಾಗಿ ಜೀವಿಸಿ ಕಷ್ಟದಲ್ಲಿ ಇರುವರಿಗೆ ಸಹಾಯ ಮಾಡಬೇಕು ಎಂದು ಹೇಳಿದವರು ಸೇವಾಲಾಲರು. ಇಂದಿಗೂ ಅವರ ಬೋಧನೆಗಳು ಬಂಜಾರಾ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರಾಷ್ಟೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೋಟ್ರಶೆಟ್ಟಿ , ಸುನೀಲಗೌಡ ಚಿಕ್ಕೊಂಡ, ನಿಂಗಪ್ಪ ಅವಟಿ, ಮನ್ನಾನ ಶಾಬಾದಿ ,ಸುರೇಶ ದೇಸಾಯಿ, ಸಂಗಮೇಶ ಕಲ್ಲೂರ, ಮಂಜುನಾಥ ಜಾಲಗೇರಿ, ಮಹೇಶ ಹೆರಕಲ್, ವಿಶ್ವನಾಥ ಗಬ್ಬೂರ , ಮಾಂತೇಶ ಹೆಬ್ಬಾಳ, ಶಂಕರ…

Read More

ಬಸವನಬಾಗೇವಾಡಿ: ಸತತ ಪ್ರಯತ್ನ, ಓದಿನಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಇದ್ದರೆ ವಿದ್ಯಾರ್ಥಿಗಳಿಗೆ ಯಾವುದು ಅಸಾಧ್ಯವಲ್ಲ ಎಂದು ವಿಜಯಪುರದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಕೆಲೂರ ಹೇಳಿದರು.ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಸ್ನೇಹಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡತನ, ಕನ್ನಡ ಮಾಧ್ಯಮ, ಹಳ್ಳಿ ಬದುಕಿನ ಹಿನ್ನೆಲೆ ಇದ್ದರೂ ಗುರಿ ಮುಟ್ಟಿದ ನೂರಾರು ಸಾಧಕರು ನಮ್ಮ ಕಣ್ಣಮುಂದಿದ್ದಾರೆ. ಸಾಧಿಸುವ ಛಲದೊಂದಿಗೆ ಸತತ ಪ್ರಯತ್ನದಲ್ಲಿದ್ದವರು ಯಶಸ್ಸು ಕಾಣುತ್ತಾರೆ ಎಂದು ಹೇಳಿದ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದರೆ ರೂ.25,000 ಹಾಗೂ ಗಣಿತ ವಿಷಯದಲ್ಲಿ 100 ಅಂಕ ಪಡೆದರೆ ರೂ. 5,000 ಬಹುಮಾನ ನೀಡುವುದಾಗಿ ಭರವಸೆ ನೀಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು.ರಾಠೋಡ ಮಾತನಾಡಿ, ಅಂಕ ಗಳಿಕೆ ಜೊತೆಗೆ ಸಂಸ್ಕಾರಯುತ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡ ಅನಿಲ ಅಗರವಾಲ ಮಾತನಾಡಿದರು.ಪುರಸಭೆ ಸದಸ್ಯ ದೇವೇಂದ್ರ ರಾಠೋಡ, ಎಸ್.ಎ.ದೇಗಿನಾಳ, ಮುರಗೇಶ…

Read More

ಬಸವನಬಾಗೇವಾಡಿ: ವಿದ್ಯಾರ್ಥಿಗಳು ಮೊಬೈಲ್, ಟಿವಿ ಧಾರವಾಹಿಗಳನ್ನು ವೀಕ್ಷಣೆ ಮಾಡುವದನ್ನು ಬಿಟ್ಟು ಅಧ್ಯಯನದ ಕಡೆಗೆ ಹೆಚ್ಚು ಗಮನಹರಿಸಿದರೆ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂದು ವಿಜಯಪುರದ ಚಾಣಕ್ಯ ಕರಿಯರ ಅಕಾಡೆಮಿಯ ಅಧ್ಯಕ್ಷ ಎನ್.ಎಂ. ಬಿರಾದಾರ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ. ತಾವುಗಳು ನಮ್ಮ ಅಕಾಡೆಮಿ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಒಳ್ಳೆಯ ವಿಚಾರಗಳನ್ನು ಗುರಿಯಾಗಿಟ್ಟುಕೊಂಡು ಅಭ್ಯಾಸದಲ್ಲಿ ತೊಡಗಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಮಾತನಾಡಿ, ಇಲಾಖೆಯ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ನಿರಂತರ ಅಧ್ಯಯನದೊಂದಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದುಕೊಳ್ಳಬೇಕು ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ, ವಕೀಲ ವಿ.ಬಿ.ಮರ್ತುರ, ಪ್ರಾಚಾರ್ಯ ಎಂ.ಬಿ.ವಗ್ಗರ ಮಾತನಾಡಿದರು. ಉಪನಿರ್ದೇಶಕರ ಕಚೇರಿ ಶಾಖಾಧಿಕಾರಿ ಪ್ರಕಾಶ…

