ಢವಳಗಿ: ಇತ್ತಿಚಿನ ದಿನಗಳಲ್ಲಿ ಕೃಷಿಗೆ ಎತ್ತುಗಳ ಬಳಕೆ ಮಾಡುವುದು ಕಡಿಮೆ ಆಗಿದೆ. ಯಂತ್ರದ ಕೃಷಿ ಹೆಚ್ಚುತ್ತಿದೆ. ಒಕ್ಕುಲುತನ ಮಾಡುವವರು ನಾವು ಕೀಳುಮಟ್ಟದವರು ಎನ್ನುವ ಭಾವನೆ ಜನರಲ್ಲಿ ಬರಬಾರದು ಎಂದು ಮುದ್ದೇಬಿಹಾಳ ಶಾಸಕ ಸಿ ಎಸ್ ನಾಡಗೌಡ ಅವರು ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಜೋಡೆತ್ತಿನ ಕೃಷಿಗೆ ಪುನಶ್ಚೇತನ ಸಂಕಲ್ಪ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊದಲು ನಮ್ಮ ಮನೆಯಲ್ಲಿ ಅರವತ್ತು ಎತ್ತಿನ ಒಕ್ಕಲುತನ ಇತ್ತು. ಆದರೆ ಇವತ್ತಿನ ದಿನ ನಮ್ಮ ಮನೆಯಲ್ಲಿ ಒಂದು ಹಸು ಕೂಡಾ ಇಲ್ಲ. ನಾವು ಎಲ್ಲರೂ ಪಾಕೇಟ್ ಹಾಲು ಬಳಸುತ್ತಿದ್ದೆವೆ. ಈಗಿನ ಯುವಕರು ವ್ಯವಸಾಯದಲ್ಲಿ ಆಸಕ್ತಿ ತೋರಬೇಕು. ರೈತರಿಗೆ ಹಸು ಹಾಗೂ ಎತ್ತಿನ ಗೊಬ್ಬರ ಬೂಮಿಗೆ ಮತ್ತು ಬೆಳೆಗಳಿಗೆ ಉತ್ತಮ ಹಾಗೂ ಆರೋಗ್ಯವಾದ ಗೊಬ್ಬರವಾಗಿದೆ. ಇದರಿಂದ ಬೆಳೆಯುವ ಬೆಳೆಗಳಿಗೂ ಕೂಡಾ ಹೆಚ್ಚು ರೋಗಗಳು ಬರುವುದಿಲ್ಲ. ಆಗಿನ ಕಾಲದಲ್ಲಿ ವ್ಯವಸಾಯದಲ್ಲಿ ರೈತರಿಗೆ ಹೆಚ್ಚು ಖರ್ಚು ಬರುತ್ತಿರಲಿಲ್ಲ. ಏಕೆಂದರೆ ಅವರ ಜೋತೆ ಎತ್ತು, ಧನಕರುಗಳು ಜೋತೆಗಿರುತ್ತಿದ್ದವು. ಆದರೆ ಈಗಿನ ರೈತರ ಜೋತೆ ಟ್ರ್ಯಾಕ್ಟರ್ ಮತ್ತು ಮೋಟರ್ ಸೈಕಲ್ ಇದೆ. ಇದರಿಂದ ರೈತನಿಗೆ ಹೆಚ್ಚು ಖರ್ಚು ಬರುತ್ತಿದೆ. ಹೀಗಾಗಿ ಒಕ್ಕುಲುತನದಲ್ಲಿ ನಷ್ಟದಲ್ಲಿ ಇದೆ ಎಂದು ಮಾತನಾಡಿದರು.
ನಮ್ಮ ಬದುಕು ಬದಲಾಗಬೇಕಾದರೆ ಮೋದಲು ಈಗಿನ ಕೃಷಿ ಬದಲಾಗಿ ಮೋದಲಿನ ಕೃಷಿ ಪುನಾರಾಂಭವಾಗಬೇಕಿದೆ. ರೈತನಿಗೆ ಮಣ್ಣು ಯಾವ ರೀತಿ ಇರಬೆಕೆಂದರೆ ಮಣ್ಣು ಮುಷ್ಠಿ ಹಿಡಿದರೆ ಅದು ಸ್ಪಂಜ್ ತರಮೃದುವಾಗಿರಬೇಕು. ಆದರೆ ಇತ್ತಿಚಿನ ದಿನಗಳಲ್ಲಿ ನಾವು ರಾಸಯನಿಕ ಗೊಬ್ಬರ ಬಳಕೆಯಿಂದ ಮಣ್ಣು ತನ್ನ ಶಕ್ತಿಯನ್ನು ಕಳೆದುಕೋಂಡಿದೆ. ರೈತನ ಮಿತ್ರ ಎತ್ತುಗಳ ಕೃಷಿಯಿಂದ ವ್ಯವಸಾಯ ಮಾಡಿದರೆ ಅದು ಭೂಮಿಗೂ ಮತ್ತು ಮನುಷ್ಯನಿಗೂ ಒಳ್ಳೆಯ ಆಹಾರ ಸಿಗುತ್ತದೆ. ಇಂತಹ ಆಹಾರದಿಂದ ಯಾವುದೇ ರೋಗರುಜನೆಗಳಿಂದ ದೂರವಿರಬಹುದು ಎಂದು ಮಾಜಿ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರು ಮಾತನಾಡಿದರು.
