ಇಂಡಿ: ತಾಲೂಕಾ ಆಡಳಿತ ಹಾಗೂ ತಾಲೂಕು ಸ್ವಿಪ್ ಸಮೀತಿ ತಾಲೂಕ ಪಂಚಾಯತ ಇಂಡಿ ವತಿಯಿಂದ ದಿನಾಂಕ 04/05/2024ರಂದು ಮತದಾನ ಜಾಗೃತಿ ಕುರಿತು ಎಲ್ಲಾ ಗ್ರಾಮ ಪಂಚಾಯಿತ ವ್ಹಿ.ಆರ್.ಡಬ್ಲ್ಯೂ,ಯು.ಆರ್.ಡಬ್ಲ್ಯೂ.ಎಮ್.ಆರ್.ಡಬ್ಲ್ಯೂ ಹಾಗೂ ತಾಲೂಕ ವಿವಿಧ ವಿಕಲಚೇತನರ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ 80 ಕ್ಕಿಂತ ಹೆಚ್ಚು ವಿಕಲಚೇತನರ ಇಂಧನ ಚಾಲಿತ ತ್ರಿ ಚಕ್ರ ವಾಹನಗಳ ಬೈಕ್ ಜಾಥಾವನ್ನು ಇಂಡಿ ತಾಲ್ಲೂಕಿನ ಉಪವಿಭಾಗಾಧಿಕಾರಿ ಅಭೀದ್ ಗದ್ಯಾಳರವರು ಹಸಿರು ನಿಶಾನೆ ತೋರಿಸುವ ಮುಖಾಂತರ ಚಾಲನೆ ನೀಡಿದರು.
ಚಾಲನೆಯನ್ನು ನೀಡಿ ಮಾತನಾಡಿದ ಅವರು. 2024ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಮೇ 07ರಂದು ನಡೆಯಲಿದ್ದು ಅಂದು ತಮ್ಮ ಕುಟುಂಬದ ಸಮ್ಮೆತರಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡುವುದರ ಮೂಲಕ ದೇಶ ಕಟ್ಟುವುದು ಅವಶ್ಯವಿದೆ, ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಸ್ವಿಪ್ ಸಮೀತಿಯ ಅಧ್ಯಕ್ಷ ನೀಲಗಂಗಾ ಬಬಲಾದ ಮೇಡಂ ಮಾತನಾಡಿ ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರಲ್ಲಿ ಶೇ100ರಷ್ಟು ಮತದಾನ ಆಗಬೇಕು ಪ್ರತಿಯೊಬ್ಬರೂ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಿ ಯಾರು ಮತದಾನದಿಂದ ಹೊರಗುಳಿಯಬಾರದು ಎಂದು ಹೇಳಿದರು.
ಜಿಲ್ಲಾ ಚುನಾವಣಾ ರಾಯಬಾರಿ ರಾಜೇಶ್ ಪವಾರ್ ಮಾತನಾಡಿ. ಭಾರತೀಯ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೆ ಮತದಾನ ಎಂಬ ಪ್ರಮುಖ ಹಕ್ಕನ್ನು ನೀಡಿದೆ.ಎಲ್ಲರು ಈ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕೆಂದು ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಮಾತನಾಡಿ. ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು, ಕಳೆದ ಚುನಾವಣೆಗಿಂತ ಈ ಭಾರಿ ಹೆಚ್ಚು ಮತದಾನ ಆಗುವ ಮೂಲಕ ಪ್ರಜಾಪ್ರಭುತ್ವ ಸದೃಢ ಗೊಳಿಸಬೇಕು, ಮತದಾನ ಪ್ರಮಾಣ ಹೆಚ್ಚಿಸಲು ಈ ತಾಲ್ಲೂಕಿನಲ್ಲಿ ವಿವಿಧ ರೀತಿಯ ಜಾಗೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿಕಲಚೇತನರು ಈ ತಾಲೂಕಿನಲ್ಲಿ ದಾಖಲೆಯ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿತನ ತೋರಿಸಕೊಡಬೇಕಿದೆ ಎಂದು ಹೇಳಿದರು.
ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಮತದಾನ ದಿನದಂದು ಸರತಿ ಸಾಲಿನಲ್ಲಿ ನಿಲ್ಲಿಸದೆ ನೇರವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ ಎಲ್ಲರು ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು.ಮತ್ತು ಈಗಾಗಲೇ ಈ ತಾಲೂಕಿನಲ್ಲಿ ವಿಕಲಚೇತನರು 226ಜನ ಮತ್ತು ಹಿರಿಯ ನಾಗರಿಕರು 450 ಜನ ಮನೆಯಲ್ಲಿ ಮತದಾನ ಮಾಡಲು ಗುರಿತಿಸಿ ಅವರಿಗೆ ಮನೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಹೇಳಿದರು.
ರ್‍ಯಾಲಿಯು ತಾಲೂಕು ಕ್ರೀಡಾಂಗಣದಿಂದ ಹೊರಟು ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಮಹಾವೀರ ಸರ್ಕಲ್, ಪೋಸ್ಟ್ ಆಫೀಸ್, ಕೊನೆಗೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕೊನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಇಂಡಿ ಉಪವಿಭಾಗಾಧಿಕಾರಿ ಅಭೀದ್ ಗದ್ಯಾಳ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ ಮೇಡಂ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಸಂಜಯ ಖಡಗೇಖರ, ಸೋಮು ನಾಯಕ, ಚುನಾವಣಾ ರಾಯಭಾರಿ ರಾಜೇಶ್ ಪವಾರ್, ಪ್ರಭಾಕರ್ ಪೂಜಾರಿ, ಸೋಹಿಲ್ ಧನಶೇಟ್ಟಿ, ಬಸವರಾಜ ಬಬಲಾದ PDOರೂಗಿ, ಎಮ್ .ಆರ್.ಡ.ಬ್ಲ್ಯೂ ಪರಶುರಾಮ ಭೋಸ್ಲೆ, ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ( ರಿ) ತಾಲೂಕಾ ಘಟಕದ ಅಧ್ಯಕ್ಷ ಎಸ್.ಎಮ್.ಮಕಾಂದಾರ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ನಾಯಕೋಡಿ, ಬಾಬುಶ್ಯಾ ಹೊಸಮನಿ, ಸಿದ್ದಪ್ಪ ಗುಲೆ, ಶಿವಾನಂದ ನಾಗರಹಳ್ಳಿ , ಪಾಂಡು ರಾಠೋಡ, ಗಂಗಪ್ಪ ಉಪ್ಪಾರ, ಬಸವರಾಜ ಸೊನ್ನ, ಮಹಾನಂದ ಬಂಡಿವಡ್ಡರ, ಅಮಸಿದ್ದ ಬಗಲಿ, ಭರಮಲಿಂಗ ಪೂಜಾರಿ, ಶಿವಕಾಂತವ್ವ ಕುಂಬಾರ, ರವಿ ಕಟಕದೊಂಡ, ದಸ್ತಗಿರ್ ಮೋಮೀನ್, ಭೀಮಣ್ಣ ಗುಡ್ಡೇವಾಡಿ, ಬಾಬು ಸಂಗೋಗಿ, ಕನ್ನಯ್ಯಸಿಂಗ ಹಜಾರೆ, ಬಸರಾಜ ಮಡಿವಾಳ, ಪವಿತ್ರ ಹುಬ್ಬಳ್ಳಿ, ಮೋನಪ್ಪ ಬಡಿಗೇರ, ನೀಲಮ್ಮ ಶಿವಶರಣ ಚೀದಾನಂದ ಯಾತಗೇರಿ ಮುಂತಾದವರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