Read More

ವಿಜಯಪುರ: ವಿವೇಕಾನಂದ ಡಬ್ಬಿ ಅವರನ್ನು ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರನ್ನಾಗಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಆರ್. ರಘು (ಕೌಟಿಲ್ಯ) ಅವರು ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಲೋಕಸಭಾ ಚುನಾವಣೆಗಳೂ ಸೇರಿದಂತೆ ಇತರ ಚುನಾವಣೆಗಳಲ್ಲಿ ಪಕ್ಷವು ಜಯಭೇಟಿ ಬಾರಿಸಲು ಸಮರ್ಪಣಾ ಮನೋಭಾವದಿಂದ ಶ್ರಮಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಆಲಮಟ್ಟಿ: ಉದ್ಯಾನದ ಕೂಲಿ ಕಾರ್ಮಿಕರ ಸಮಸ್ಯೆಗೆ ಸಚಿವ ಶಿವಾನಂದ ಪಾಟೀಲ ಸ್ಪಂದಿಸಿದ್ದು, ದೂರವಾಣಿಯ ಮೂಲಕ ಕೆಬಿಜೆಎನ್ ಎಲ್ ಎಂಡಿ ಅವರಿಗೆ ಉದ್ಯಾನ ನಿರ್ಹಣೆಯ ಟೆಂಡರ್ ಮುಂದೂಡಲು ಸೂಚಿಸಿದ್ದು, ವಿಧಾನ ಮಂಡಲ ಅಧಿವೇಶನದ ನಂತರ ಕಾರ್ಮಿಕರ ಸಮಸ್ಯೆಗೆ ಕಾಯಂ ಪರಿಹಾರ ಒದಗಿಸಲಾಗುವ ಭರವಸೆ ನೀಡಿದ್ದಾರೆ.ಬೆಂಗಳೂರಿಗೆ ತೆರಳಿ ಸಚಿವರಿಗೂ ಧರಣಿನಿರತರು ಗುರುವಾರ ಮನವಿ ಸಲ್ಲಿಸಿದರು.ಟೆಂಡರ್ ಮುಂದೂಡಿದ ಬಗ್ಗೆ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ, ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ತಿಳಿಸಿ, ಧರಣಿ ಹಿಂಪಡೆಯಲು ಕೋರಿದರು. ನಿಡಗುಂದಿ ಸಿಪಿಐ ಶರಣಗೌಡ ಗೌಡರ ಇದ್ದರು.ಉದ್ಯಾನದ ನಿರ್ವಹಣೆ ಕಾಮಗಾರಿಯನ್ನು ಟೆಂಡರ್ ಕರೆದಿದ್ದರಿಂದ ಕಳೆದ 22 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 300 ಕ್ಕೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿತ್ತು. ಹೀಗಾಗಿ ಅವರು ಫೆ. 12 ರಿಂದ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.ಹೀಗಾಗಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ…

Read More

ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದ ಮಹಾರಾಷ್ಟ್ರ ಸ್ಪೀಕರ್ ಮುಂಬಯಿ: ಕಳೆದ ವರ್ಷ ಜೂನ್‌ನಲ್ಲಿ ಶರದ್ ಪವಾರ್ ವಿರುದ್ಧ ಬಂಡಾಯವೆದ್ದಿದ್ದ 41 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಿರಸ್ಕರಿಸಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ಅಜಿತ್ ಪವಾರ್ ಬಣವನ್ನು ‘ನೈಜ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ’ ಎಂದು ಹೇಳಿದೆ.ಅಜಿತ್ ಪವಾರ್ ಅವರ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದಿರುವ ಮತ್ತು ಬಿಜೆಪಿ-ಶಿವಸೇನೆಯ ಇದೇ ರೀತಿಯ ಒಡೆದುಹೋದ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಹೊಸ ರಾಜ್ಯ ಸರ್ಕಾರ ರಚಿಸಲು ಅಜಿತ್ ಪವಾರ್ ಜೊತೆಗೂಡಿದ್ದರು. ‘ಶಾಸಕರು ಪಕ್ಷದ ಇಚ್ಛೆಯಂತೆ ತೀರ್ಮಾನ ತಗೆದುಕೊಂಡಿರುವ ಕಾರಣ ಅವರನ್ನು ಅನರ್ಹಗೊಳಿಸಲಾಗುವುದಿಲ್ಲ’ ಎಂದು ನಾರ್ವೇಕರ್ ಹೇಳಿದರು.‘ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಿಜವಾದ ರಾಜಕೀಯ ಪಕ್ಷ ಎಂದು ನಾನು ಭಾವಿಸುತ್ತೇನೆ. ಅಜಿತ್ ಪವಾರ್ 41 ಶಾಸಕರೊಂದಿಗೆ ಶಾಸಕಾಂಗ ಬಹುಮತವನ್ನು ಹೊಂದಿದ್ದಾರೆ. ಇದು ನಿರ್ವಿವಾದವಾಗಿದೆ’ ಎಂದು ಸ್ಪೀಕರ್ ಗುರುವಾರ ಸಂಜೆ ಹೇಳಿದರು.*53 ಶಾಸಕರನ್ನು ಹೊಂದಿದ್ದ ಎನ್‌ಸಿಪಿ*53 ಶಾಸಕರನ್ನು ಹೊಂದಿದ್ದ ಎನ್‌ಸಿಪಿಯ 41 ಮಂದಿ ಅಜಿತ್ ಪವಾರ್ ಪರವಾಗಿ…

Read More

ಸಿಂದಗಿ: ಸಮಾಜದ ಓರೆ ಕೋರೆಗಳನ್ನು ಬಲ್ಲವರಾಗಿದ್ದ ಸೇವಾಲಾಲ್ ಅವರು ಪ್ರತಿಯೊಂದು ವಿಚಾರವನ್ನು ಸಮರ್ಥವಾಗಿ ವಿಶ್ಲೇಷಣೆ ಮಾಡಿ ಅದರಿಂದಾಗುವ ಅಪಾಯವನ್ನು ಜನರಿಗೆ ತಿಳಿಹೇಳುತ್ತಿದ್ದರು ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಹಮ್ಮಿಕೊಂಡ ಸಂತ ಸೇವಾಲಾಲ್ ಜಯಂತಿ ಅಚರಣೆ ಮಾಡಲಾಯಿತು. ಈ ವೇಳೆ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಡಾ.ಅನಿಲ ನಾಯಕ್, ಮಾಜಿ ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ನಿಖಿಲ ಖಾನಾಪೂರ, ಸುನಂದಾ ಯಂಪುರೆ, ಸೇರಿದಂತೆ ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಸೇರಿದಂತೆ ಅನೇಕರು ಇದ್ದರು.ತಾಲೂಕು ಸಾರ್ವಜನಿಕ ಆಸ್ಪತ್ರೆ: ತಾಲೂಕ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ೨೮೫ನೆಯ ಶ್ರೀ ಸಂತ ಸೇವಾಲಾಲರ ಜಯಂತಿ ಆಚರಿಸಲಾಯಿತು.ಈ ವೇಳೆ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜಶೇಖರ್ ನರಗೋದಿ ಮಾತನಾಡಿದರು.ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ.ರಮೇಶ್ ರಾಠೋಡ ಆಪ್ತಸಮಾಲೋಚಕ ಎಂ.ಪಿ.ಸಾಗರ್ ಶುಶ್ರೂಷಕಿ ಅಧಿಕಾರಿ ವಿದ್ಯಾ ಹಿರೇಪಟ್, ದೇವಮ್ಮ…

Read More

ವಿಜಯಪುರ: ಮದ್ರಾಸ್ ರೆಜಿಮೆಂಟ್‌ನ ಎಲ್ಲಾ ಮಾಜಿ ಸೈನಿಕರು ಮತ್ತು ವೀರನಾರಿಯರ ಜೊತೆ ಪರಸ್ಪರ ಭೇಟಿ ಹಾಗೂ ಕುಂದು ಕೊರತೆ ನಿವಾರಿಸಲು ಮದ್ರಾಸ್ ರೆಜಿಮೆಂಟ್‌ನಿಂದ ಒಂದು ತಂಡ ದಿನಾಂಕ : ೨೨-೦೨-೨೦೨೪ರಂದು ಸೈನಿಕ್ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆ ವಿಜಯಪುರ ಕಾರ್ಯಾಲಯಕ್ಕೆ ಭೇಟಿ ನೀಡಲಿದ್ದು, ಮಾಜಿ ಸೈನಿಕರು, ವೀರ ನಾರಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More