Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಯಡ್ರಾಮಿ: ಭಕ್ತಿ ಪರಂಪರೆಗೆ ಮತ್ತು ಅಂಕಿತ ಸಾಹಿತ್ಯಕ್ಕೆ ಅಡಿಪಾಯ ಹಾಕಿದ ಕೀರ್ತಿ ಕೊಂಡಗೂಳಿ ಕೇಶಿರಾಜನಿಗೆ ಸಲ್ಲುತ್ತದೆ ಎಂದು ಉಪನ್ಯಾಸಕ ಡಾ| ಕಾಶಿಲಿಂಗಯ್ಯ ಮಠ ಹೇಳಿದರು.ಯಡ್ರಾಮಿಯ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರಘೇಂದ್ರ ಶಿವಯೋಗಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಹುಣ್ಣಿಮೆಯ ಸಂಗಮ -57ರ ಆನ್ಲೈನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೊಂಡಗೂಳಿ ಕೇಶಿರಾಜ ಬಸವಪೂರ್ವದ ವೀರಶೈವ ಕವಿ. 11ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಕಲ್ಯಾಣ ಚಾಲುಕ್ಯರ ಅರಸ 6ನೇ ವಿಕ್ರಮಾದಿತ್ಯನ ಅರಸೊತ್ತಿಗೆಯಲ್ಲಿ ಮಹಾ ದಂಡನಾಯಕನಾಗಿ, ಸಂದಿವಿಗ್ರಹಿಯಾಗಿ ಕೆಲಸ ಮಾಡುವುದರ ಜೊತೆಗೆ ಕೇಶಿರಾಜ ಒಬ್ಬ ಅಪ್ರತಿಮ ಶಿವಭಕ್ತನಾಗಿದ್ದನು. ಈ ಕೊಂಡಗೂಳಿ ಕೇಶಿರಾಜ ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಂಡಗೂಳಿ ಈತನ ಹುಟ್ಟೂರು. ಶಿವಾನುಭವದ ಅತಿಯಾದ ಹಂಬಲದಿಂದ ಅರಸೊತ್ತಿಗೆಯನ್ನೇ ಧಿಕ್ಕರಿಸಿ ಹುಟ್ಟೂರು ಕೊಂಡಗೂಳಿ ಗ್ರಾಮಕ್ಕೆ ಬಂದು ನೆಲೆ ನಿಲ್ಲುತ್ತಾನೆ. ಕೇಶಿರಾಜನು ಮಂತ್ರ ಮಹತ್ವದ ಕಂದ, ಶೀಲ ಮಹತ್ವದ ಕಂದ, ಸೇರಿದಂತೆ ಏಳಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾನೆ. ಓಂ ನಮಃ ಶಿವಾಯ ಈತನ ಕಂದ ಪದ್ಯಗಳ ವಚನಾಂಕಿತವಾಗಿದೆ.…
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಫೆ.೨೫ರಂದು ತಾಳಿಕೋಟಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಕೊಣ್ಣೂರ ಗ್ರಾಮದ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಶಾಲಾ ಕಂಪೌಂಡ್, ಪ್ರಗತಿ ಹಂತದಲ್ಲಿರುವ ಅಡುಗೆ ಕೋಣೆ ಮತ್ತು ಹೈಟೆಕ್ ಶೌಚಾಲಯ ಕಾಮಗಾರಿ ವೀಕ್ಷಣೆ ಮಾಡಿ, ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ, ಕುಡಿಯುವ ನೀರು, ಶಾಲಾ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಬಳಿಕ ಕೊಣ್ಣೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಐತಿಹಾಸಿಕ ಕಲ್ಯಾಣಿ ಕಾಮಗಾರಿ ಪರಿಶೀಲನೆ ನಡೆಸಿದರು.ಪಡೆಕನೂರ ಗ್ರಾಮಕ್ಕೆ ಭೇಟಿ ನೀಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಾಣವಾದ ಸಮುದಾಯ ಶೌಚಾಲಯ, ಸ್ವಚ್ಛ ಭಾರತ ಮಿಷನ್ ಯೋಜನೆ ಮತ್ತು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆಯಡಿ ನಿರ್ಮಾಣವಾದ ಬೂದು ನೀರು ನಿರ್ವಹಣಾ ಕಾಮಗಾರಿ ಪರಿಶೀಲಿಸಿದರು. ಸಮರ್ಪಕವಾಗಿ ನಿರ್ವಹಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ…
