Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಅಥಣಿ: ಶಿವಯೋಗಿಗಳ ಪುಣ್ಯ ಕ್ಷೇತ್ರವಾದ ಅಥಣಿಯಲ್ಲಿ ಸರ್ವ ಧರ್ಮೀಯರೂ ಯಾವುದೇ ಭೇದ ಭಾವ ಇಲ್ಲದೇ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯ. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು, ಈ ಬಾರಿಯ ಮೊಹರಂ ಹಬ್ಬವನ್ನು ಎಲ್ಲ ಸಮುದಾಯದವರು ಪರಸ್ಪರ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಅಥಣಿ ಪೊಲೀಸ್ ಉಪನಿರೀಕ್ಷಕ ಗಿರಮಲಪ್ಪ ಉಪ್ಪಾರ ಮನವಿ ಮಾಡಿದರು.ಅವರು ಪಟ್ಟಣದ ಪೋಲೀಸ್ ಸಮುದಾಯ ಭವನದಲ್ಲಿ ಮೊಹರಂ ಹಬ್ಬದ ಪ್ರಯುಕ್ತವಾಗಿಆಯೋಜಿಸಲಾಗಿದ್ದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ಸಾರ್ವಜನಿಕರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಕರಿಸಬೇಕು. ಒಂದು ವೇಳೆ ಹಬ್ಬದ ಹೆಸರಿನಲ್ಲಿ ಶಾಂತಿ ಭಂಗ ಉಂಟುಮಾಡುವ ಅಥವಾ ಅಹಿತಕರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದರು.ಈ ವೇಳೆ ಮುಸ್ಲಿಂ ಸಮಾಜದ ಮುಖಂಡ ಅಸ್ಲಮ್ ನಾಲಬಂದ ಮಾತನಾಡಿ, ಅಥಣಿ ಶಾಂತಿಗೆ ಹೆಸರುವಾಸಿಯಾಗಿದೆ ಇಲ್ಲಿನ ಜನರು ಹಬ್ಬ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಯಾಂತ್ರಿಕೃತ ಮತ್ತು ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಯೋಗ ಅತ್ಯಂತ ಅವಶ್ಯಕವಾಗಿದೆ. ಪ್ರತಿನಿತ್ಯ ಯೋಗಾಸನ ಮತ್ತು ಪ್ರಾಣಾಯಾಮ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಏಕಾಗ್ರತೆ ವೃದ್ಧಿಸುತ್ತದೆ ಮತ್ತು ಒತ್ತಡದಿಂದ ಮುಕ್ತಿ ಪಡೆಯಬಹುದು ಎಂದು ನಗರದ ವಿವಾ ಫಿಟ್ನೆಸ್ ಸೆಂಟರ್ ಮುಖ್ಯಸ್ಥೆ ವಿಜಯಲಕ್ಷ್ಮಿ ಗಿರಗಾವಿ ಹೇಳಿದರು.ನಗರದ ಸುಭಾಶ್ಚಂದ್ರ ಭೋಸ್ ವೃತ್ತದ ಬಳಿಯಿರುವ ತಮ್ಮ “ವಿವಾ ಫಿಟ್ನೆಸ್ ಕೇಂದ್ರ” ದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಮಹಿಳಾ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿ ಅವರು ಮಾತನಾಡಿದರು.ಯೋಗವು ಯಾವುದೇ ವಯಸ್ಸಿನವರಿಗೂ ಸೂಕ್ತವಾಗಿದ್ದು, ಇದು ನಮಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನೀಡುತ್ತದೆ. ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಅದನ್ನು ನಮ್ಮ ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ ಎಂದು ವಿಜಯಲಕ್ಷ್ಮಿ ಅವರು ಸಲಹೆ ನೀಡಿದರು.’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶ್ರೀಮತಿ ಶೈಲಾ ಮಣೂರ ಅವರು ಮಾತನಾಡಿ, ಭಾರತದ ಪ್ರಾಚೀನ ಸಂಸ್ಕೃತಿಯ ಕೊಡುಗೆಯಾಗಿರುವ ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ನಮ್ಮ ಮನಸ್ಸು,…

