Author: editor.udayarashmi@gmail.com

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ, ಮುಂಡರಗಿ-ಗದಗ ಗ್ರಾಮೀಣ ಜನರ ಬದುಕಿನ ಬವಣೆಗಳನ್ನು ನೀಗಿಸುವ, ಅವರಿಗೆ ಸ್ಥಳೀಯವಾಗಿ ಆಡಳಿತ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಯಾಗಿರುವ ಸ್ಥಳೀಯ ಆಡಳಿತಾತ್ಮಕ ವ್ಯವಸ್ಥೆಯನ್ನೇ ಪಂಚಾಯತ್ ರಾಜ್ ಎಂದು ಕರೆಯುವುದು. ಇದನ್ನು ಮುಖ್ಯವಾಗಿ ಮೂರು ವಲಯಗಳಲ್ಲಿ ಗುರುತಿಸಲಾಗಿದ್ದು ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕುಗಳ ವ್ಯಾಪ್ತಿಯಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ/ ಪರಿಷತ್ ಎಂದು ಗುರುತಿಸಲಾಗಿದೆ.20 ಲಕ್ಷಕ್ಕಿಂತಲೂ ಕಡಿಮೆ ಮತದಾರರನ್ನು ಹೊಂದಿರುವ ಭಾಗದಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇವಲ ಎರಡು ರೀತಿಯ ಪಂಚಾಯತ್ ವ್ಯವಸ್ಥೆಗಳು ಇದ್ದು ಆಡಳಿತ ನಡೆಸಲು ಅನುಕೂಲ ಕಲ್ಪಿಸಲಾಗಿದೆ.ಎಲ್ಲಾ 3 ಪಂಚಾಯಿತಿ ವ್ಯಾಪ್ತಿಗಳಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗಳು ಜರುಗುತ್ತವೆ. ಆಯಾ ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ಇರುವ ಜನರು ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಈ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರು ಕಡ್ಡಾಯವಾಗಿ ಇರಲೇಬೇಕು. ಇದರ ಜೊತೆಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಕ್ಷರು ಮತ್ತು ಮಹಿಳಾ ಸದಸ್ಯರು ಮೂರನೇ ಒಂದು…

Read More

ವಿಜಯಪುರ: ಬೆಂಗಳೂರಿನ ಬಸವಾನುಯಾಯಿ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಬಸನಗೌಡ ಬಿ. ಪಾಟೀಲ(63) ಅಣ್ಣ ಬಸವಣ್ಣನವರ ತತ್ವಗಳ ಪ್ರಸಾರಕ್ಕಾಗಿ ಕಳೆದ 12 ವರ್ಷಗಳಿಂದ ಬಸವಜ್ಯೋತಿ ಯಾತ್ರೆ ನಡೆಸುತ್ತಿದ್ದು, ಈಗ ಮತ್ತೆ ಬಸವನ ಬಾಗೇವಾಡಿಯಿಂದ ವಿಜಯಪುರವರೆಗೆ ಓಡಿಕೊಂಡು ಬಸವಜ್ಯೋತಿ ತರಲಿದ್ದಾರೆ.ವಿಜಯಪುರ ಜಿಲ್ಲೆ ಹಂದಿಗನೂರ ಗ್ರಾಮದವರಾಗಿರುವ ಬಸನಗೌಡ ಬಿ. ಪಾಟೀಲ ಮೇ 9 ರಂದು ಗುರುವಾರ ಮಧ್ಯರಾತ್ರಿ 12 ಗಂಟೆಗೆ ಅಣ್ಣ ಬಸವಣ್ಣನವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ಹೊರಡಲಿರುವ ಇವರು, ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ವಿಜಯಪುರ ನಗರದಲ್ಲಿರುವ ಬಸವೇಶ್ವರ ಸರ್ಕಲ್ ತಲುಪಲಿದ್ದಾರೆ. ಬಸನಗೌಡ ಬಿ. ಪಾಟೀಲ ಜೊತೆಗೆ ಈ ಬಾರಿ ಮ್ಯಾರಾಥಾನ್ ನಲ್ಲಿ ಹೆಸರು ಮಾಡಿರುವ ಅಲ್ಟ್ರಾ ರನ್ನರ್ ಜಗದೀಶ ದಮಾನಿಯಾ(63), ಡಾ. ಚಂದ್ರಶೇಖರ ಚಿಮಕೋಡೆ, ಮಲ್ಲಿಕಾರ್ಜುನ ಅವಂತಿ ಹಾಗೂ ಡಾ. ಅಭಿನಂದ ಬೆಡಗೆ ಕೂಡ ಪಾಲ್ಗೋಳ್ಳುತ್ತಿದ್ದಾರೆ. ಇವರು ಮಸ್ಸೂರಿಯಿಂದ ಯಮನೌತ್ರಿವರೆಗೆ ಕಳೆದ ಆರು ವರ್ಷಗಳಿಂದ ಪಾಲ್ಗೋಳ್ಳುತ್ತಿದ್ದಾರೆ. ಅಲ್ಲದೇ, ಬೆಂಗಳೂರಿನಿಂದ ಚೆನೈವರೆಗೆ 340 ಕಿ. ಮೀ. ನ್ನು ಏಳು ದಿನಗಳಲ್ಲಿ ಓಡುವ ಮೂಲಕ ಗಮನಾರ್ಹ…

