ಉದಯರಶ್ಮಿ ದಿನಪತ್ರಿಕೆ
ಇಂಡಿ: ಬುಧವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದ್ದು ತಾಲೂಕಿನಾದ್ಯಂತ ಶಾಂತಿಯುತವಾಗಿ ನಡೆದಿದೆ. ಪ್ರಥಮ ಭಾಷೆ ಕನ್ನಡ ಉರ್ದು ಮತ್ತು ಇಂಗ್ಲೀಷ್ ಮಾದ್ಯಮದಲ್ಲಿ ಆಯಾ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಅನೇಕ ಕಡೆ ವಿದ್ಯಾರ್ಥಿಗಳನ್ನು ಹೂವು ನೀಡಿ ಬರಮಾಡಿಕೊಂಡರೆ ತಾಂಬಾ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೆನ್ನು ನೀಡಿ ಸ್ವಾಗತಿಸಿದರು.
ಒಟ್ಟು ೪೭೪೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು ೪೬೫೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ೮೮ ವಿದ್ಯಾರ್ಥಿಗಳು ಪರೀಕ್ಷೆ ಗೈರಾಗಿದ್ದರು ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ಎ.ಒ.ಹೂಗಾರ ತಿಳಿಸಿದ್ದಾರೆ.
ಸ್ಥಳಿಯ ಜಾಗೃತದಳದ ತಹಸೀಲ್ದಾರ ಬಿ.ಎಸ್.ಕಡಕಬಾವಿ, ತಾ.ಪಂ ಇಒ ಭೀಮಾಶಂಕರ ಕನ್ನೂರ ಮತ್ತು ಕ್ಷೇತ್ರಶಿಕ್ಷಣಾಧಿಕಾರಿ ಸಯಿದಾ ಮುಜಾವರ ಹಲವಾರು ಕೇಂದ್ರಗಳಿಗೆ ಭೇಟಿ ನೀಡಿದರು.
ಸ್ಥಾನಿಕ ಜಾಗೃತದಳದವರು ಎಲ್ಲ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದರು. ೧೯ ಕೇಂದ್ರಗಳಲ್ಲೂ ಸಿ.ಸಿ.ಕ್ಯಾಮೇರಾ ಅಳವಡಿಸಲಾಗಿತ್ತು. ಜಿಲ್ಲಾಧಿಕಾರಿಯಾಗಲೀ ಶಿಕ್ಷಣ ಇಲಾಖೆ ಯಾವದೇ ಹಿರಿಯ ಅಧಿಕಾರಿಗಳು ತಮ್ಮ ಕಚೇರಿಯಿಂದಲೇ ಯಾವದೇ ಕೇಂದ್ರದ ಪರೀಕ್ಷೆ ನೋಡುವ ವ್ಯವಸ್ಥೆ ಮಾಡಲಾಗಿತ್ತು.