Read More

ವಿದ್ಯುತ್ ಖಾಸಗೀಕರಣ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳಿಂದ ಚಡಚಣ ತಹಶೀಲ್ದಾರರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ಚಡಚಣ: ಕರ್ನಾಟಕದ ಹೆಸ್ಕಾಂ ಸೇರಿದಂತೆ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಹಾಗೂ ಟಾಟಾ ಪವರ್ ಕಂಪನಿ ಲಿಮಿಟೆಡ್‌ಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಯತ್ನಗಳನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ನೂರಾರು ರೈತರು ಚಡಚಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಚಡಚಣ ತಾಲೂಕಿನ ಕೆಪಿಟಿಸಿಎಲ್ ಕಚೇರಿಯಿಂದ ತಹಶೀಲ್ದಾರ್ ಕಚೇರಿವರೆಗೆ ರೈತರು ಕಾಲ್ನಡಿಗೆ ಮೆರವಣಿಗೆ ನಡೆಸಿ ವಿದ್ಯುತ್ ಖಾಸಗೀಕರಣದ ಪ್ರಸ್ತಾವನೆ ಹಿಂಪಡೆಯುವಂತೆ ಒತ್ತಾಯಿಸಿದರು. ಸಂಘಟನೆಯ ಪದಾಧಿಕಾರಿಗಳು ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ ಹಾಗೂ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ ಅವರ ಮೂಲಕ ಶುಕ್ರವಾರ ಪಟ್ಟಣದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಹೆಸ್ಕಾಂ…

Read More

ಉದಯರಶ್ಮಿ ದಿನಪತ್ರಿಕೆ ವರದಿ: ರಾಜು ಕೆರುಟಗಿವಿಜಯಪುರ: ನಗರದ ಪತ್ರಕರ್ತ ಸುನೀಲ ಗೋಡೆನ್ನವರ ಅವರು ಭಾನುವಾರ ವಿಶ್ವ ಯೋಗ ದಿನ ಪ್ರಯುಕ್ತ ಶನಿವಾರ ತಮ್ಮ ಇಬ್ಬರು ಮಕ್ಕಳೊಂದಿಗೆ ನೀರಿನಲ್ಲೇ ಯೋಗ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.ಅತ್ಯಂತ ಕಠಿಣವೆನಿಸುವ ಜಲಯೋಗದ ಮೂಲಕ ಆರೋಗ್ಯ, ಏಕಾಗ್ರತೆ ಮತ್ತು ಶಿಸ್ತಿನ ಮಹತ್ವ ಸಾರುತ್ತಿರುವ ಪತ್ರಕರ್ತ ಸುನೀಲ ಗೋಡೆನ್ನವರ ಅವರು ನೀರಿನ ಮೇಲೆ ತೇಲುತ್ತಾ, ಕಣ್ಣು ಮುಚ್ಚಿ ಧ್ಯಾನದಲ್ಲಿ ಮಗ್ನರಾಗುವುದು ಕಠಿಣ ಯೋಗಗಳಲ್ಲಿ ಒಂದಾಗಿದೆ ಎನ್ನುತ್ತಾರೆ ಸಿಂದಗಿಯ ಹಿರಿಯ ಯೋಗಪಟು ಗಂಗಾಧರ ಹಿರೇಮಠ ಅವರು.ರವಿವಾರ ವಿಶ್ವ ಯೋಗ ದಿನದ ಅಂಗವಾಗಿ ಪತ್ರಕರ್ತ ಸುನಿಲ್ ಹಾಗೂ ಅವರ ಮಕ್ಕಳಾದ ಸಾತ್ವಿಕ್ ಮತ್ತು ಋತ್ವಿಕ್ ಅವರು ಶನಿವಾರ ಜಲಯೋಗ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಸಾಮಾನ್ಯವಾಗಿ ಯೋಗವನ್ನು ನೆಲದ ಮೇಲೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ನೀರಿನಲ್ಲೇ ಸಮತೋಲನ ಕಾಯ್ದುಕೊಂಡು ಪದ್ಮಾಸನ, ಉತ್ಕಟಾಸನ, ಶವಾಸನ ಸೇರಿದಂತೆ ಹಲವು ಆಸನಗಳನ್ನು ಮಾಡುವುದು ಸುಲಭದ ಮಾತಲ್ಲ. ಇದರ ಜೊತೆಗೆ ನೀರಿನಲ್ಲೇ ಪ್ರಾಣಾಯಾಮ ಅಭ್ಯಾಸ ಮಾಡಿ ದೇಹ…