Read More

ಸಚಿವ ಎಂ.ಬಿ.ಪಾಟೀಲರ ಜೊತೆ ಊಟ | ಮನೆಯವರ ಜೊತೆ ಮಾತು | ದೇಗುಲಗಳ ದರ್ಶನ ವಿಜಯಪುರ: ಜೋರಾದ ಮಳೆ ಬಂದು ಈ ಬಿರು ಬೇಸಿಗೆಯಲ್ಲಿ ಒತ್ತಡದ ಸೆಖೆ ತಂದಂತೆ ಮಂಗಳವಾರ ಲೋಕಸಭೆ ಚುನಾವಣೆ ಮುಗಿದು ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತದಾನದ ಮರು ದಿನ ನಿರಾಳ ನಗೆ ಬೀರುತ್ತ ಓಡಾಡಿದ್ದು ಕಂಡು ಬಂತು.ಚುನಾವಣೆ ಘೋಷಣೆಗೂ ಮುನ್ನವೇ ಕಳೆದ ನಾಲ್ಕು ತಿಂಗಳಿಂದಲೇ ಪ್ರೊ.ರಾಜು ಆಲಗೂರರು ಕಾಲಿಗೆ ಚಕ್ರ ಕಟ್ಟಿದ್ದರು. ನೂರಾ ಇಪ್ಪತ್ತು ದಿನಗಳಿಂದ ಕ್ಷೇತ್ರದ ಊರುಗಳನ್ನು ಸುತ್ತಲು ಆರಂಭಿಸಿದ್ದರು. ಯಾಕೆಂದರೆ ಅವರಿಗೆ ಗೊತ್ತಿತ್ತು, ಈ ಸಲ ಟಿಕೆಟ್ ತಮಗೇ ಎಂದು! ಅಂದುಕೊಂಡಂತೆ ಮೊದಲ ಪಟ್ಟಿಯಲ್ಲಿಯೇ ವಿಜಯಪುರದಿಂದ ಇವರಿಗೆ ಟಿಕೆಟ್ ಘೋಷಣೆಯಾಯಿತು. ಅದೂ ಜಿಲ್ಲೆಯಿಂದ ರಾಜ್ಯದಲ್ಲೇ ದಾಖಲೆ ಎನ್ನುವಂತೆ ಇವರೊಬ್ವರದೇ ಹೆಸರು ಪಕ್ಷದ ಹೈಕಮಾಂಡ್ ಅಂಗಳ ತಲುಪಿತ್ತು. ಮುಂದೆ ಇವರು ತಿರುಗಿ ನೋಡದೇ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡರು. ಮೊದಲ ದಿನದಿಂದ ಮತದಾನದ ಕೊನೆಯ ದಿನದವರೆಗೂ ಇವರ ವೇಗ ಎಲ್ಲೂ ಕಮ್ಮಿಯಾಗಲಿಲ್ಲ.ಕುಟುಂಬದ ಜೊತೆ ಸಮಯ..ಬೆಳಗ್ಗೆ ಬೇಗನೇ ಎದ್ದ…

