Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರ :ಡಾ.ಮಿರ್ಧೆ

ಭಗತ್ ಸಿಂಗ್ ರ ರಾಷ್ಟ್ರಪ್ರೇಮ ಯುವಕರಲ್ಲಿ ಮೊಳಗಲಿ :ಜುನಗೊಂಡ

ಮಾ.೨೫ರಂದು ಒಳ ಮಿಸಲಾತಿ ಹಕ್ಕೋತ್ತಾಯ ವಿರೋಧಿಸಿ ಬೆಂಗಳೂರ ಚಲೋ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸಾಮರಸ್ಯ ರಸಗಾನದ ಭಾವೈಕ್ಯತೆ ಜೀವ ತೋಂಟದ ಸಿದ್ದಲಿಂಗ ಶ್ರೀ
ವಿಶೇಷ ಲೇಖನ

ಸಾಮರಸ್ಯ ರಸಗಾನದ ಭಾವೈಕ್ಯತೆ ಜೀವ ತೋಂಟದ ಸಿದ್ದಲಿಂಗ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಚೀನ ಹೆಬ್ಬಾಳ
ಕರುಣಿಕರು,
ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ
ಆಲಮಟ್ಟಿ
ವಿಜಯಪುರ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ದಯವೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣನವರ ಮಾನನೀಯ ತತ್ವಸಾರ ವಚನದ ಪ್ರತಿಪಾದಕರಾಗಿ ಗದುಗಿನ ತೋಂಟದ ಡಾ, ಸಿದ್ದಲಿಂಗ ಮಹಾಸ್ವಾಮಿಗಳು ಗೈದಿರುವ ಸಮಾಜಮುಖಿ ಕಾಯಕಗಳು ಆವಣೀ೯ಯ.
ಪಂಚ ಸೂತಕಗಳಾದ ಜನನ ಸೂತಕ,ಮರಣ ಸೂತಕ, ಜಾತಿಸೂತಕ, ಉಚೇಷ್ಠ ಸೂತಕ, ರಜ ಸೂತಕಗಳನ್ನು ಆಚರಿಸದೆ, ಜಗತ್ತಿಗೆ ಒಂದೇ ಕುಲ ಅದು ಮಾನವ ಕುಲ.ಅಲ್ಲಿ ದೀನ ದುಃಖಿತರನ್ನು ಪಾಪಿ ಪತಿತರನ್ನು ಕಂಡು,ಅವರ ಏಳಿಗೆಗೆ ಶ್ರಮಿಸಿ ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುವವನೇ ಮಾನವತಾವಾದಿ. ಹೊರತು ಜಾತಿ ಧರ್ಮ ವರ್ಣ ಆಧಾರದ ಮೇಲೆ ಜನರಲ್ಲಿ ಬಿರುಕು ಬಿಟ್ಟು ಅಧಿಕಾರ,ಹಣ,ಆಸ್ತಿ ದಾಹದ ಹಿಂದೆ ಬಿದ್ದಿರುವ ಮನುಜ ಮಾನವತಾವಾದಿ ಆಗಲಾರ ಎಂದು ಸಹಜ ಜನರಿಗೆ ಸರಳ ಅರ್ಥಗತವಾಗಿ ಮನಮುಟ್ಟುವಂತೆ ಸಮಾನತೆಯ ಮಾತನ್ನು ಸಾಮರಸ್ಯ ರಸಾನದ ಅತ್ಯಮೂಲ್ಯ ಜೀವ ಚೈತ್ರ ತೋಂಟದ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳು ಸದಾ ನುಡಿಯುತ್ತಲೇ ಬಂದವರು.