Read More

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಮಹರ್ಷಿ ಪತಂಜಲಿ ಅವರು ಹೇಳಿರುವಂತೆ, “ಯೋಗವು ಕೇವಲ ಒಂದು ದೈಹಿಕ ವ್ಯಾಯಾಮವಲ್ಲ. ಅದು ಮನಸ್ಸು, ದೇಹ ಮತ್ತು ಉಸಿರಾಟಗಳ ನಡುವಿನ ಸಂಪರ್ಕದ ಸಾಧನವಾಗಿದೆ. ವ್ಯಕ್ತಿಯಲ್ಲಿರುವ ಚಿತ್ತದ ವೃತ್ತಿಗಳನ್ನು ನಿಯಂತ್ರಿಸುವುದಾಗಿದೆ. ಇದರಿಂದ ಜೀವನದಲ್ಲಿ ಶಿಸ್ತು, ಚೈತನ್ಯ, ಸಮತೋಲಿತ ಮತ್ತು ಸುಸ್ಥಿರ ಆರೋಗ್ಯಕ್ಕೆ ಸಹಕಾರಿ” ಎಂದು ಹೇಳಿದ್ದಾರೆ. ಯೋಗವು ಒತ್ತಡ, ಸಂಘರ್ಷ, ಆತಂಕ, ದುಗುಡ, ಖಿನ್ನತೆ, ನಿರ್ಲಿಪ್ತತೆ ಮತ್ತು ಮಾನಸಿಕ ಅಶಾಂತಿಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ದೈನಂದಿನವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನಶೈಲಿ ಬೆಳೆಸಲು ಇದೊಂದು ಶಕ್ತಿಯುತವಾದ ಸಾಧನ. ಒಟ್ಟಾರೆ ದೈಹಿಕ ಕಸರತ್ತು, ವ್ಯಾಯಾಮ, ಧ್ಯಾನ, ಯೋಗ, ಇವೆಲ್ಲವೂ ವ್ಯಕ್ತಿಯ ಸುಸ್ಥಿರ ಆರೋಗ್ಯ ಮತ್ತು ಯೋಗಕ್ಷೇಮದೊಂದಿಗೆ ಬದುಕಲು ಸಹಾಯಕವಾಗಿವೆ. ನಮ್ಮ ಋಷಿ ಮುನಿಗಳ ಪ್ರಕಾರ, ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನದ ಶಿಕ್ಷಣವೇ ಯೋಗ ಎಂದು ಉಲ್ಲೇಖಿಸಿದ್ದಾರೆ.ಆದರೆ ಇಂದಿನ ಆಧುನಿಕ ಯುಗದಲ್ಲಿ ಮಾನವ ದುಡಿಮೆ, ಕೂಳು-ಬಾಕು ಸಂಸ್ಕೃತಿ,…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನ ಮುದ್ದಿನ ಸೊಸೆ,ಬಾಲ್ಯದಲ್ಲಿ ಅದು ಬೇಕು ಇದು ಬೇಕೆಂದು ನೀ ಹಠ ಹಿಡಿದಾಗ ನಿನ್ನ ಕಾಡಿಗೆ ಕಂಗಳಲ್ಲಿ ಕಣ್ಣೀರನ್ನು ನೋಡಲು ಆಗುತ್ತಿರಲಿಲ್ಲ. ತಂಟೆ ಮಾಡುವ ತುಂಟಿಯ ಹಠವನ್ನು ಪೂರೈಸುವುದರಲ್ಲಿ ಅದೇನೋ ಸಂತಸ. ನಿನಗೆ ಆಕೆಯ ಮೇಲೆ ಅಷ್ಟು ಪ್ರೀತಿ ಮದುವೆ ಆಗ್ತಿಯಾ ಅವಳನ್ನ ಎಂದು ಮನೆಯಲ್ಲಿ ಹಿರಿಯರೆಲ್ಲ ತಮಾಷೆ ಮಾಡುತ್ತಿದ್ದರು. ಆಗ ಮದುವೆ ಅಂದರೆ ಏನು ಗೊತ್ತಿರದ ನಾನು ಹೂಂ ಎನ್ನುತ್ತಿದ್ದೆ. ಅವರೆಲ್ಲ ಗೊಳ್ಳೆಂದು ನಗುತ್ತಿದ್ದರು. ಅಂದು ಅಕ್ಕನ ಮಗಳಾಗಿ ನನ್ನ ಕಣ್ಮುಂದೆ ಓಡಾಡುವಾಗ ನಿನ್ನ ನೋಡುವುದೇ ಒಂದು ಆನಂದ. ನನ್ನ ಹೆಗಲ ಮೇಲೆ ಕುಳಿತಿದ್ದು ಇಬ್ಬರೂ ಕೈ ಕೈ ಹಿಡಿದು ಆಟವಾಡಿದ್ದು ಮನದಲ್ಲಿ ಇನ್ನೂ ಅಚ್ಚೊತ್ತಿದಂತಿದೆ.ಮನೆಯಂಗಳದಲ್ಲಿ ಬಿರಿದ ಮಲ್ಲಿಗೆಯಂತಿದ್ದ ನಿನ್ನ ನಗು ಕಂಡಾಗಲೆಲ್ಲ ನಿನ್ನ ಹೆಜ್ಜೆಗಳನ್ನೇ ಹಿಂಬಾಲಿಸುತ್ತಿದ್ದೆ. ಚಿಕ್ಕಂದಿನಿಂದಲೂ ಕಷ್ಟ ಸುಖಗಳನ್ನು ಹಂಚಿಕೊಂಡು ಬೆಳೆದ ಗೆಳೆತನ ನಮ್ಮದು. ಆ ಎಲ್ಲ ಸವಿನೆನಪುಗಳು ನೀಡಿದ ಆನಂದವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಆ…

Read More

– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಳು ಮೂಡಿಸೋ ಜಾದುಗಾರ ಅಪ್ಪ.. ಹಗಲು-ಬೆವರಿನ ಕೂಲಿಕಾರ, ರಾತ್ರಿ ಮನೆಯಲ್ಲಿ ಚೌಕಿದಾರ ಅಪ್ಪ.. ಎಂಬ ಅಪ್ಪನ ಕುರಿತ ಈ ಚಲನಚಿತ್ರದ ಹಾಡು ತಂದೆಯ ಪಾತ್ರವನ್ನು ವರ್ಣಿಸುವ ಸಾಲುಗಳಿವು. ಕುಟುಂಬದ ಎಲ್ಲ ಸದಸ್ಯರ ಇಷ್ಟ-ಕಷ್ಟಗಳ ಪೂರೈಸುವಲ್ಲಿಯೇ ತನ್ನೆಲ್ಲ ಜೀವಿವನ್ನು ಶ್ರೀಗಂಧದಂತೆ ತೇದು ಎಲ್ಲರ ಸಂತಸಕ್ಕಾಗಿ ದುಡಿಯುವ ದೈವವೇ ಅಪ್ಪ. ಇತರರ ಸುಖದಲ್ಲಿ ತನ್ನ ಸುಖವನ್ನು ಕಂಡು ಎಲ್ಲ ನೋವನ್ನು ತನ್ನ ಒಡಲೊಳಗೆ ಬಚ್ಚಿಟ್ಟು ಪಾಲನೆ-ಪೋಷಣೆ ಮಾಡಿ, ಬೆಳೆಸಿ, ಶಿಕ್ಷಣ ನೀಡಿ, ಬದುಕಿಗೊಂದು ದಾರಿ ತೋರಿದ ಅಪ್ಪ-ಅಮ್ಮರ ನೋವು ಇಂದು ನಾವು ಬೆಳೆದು ದೊಡ್ಡದವರಾದ ಮೇಲೆ ನಮಗ್ಯಾಕೆ ಅರ್ಥವಾಗತ್ತಾಯಿಲ್ಲ? ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ನಾವು ತಪ್ಪು ಮಾಡಿದಾಗ ಗದರಿಸಿರಬಹುದು. ಆದರೆ ತನ್ನ ಮಗ ಅಥವಾ ಮಗಳು ಜೀವನದಲ್ಲಿ ಶಿಸ್ತು, ಉತ್ತಮ ಶಿಕ್ಷಣ ಜತೆಗೆ ಸದಾಚಾರ, ಸನ್ನಡತೆ ಮತ್ತು ಮೌಲ್ಯಗಳ ಧಾರಣೆಯೊಂದಿಗೆ…