Read More

ಮುದ್ದೇಬಿಹಾಳ: ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯಲಿರುವ ೩ನೇ ಹಂತದ ಮತದಾನಕ್ಕೆ ತಾಲೂಕು ಆಡಳಿತ ಸಂಪೂರ್ಣ ಸಿದ್ಧವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ರಾಜಶೇಖರ ವಿಲಿಯಮ್ಸ್ ತಿಳಿಸಿದರು.ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಮತಕ್ಷೇತ್ರದಲ್ಲಿ ಒಟ್ಟು ೨೪೫ ಮತಗಟ್ಟೆಗಳಿದ್ದು ಒಟ್ಟು ೨೨೩೬೫೬ ಮತದಾರರಿದ್ದಾರೆ. ಅದರಲ್ಲಿ ೧೧೨೬೯೪ ಪುರುಷ ಮತದಾರರು, ೧೧೦೯೩೭ ಮಹಿಳಾ ಮತದಾರರು ಸೇರಿದಂತೆ ಇತರೆ ೨೫ ಮತದಾರರಿದ್ದಾರೆ. ೧೨೩ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಗಳಲ್ಲಿ ಮೈಕ್ರೋ ಆಬ್ಸರ್ವರ್ ನೇಮಕ ಮಾಡಲಾಗಿದೆ. ಮತಕ್ಷೇತ್ರದಲ್ಲಿ ೩ ಸೂಕ್ಷ್ಮ ಮತಗಟ್ಟೆಗಳು, ೨ಅತೀ ಸೂಕ್ಷö್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಮತಗಟ್ಟೆಗಳಿಗೆ ಚುನಾವಣಾ ನಿಯೋಜಿತ ಸಿಬ್ಬಂದಿಗಳು ತೆರಳಲು ೨೯ ಕೆಎಸ್‌ಆರ್‌ಟಿಸಿ ಬಸ್ ಹಾಗೂ ೨೨ ಕ್ರೂಜರಗಳ ವ್ಯವಸ್ಥೆ ಮಾಡಲಾಗಿದೆ. ಸೆಕ್ಟರ್ ಅಧಿಕಾರಿಗಳಿಗೆ ೧೮ ವಾಹನ, ಪ್ಲಾಯಿಂಗ್ ಸ್ವಾಡಗಳಿಗೆ ೩ ವಾಹನ ಮತ್ತು ತುರ್ತು ಸಂದರ್ಭಕ್ಕೆ ಬಳಸಿಕೊಳ್ಳಲು ೩ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.ಮತಕ್ಷೇತ್ರದಲ್ಲಿ ಒಟ್ಟು ೫ ಪಿಂಕ್, ಸಖಿ, ಯುವ, ಅಂಗವಿಕಲ, ಧ್ಯೇಯ ಆಧಾರಿತ…