ಆಲಮೇಲ ಹಾಗೂ ಸಿಂದಗಿ ತಾಲೂಕಿನ ವಿವಿಧ ಸ್ಥಳಗಳಿಗೆ ಭೇಟಿ-ಪರಿಶೀಲನೆ ವಿಜಯಪುರ: ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕುಡಿಯುವ ನೀರಿಗೆ ಪ್ರಥಮಾಧ್ಯತೆ ನೀಡಿ, ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಫೆ.೨೪ರಂದು ಸಿಂದಗಿ ಹಾಗೂ ಆಲಮೇಲ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿವಿಧ ಇಲಾಖೆಗಳಡಿ ಕೈಗೊಂಡ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು, ಕುಡಿಯುವ ನೀರು ಒದಗಿಸಲು ಕ್ರಮವಹಿಸಿಬೇಕು. ಯಾವುದೇ ರೀತಿಯ ಸಮಸ್ಯೆಯಾಗದಂತೆ ಗಮನ ಹರಿಸಿ ಕಾರ್ಯ ನಿರ್ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ಆಲಮೇಲ ತಾಲೂಕಿನ ಕಡಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಶಾಲಾ ಆಟದ ಮೈದಾನ, ಶೌಚಾಲಯ, ಶಾಲಾ ಕಾಂಪೌಂಡ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿ, ಪ್ರಗತಿಯಲ್ಲಿರುವ…
ಮುದ್ದೇಬಿಹಾಳ: ವಿದ್ಯೆ ಇಲ್ಲದೇ ಯಾವ ಸಾಧನೆಯನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯೆ ಪಡೆದ ವ್ಯಕ್ತಿ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಬಲ್ಲ ಶಕ್ತಿ ಹೊಂದಿರುತ್ತಾನೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಪರಶುರಾಮ ಕೊಣ್ಣೂರ ಹೇಳಿದರು.ಪಟ್ಟಣದ ಪೊಲೀಸ್ ಠಾಣೆ ಎದುರು ಇರುವ ಆಕ್ಸ್ಫರ್ಡ ಪಬ್ಲಿಕ್ ಸ್ಕೂಲ್ ಹಾಗೂ ಹೇಮರಡ್ಡಿ ಮಲ್ಲಮ್ಮ ಹಿ.ಪ್ರಾ.ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಹಿಂದಿನ ಕಾಲದಲ್ಲಿ ವಿದ್ಯೆ ಪಡೆಯಲು ಅದೆಷ್ಟೋ ಪರದಾಡುವ ಪರಿಸ್ಥಿತಿ ಇತ್ತು. ಸಧ್ಯ ಯಾವ ಮಗುವೂ ವಿದ್ಯೆಯಿಂದ ವಂಚಿತರಾಗಬಾರದೆಂದು ಶೈಕ್ಷಣಿವಾಗಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಎಲ್ಲ ಪಾಲಕರೂ ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸುವಲ್ಲಿ ಹಿಂದೇಟು ಹಾಕಬಾರದು ಎಂದರು.ನ್ಯಾಯವಾದಿ ಚೇತನ ಶಿವಶಿಂಪಿ ಮಾತನಾಡಿ, ಪಾಲಕರಾದವರು ಹಣಕ್ಕಿಂತ ವಿದ್ಯೆ, ಸಂಸ್ಕಾರಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಬೇಕು. ಮಕ್ಕಳಿಗೆ ಹಣ ಹೇಗೆ ಸಂಪಾದನೆ ಮಾಡಬೇಕು ಎಂದು ಕಲಿಸುವದಕ್ಕಿಂತ ಉತ್ತಮ ಗುಣಗಳನ್ನು ಬೆಳೆಸಿ ನೊಂದವರ ದನಿಯಾಗಿ ನಿಲ್ಲುವ ಗಟ್ಟಿ…