Read More

ಉದಯರಶ್ಮಿ ದಿನಪತ್ರಿಕೆ”ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ, ವಿಜಯಪುರ” ವತಿಯಿಂದ ಶುಕ್ರವಾರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ. ಗದ್ದಿಗೌಡರ ಅವರನ್ನು ಭೇಟಿ ಮಾಡಿ, ಆಲಮಟ್ಟಿ ಅಣೆಕಟ್ಟಿನಲ್ಲಿ 524.256 ಮೀಟರ್ ಮಟ್ಟದವರೆಗೆ ನೀರಿನ ಸಂಗ್ರಹ ಹಾಗೂ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ಮನವಿಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ಮುಖಂಡರು, “ಆಲಮಟ್ಟಿ ಆಣೆಕಟ್ಟಿನ ನೀರಿನ ಸಂಗ್ರಹ ಹಾಗೂ ನೀರಿನ ಬಳಕೆಯ ಹಕ್ಕು ಕೇವಲ ಒಂದು ಜಿಲ್ಲೆಯ ಬೇಡಿಕೆಯಲ್ಲ, ಇದು ಇಡೀ ಕೃಷ್ಣಾ ಕೊಳ್ಳ ಪ್ರದೇಶದ ರೈತರು, ಯುವಕರು, ಮಹಿಳೆಯರು ಮತ್ತು ಜನಸಾಮಾನ್ಯರ ಬದುಕಿನ ಪ್ರಶ್ನೆಯಾಗಿದೆ. ನೀರಿನ ನ್ಯಾಯಯುತ ಹಂಚಿಕೆ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ” ಎಂದು ತಿಳಿಸಿದರು.”ನೀರು ನಮ್ಮ ಹಕ್ಕು – ಆಲಮಟ್ಟಿ ಅಣೆಕಟ್ಟಿನಲ್ಲಿ 524.256 ಮೀ. ವರೆಗೆ ನೀರಿನ ಸಂಗ್ರಹ ಹಾಗೂ ಬಳಕೆ ನಮ್ಮ ಗುರಿ” ಎಂಬ ಘೋಷಣೆಯೊಂದಿಗೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸಮಿತಿಯವರು ತಿಳಿಸಿದರು.ಈ ಸಂದರ್ಭದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸ್ವಿಚ್ ಆನ್ ಕಾರ್ಯಕ್ರಮ ಯಶಸ್ವಿ ನಡೆಯಿತು.ಶುಕ್ರವಾರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಿವಿ, ಮೂಗು ಮತ್ತು ಗಂಟಲು(ENT) ವಿಭಾಗದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವಿನ ಸ್ವಿಚ್ ಆನ್ ಮಾಡಲಾಯಿತು. ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಆಸ್ಪತ್ರೆಯ ಅಧೀಕ್ಷಕ ಡಾ. ಸಂಜೀವ ಬೆಂಟೂರ, ಹಿರಿಯ ಉಪಪ್ರಾಂಶುಪಾಲ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಕಾಕ್ಲಿಯರ್ ಇಂಪ್ಲಾಂಟ್ ಸಮನ್ವಯ ಅಧಿಕಾರಿ ಡಾ. ಎಚ್. ಟಿ. ಲತಾದೇವಿ ಹಾಗೂ ಇನ್.ಎನ್.ಟಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಕರಡಿ ಉಪಸ್ಥಿತರಿದ್ದರು.ಹುಟ್ಟು ಕಿವುಡುತನದಿಂದ ಬಳಲುತ್ತಿದ್ದ ಈ ಮಗುವಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಸ್ವಿಚ್ ಆನ್ ಪ್ರಕ್ರಿಯೆಯ ಮೂಲಕ ಮೊದಲ ಬಾರಿಗೆ ಧ್ವನಿಯನ್ನು ಆಲಿಸುವ ಅನುಭವವನ್ನು ಮಗು ಪಡೆಯಿತು‌. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ…

Read More