ಬಿಸಿಲಿನ ತಾಪ ಕಡಿಮೆ ಆಗಬೇಕಾದರೆ ನಮ್ಮ ರೈತರಿಂದ ಮಾತ್ರ ಸಾದ್ಯ. ರೈತರು ವ್ಯಸಾಯದಲ್ಲಿ ಮಿಶ್ರಬೇಳೆ ಬೆಳೆಯಬೇಕು. ಇದರಿಂದ ರೈತರಿಗೆ ಒಳ್ಳೆಯ ಆದಾಯ ಬರುತ್ತಿದೆ. ಮತ್ತು ಖರ್ಚು ಕೂಡಾ ಕಡಿಮೆ ಅಗುತ್ತೆ. ರೈತರು ಟ್ರಾö್ಯಕ್ಟರ್ ದಿಂದ ಉಳುಮೆ ಮಾಡುವುದರಿಂದ ಭೂಮಿಯು ಗಟ್ಟಿಯಾಗುತ್ತಿದೆ. ಸಮಗ್ರ ಕೃಷಿಗೆ ಎತ್ತುಗಳು ಬಹುಮುಖ್ಯವಾಗಿದೆ. ಸರ್ಕಾರವು ಮುಂದಿನ ದಿನಮಾನಗಳಲ್ಲಿ ಜೋಡೆತ್ತಿನ ಕೃಷಿ ರೈತರಿಗೆ ಸಹಾಯಧನ ನೀಡಬೇಕು ಎಂದು ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಘನಮಠೇಶ್ವರ ಸ್ವಾಮೀಜಿ ಗದ್ದುಗೆಮಠ ವಹಿಸಿಕೊಂಡಿದ್ದರು.
ಇದೇ ವೇಳೆಯಲ್ಲಿ ಬಾಗಲಕೋಟೆಯ ಕೃಷಿವಿಶ್ವವಿದ್ಯಾಲದ ಕುಲಪತಿ ಐ ಬಿ ಬಿರಾದಾರ, ಅಭಿ ಪೌಂಡೇಷನ್ ಅಧ್ಯಕ್ಷ ಬಸವರಾಜ ಬಿರಾದಾರ ಅವರು ಮಾತನಾಡಿದರು.
ಎಸ್ ಎಸ್ ಪಾಟೀಲ ನಿವೃತ್ತ ಶಿಕ್ಷಕರು, ಮಲ್ಲಿಕಾರ್ಜುನ ಸಿದರೆಡ್ಡಿ, ಶರಣು ಬಿರಾದಾರ, ಮಲ್ಲನಗೌಡ ಬಿರಾದಾರ, ಶ್ರೀಶೈಲ ದೊಡಮನಿ, ನೀಲಕಂಠರಾವ್ ನಾಡಗೌಡ, ಆರ್ ಎಸ್ ಪಾಟೀಲ ಅಗಸಬಾಳ, ಸಿ ಜಿ ನಾಗರಾಳ ಶಿಕ್ಷಕರು, ಶಂಕರಗೌಡ ಬಿರಾದಾರ,ವಿನಯ ಹೀರೆಮಠ, ಬಸನಗೌಡ ಪಾಟೀಲ ತಾರನಾಳ ಸೇರಿದಂತೆ ಅನೇಕ ರೈತ ಮುಖಂಡರು ಇದ್ದರು.
ಕಾರ್ಯಕ್ರಮದಲಿ ರೈತರಿಗೆ ನಾಡ ಮೆಚ್ಚಿದ ನಂದಿ ಕೃಷಿಕ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
ಜೋಡೆತ್ತಿನ ಕೃಷಿಗೆ ಪುನಶ್ಚೇತನ ಸಂಕಲ್ಪ ಸಮ್ಮೇಳನಕ್ಕೆ ಚಾಲನೆ
Related Posts
Add A Comment