Read More

ಮುದ್ದೇಬಿಹಾಳ: ತಾಲೂಕಿನ ನಾಲತವಾಡದ ವಿರೇಶ್ವರ ವೃತ್ತದ ಬಳಿ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ.ಯಾದಗಿರಿ ಜಿಲ್ಲೆ ಗಡಿ ಭಾಗದ ಎಣ್ಣಿವಡಗೇರಿ ಗ್ರಾಮದ ರೇವಣಸಿದ್ದಯ್ಯ ಹಿರೇಮಠ ಬಂಧಿತ ಆರೋಪಿ. ತನ್ನ ಪಾಯಿದೆಗೋಸ್ಕರ ಯಾವುದೇ ಪಾಸ್ ಪರ್ಮಿಟ ಮತ್ತು ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಮಧ್ಯವನ್ನು ತನ್ನ ಬಳಿ ಇಟ್ಟುಕೊಂಡು ನಾಲತವಾಡದ ವೀರೇಶ್ವರ ವೃತ್ತದ ಬಳಿ ನಿಂತು ಮಾರಾಟ ಮಾಡುತ್ತಿರುವಾಗ ಬಂಧಿಸಿ, ಅಂದಾಜು 36 ರೂಪಾಯಿಯ ಮುಖಬೆಲೆಯ ಒಟ್ಟು 90 ಟೆಟ್ರಾ ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಹಿಳಾ ಪೊಲೀಸ್ ಸಬ್ ಇನ್ಸಪೆಕ್ಟರ ಷಹಜಹಾನ್ ನಾಯಕ ನೀಡಿದ ದೂರಿನ ಆಧಾರದ ಮೇಲೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮುದ್ದೇಬಿಹಾಳ: ತಾಲೂಕಿನ ನಾಲತವಾಡದ ವಿರೇಶ್ವರ ವೃತ್ತದ ಬಳಿ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ.ಯಾದಗಿರಿ ಜಿಲ್ಲೆ ಗಡಿ ಭಾಗದ ಎಣ್ಣಿವಡಗೇರಿ ಗ್ರಾಮದ ರೇವಣಸಿದ್ದಯ್ಯ ಹಿರೇಮಠ ಬಂಧಿತ ಆರೋಪಿ. ತನ್ನ ಪಾಯಿದೆಗೋಸ್ಕರ ಯಾವುದೇ ಪಾಸ್ ಪರ್ಮಿಟ ಮತ್ತು ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಮಧ್ಯವನ್ನು ತನ್ನ ಬಳಿ ಇಟ್ಟುಕೊಂಡು ನಾಲತವಾಡದ ವೀರೇಶ್ವರ ವೃತ್ತದ ಬಳಿ ನಿಂತು ಮಾರಾಟ ಮಾಡುತ್ತಿರುವಾಗ ಬಂಧಿಸಿ, ಅಂದಾಜು 36 ರೂಪಾಯಿಯ ಮುಖಬೆಲೆಯ ಒಟ್ಟು 90 ಟೆಟ್ರಾ ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಹಿಳಾ ಪೊಲೀಸ್ ಸಬ್ ಇನ್ಸಪೆಕ್ಟರ ಷಹಜಹಾನ್ ನಾಯಕ ನೀಡಿದ ದೂರಿನ ಆಧಾರದ ಮೇಲೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಮಹಾಸಂಪರ್ಕ ಅಭಿಯಾನ ಅಂಗವಾಗಿ ವಿಜಯಪುರ ಮಹಾನಗರ ಪಾಲಿಕೆ 33 ನೇ ವಾರ್ಡ್ ಭವಾನಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರ ಭರ್ಜರಿ ಪ್ರಚಾರ ನಡೆಸಿದರು.ವಿಜಯಪುರ ನಗರದ ವಾರ್ಡ್ ನಂ. 33 ನೇ ವಾರ್ಡಿನ ಶಾಸ್ತ್ರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ ಹತ್ತು ವರ್ಷಗಳ ಸಾಧನೆಗಳು, ಜನಪರ ಯೋಜನೆಗಳು, ದೇಶದಲ್ಲಾದ ಸಕಾರಾತ್ಮಕ ಬದಲಾವಣೆಗಳ ಜೊತೆಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟು, ವಿಕಸಿತ ಭಾರತದ ಸಂಕಲ್ಪದೊಂದಿಗೆ ದೇಶವಾಸಿಗಳ ರಕ್ಷಣೆಗೆ ಪಣತೊಟ್ಟಿರುವ ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಆಶಿರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಪ್ರತಿ ಮನೆಗಳಲ್ಲಿ ಸಿಕ್ಕ ಅದ್ಬುತ…

