ದೇವರಹಿಪ್ಪರಗಿ: ಇವ ನಮ್ಮವ, ಇವ ನಮ್ಮವ ಎನ್ನುವ ಮೂಲಕ ವಿಶ್ವಭಾತೃತ್ವವನ್ನು ವಿಶ್ವಕ್ಕೆ ಸಾರಿ ಬಸವಣ್ಣ ಮಹಾಮಾನವತಾವಾದಿ ಎನಿಸಿದ್ದಾರೆ ಎಂದು ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಬಸವ ಜಯಂತ್ಯುತ್ಸವ ಹಾಗೂ ಶ್ರೀ ಬಸವಶ್ರೀ ಪ್ರಶಸ್ತಿ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ವಚನ ಸಾಹಿತ್ಯವೇ ನಮ್ಮ ಗ್ರಂಥ, ಸಂವಿಧಾನ ಮೂಲ ಆಶಯಗಳನ್ನು ಅಂದೇ ತಮ್ಮ ವಚನಗಳ ಮೂಲಕ ಸಾರಿದ ಬಸವಣ್ಣ ಅಸಮಾನತೆಯ ವಿರುದ್ಧ ಸಮರ ಸಾರಿದ ಕ್ರಾಂತಿಯೋಗಿ. ಬಸವಣ್ಣನ ವಚನಗಳ ಸೂಕ್ಷ್ಮ ಅಧ್ಯಯನ ಇಂದು ಅತ್ಯಂತ ಅಗತ್ಯವಾಗಿದೆ ಎಂದು ಕವನ ವಾಚಿಸಿ ಆಶೀರ್ವಚನ ನೀಡಿದರು.
ಸಿಂದಗಿಯ ಸಾಹಿತಿ ರಾ.ಶಿ.ವಾಡೇದ ಹಾಗೂ ಶಿಕ್ಷಕಿ ಮಹಾದೇವಿ ಪಾಟೀಲ ಮಾತನಾಡಿ, ಕಾಯಕ ತತ್ವದ ಮಹತ್ವವನ್ನು ಜಗಕ್ಕೆ ಸಾರುವ ಮೂಲಕ ನಮ್ಮಲ್ಲಿ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸಿದ ಮಹಾನುಭಾವ ಅಣ್ಣ ಬಸವಣ್ಣ ಎಂದರು.
ಶ್ರೀಬಸವಶ್ರೀ ಪ್ರಶಸ್ತಿ ವಿಜೇಯರಾದ ಡಾ.ಬಾಬು ಶಿವಸಿಂಪಿಗೇರ ಹಾಗೂ ಬಸವರಾಜ ಹಡಪದ ಮಾತನಾಡಿ, ಬಸವಣ್ಣನವರು ಸಾಗರದ ಪ್ರತೀಕ ಅವರನ್ನು ಅರಿಯಬೇಕಾದರೆ ಆಳಕ್ಕೆ ಇಳಿಯಬೇಕು. ಬಸವಣ್ಣ ಎಂಬ ಸಾಗರದ ಮೇಲ್ಮೆಯಲ್ಲಿ ನಿಮಗೆ ಮೀನು, ಮೋಸಳೆಗಳು ಮಾತ್ರ ಗೋಚರಿಸಬಹುದು, ಆದರೆ ಆಳಕ್ಕೆ ಇಳಿದರೆ ಮುತ್ತು, ರತ್ನಗಳು ದೊರೆಯುವುದರಲ್ಲಿ ಸಂದೇಹವಿಲ್ಲ ಎಂದರು.
ಬಸವ ಶರಣ ಸಂಗಮ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಸಂಗಪ್ಪ ತಡವಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಿ.ಸಿ.ಹಿರೇಮಠ, ವಿಶ್ವನಾಥ ಡೋಣೂರ, ಡಾ.ಶಿವಸಿಂಪಿಗೇರ, ಬಸವರಾಜ ಹಡಪದ, ಸಿದ್ದು ಮೇಲಿನಮನಿ ಇವರಿಗೆ ಶ್ರೀಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ನಿವೃತ್ತ ಶಿಕ್ಷಕರಾದ ಎಸ್.ಎನ್.ಪಡನೂರ, ಕೆ.ಎಂ.ನಂದಿ ಸೇರಿದಂತೆ ನಾನಾಗೌಡ ಪಾಟೀಲ, ಕೆ.ಬಿ.ದೇವಣಗಾಂವ, ಕೆ.ಬಿ.ಕಡಿಮನಿ, ಭಾಗಮ್ಮ ಕೋಟಿನ್ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಂಜನಾ ಮಾರ್ಕಂಡೆ ಭರತನಾಟ್ಯದ ಮೂಲಕ ಬಸವಣ್ಣನ ವಚನ ಪ್ರಸ್ತುತ ಪಡಿಸಿ ಗಮನ ಸೆಳೆದರು.
ಬಸವಶರಣ ಸಂಗಮ ಸೇವಾ ಸಮಿತಿಯ ಗೌರವಾಧ್ಯಕ್ಷ ಬಿ.ಎಮ್.ಪಾಟೀಲ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಕೊಂಡಗೂಳಿ, ವಚನಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಪ್ರಾಥಮಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್.ವಾಲಿಕಾರ, ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ವಿ.ಕೆ.ಪಾಟೀಲ, ಮಲ್ಲು ಹಳಿಮನಿ, ಗಿರೀಶ ಕುಲಕರ್ಣಿ, ನಿಂಗು ಜಡಗೊಂಡ, ಗೋಲ್ಲಾಳ ಬಿರಾದಾರ, ಸೋಮು ಹಡಪದ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
ವಿಶ್ವಭಾತೃತ್ವವನ್ನು ವಿಶ್ವಕ್ಕೆ ಸಾರಿದ ಬಸವಣ್ಣ :ಮಡಿವಾಳೇಶ್ವರ ಶ್ರೀ
Related Posts
Add A Comment

