ವಿಜಯಪುರ: ಬೆಂಗಳೂರಿನ ಬಸವಾನುಯಾಯಿ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಬಸನಗೌಡ ಬಿ. ಪಾಟೀಲ(63) ಅಣ್ಣ ಬಸವಣ್ಣನವರ ತತ್ವಗಳ ಪ್ರಸಾರಕ್ಕಾಗಿ ಕಳೆದ 12 ವರ್ಷಗಳಿಂದ ಬಸವಜ್ಯೋತಿ ಯಾತ್ರೆ ನಡೆಸುತ್ತಿದ್ದು, ಈಗ ಮತ್ತೆ ಬಸವನ ಬಾಗೇವಾಡಿಯಿಂದ ವಿಜಯಪುರವರೆಗೆ ಓಡಿಕೊಂಡು ಬಸವಜ್ಯೋತಿ ತರಲಿದ್ದಾರೆ.
ವಿಜಯಪುರ ಜಿಲ್ಲೆ ಹಂದಿಗನೂರ ಗ್ರಾಮದವರಾಗಿರುವ ಬಸನಗೌಡ ಬಿ. ಪಾಟೀಲ ಮೇ 9 ರಂದು ಗುರುವಾರ ಮಧ್ಯರಾತ್ರಿ 12 ಗಂಟೆಗೆ ಅಣ್ಣ ಬಸವಣ್ಣನವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ಹೊರಡಲಿರುವ ಇವರು, ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ವಿಜಯಪುರ ನಗರದಲ್ಲಿರುವ ಬಸವೇಶ್ವರ ಸರ್ಕಲ್ ತಲುಪಲಿದ್ದಾರೆ. ಬಸನಗೌಡ ಬಿ. ಪಾಟೀಲ ಜೊತೆಗೆ ಈ ಬಾರಿ ಮ್ಯಾರಾಥಾನ್ ನಲ್ಲಿ ಹೆಸರು ಮಾಡಿರುವ ಅಲ್ಟ್ರಾ ರನ್ನರ್ ಜಗದೀಶ ದಮಾನಿಯಾ(63), ಡಾ. ಚಂದ್ರಶೇಖರ ಚಿಮಕೋಡೆ, ಮಲ್ಲಿಕಾರ್ಜುನ ಅವಂತಿ ಹಾಗೂ ಡಾ. ಅಭಿನಂದ ಬೆಡಗೆ ಕೂಡ ಪಾಲ್ಗೋಳ್ಳುತ್ತಿದ್ದಾರೆ. ಇವರು ಮಸ್ಸೂರಿಯಿಂದ ಯಮನೌತ್ರಿವರೆಗೆ ಕಳೆದ ಆರು ವರ್ಷಗಳಿಂದ ಪಾಲ್ಗೋಳ್ಳುತ್ತಿದ್ದಾರೆ. ಅಲ್ಲದೇ, ಬೆಂಗಳೂರಿನಿಂದ ಚೆನೈವರೆಗೆ 340 ಕಿ. ಮೀ. ನ್ನು ಏಳು ದಿನಗಳಲ್ಲಿ ಓಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಬೆಳಗಾವಿ ಮೂಲದ ಮತ್ತು ಈಗ ಬೆಂಗಳೂರಿನ ಎಂಜಿನಿಯರ್ ಇನ್ ಇನಫಿನ್ಯೂಯಾನ್ ಟೆಕ್ನಾಲಜೀಸ್ ಪ್ರವೈಟ್ ಲಿಮಿಟೆಡ್ ಪ್ರಿನ್ಸಿಪಲ್ ಆಗಿರುವ ಪ್ರಸಾದ ಶ್ರೀಂಗೆರಿ(42) ಸೇರಿದಂತೆ ಒಟ್ಟು ಐದು ಜನರು ತಂಡ ಇದರಲ್ಲಿ ಪಾಲ್ಗೊಳ್ಳುತ್ತಿದೆ.
ಅಷ್ಟೇ ಅಲ್ಲ, ವಿಜಯಪುರದ ಸೈಕ್ಲಿಂಗ್ ಗ್ರುಪ್ ನ ಸದಸ್ಯರಾದ ಸಂಕೇತ ಬಗಲಿ, ಬೆಂಗಳೂರಿನ ರಘು ಸಾಲೋಟಗಿ, ಡಾ. ರಾಜು ಯಲಗೊಂಡ, ಡಾ. ಭೀಮನಗೌಡ ಬಿರಾದಾರ ಕೂಡ ಈ ಬಸವಜ್ಯೋತಿ ಯಾತ್ರೆಯಲ್ಲಿ ಪಾಲ್ಗೋಳ್ಳುತ್ತಿದ್ದು, ಒಟ್ಟು 46 ಕಿ. ಮೀ. ಓಡಲಿದ್ದಾರೆ. ಇದರಲ್ಲಿ ವಿಜಯಪುರ ನಗರ ಮತ್ತು ಸುತ್ತಲಿನ ಗ್ರಾಮಸ್ಥರು ಪಾಲ್ಗೋಳ್ಳಬಹುದಾಗಿದ್ದು, ಈ ಆಧ್ಯಾತ್ಮಿಕ ಓಟದಲ್ಲಿ ಪಾಲ್ಗೋಂಡು ಬಸವಾದಿ ಶರಣರ ವಚನಗಳ ಕುರಿತು ಜಾಗೃತಿ ಮೂಡಿಸಲು ಪ್ರೋತ್ಸಾಹಿಸಬೇಕು. ವಿಜಯಪುರ ಸೈಕ್ಲಿಂಗ್ ಗ್ರುಪ್ ವತಿಯಿಂದ ಮೇ 10 ರಂದು ಬೆಳಿಗ್ಗೆ ನಗರದ ಹೊರವಲಯದ ಶಿವಗಿರಿ ಬಳಿ ಬಸವಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡಿರುವ ಓಟಗಾರರನ್ನು ಸ್ವಾಗತಿಸಿ ಬಸವೇಶ್ವರ ವೃತ್ತದವರೆಗೆ ಕರೆತರಲಾಗುವುದು ಎಂದು ವಿಜಯಪುರ ಸೈಕ್ಲಿಂಗ್ ಗ್ರುಪ್ ಸಂಘಟನಾ ಕಾರ್ಯದರ್ಶಿ ಸೋಮಶೇಖರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