ರೇಲ್ವೆ ನಿಲ್ದಾಣಗಳ ಪುನರಾಭಿವೃದ್ದಿಗೆ ಪ್ರಧಾನಿ ಚಾಲನೆ :ಸಂಸದ ಜಿಗಜಿಣಗಿ ವಿಜಯಪುರ: ದೇಶದ ಪ್ರಧಾನಮಂತ್ರಿಗಳು ಸಾಮಾಜಿಕ ಜಾಲತಾಣ ಮೂಲಕ ಅಮೃತ ಭಾರತ ಯೋಜನೆ ಮೂಲಕ ದೇಶದ ವಿವಿಧ ನಿಲ್ದಾಣಗಳ ಪುನರಾಭಿವೃದ್ದಿ, ರಸ್ತೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಸಮರ್ಪಣೆ, ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದು, ದೇಶದ ರೈಲು ನಿಲ್ದಾಣಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಸುಂದರ, ಸ್ವಚ್ಚ ಅಂತರಾಷ್ಟ್ರೀಯ ಗುಣಮಟ್ಟದ ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳಿಂದ ಕೂಡಿದ ರೈಲು ನಿಲ್ಧಾಣವಾಗಿ ರೂಪಗೊಳ್ಳಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅವರು ಹೇಳಿದರು.ಸೋಮವಾರ ನಗರದ ರೈಲ್ವೇ ನಿಲ್ಧಾಣದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಿಭಾಗದ ನವೀಕರಣಗೊಂಡಿರುವ ೭ ನಿಲ್ಧಾಣಗಳು ಮತ್ತು ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿಗಳು ಲೋಕಾರ್ಪಣೆಗೊಳಿಸಿದ್ದಾರೆ. ಜಿಲ್ಲೆಯ ವಿಜಯಪುರ ಮತ್ತು ಆಲಮಟ್ಟಿ ರೇಲ್ವೆ ನಿಲ್ದಾಣಗಳ ಪುನರ್‌ಅಭಿವೃದ್ದಿಗೆ ಶಂಕು ಸ್ಥಾಪನೆ ಹಾಗೂ ಮಿಂಚನಾಳ, ಕ್ಯಾತನಕೇರಿ ಮತ್ತು ನಿಂಬಾಳ ರೇಲ್ವೆ ಅಂಡರ್‌ಪಾಸ್‌ಗಳನ್ನು ಇಂದು ಸಮರ್ಪಿಸಲಾಗಿದೆ ಎಂದು ಹೇಳಿದರು.ವಿಜಯಪುರ ಜಿಲ್ಲೆಗೆ ಈಗಾಗಲೇ…
ಬೆಂಗಳೂರು: ರೈತ ಪರವಾಗಿ ಎಪಿಎಂಸಿ ಕಾಯ್ದೆಗೆ ಹಲವು ತಿದ್ದುಪಡಿ ತಂದಿರುವುದು ಸೂಕ್ತವಾಗಿದೆ. ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಲು ಕೆಲವು ಸುಧಾರಣೆಗಳನ್ನು ತರಬೇಕಿದ್ದು, ಈ ಸಂಬಂಧ ರೈತ ಸಂಘ ಶೀಘ್ರದಲ್ಲಿ ಸುಧಾರಣೆಗೆ ಪೂರಕ ಅಂಶಗಳನ್ನು ತಮ್ಮ ಗಮನಕ್ಕೆ ತರಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ತಿಳಿಸಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆದಿರುವುದಕ್ಕೆ ಸಚಿವ ಶಿವಾನಂದ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸಿ ಪತ್ರ ಬರೆದಿರುವ ಅವರು, ಎಂ.ಎಸ್. ಸ್ವಾಮಿನಾಥನ್ ವರದಿ ಪ್ರಕಾರ ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸುವ ನೀತಿ ರೂಪಿಸಿದರೆ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ತಿದ್ದುಪಡಿ ಕಾಯಿದೆಯನ್ನು ವಾಪಸ್ಸು ಪಡೆದಿರುವುದು ಅಭಿನಂದನಾರ್ಹ. ಇದಕ್ಕಾಗಿ ವಿಶೇಷವಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ರೈತ ಸಂಘ ಕೃತಜ್ಞತೆ ಸಲ್ಲಿಸುತ್ತದೆ. ಎಪಿಎಂಸಿ ಕಾಯ್ದೆಗೆ ಕೆಲವು…
