Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಡಾ.ಪೂರ್ಣಿಮಾ ಧಾಮಣ್ಣವರಕನ್ನಡ ಉಪನ್ಯಾಸಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿಜಯಪುರ ಕಾವ್ಯ ಸೌಂದರ್ಯ ಎನ್ನುವುದು ಕೇವಲ ಕವಿತೆಗಳಲ್ಲಿಯೇ ಇರುತ್ತದೆಯೆಂದಲ್ಲ, ಪ್ರತಿಭಾನ್ವಿತರು ಬರೆದ ವಚನಗಳಲ್ಲಿ ಕಾವ್ಯದ ಅನನ್ಯತೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಚನ-ಕೀರ್ತನೆ-ತತ್ವಪದ ಇವು ಯಾವುದು ಹೊರತಾಗಿಲ್ಲ. ಬಸವಣ್ಣನವರ ವಚನಗಳಂತೂ ಆಧುನಿಕ ಸಂದರ್ಭದ ಭಾವಗೀತೆಗಳಂತೆ ಸುಂದರವಾಗಿವೆ. ರಚನೆ ಸುಂಧರವಾಗಿ ಅನನ್ಯವಾಗಿ ಕಾಣಲು ಹೇಳುವ ವಿಷಯದಷ್ಟೇ ಅಭಿವ್ಯಕ್ತಿ ಕ್ರಿಯೆಯೂ ಮುಖ್ಯವಾಗಿರಬೇಕಾಗುತ್ತದೆ. ಕಾವ್ಯವು ಅಭಿವ್ಯಕ್ತಿ ಭಾಷೆಯನ್ನ ವಹಿಸಿರುತ್ತದೆ. ಹೀಗಾಗಿ ಕವಿತೆಯಾಗಲಿ, ವಚನವಾಗಲಿ ಸುಂದರವಾಗಿ ಕಾಣಬೇಕಾದರೆ ಅದರಲ್ಲಿ ಬಳಸುವ ಭಾಷಾ ಚಮತ್ಕಾರ ಪಡೆನುಡಿಗಳು ಗಾದೆ ಮಾತುಗಳು, ಅಲಂಕಾರಗಳು ತುಂಬಾ ಮುಖ್ಯವಾಗಿರುತ್ತವೆ. ಆದರೆ ನಿಜವಾದ ಕಾವ್ಯ ಓದುಗನನ್ನು ಕಟ್ಟಿ ಹಾಕುತ್ತದೆ ಹಾಗೂ ಒಳಗೆ ಇಳಿಯುತ್ತದೆ, ನಿನದಿಸುತ್ತದೆ, ಗುನುಗುಡುತ್ತದೆ. ಮನದಾಳದಲ್ಲಿ ಹಸಿರಾಗುತ್ತದೆ. ಇಂತಹ ತೀವ್ರವಾದ, ಆಶ್ಚರ್ಯಕರವಾದ ಅನನ್ಯವಾದ ಪರಿಣಾಮ ನಿಜವಾದ ಕಾವ್ಯದಿಂದ ಮಾತ್ರ ಸಾಧ್ಯವಾಗುತ್ತದೆ. ಬಸವಣ್ಣನವರ ವಚನಗಳು ಅಂತಹ ಸುಂದರ ರಚನೆಗಳಾಗಿವೆ. ಅವರ ಅನೇಕ ವಚನಗಳು ಕಾವ್ಯಸೌಂದರ್ಯದ ಅನುಭವವನ್ನು ನಾವು ಕಾಣುತ್ತೇವೆ.ಮೊದಲಿಗೆ ಕಾವ್ಯ ಸೌಂದರ್ಯ ಎಂದರೇನು? ಎಂಬ ಪ್ರಶ್ನೆ ಏಳುತ್ತದೆ. ಭಾರತೀಯ ಅಲಂಕಾರಿಕನಾದ…
ಮಾಜಿ ಸಿಎಂ. ಎಚ್ ಡಿ ಕುಮಾರಸ್ವಾಮಿ ಬೇಡಿಕೆಗೆ ತಿರಸ್ಕಾರ | ತನಿಖೆ ನಡೆಸಲು ಸಿಐಡಿ ಸಮರ್ಥ | ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಠನೆ ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬೇಡಿಕೆಯನ್ನು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಬುಧವಾರ ತಿರಸ್ಕರಿಸಿದ್ದಾರೆ.ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರದ ಸಿಐಡಿ ಸಮರ್ಥವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.ಕುಮಾರಸ್ವಾಮಿ ಅವರು 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವೆಲ್ಲಕ್ಕೂ ನಾನು ಉತ್ತರಿಸುವುದಿಲ್ಲ. ಅವರು ಸಿಬಿಐ ತನಿಖೆ ಮಾಡಬೇಕು ಎಂದು ಕೇಳಿದ್ದರು ನಾವು ಮಾಡುವುದಿಲ್ಲ. ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ಸಮರ್ಥವಾಗಿದೆ. ಸೂಕ್ತ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.ಹೊಳೆನರಸೀಪುರ ಜೆಡಿಎಸ್ ಶಾಸಕ ಹಾಗೂ ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿರುವ…
ಢವಳಗಿ: ಇತ್ತಿಚಿನ ದಿನಗಳಲ್ಲಿ ಕೃಷಿಗೆ ಎತ್ತುಗಳ ಬಳಕೆ ಮಾಡುವುದು ಕಡಿಮೆ ಆಗಿದೆ. ಯಂತ್ರದ ಕೃಷಿ ಹೆಚ್ಚುತ್ತಿದೆ. ಒಕ್ಕುಲುತನ ಮಾಡುವವರು ನಾವು ಕೀಳುಮಟ್ಟದವರು ಎನ್ನುವ ಭಾವನೆ ಜನರಲ್ಲಿ ಬರಬಾರದು ಎಂದು ಮುದ್ದೇಬಿಹಾಳ ಶಾಸಕ ಸಿ ಎಸ್ ನಾಡಗೌಡ ಅವರು ಹೇಳಿದರು.ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಜೋಡೆತ್ತಿನ ಕೃಷಿಗೆ ಪುನಶ್ಚೇತನ ಸಂಕಲ್ಪ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮೊದಲು ನಮ್ಮ ಮನೆಯಲ್ಲಿ ಅರವತ್ತು ಎತ್ತಿನ ಒಕ್ಕಲುತನ ಇತ್ತು. ಆದರೆ ಇವತ್ತಿನ ದಿನ ನಮ್ಮ ಮನೆಯಲ್ಲಿ ಒಂದು ಹಸು ಕೂಡಾ ಇಲ್ಲ. ನಾವು ಎಲ್ಲರೂ ಪಾಕೇಟ್ ಹಾಲು ಬಳಸುತ್ತಿದ್ದೆವೆ. ಈಗಿನ ಯುವಕರು ವ್ಯವಸಾಯದಲ್ಲಿ ಆಸಕ್ತಿ ತೋರಬೇಕು. ರೈತರಿಗೆ ಹಸು ಹಾಗೂ ಎತ್ತಿನ ಗೊಬ್ಬರ ಬೂಮಿಗೆ ಮತ್ತು ಬೆಳೆಗಳಿಗೆ ಉತ್ತಮ ಹಾಗೂ ಆರೋಗ್ಯವಾದ ಗೊಬ್ಬರವಾಗಿದೆ. ಇದರಿಂದ ಬೆಳೆಯುವ ಬೆಳೆಗಳಿಗೂ ಕೂಡಾ ಹೆಚ್ಚು ರೋಗಗಳು ಬರುವುದಿಲ್ಲ. ಆಗಿನ ಕಾಲದಲ್ಲಿ ವ್ಯವಸಾಯದಲ್ಲಿ ರೈತರಿಗೆ ಹೆಚ್ಚು ಖರ್ಚು ಬರುತ್ತಿರಲಿಲ್ಲ. ಏಕೆಂದರೆ ಅವರ ಜೋತೆ ಎತ್ತು, ಧನಕರುಗಳು ಜೋತೆಗಿರುತ್ತಿದ್ದವು. ಆದರೆ ಈಗಿನ ರೈತರ…
ಮುದ್ದೇಬಿಹಾಳ: ಪ್ರತೀ ವರ್ಷದಂತೆ ಈ ವರ್ಷವೂ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಮಸ್ತ ಬಸವಾಭಿಮಾನಿಗಳು ತೀರ್ಮಾನಿಸಿದರು.ಈ ಕುರಿತು ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಮಾತನಾಡಿ, ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಹೊಸ ಮಠದಿಂದ ಬಸವೇಶ್ವರರ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿಸಲು ತೀರ್ಮಾನಿಸಿದ್ದೇವೆ. ವ್ಯಾಪಾರಸ್ಥರು ಮೇ೧೦ ರಂದು ಮಧ್ಯಾಹ್ನ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಂಡರು.ಈ ವೇಳೆ ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಅಂದು ಸಂಜೆ ೫ಗಂಟೆಗೆ ಮೆರವಣಿಗೆ ಪ್ರಾರಂಭವಾಗುವದು. ಹೊಸಮಠದಿಂದ ಸರಾಫ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ದೇವಸ್ಥಾನ, ಶಾರದಾ ದೇವಿ ದೇವಸ್ಥಾನ, ಬಿಎಸ್‌ಎನ್‌ಎಲ್ ಕಚೇರಿ ಮಾರ್ಗವಾಗಿ ಬೊಮ್ಮಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಸಾಗಲಿದೆ. ಎಲ್ಲರೂ ತಮ್ಮ ವಾಹನಗಳನ್ನು ಒಂದೆಡೆ…
ದೇವರಹಿಪ್ಪರಗಿ: ಪಡಗಾನೂರ ತಾಂಡಾದ ಬಿಎಸ್‌ಎಫ್ ಯೋಧ ಅಶೋಕ ಬಾಸು ಪವಾರ(೪೬) ಅನಾರೋಗ್ಯದಿಂದ ಮಂಗಳವಾರ ನಿಧನರಾದರು.ತಾಲ್ಲೂಕಿನ ಪಡಗಾನೂರ ತಾಂಡಾ ನಿವಾಸಿಯಾಗಿದ್ದ ಅಶೋಕ ಬಾಸು ಪವಾರ ತ್ರಿಪುರಾದ ೧೦೪ ಬೆಟಾಲಿಯನ್‌ನಲ್ಲಿ ಕಳೆದ ೨೪ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ದೇಶ ಸೇವೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ತಿಂಗಳ ಹಿಂದೆಯೇ ಸ್ವಗ್ರಾಮಕ್ಕೆ ಬಂದು ಮಗನ ಮದುವೆ ಮಾಡಿ ಹೋಗಿದ್ದರು. ಆಕಸ್ಮಿಕವಾಗಿ ಕಳೆದ ವಾರ ಅನಾರೋಗ್ಯಕ್ಕೆ ಒಳಗಾಗಿ ಮಂಗಳವಾರ ಕೋಲ್ಲಾಪೂರ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಬುಧವಾರ ಸ್ವಗ್ರಾಮ ಪಡಗಾನೂರ ತಾಂಡಾಕ್ಕೆ ಸೇನಾವಾಹನದಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಸೈನಿಕನ ಮೃತದೇಹ ಬರುತ್ತಿದ್ದಂತೆ ನೂರಾರು ಯುವಕರು, ಸಾರ್ವಜನಿಕರು ದೇಶಭಕ್ತರು ಭೋಲೋ ಭಾರತ ಮಾತಾಕೀ ಜೈ, ಜೈಜವಾನ ಜೈಕಿಸಾನ್ ಘೋಷಣೆ ಮೊಳಗಿಸಿದರು. ಸೇನಾ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ನಂತರ ಮೃತರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಶಾಸಕ ರಾಜುಗೌಡ ಪಾಟೀಲ, ತಹಶೀಲ್ದಾರ್ ಪ್ರಕಾಶ ಸಿಂದಗಿ, ಡಾ.ರಮೇಶ ರಾಠೊಡ, ಶಂಕರ ರಾಠೋಡ, ಎಲ್.ಆರ್.ಅಂಗಡಿ, ಶ್ರೀಕಾಂತ ರಾಠೋಡ…