ವೈಚಾರಿಕ ಭಾವದ ಖಡಕ್ ಕಾವಿಧಾರಿ ಎಂದೇ ಹೆಸರಾಗಿದ್ದ ಕನ್ನಡದ ಕುಲಗುರು ತೋಂಟದ ಡಾ,ಸಿದ್ದಲಿಂಗ ಸ್ವಾಮೀಜಿಯವರು ಅಪ್ಪಟ ಪುಸ್ತಕ ಪ್ರೇಮಿಯಾಗಿ ವಿಶೇಷ ಛಾಪು ಹೊಂದಿರುವ ಸರಳತೆಯ ಮಹಾನುಭಾವರು. ಪರಿಸರದ ಕುರಿತಾದ ಕಳಕಳಿ,ಕಾಳಜಿ ಪೂಜ್ಯರ ಹೃದಯಾಂಗಳದಲ್ಲಿ ಮನೆ ಮಾಡಿತ್ತು. ಅವರಲ್ಲಿದ್ದ ವೈಶಿಷ್ಟ್ಯಪೂರ್ಣ ಗುಣ,ಸ್ವಭಾವ ಕರುನಾಡಿನ ಜನಮನ ಎಂದು ಮರೆಯಲಾರರು. ಸಿದ್ದಲಿಂಗ ಶ್ರೀಗಳವರು 21 ಫೆಬ್ರುವರಿ 1949 ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ಜನ್ಯ ತಳೆದಿದ್ದಾರೆ. ಪೂಜ್ಯರು ಧಾರ್ಮಿಕ ರಂಗದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಸಾಮಾಜಿಕ ಹೊಂಗೀರಣದಲ್ಲಿ ಅಪಾರ ಆಸಕ್ತಿ ರೂಢಿಸಿಕೊಂಡು ತಮ್ಮ ವೈವಿಧ್ಯಮಯ ನುಡಿಗಟ್ಟುಗಳ ಮೂಲಕ ತೃಷೆಭಾವಭಾಷೆ ಸಮಾಜಕ್ಕೆ ಅಪಿ೯ಸಿದ ಮೇಧಾವಿ,ಅನರ್ಘ್ಯ ರತ್ನರಾಗಿದ್ದಾರೆ.
ಶ್ರೀಗಳವರು ಧಾರ್ಮಿಕ ಶಿಕ್ಷಣವನ್ನು ಮುಗಿಸಿದ ನಂತರ ಯಡಿಯೂರು ಶ್ರೀ ತೋಂಟದ ಸಿದ್ದಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇ ಪೀಠಾಧಿಪತಿಗಳಾಗಿ ಡಂಬಳ- ಗದಗ್ ಸಂಸ್ಥಾನಮಠಕ್ಕೆ 1974ರಲ್ಲಿ ಅಧಿಕಾರ ವಹಿಸಿಕೊಂಡು ನವದಿಸೆಯ ಚೈತನ್ಯ ಲೇಪಿಸಿರುವುದು ಈಗ ಐತಿಹ್ಯ. ತಮ್ಮ ಮಠದ ಬಾಗಿಲನ್ನು ಎಲ್ಲಾ ಜನಾಂಗದವರಿಗೆ ಮುಕ್ತವಾಗಿರಿಸಿ ಶಾಂತಿಯ ತೋಟವನ್ನಾಗಿಸಿದ ಮಹಾನ ಶಾಂತಿಮಂತ್ರದ ದಿವ್ಯಾತ್ಮ ದೂತರಾಗಿ ಮರೆಯಾಗಿದ್ದಾರೆ. “ಅಂಬೇಡ್ಕರ್ ಪುರಾನಾದಿ’ ಎಂಬ ಹತ್ತಾರು ಪುರಾಣ ಕಾವ್ಯಗಳನ್ನು ರಚಿಸಿದರು. ದಲಿತ ಹಿಂದುಳಿದ ಜನ, ವಿದ್ಯಾರ್ಥಿಗಳನ್ನು ಮಠದಲ್ಲಿ ಇಟ್ಟುಕೊಂಡು ಓದಿಸಿದರು. ಹತ್ತಾರು ವರ್ಷಗಳಿಂದ ಅವಮಾನಕ್ಕೆ ತುತ್ತಾದ ದೆಹಲಿಯ ‘ಜಾಟವಾ” ಜನಾಂಗಕ್ಕೆ ಬಸವ ಧರ್ಮ ದೀಕ್ಷೆಯನ್ನು ನೀಡಿದರು. ಪೂಜ್ಯ ಸ್ವಾಮೀಜಿಯವರು ಸ್ವತಂ ತಾವೇ ಗುದ್ದಲಿ ಹಿಡಿದು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ, ಕೃಷಿಕರಾಗಿ ದುಡಿದರು. ಅವರು ಮಠದಲ್ಲಿ ಜಾತಿ,ಮತ ನೋಡದೆ ಪಂತಿ ಭೇದವಿಲ್ಲದೇ, ನಿರಂತರವಾಗಿ ದಾಸೋಹವನ್ನು ನಡೆಸಿಕೊಟ್ಟರು. ಪೂಜ್ಯರ ಕೆಲಸ ಒಂದೇ, ಎರಡೇ ಆಕಾಶದಲ್ಲಿ ನಕ್ಷತ್ರಗಳು ಎಷ್ಟು? ಎಂದು ಹೇಗೆ ಎಣಿಸಲು ಸಾಧ್ಯವಿಲ್ಲವೋ ಹಾಗೆಯೇ ಪೂಜ್ಯ ಸ್ವಾಮೀಜಿಯವರ ಅನನ್ಯ ಕಾರ್ಯಗಳನ್ನು ಸಹ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಪೂಜ್ಯರ ಜೀವಿತಾವಧಿಯಲ್ಲಿನ ಕಾಯಕಗಳು ಪವಿತ್ರಮಯವಾಗಿವೆ. ಸಾಮಾಜಿಕ ಸ್ಪರ್ಶದ ಕೈಂಕರ್ಯಗಳು ಅಮೋಘ, ಅಪ್ರತಿಮವಾಗಿವೆ. ಸಮಾಜೋದ್ಧಾರದ ನಿಷ್ಕಲ್ಮಶ ಪ್ರೀತಿ ವಿಶ್ವಾಸ ಜನತೆ ಮನದಲ್ಲಿ ನೆಲೆಸಿವೆ. ನಿಷ್ಟೆ,ಬದ್ದತೆಯ ಪ್ರತೀತಿ ಹೊಂದಿವೆ. ಒಳಿತು ಕಾಯಕಗಳು ಅಸಂಖ್ಯಾತವುಗಳಾಗಿ ಮಿನುಗಿವೆ.
ನಮ್ಮ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಆಲಮಟ್ಟಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಾನ್ಯಶ್ರೀ ಪ್ರೊ.ಶಿವಾನಂದ.ಎಸ್. ಪಟ್ಟಣಶೆಟ್ಟರ ಸಾಹೇಬರು ಜಂಗಮರ ತಾಣ ಆಲಮಟ್ಟಿಗೆ ದಯಮಾಡಿಸಿದಾಗ ಪೂಜ್ಯ ಸಿದ್ದಲಿಂಗ ಸ್ವಾಮೀಜಿಯವರು ಬಗ್ಗೆ ಒಂದು ಮಾತನ್ನು ಹೇಳಿದರು. ಅದು ಏನೆಂದರೆ ಪೂಜ್ಯ ಸಿದ್ದಲಿಂಗ ಶ್ರೀಗಳವರು ನಮ್ಮನ್ನು ಬಿಟ್ಟು ಆಗಲಿಲ್ಲ. ಅವರು ಈ ಆಲಮಟ್ಟಿ ವಿದ್ಯಾಸಂಸ್ಥೆಯಲ್ಲಿ ನೆಟ್ಟಿರುವ ಸುಮಾರು10,000 ವಿವಿಧ ಸ್ತರದ ವೈವಿಧ್ಯಮಯ ಗಿಡ ಮರಗಳ ಸಸ್ಯಕಾಶಿಯ ರಾಶಿಯಲ್ಲಿ ನೆಲಸಿದ್ದಾರೆ. ಪೂಜ್ಯರ ಪರಿಮಳಯುತ ಸುಗಂಧ ಸುವಾಸನೆಯ ಆಶೀವಾ೯ದದ ಗಂಧ ನಮ್ಮೆಲ್ಲರ ಮೇಲಿದೆ ಎಂಬ ಮಾತನ್ನು ಮುಖ್ಯೋಪಾಧ್ಯಾಯರಾದ ಶ್ರೀ ಜಿ.ಎಂ. ಕೋಟ್ಯಾಳ ಸರ್ ರವರಿಗೆ ಹೇಳುತ್ತಿರುವುದನ್ನು ಒಮ್ಮೆ ನಾನು ಆಲಿಸಿದ್ದೇನೆ. ಬನ್ನಿ ನನ್ನ ಎಲ್ಲ ಹಿರಿಯ ಜೀವಿಗಳೇ,ಇಂಥ ಅಪರೂಪದ ವೈಚಾರಿಕ ಮಹಾನ ಸಂತರಾಗಿರುವ ಪೂಜ್ಯಶ್ರೀ ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ 77 ಜಯಂತಿ ಅಂಗವಾಗಿ ಭಾವೈಕ್ಯತೆ ದಿನಾಚರಣೆ, ಗ್ರಂಥಗಳ ಬಿಡುಗಡೆ, ವಚನ ಪಾಠಶಾಲೆ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭ ಇದೇ ೨೧ ರಂದು ಶನಿವಾರ ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿನ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ನಡೆಯಲಿದ್ದು ಶ್ರದ್ಧಾಭಕ್ತಿಯಿಂದ ನಾವೆಲ್ಲರೂ ಪಾಲ್ಗೊಳ್ಳೋಣ. ಭಾವಪೂರ್ಣ ನುಡಿ ನಮನಗಳನ್ನು ಸಲ್ಲಿಸೋಣ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರ :ಡಾ.ಮಿರ್ಧೆ