ಬಿಚ್ಚಿಬಿದ್ದಿರುವ ಸಲಕರಣೆಗಳು | ಪುಂಡರ ಕಾಟ | ಪುರಸಭೆ ಕಡೆಗಣನೆ *- ಚೇತನ ಶಿವಶಿಂಪಿ*ಮುದ್ದೇಬಿಹಾಳ: ಮುರಿದು ಹೋದ ಜಾರುಬಂಡೆಯ ಮುಖ್ಯ ಪ್ಲಾಸ್ಟಿಕ್, ಕಬ್ಬಿಣದ ಸಳಿಗಳು ಕಿತ್ತಿದ ಜೋಕಾಲಿಗೆ ಅವೈಜ್ಞಾನಿಕ ವೈರ್ ಬಿಗಿತ, ಬಿಚ್ಚಿಬಿದ್ದಿರುವ ನಟ್ಟನ್ನು ಫಿಟ್ ಮಾಡೋರಿಲ್ಲ, ಮತ್ತೊಂದು ಜೋಕಾಲಿಗೆ ಕಟ್ಟಿಗೆಯ ತುಂಡನ್ನು ಬಳಸಿ ಆಟಕ್ಕೆ ನಿಲ್ಲೋ ಮಕ್ಕಳು, ಒಂದು ಕಡೆ ಕೂರುವ ಸೀಟೆ ಇಲ್ಲದ ಮತ್ತೊಂದು ಆಟದ ಸಲಕರಣೆ, ದಿನನಿತ್ಯ ನೂರಾರು ಮಕ್ಕಳು ಆಟವಾಡಿ ಸುಸ್ತಾಗಿ ಆನಂದ ಪಡೋದು ಇದೇ ಉದ್ಯಾನವನದಲ್ಲಿ.ಪಟ್ಟಣಕ್ಕೇ ಒಂದೇ ಇರೋ ಪ್ರಸಿದ್ಧ ಉದ್ಯಾನವನ ಹುಡ್ಕೋ ಬಡಾವಣೆಯದ್ದು. ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಗೊಂಡು ಜನಪ್ರೀಯತೆ ಪಡೆದಿತ್ತು. ಇಂದಿಗೂ ಸಾಕಷ್ಟು ಜನಪ್ರೀಯತೆ ಪಡೆದಿದೆ. ಆದರೆ ಸಧ್ಯ ನಿರ್ವಹಣೆಯ ಕೊರತೆಯಿಂದಾಗಿ ಈ ಉದ್ಯಾನವನ ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿ ಅನಾಥ ಸ್ಥಿತಿಗೆ ಬಂದು ತಲುಪಿದೆ.ನಿರೀಕ್ಷಿತ ಮಟ್ಟದ ನಿರ್ವಹಣೆ ಸೇರಿದಂತೆ ಅಭಿವೃದ್ಧಿಯಿಂದ ಸಂಪೂರ್ಣ ವಂಚನೆಗೊಂಡಿದೆ. ಇನ್ನು ಕುಡಿಯುವ ನೀರಂತೂ ಇಲ್ಲಿಯವರೆಗೂ ಕಂಡಿಲ್ಲ ಈ ಉದ್ಯಾನವನದ ದಿನನಿತ್ಯದ ಭೇಟಿಕಾರರು. ಸಂಜೆಯಾದರೆ ಸಾಕು ಪುಂಡ ಪೋಕರಿಗಳ…
ದೇವರಹಿಪ್ಪರಗಿ: ವಿದ್ಯಾರ್ಥಿಗಳು ಸತತ ಅಧ್ಯಯನ, ಗುರಿ ಹಾಗೂ ಪ್ರಯತ್ನಗಳ ಮೂಲಕ ಸಾಧನೆ ಮಾಡಿದಲ್ಲಿ ನಿಶ್ಚಿತವಾಗಿಯೂ ಅವರ ಭವಿಷ್ಯ ಬದಲಾಗುತ್ತದೆ ಎಂದು ಎಮ್.ಜಿ.ಎಮ್ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಎ.ಎಮ್.ತಾಂಬೋಳಿ ಹೇಳಿದರು.ಪಟ್ಟಣದ ಎಂ.ಜಿ.ಎಮ್ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಜರುಗಿದ ೨೦೨೩-೨೪ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಧನೆಯ ಹಿಂದೆ ಸಾಧಿಸುವ ಛಲ ಹಾಗೂ ಪರಿಶ್ರಮವಿರುತ್ತದೆ. ಸಾಧಕರ ಸಾಲಿನಲ್ಲಿ ಗುರುತಿಸುವಂತಾಗಲು ಪ್ರತಿ ವಿದ್ಯಾರ್ಥಿ ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದರು.ಚಾಣಕ್ಯ ಕೆರಿಯರ್ ಅಕಾಡೆಮಿಯ ಉಪನ್ಯಾಸಕರಾದ ಶಿವಕುಮಾರ ಹಿರೇಮಠ, ಪ್ರಕಾಶ ಜಾಧವ ಮಾತನಾಡಿದರು.ಶಿಕ್ಷಕ ಕೆ.ಆರ್.ಕೊಕಟನೂರ ಹಾಗೂ ಸಿಂದಗಿ ಪಿಇಎಸ್ ಕಾಲೇಜು ಪ್ರಾಂಶುಪಾಲ ರವಿ ಗೋಡಕರ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಓದಿನ ಕಡೆಗೆ ಹೆಚ್ಚು ಲಕ್ಷ್ಯ ವಹಿಸುವಂತೆ ಕಿವಿಮಾತು ಹೇಳಿದರು.ನಂತರ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನೀಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ೨೦೨೨-೨೩ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ…
