ಮುದ್ದೇಬಿಹಾಳ: ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯಲಿರುವ ೩ನೇ ಹಂತದ ಮತದಾನಕ್ಕೆ ತಾಲೂಕು ಆಡಳಿತ ಸಂಪೂರ್ಣ ಸಿದ್ಧವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ರಾಜಶೇಖರ ವಿಲಿಯಮ್ಸ್ ತಿಳಿಸಿದರು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಮತಕ್ಷೇತ್ರದಲ್ಲಿ ಒಟ್ಟು ೨೪೫ ಮತಗಟ್ಟೆಗಳಿದ್ದು ಒಟ್ಟು ೨೨೩೬೫೬ ಮತದಾರರಿದ್ದಾರೆ. ಅದರಲ್ಲಿ ೧೧೨೬೯೪ ಪುರುಷ ಮತದಾರರು, ೧೧೦೯೩೭ ಮಹಿಳಾ ಮತದಾರರು ಸೇರಿದಂತೆ ಇತರೆ ೨೫ ಮತದಾರರಿದ್ದಾರೆ. ೧೨೩ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಮತಗಟ್ಟೆಗಳಲ್ಲಿ ಮೈಕ್ರೋ ಆಬ್ಸರ್ವರ್ ನೇಮಕ ಮಾಡಲಾಗಿದೆ. ಮತಕ್ಷೇತ್ರದಲ್ಲಿ ೩ ಸೂಕ್ಷ್ಮ ಮತಗಟ್ಟೆಗಳು, ೨ಅತೀ ಸೂಕ್ಷö್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಮತಗಟ್ಟೆಗಳಿಗೆ ಚುನಾವಣಾ ನಿಯೋಜಿತ ಸಿಬ್ಬಂದಿಗಳು ತೆರಳಲು ೨೯ ಕೆಎಸ್‌ಆರ್‌ಟಿಸಿ ಬಸ್ ಹಾಗೂ ೨೨ ಕ್ರೂಜರಗಳ ವ್ಯವಸ್ಥೆ ಮಾಡಲಾಗಿದೆ. ಸೆಕ್ಟರ್ ಅಧಿಕಾರಿಗಳಿಗೆ ೧೮ ವಾಹನ, ಪ್ಲಾಯಿಂಗ್ ಸ್ವಾಡಗಳಿಗೆ ೩ ವಾಹನ ಮತ್ತು ತುರ್ತು ಸಂದರ್ಭಕ್ಕೆ ಬಳಸಿಕೊಳ್ಳಲು ೩ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಮತಕ್ಷೇತ್ರದಲ್ಲಿ ಒಟ್ಟು ೫ ಪಿಂಕ್, ಸಖಿ, ಯುವ, ಅಂಗವಿಕಲ, ಧ್ಯೇಯ ಆಧಾರಿತ ಮತಗಟ್ಟೆಗಳನ್ನು ತಲಾ ೧ರಂತೆ ನಿರ್ಮಿಸಲಾಗಿದೆ. ಮತಕ್ಷೇತ್ರದಲ್ಲಿರುವ ಎಲ್ಲ ಮತಗಟ್ಟೆಗಳಿಗೂ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಒಟ್ಟು ೨೧೪೯ ( ಪಿಆರ್‌ಓ ೨೯೭, ಎಪಿಆರ್‌ಓ ೨೯೭, ಪಿಓ ೫೯೪, ಡಿ ಗ್ರೂಪ್ ೨೪೫, ಪೊಲೀಸ್ ಸಿಬ್ಬಂದಿ ೨೬೫, ಆರೋಗ್ಯ ಇಲಾಖೆ ೨೪೫, ಸೆಕ್ಟರ್ ಅಧಿಕಾರಿಗಳು ೨೦, ಮಾಸ್ಟರ್ ಟ್ರೈನರ್ ೧೬, ಮೈಕ್ರೋ ಆಬ್ಸರ್ವರ್ ೬, ಎಫ್‌ಎಸ್‌ಟಿ ತಂಡ ೧೮, ಎವಿಎಸ್‌ಟಿ ತಂಡ ೧೮, ವಿಎಸ್‌ಟಿ ತಂಡ ೬, ವಿವಿಟಿ ತಂಡ ೩, ಲೆಕ್ಕ ಪರಿಶೀಲನೆ ತಂಡ ೨, ಮಾರ್ಗಾಧಿಕಾರಿ ೫೧, ಅಂಚೆ ಮತದಾನ ಸಿಬ್ಬಂದಿ ೪೩, ಇತರೆ ೨೩) ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮತಕ್ಷೇತ್ರದಲ್ಲಿ ಒಟ್ಟು ೩ ಚೆಕ್ ಪೋಸ್ಟ್ ನಿರ್ಮಿಸಿದ್ದು (ಮಿಣಜಗಿ, ನಾರಾಯಣಪುರ, ತಂಗಡಗಿ) ಇವುಗಳಲ್ಲಿ ಒಟ್ಟು ೩ ಲಕ್ಷ ೭೦ಸಾವಿರ ರೂಪಾಯಿಗಳನ್ನು ಹಾಗೂ ೪೭೫.೯೯ ಲೀಟರ್ ಮಧ್ಯ ವಶಪಡಿಸಿಕೊಳ್ಳಲಾದ ಬಗ್ಗೆ ಮಾಹಿತಿ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment