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಬಸವ ಜಯಂತಿಯಂಗವಾಗಿ ಮೇ.೯,೧೦ ರಂದು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಮೇ. ೯ ರಂದು ಬೆಳಗ್ಗೆ ೭ ಗಂಟೆಯಿಂದ ದೇವಸ್ಥಾನದಲ್ಲಿ ಶಿವಭಜನೆ ಆರಂಭವಾಗಲಿದೆ. ಸಂಜೆ ೬ ಗಂಟೆಗೆ ದೇವಸ್ಥಾನದ ಆವರಣದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ ೯.೩೦ ಗಂಟೆಗೆ ಅಂಕಲಗಿಯ ಜಯಶ್ರೀ ಭಜನಾ ಸಂಘ ಹಾಗೂ ಉಮದಿಯ ಬಾಹುಸಾಹೇಬ ಮಹಾರಾಜ ಭಜನಾ ಸಂಘದಿಂದ ಭಜನಾ ಪದಗಳು ನಡೆಯಲಿವೆ.ಮೇ. ೧೦ ರಂದು ಬೆಳಗ್ಗೆ ೭.೩೦ ಗಂಟೆಗೆ ದೇವಸ್ಥಾನದ ಆವರಣದಲ್ಲಿ ಷಟ್ಸ್ಥಲ ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ ೧೦.೩೦ ಗಂಟೆಗೆ ಬಸವ ಜನ್ಮಸ್ಮಾರಕದಲ್ಲಿ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವೇಶ್ವರರ ತೊಟ್ಟಿಲು ಹಾಗೂ ನಾಮಕರಣ ಸಮಾರಂಭ ನಡೆಯಲಿದೆ. ಮಧ್ಯಾನ್ಹ ೧೨.೩೦ ಗಂಟೆಗೆ ಬಸವಜನ್ಮ ಸ್ಮಾರಕದ ಮುಂಭಾಗ, ಬಸವೇಶ್ವರ ದೇವಸ್ಥಾನದ ದಾಸೋಹ ಭವನದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.ಸಂಜೆ ೫ ಗಂಟೆಗೆ ದೇವಸ್ಥಾನದ ಆವರಣದಲ್ಲಿ ವಚನ ಚಿಂತನ ಗೋಷ್ಠಿ…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೭೫ ನೇ ಯಾತ್ರಾ ಮಹೋತ್ಸವ ಹಾಗೂ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೨೩ ನೇ ಸಂಸ್ಮರಣೋತ್ಸವದಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದಲ್ಲಿ ಶ್ರೀಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾಬ್ಯಾಗ್, ಪಠ್ಯ ಪರಿಕರಗಳನ್ನು ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿತರಿಸಿದರು.
ಬಸವನಬಾಗೇವಾಡಿ: ಜೀವನದಲ್ಲಿ ಯಾರೂ ದುಡಿಮೆ ಮಾಡುತ್ತಾರೋ ಅಂತಹವರು ಸುಂದರವಾದ ಜೀವನ ಸಾಗಿಸುತ್ತಾರೆ. ಜೀವನದಲ್ಲಿ ಆಚಾರ-ವಿಚಾರವಂತರಾಗಿ ಸನ್ಮಾರ್ಗದಲ್ಲಿ ಸಾಗಿದರೆ ಭಗವಂತನು ಖಂಡಿತ ಒಳ್ಳೆಯದು ಮಾಡುತ್ತಾನೆ ಎಂದು ಕೆರೂರ-ಕೊಣ್ಣೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೭೫ ನೇ ಯಾತ್ರಾಮಹೋತ್ಸವ ಹಾಗೂ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೨೩ ನೇ ಸಂಸ್ಮರಣೋತ್ಸವ ಹಾಗೂ ಗುರು ಮಹಾಂತೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆಯಂಗವಾಗಿ ಬುಧವಾರ ಭಜನಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮರನ್ನು ಸ್ಮರಣೆ ಮಾಡುವದರಿಂದ ಘನವಾದ ಮುಕ್ತಿ ಸಿಗುತ್ತದೆ. ಪರಮಾತ್ಮ ನಿರಾಕಾರ ರೂಪದಲ್ಲಿದ್ದಾನೆ. ಮಹಾತ್ಮರ ಲೀಲೆಗಳು ಪರಮಾತ್ಮನ ಇರುವಿಕೆಯನ್ನು ತೋರಿಸುತ್ತವೆ. ಅಪ್ರತ್ಯಕ್ಷವಾಗಿರುವ ದೇವರು ಗುರುವಿನ ರೂಪದಲ್ಲಿ ಕಾಣುತ್ತಾನೆ ಎಂದು ಸಿದ್ಧಾಂತ ಶಿಖಾಮಣಿಯಿಂದ ಗೊತ್ತಾಗುತ್ತದೆ ಎಂದರು.ಬಹಿರಂಗ ಆಚಾರವೆಂದರೆ ದೇಹವನ್ನು ಶುದ್ಧಿಯಾಗಿಟ್ಟುಕೊಳ್ಳುವುದು. ಅಂತರಂಗ ಆಚಾರವೆಂದರೆ ಮಹಾತ್ಮರ ಅಮೃತವಾಣಿಗಳಿಂದ ಅಂತರಂಗವನ್ನು ಶುದ್ಧಿವಾಗುತ್ತದೆ. ನಮ್ಮ ಸಂಸ್ಕ್ರತಿ-ಸಂಸ್ಕಾರವನ್ನು ಎಂದಿಗೂ ಬಿಡಬಾರದು. ಇಂದು…
ಸಿಂದಗಿ: ೨೦೨೪ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿಂದಗಿ ವಿಧಾನಸಭಾ ಮತಕ್ಷೇತ್ರ-೩೩ರಲ್ಲಿ ಶಾಂತಿಯುತ ಮತದಾನವಾಗಿದೆ.ಬಿಸಿಲಿನ ಬರದಲ್ಲಿ ಬೆಳಿಗ್ಗೆ ಬೇಗ ಮತದಾನ ಮಾಡಿದರು. ಮಧ್ಯಾಹ್ನ ೨ ಗಂಟೆಯಿಂದ ಸಾಯಂಕಾಲದವರೆಗೆ ಕ್ಷೇತ್ರದಲ್ಲಿ ಬಿಸಿಲಿನ ಬೇಗಗೆ ಮತದಾನ ನಿರಸ ಪ್ರತಿಕ್ರಿಯೆ ಕಂಡು ಬಂದಿತ್ತು. ಆದರೆ ಬಿಸಿಲು ಇಳಿಯುವ ಸಮಯದಲ್ಲಿ ಮತದಾರರು ತೀರ್ವವಾಗಿ ಕುಟುಂಬ ಸಮೇತವಾಗಿ ಅವರವರ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದ್ದು ಕಂಡು ಬಂದಿತು. ಯಾವುದೇ ರಿತೀಯ ಅಹಿತಕರ ಘಟನೆಗಳು ಕಂಡು ಬಂದಿಲ್ಲ. ಮತಗಟ್ಟೆ ಸಂಖ್ಯೆ ೧೭೧, ೧೭೨, ೧೭೩ ಬೂತ್‌ನ ಆವರಣದಲ್ಲಿಯೇ ಆಗಮಿಸಿ ಚಿಟಿ ನೀಡುವ ದೃಶ್ಯ ಕಂಡು ಬಂದಿತು. ಆದರೆ ಅಧಿಕಾರಿಗಳು ಕಂಡು ಕಾಣದಂತೆ ಕುಳತಿದ್ದಾರೆ.ಒಟ್ಟು ೨,೪೦,೪೪೪ ಮತಗಳಿದ್ದು, ಅದರಲ್ಲಿ ಪುರುಷರು-೧,೨೩,೩೧೩, ಮಹಿಳೆಯರು-೧,೧೭,೧೦೦, ೧೩೮೧ ವಯಸ್ಕರು ಮತ್ತು ಇತರೆ ೨೯ ಮತಗಳಿದ್ದವು.ಒಟ್ಟು ಕ್ಷೇತ್ರದಲ್ಲಿ ೨೬೮ ಮತಗಟ್ಟಗಳಿದ್ದು, ೧೩೭ ಸೂಕ್ಷö್ಮ ಮತಗಟ್ಟೆಗಳಿದ್ದವು. ಅದರಲ್ಲಿ ಸಿಂದಗಿ ಕಾಳಿಕಾ ನಗರದ ಸರಕಾರಿ ಪ್ರಾಥಮಿಕ ಶಾಲೆ ನಂ೬, ಬಸವ ನಗರದ ಸರಕಾರಿ ಹೆಣ್ಣು ಮಕ್ಕಳ ಶಾಲೆ, ವಿದ್ಯಾ ನಗರದ ಸರಕಾರಿ…