ಸಿಂದಗಿ ಜಿಲ್ಲಾ ಹೋರಾಟ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರಿಗೆ ಮನವಿ ಸಿಂದಗಿ: ಜಿಲ್ಲೆಯನ್ನು ವಿಭಜಿಸುವುದಾದಲ್ಲಿ ಸಿಂದಗಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಸಿಂದಗಿ ಜಿಲ್ಲಾ ಹೋರಾಟ ಸಮಿತಿಯಿಂದ ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಶನಿವಾರ ಸಂಜೆ ಮನವಿ ಸಲ್ಲಿಸಲಾಯಿತು.ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ ಹಾಗೂ ಅರುಣ ಶಹಾಪೂರ ಅವರು ಸಚಿವರಿಗೆ ಇಂಡಿ ಜಿಲ್ಲೆಯನ್ನಾಗಿ ಸೃಜಿಸುವ ನಿಟ್ಟಿನಲ್ಲಿ, ಇಂಡಿ ಬದಲಾಗಿ ಸಿಂದಗಿಯನ್ನು ಪರಿಗಣಿಸಿ ಎಂಬ ರಾಜಕೀಯ ಕೂಗು ನಮ್ಮದಾಗಿಲ್ಲ. ಈ ವಿಷಯದಲ್ಲಿ ನಾವು ರಾಜಕೀಯ ಮಾಡಲಾರೆವು. ಒಂದು ವೇಳೆ ವಿಜಯಪುರ ಜಿಲ್ಲೆಯನ್ನು ಇಬ್ಭಾಗಿಸುವ ಇರಾದೆ ಸರ್ಕಾರದದ್ದಾರೆ, ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಸಿಂದಗಿಯನ್ನು ಆಧ್ಯತೆಯನ್ನಾಗಿಸಿ ಜಿಲ್ಲೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿ, ಈ ಹೋರಾಟ ಸಮಿತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತಾವುಗಳು ಅವಕಾಶ ಒದಗಿಸುವುದರೊಂದಿಗೆ ನಮ್ಮ ಬೇಡಿಕೆಯನ್ನು ಬೆಂಬಲಿಸಬೇಕು ಎಂದು ಒತ್ತಾಯಿಸಿದರು.ಸಮಿತಿಯ ಮನವಿ ಸ್ವೀಕರಿಸಿದ ಸಚಿವರು, ಸಧ್ಯ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಜಿಲ್ಲಾ…
ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಸೂಚನೆ ಸಿಂದಗಿ: ಚಿಮ್ಮಲಗಿ ಏತ ನೀರಾವರಿ ಕಾಲುವೆಯಿಂದ ಸಿಂದಗಿ, ದೇವರ ಹಿಪ್ಪರಗಿ ಮತ್ತು ಆಲಮೇಲ ತಾಲೂಕಿನಲ್ಲಿನ ಕಾಲುವೆಗಳಿಗೆ ಕೆಲವೆ ದಿನದಲ್ಲಿ ನೀರು ಹರಿದು ಬರುತ್ತದೆ. ಅಧಿಕಾರಿಗಳು ಎಚ್ಚೆತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕುಡಿಯುವ ನೀರು, ಮೇವು ಸಂಗ್ರಹಣೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೇಸಿಗೆಯ ತೀವ್ರತೆ ಹೆಚ್ಚುತ್ತಿದೆ. ಹರಿದು ಬರುವ ನೀರು ಕೃಷಿ ಕಾರ್ಯಗಳಿಗೆ ಬಳಸದೇ ಜನ ಜಾನುವಾರುಗಳಿಗೆ ಪೂರೈಕೆಯಾಗುವ ಕ್ರಮವನ್ನು ಸಂಬಂಧಿಸಿದ ಅಧಿಕಾರಿಗಳು ನಿರ್ವಹಿಸಬೇಕು. ಫೆ.೧೯ರಂದು ಚಿಮ್ಮಲಗಿ ಏತ ನೀರಾವರಿಯಿಂದ ನೀರನ್ನು ಹರಿಬಿಡಲಾಗಿದೆ. ಕಾರ್ಯನಿಯೋಜನೆ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ನೀರನ್ನು ಕೃಷಿಗೆ ಬಳಸದಂತೆ ರೈತರಿಗೆ ತಿಳಿ ಹೇಳಬೇಕು. ಯಾವುದೇ ಕಾಲಕ್ಕೂ…