Read More

ಇಂಡಿ: ತಾಲೂಕಾ ಆಡಳಿತ ಹಾಗೂ ತಾಲೂಕು ಸ್ವಿಪ್ ಸಮೀತಿ ತಾಲೂಕ ಪಂಚಾಯತ ಇಂಡಿ ವತಿಯಿಂದ ದಿನಾಂಕ 04/05/2024ರಂದು ಮತದಾನ ಜಾಗೃತಿ ಕುರಿತು ಎಲ್ಲಾ ಗ್ರಾಮ ಪಂಚಾಯಿತ ವ್ಹಿ.ಆರ್.ಡಬ್ಲ್ಯೂ,ಯು.ಆರ್.ಡಬ್ಲ್ಯೂ.ಎಮ್.ಆರ್.ಡಬ್ಲ್ಯೂ ಹಾಗೂ ತಾಲೂಕ ವಿವಿಧ ವಿಕಲಚೇತನರ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ 80 ಕ್ಕಿಂತ ಹೆಚ್ಚು ವಿಕಲಚೇತನರ ಇಂಧನ ಚಾಲಿತ ತ್ರಿ ಚಕ್ರ ವಾಹನಗಳ ಬೈಕ್ ಜಾಥಾವನ್ನು ಇಂಡಿ ತಾಲ್ಲೂಕಿನ ಉಪವಿಭಾಗಾಧಿಕಾರಿ ಅಭೀದ್ ಗದ್ಯಾಳರವರು ಹಸಿರು ನಿಶಾನೆ ತೋರಿಸುವ ಮುಖಾಂತರ ಚಾಲನೆ ನೀಡಿದರು.ಚಾಲನೆಯನ್ನು ನೀಡಿ ಮಾತನಾಡಿದ ಅವರು. 2024ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಮೇ 07ರಂದು ನಡೆಯಲಿದ್ದು ಅಂದು ತಮ್ಮ ಕುಟುಂಬದ ಸಮ್ಮೆತರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡುವುದರ ಮೂಲಕ ದೇಶ ಕಟ್ಟುವುದು ಅವಶ್ಯವಿದೆ, ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಸ್ವಿಪ್ ಸಮೀತಿಯ ಅಧ್ಯಕ್ಷ ನೀಲಗಂಗಾ ಬಬಲಾದ ಮೇಡಂ ಮಾತನಾಡಿ ಸಾರ್ವತ್ರಿಕ ಲೋಕಸಭಾ ಚುನಾವಣೆ…

Read More

ವಿಜಯಪುರ: ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿಗೆ ವಿಧಿಸಿದ್ದ ನಿಷೇಧವನ್ನು ಶನಿವಾರ ಹಿಂಪಡೆದಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರ ಪಾಲಿಗೆ ಕೇಂದ್ರ ಸರ್ಕಾರದ ಈ ನಿರ್ಧಾರ ವರದಾನವಾಗಿದ್ದು, ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹಾಗೂ ಬಿಜೆಪಿ ಮುಖಂಡ ಟಿ.ಟಿ.ಹಗೇದಾಳ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಈರುಳ್ಳಿ ರಫ್ತಿಗೆ ಹೇರಿದ್ದ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್‌ ಪಡೆಯಲಾಗಿದೆ. ಈರುಳ್ಳಿ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಬಹುದು. ಆದರೆ, ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಪಕ್ಕದ ಮಹಾರಾಷ್ಟ್ರದ ಬಿಟ್ಟರೆ ಕರ್ನಾಟಕದಲ್ಲಿ ವಿಶೇಷವಾಗಿ ವಿಜಯಪುರ ಜಿಲ್ಲೆಯ ಭಾಗದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಗಾರರಿದ್ದಾರೆ. ಎಲ್ಲರಿಗೂ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬಹಳ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

Read More