ಭಗತ್ ಸಿಂಗ್ ರ ರಾಷ್ಟ್ರಪ್ರೇಮ ಯುವಕರಲ್ಲಿ ಮೊಳಗಲಿ :ಜುನಗೊಂಡ

ಮಾ.೨೫ರಂದು ಒಳ ಮಿಸಲಾತಿ ಹಕ್ಕೋತ್ತಾಯ ವಿರೋಧಿಸಿ ಬೆಂಗಳೂರ ಚಲೋ

ಅಣಬೆ ಬೆಳೆದು ಹಣ ಗಳಿಸಲು ಅರಣ್ಯ ಇಲಾಖೆಯಿಂದ ಕಾರ್ಯಗಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರ :ಡಾ.ಮಿರ್ಧೆ
    In (ರಾಜ್ಯ ) ಜಿಲ್ಲೆ
  • ಭಗತ್ ಸಿಂಗ್ ರ ರಾಷ್ಟ್ರಪ್ರೇಮ ಯುವಕರಲ್ಲಿ ಮೊಳಗಲಿ :ಜುನಗೊಂಡ
    In (ರಾಜ್ಯ ) ಜಿಲ್ಲೆ
  • ಮಾ.೨೫ರಂದು ಒಳ ಮಿಸಲಾತಿ ಹಕ್ಕೋತ್ತಾಯ ವಿರೋಧಿಸಿ ಬೆಂಗಳೂರ ಚಲೋ
    In (ರಾಜ್ಯ ) ಜಿಲ್ಲೆ
  • ಅಣಬೆ ಬೆಳೆದು ಹಣ ಗಳಿಸಲು ಅರಣ್ಯ ಇಲಾಖೆಯಿಂದ ಕಾರ್ಯಗಾರ
    In (ರಾಜ್ಯ ) ಜಿಲ್ಲೆ
  • ಡಾ. ಬಾಬು ಜಗಜೀವನ್ ರಾಮ್ ಭವನ ಕಟ್ಟಡ ವೀಕ್ಷಣೆ
    In (ರಾಜ್ಯ ) ಜಿಲ್ಲೆ
  • ಹೊಸ ಜಾಹೀರಾತು ನೀತಿ ತಡೆಗೆ ಸಿಎಂ ಗೆ ಸಂಪಾದಕರ ಸಂಘ ಆಗ್ರಹ
    In (ರಾಜ್ಯ ) ಜಿಲ್ಲೆ
  • ಅವಿಭಕ್ತ ಕುಟುಂಬಗಳು ನೈತಿಕ ಮೌಲ್ಯ ಕಾಪಾಡಿದ್ದವು :ವಾಲಿಕಾರ
    In (ರಾಜ್ಯ ) ಜಿಲ್ಲೆ
  • ಗ್ರಾಮೀಣ ಜನರಿಗೆ ಸಮರ್ಪಕ ಕುಡಿಯುವ ನೀರು ಪೂರೈಸಿ
    In (ರಾಜ್ಯ ) ಜಿಲ್ಲೆ
  • ಕೆಪಿಎಸ್ಸಿ ಮೂಲಕ ಪ್ರತಿ ವರ್ಷ ಗ್ರೂಪ್ ಎ-ಬಿ ಅಧಿಕಾರಿಗಳ ನೇಮಕ
    In (ರಾಜ್ಯ ) ಜಿಲ್ಲೆ
  • ಸಾಮರಸ್ಯ ರಸಗಾನದ ಭಾವೈಕ್ಯತೆ ಜೀವ ತೋಂಟದ ಸಿದ್ದಲಿಂಗ ಶ್ರೀ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.