ದೇವರಹಿಪ್ಪರಗಿ: ರಾಜ್ಯದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ವಚನಸಾಹಿತ್ಯ ಹಾಗೂ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮಳ ಆದರ್ಶಗಳು ನಮ್ಮೇಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದು ಶಿಕ್ಷಕ ಸೋಮನಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಪಡಗಾನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಬಸವೇಶ್ವರರ ಹಾಗೂ ಹೇಮರಡ್ಡಿ ಮಲ್ಲಮ್ಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಖ್ಯಗುರು ಡಿ.ಎಚ್.ರಾಠೋಡ ಮಾತನಾಡಿ, ಮಲ್ಲಮ್ಮ ಓರ್ವ ಮಹಿಳೆಯಾಗಿ, ಆದರ್ಶ ಸೊಸೆಯಾಗಿ, ಅತ್ತಿಗೆಯಾಗಿ, ಶಿವಭಕ್ತೆಯಾಗಿ ಆದರ್ಶಗಳನ್ನು ಬಿಂಬಿಸುವ ಮೂಲಕ ಇಂದಿನ ಮಹಿಳಾಸಂಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಬಸವೇಶ್ವರ ವೃತ್ತ ಹಾಗೂ ಹೇಮರಡ್ಡಿ ಮಲ್ಲಮ್ಮ ವೃತ್ತಗಳಿಗೆ ತೆರಳಿ ಗ್ರಾಮಸ್ಥರೊಂದಿಗೆ ಸೇರಿ ಪೂಜೆ ಸಲ್ಲಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಗುರುರಾಜ ಆಕಳವಾಡಿ, ಸುಭಾಸ ಹೊಸಟ್ಟಿ, ನಾಗಯ್ಯ ಹಿರೇಮಠ, ಕೆ.ಎಮ್.ನಂದಿ, ಎಸ್.ಜಿ.ತಾವರಖೇಡ, ಗೊಲ್ಲಾಳ ಬಿರಾದಾರ, ಕಲ್ಲು ಜೋಗೂರ, ರಾಜು ಪಾಟೀಲ, ಪಂಡಿತ ಕೊಟ್ಯಾಳ, ಭೀಮರಾಯ ಬಾಗೇವಾಡಿ, ಗೋವಿಂದಗೌಡ ಪಾಟೀಲ, ವಿಶಾಲಗೌಡ ಪಾಟೀಲ, ಬಸವರಾಜ ದ್ಯಾವಿನಾಳ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

