ಸಿಂದಗಿ: ೨೦೨೪ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿಂದಗಿ ವಿಧಾನಸಭಾ ಮತಕ್ಷೇತ್ರ-೩೩ರಲ್ಲಿ ಶಾಂತಿಯುತ ಮತದಾನವಾಗಿದೆ.
ಬಿಸಿಲಿನ ಬರದಲ್ಲಿ ಬೆಳಿಗ್ಗೆ ಬೇಗ ಮತದಾನ ಮಾಡಿದರು. ಮಧ್ಯಾಹ್ನ ೨ ಗಂಟೆಯಿಂದ ಸಾಯಂಕಾಲದವರೆಗೆ ಕ್ಷೇತ್ರದಲ್ಲಿ ಬಿಸಿಲಿನ ಬೇಗಗೆ ಮತದಾನ ನಿರಸ ಪ್ರತಿಕ್ರಿಯೆ ಕಂಡು ಬಂದಿತ್ತು. ಆದರೆ ಬಿಸಿಲು ಇಳಿಯುವ ಸಮಯದಲ್ಲಿ ಮತದಾರರು ತೀರ್ವವಾಗಿ ಕುಟುಂಬ ಸಮೇತವಾಗಿ ಅವರವರ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದ್ದು ಕಂಡು ಬಂದಿತು. ಯಾವುದೇ ರಿತೀಯ ಅಹಿತಕರ ಘಟನೆಗಳು ಕಂಡು ಬಂದಿಲ್ಲ. ಮತಗಟ್ಟೆ ಸಂಖ್ಯೆ ೧೭೧, ೧೭೨, ೧೭೩ ಬೂತ್‌ನ ಆವರಣದಲ್ಲಿಯೇ ಆಗಮಿಸಿ ಚಿಟಿ ನೀಡುವ ದೃಶ್ಯ ಕಂಡು ಬಂದಿತು. ಆದರೆ ಅಧಿಕಾರಿಗಳು ಕಂಡು ಕಾಣದಂತೆ ಕುಳತಿದ್ದಾರೆ.
ಒಟ್ಟು ೨,೪೦,೪೪೪ ಮತಗಳಿದ್ದು, ಅದರಲ್ಲಿ ಪುರುಷರು-೧,೨೩,೩೧೩, ಮಹಿಳೆಯರು-೧,೧೭,೧೦೦, ೧೩೮೧ ವಯಸ್ಕರು ಮತ್ತು ಇತರೆ ೨೯ ಮತಗಳಿದ್ದವು.
ಒಟ್ಟು ಕ್ಷೇತ್ರದಲ್ಲಿ ೨೬೮ ಮತಗಟ್ಟಗಳಿದ್ದು, ೧೩೭ ಸೂಕ್ಷö್ಮ ಮತಗಟ್ಟೆಗಳಿದ್ದವು. ಅದರಲ್ಲಿ ಸಿಂದಗಿ ಕಾಳಿಕಾ ನಗರದ ಸರಕಾರಿ ಪ್ರಾಥಮಿಕ ಶಾಲೆ ನಂ೬, ಬಸವ ನಗರದ ಸರಕಾರಿ ಹೆಣ್ಣು ಮಕ್ಕಳ ಶಾಲೆ, ವಿದ್ಯಾ ನಗರದ ಸರಕಾರಿ ಗಂಡು ಮಕ್ಕಳ ಶಾಲೆ, ಸಿಂದಗಿ ಸರಕಾರಿ ಗಂಡು ಮಕ್ಕಳ ಶಾಲೆ ಮತ್ತು ಆಲಮೇಲದ ಸರಕಾರಿ ಗಂಡು ಮಕ್ಕಳ ಶಾಲೆ ಸೇರಿದಂತೆ ಒಟ್ಟು ೫ ಸಖೀ ಬೂತಗಳು ನಿರ್ಮಾಣವಾಗಿದ್ದವು
Subscribe to Updates
Get the latest creative news from FooBar about art, design and business.
Related Posts
Add A Comment

