ಮುದ್ದೇಬಿಹಾಳ: ಪ್ರತೀ ವರ್ಷದಂತೆ ಈ ವರ್ಷವೂ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಮಸ್ತ ಬಸವಾಭಿಮಾನಿಗಳು ತೀರ್ಮಾನಿಸಿದರು.
ಈ ಕುರಿತು ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಮಾತನಾಡಿ, ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಹೊಸ ಮಠದಿಂದ ಬಸವೇಶ್ವರರ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿಸಲು ತೀರ್ಮಾನಿಸಿದ್ದೇವೆ. ವ್ಯಾಪಾರಸ್ಥರು ಮೇ೧೦ ರಂದು ಮಧ್ಯಾಹ್ನ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಂಡರು.
ಈ ವೇಳೆ ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಅಂದು ಸಂಜೆ ೫ಗಂಟೆಗೆ ಮೆರವಣಿಗೆ ಪ್ರಾರಂಭವಾಗುವದು. ಹೊಸಮಠದಿಂದ ಸರಾಫ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ದೇವಸ್ಥಾನ, ಶಾರದಾ ದೇವಿ ದೇವಸ್ಥಾನ, ಬಿಎಸ್‌ಎನ್‌ಎಲ್ ಕಚೇರಿ ಮಾರ್ಗವಾಗಿ ಬೊಮ್ಮಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಸಾಗಲಿದೆ. ಎಲ್ಲರೂ ತಮ್ಮ ವಾಹನಗಳನ್ನು ಒಂದೆಡೆ ಬಿಟ್ಟು ಮೆರವಣಿಗೆಯಲ್ಲಿ ಭಾಗಿಯಾಗಬೇಕು. ಶುಭ್ರ (ಬಿಳಿ) ಉಡುಪು ತೊಟ್ಟು, ಹಣೆಗೆ ವಿಭೂತಿ ಧರಿಸಿ ಬಂದಲ್ಲಿ ಕಳೆ ಹೆಚ್ಚುವದು. ಎಲ್ಲ ಸಮಾಜ ಬಾಂಧವರೂ ಭಾಗಿಯಾಗುವಂತೆ ಮನವಿ ಮಾಡಿಕೊಳ್ಳಲಾಗುವದು ಎಂದರು.
ಈ ವೇಳೆ ಪ್ರಮುಖರಾದ ಚನ್ನಪ್ಪ ಕಂಠಿ, ಬಸವರಾಜ ನಾಲತವಾಡ, ಅಶೋಕ ನಾಡಗೌಡ, ಎಸ್.ಸಿ.ಹಿರೇಮಠ, ಬಸವರಾಜ ನಾಗರಾಳ, ಅಪ್ಪು ದೇಗಿನಾಳ, ರಾಜು ಕರಡ್ಡಿ, ರುದ್ರಗೌಡ ಅಂಗಡಗೇರಿ, ಮಹಾಂತೇಶ ಬೂದಿಹಾಳಮಠ, ಸದಾಶಿವ ಮಠ, ಅಮರೇಶ ಗೂಳಿ, ರಾಜು ಬಳ್ಳೊಳ್ಳಿ, ಎಸ್.ಕೆ.ಕಟ್ಟಿ, ರುದ್ರೇಶ ಕಿತ್ತೂರ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

